ವಿಷಯಕ್ಕೆ ಹೋಗು

ಸದಸ್ಯ:Namitha nami/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೈಂಟ್ ಸೈಮನ್
ಜನನ೧೭೬೦
ಪ್ಯಾರಿಸ್

ಸೈಂಟ್ ಸೈಮನ್ ಸೈಂಟ್ ಸೈಮನ್ನನ ಪೂರ್ಣ ಹೆಸರು ಕೌಂಟ್ ಹೆನ್ರಿ ಕ್ಲಾಡ್ ಡಿ ರಾವೊರಿ ಡಿ ಸೈಂಟ್ ಸೈಮನ್ ಎಂಬುದಾಗಿದೆ.ಈತ ಇತಿಹಾಸದಲ್ಲಿ ಅತ್ಯಂತ ವಿಲ ವ್ಯಕ್ತಿ ಎಂದು ಪ್ರಖಾತನಾಗಿದ್ದಾನೆ.ಇವನನ್ನು ಒಬ್ಬ ಆದಶ ಸಮಾಜವಾದಿ ಎಂದು ಪದಿಗಣಿಸಲಾಗಿದ್ದು.ಈತ ಸಂಪ್ರದಾಯವಾದಿ ತತ್ವಗಳಿಗಿಂತ ಸ್ವಲ್ಪ ಭಿನ್ನವಾದ ತತ್ವಗಳನ್ನು ಪ್ರತಿಪಾದಿಸಿದನು.ಇವನನ್ನು ಭ್ರಾಮಕ ಸಮಾಜವಾದದ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ..ಅವನು ಒನ್ನ ಸೈನಿಕನಾಗಿ,ಕ್ರಾಂತಿಕಾರಿಯಾಗಿ ಮತ್ತು ಸಟ್ಟಾ ವ್ಯಾಪಾರಿಯಾಗಿ ಅಪಾರ ಜೀವನಾನುಭ ಪಡೇದ ವ್ಯಕ್ತಿಯಾಗಿದ್ದ.

ಬದುಕು ಮತ್ತು ಬರಹ

[ಬದಲಾಯಿಸಿ]

ಸೈಂಟ್ ಸೈಮನ್ ೧೭೬೦ ರಲ್ಲಿ ಪ್ಯಾರಿಸ್ಸಿನ ಒಂದು ಪ್ರತಿಷ್ಟಿತ ಕುಟುಂಬದಲ್ಲಿ ಜನಿಸಿದನು.ಅವನು ತನ್ನ ಹದಿನೆಂಟನೇ ವಯಸ್ಸಿನಲ್ಲಿ ಫ್ರೆಂಚ್ ಸೇನೆಗೆ ಸೇರ್ಪಡೆಯಾಗಿ ಅಮೆಒರಿಕಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಕಳುಹಿಸಲ್ಪಟ್ಟನ್ನು. ಅಲ್ಲಿಂದ ಆತ ಪವಾಪಾಸ್ಗಾಗುತ್ತಲೇ ಬ್ರಿಟೀಷರ ಸೆರೆಯಾಳಾಗಿ ಬಂಧಿಸಲ್ಪಟ್ಟು ಜಮೈಕಾ ದ್ವೀಪದ ಸೆರೆಯಲ್ಲಿ ಉಳೀಯ ಬೇಕಾಯಿತು.ಆತನ ಬಿಡುಗಡೆಯ ಬಳೀಕ ಅವನು ಮೆಕ್ಸಿಕೋಗೆ ಬೇಟಿಯಿತ್ತು ಅಲ್ಲಿನ ವೈಸ್ ರಾಯಿಗೆ ಪನಾಮಾ ಕಾಲುವೆ ನಿರ್ಮಿಸುವ ಬಗ್ಗೆ ಸಲಹೆ ನೀಡಿದ.ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ತನ್ನ ಸಂಪತ್ತೆಲ್ಲವನ್ನೂ ಕಳೆದುಕೊಂಡ ಸೈಮನ್ ಕ್ರಾಂರತಿಯ ಪಕ್ಷಕ್ಕೆ ಸೇರ್ಪಡೆಯಾಗಿ ಸೆರೆಮನೆಗೆ ತಳ್ಳಲ್ಪಟ್ಟ.ಅಲ್ಲಿಂದ ಹೊರಬಂದ ತರುವಾಯ ಆತ ಹೊಸ ಸಮಾಜದ ನಿರ್ಮಾಣಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ.ಅವನ ಜೀವನದ ಅಂತಿಮ ದಿನಗಳ್ಯ್ ತೀವ್ರ ಬಡತನ ಮತ್ತು ನರಳಾಟದಿಂದ ಕೂಡಿದ್ದವು.ಇದರಿಂದಾಗಿ ಒಮ್ಮೆ ಆತ ಆತ್ಮಹತ್ಯೆಗೂ ಪ್ರಯತ್ನಿಸಿದ.ನಂತರ ಆತ ೧೮೨೫ರಲ್ಲಿ ಸಹಜವಾಗಿ ಸಾವನ್ನಪ್ಪಿದ. ಸೈಮನ್ ಒಬ್ಬ ಅದ್ಬುತ ಬರಹಗಾರನಾಗಿದ್ದ.ಅವನು ಹೊಸ ಹೊಸ ವಿಚಾರಗಳ ಬಗ್ಗೆ ಯೋಚಿಸುವುದನ್ನು ಮತ್ತು ಪ್ರಯೋಗ್ ಮಾಡುವುದನ್ನು ಕರಗತ ಮಾಡಿಕೊಂಡಾನು.ತತ್ವಶಾಸ್ತ್ರಮತ್ತು ಅರ್ಥಶಾಸ್ತ್ರದಲ್ಲಿ ವಿಶೀಷ ಆಸಕ್ತಿ ಹೊಂದಿದ್ದ ಸೈನ್ತ್ ಸೈಮನ್ನನ ಪ್ರಮುಖ್ ಕೃತಿಗಳು ಈ ಮುಂದಿನಂತಿವೆ. ಸೈಮನ್ನನ ಆರ್ಥಿಕ ವಿಚಾರಧಾರೆ ಸೈಂಟ್ ಸೈಮನ್ ಹಲವಾರು ಆರ್ಥಿಕ ವಿಚಾರಗಳನ್ನು ಕುರಿತು ತನ್ನ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದನು.ಅವುಗಳಲ್ಲಿ ಪ್ರಮುಖವಾದವುಗಳು ಈ ಮುಂದಿನಂತಿವೆ. ಕೈಗಾರಿಕಾ ಚಟುವಟಿಕೆ: ಸೈಂಟ್ ಸೈಮನ್ ರಾಷ್ಟ್ರವೊಂದರ ಕೈಗಾರಿಕಾ ಚಟುವಟಿಕೆಗಳ ಹೆಚ್ಚಳಕ್ಕೆ ಅತ್ಯಂತ ಹೆಚ್ಚು ಮಹತ್ವ ನೀಡುತ್ತಾನೆ. ಅವನ ಪ್ರಕಾರ ಕೈಗಾರಿಕೆಯು ಆಧುನಿಕ ಆರ್ಥಿಕಾಭಿವೃದ್ದಿಯ ಬೆನ್ನುಲುಬಿದ್ದಂತೆ.ಅವನ ದೃಷ್ಟಿಯಲ್ಲಿ ಕೈಗಾರಿಕೆ ಎಂದರೆ ಎಲ್ಲಾ ವಿಧದ ಶ್ರಮ ಎಂದರ್ಥ.ವಿಜ್ಞಾನ ಮತ್ತು ತಂತ್ರ ನದ ಪೂರ್ಣ ಬಳಕೆಯಿಂದ ಪೂರ್ಣ ಉದೊಯೊಗ ಮತ್ತು ಪೂರ್ಣ ಉತ್ವಾದನೆ ಸಾಧಿಸಬೇಕು ಎಂದು ಆತ ಹೇಳಿದ. ಅವನ ಪ್ರಕಾರ ಬ್ಯಾಂಕರರು, ಕೈಗಾರಿಕಾ ಮುಖಂಡರು, ವಿಗ್ಣ್ಯನಿಗಳು, ಆಭಿಯಂತರರು ಮುಂತಾದವರು ಕುಲೀನ ವರ್ಗದವರು ಮತ್ತು ರಾಜಕೀಯ ನಾಯಕರುಗಳಿಗಿಂತ ಆತ್ಯಂತ ಮುಖ್ಯವೆನಿಸುತ್ತಾರೆ. ಏಕೆಂದರೆ ಅವರು ನಿಜೆವಾಗಿ ಉತ್ವಾದಕ ಚಟುವಟಿಗಳಲ್ಲಿ ಮತ್ತು ರಾಷ್ಟ್ರದ ಆರ್ಥಿಕಾಭಿವೃದ್ದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುತ್ತಾರೆ. ಆದರೆ ಕುಲೀನ ವರ್ಗದವರು ಮತ್ತು ರಾಜಕೀಯ ನಾಯಕರುಗಳು ಏನನ್ನೂ ಉತ್ವಾದಿಸದಿರುವುದರಿಂದ ಅವರು ಸಮಾಜಕ್ಕೆ ಹೊರೆ ಎನಿಸುತ್ತಾರೆ.

==ಸೈಂಟ್ ಸೈಮನ್ ದೃಷ್ಟಾಂತ==

ಸೈಂಟ್ ಸೈಮನ್ ತನ್ನ ದೃಷ್ಟಾಂತ ಕಥೆಯಲ್ಲಿ ಕೈಗಾರಿಕ ವರ್ಗದವರ ಪ್ರಾಮುಖ್ಯತೆಯನ್ನು ಸಮರ್ಥವಾಗಿ ವಿವರಿಸಿದ್ದಾನೆ. ಅವನ ಪ್ರಕಾರ ಈ ವರ್ಗದವರ ಜನರಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಕಲ್ಪಿಸಬೇಕು. ಅವನ ಅಭಿಪ್ರಾಯದಲ್ಲಿ ಕೈಗಾರಿಕಾ ವರ್ಗ ಎಂದರೆ ಬಯಕೆಗಳನ್ನು ತೃಪ್ತಿಪಡಿಸುವ ಸಾಧನಗಳನ್ನು ಉತ್ವಾದಿಸುವವನು. ಈ ವರ್ಗದಲ್ಲಿ ಅವನು ರೈತರು, ಬೂಟು ತಯಾರಕರು, ನಾವಿಕರು, ಕೈಗಾರಿಕಾ ಸರಕುಗಳ ಉತ್ವಾದಕರು, ವ್ಯಾಪಾರಿಗಳು ಮುಂತಾದವರಿರುರತ್ತಾರೆ ಎಂದಿದ್ದಾನೆ. ಈ ವರ್ಗದ ಜನರು ಬೇರೆ ಎಲ್ಲರಿಗಿಂತ ಶೇಷ್ಟರು. ಏಕೆಂದರೆ ಇವರು ಬೇರೆಯವರ ನೆರೆವಿಲ್ಲದೆ ಜೀವಿಸಬಲ್ಲರು. ಆದರೆ ಬೇರೆಯವರು ಇವರ ನೆರವಿಲ್ಲದೆ ಜೀವಿಸಲಾರರು. ಸೈಮನ್ ಕಾಲದಲ್ಲಿ ನಿರುತ್ವಾದಕ ವರ್ಗವಾದ ಶ್ರೀಮಂತರು ಮತ್ತು ನೊಬಲ್ಸ್ ಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಲಭ್ಯವಾಗಿತ್ತು. ಅದರೆ ಶ್ರಮಿಕ ವರ್ಗದವರು ನಿರ್ಲಕ್ಷಕ್ಕೆ ಒಳಗಾಗಿದ್ದರು. ಇದರಿಂದಾಗಿ ಆತ ಸಾಮಾಜಿಕ ಸಂಘಟನೆಯನ್ನು ಸುಧಾರಿಸುವ ಷಣತೊಟ್ಟ.

ಕೈಗಾರಿಕಾ ವ್ಯವಸ್ಥ

[ಬದಲಾಯಿಸಿ]

ಸೈಮನ್ ಹಿಂದುಳಿದ ವರ್ಗದ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದಾದ ಸಾಮಜಿಕ ವ್ಯವಸ್ಥೆಯನ್ನು ಹುಟ್ಟು ಹಾಕುವ ಯೋಚನೆ ಮಾಡಿದನು. ಅವನ ಪ್ರಕಾರ ಸಮಾಜವನ್ನು ಎಲ್ಲರಿಗೂ ಸಮಾನ ಅವಕಾಶ ಮತ್ತು ಸಮಾನತೆಯನ್ನು ಕೊಡಮಾಡುವ ರೀತಿಯಲ್ಲಿ ಸಂಘಟನೆಬೇಕು. ಅವನು ಕ್ರಾಂತಿ ಅಥವಾ ಮಿಲಿಟರಿ ಅಡಳಿತದ ಮೂಲಕ ಸಾಧಿತವಾಗುವ ಸಮಾನತೆಯನ್ನು ವಿರೋಧಿಸಿದನು. ಅವನ ಕೈಗಾರೊಕಾ ವ್ಯವಸ್ಥೆಯಲ್ಲಿ ತಯಾರಕರು, ವಿಜ್ಞಾನಿಗಳು, ಅಭಿಯಂತರರು, ಕಾರ್ಮಿಕರು, ಕೃಷಿಕರು, ಕಲಾಕಾರರು, ಬ್ಯಾಂಕರರು ಮುಂತಾದ ಕೈಗಾರಿಕಾ ವರ್ಗದವರು ಪ್ರಮುಖ ಪ್ರಜೆಗಳಾಗಿರುತ್ತಾರೆ. ಆದರೆ ಕ್ರಿಸ್ಥ ಪಾದ್ರಿಗಳು ಮತ್ತು ಶ್ರೀಮಂತ ವರ್ಗದವರಿಗೆ ಈ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ಏಕೆಂದರೆ ಇವರು ಏನನ್ನು ಉತ್ವಾದಿಸುವುದಿಲ್ಲ. ಎಲದಕ್ಕೂ ಅವರು ಕೈಗಾರಿಕಾ ವರ್ಗದವರನ್ನೇ ಅವಲಂಬಿಸಿರುತ್ತಾರೆ. ಸೈಮನನ್ನ ನೂತನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನೂ ತನ್ನ ಉತ್ವಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಗಳಿಸಬೇಕು. ಪ್ರತಿಯೊಬ್ಬ ತನ್ನ ಪಾಲಿಗೆ ಸಮವಾಗಿ ಪ್ರಯೋಜನಗಳನ್ನು ಪಡೆಯಬೇಕು. ಆಗ ಸಮಾಜದಲ್ಲಿ ಸಮಾನತೆ ನೆಲೆಸುತ್ತದೆ.

ಖಾಸಗಿ ಆಸ್ತಿ

[ಬದಲಾಯಿಸಿ]

ಸೈಂಟ್ ಸೈಮನ್ ಖಾಸಗಿ ಆಸ್ತಿ ಮತ್ತು ಅನುವಂಶಿಕ ಅಧಿಕಾರವನ್ನು ವಿರೋಧಿಸಿದನು. ಏಕೆಂದರೆ ಇವು ಶ್ರೀಮಂತರುನ್ನು ನಿಷ್ಕ್ರಿಯಗೊಳಿಸುತ್ತವೆ. ಖಾಸಗಿ ಆಸ್ತಿಯ ಬದಲಿಗೆ ಸೈಮನ್ ಆಸ್ತಿಯ ಸಾಂಫಿಕ ಮಾಲಿಕತ್ವವನ್ನು ಪ್ರತಿಪಾದಿಸುತ್ತಾನೆ.

ಸರ್ಕಾರದ ಪಾತ್ರ

[ಬದಲಾಯಿಸಿ]

ಸೈಮನ್ ಕೈಗಾರಿಕೆಗಳಿಗೆ ಅನುಕೂಲವಾಗುವಂತಹ ಸಂಘಟನೆಯನ್ನು ಸೃಷ್ಟಿಸುವ ಆಸಕ್ತಿ ಹೊಂದಿದ್ದ. ಅದನ್ನು ಅವನ ಕೈಗಾರಿಕಾ ರಾಜ್ಯ ಎಂದು ಕರೆಯುತ್ತಾನೆ. ಇಂತಹ ಕೈಗಾರಿಕಾ ರಾಜ್ಯದಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿರುವುದಿಲ್ಲ. ಇಲ್ಲಿ ಇಡೀ ದೇಶವೇ ಒಂದು ದೊಡ್ಡ ಕಾರ್ಖಾನೆಯಂತಿರುತ್ತದೆ. ಜನರು ದೊಡ್ಡ ಕಾರ್ಯಗಾರದ ರೀತಿಯಲ್ಲಿ ಒಗ್ಗೂಡಿರುತ್ತಾರೆ. ಸರ್ಕಾರ ಇಲ್ಲಿ ಏನಿದ್ದರೂ ಒಳ್ಳೆಯ ಕೆಲಸಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರಕ್ಕೆ ಕನಿಷ್ಟ ಪಾತ್ರವಿರುವುದರಿಂದ ಅದರ ಅಧಿಕಾರ ಮತ್ತು ಹಣ ಕೂಡ ಮಿತವಾಗಿರುತ್ತದೆ.

ಕೈಗಾರಿಕಾ ಸಂಪತ್ತು

[ಬದಲಾಯಿಸಿ]

ಸಮಾಜದ ಮರು ಸಂಘಟನೆಯ ದೃಷ್ಟಿಯಿಂದ ಕೈಗಾರಿಕಾ ಸಂಸತೊಂದನ್ನು ರಚಿಸಲು ಸೈಮನ್ ಒಂದು ಕಾರ್ಯಯೋಜನೆಯನ್ನು ರೂಪಿಸಿದನನು. ಅವನು ಪ್ರಸ್ತಾಪಿಸಿದ ಕೈಗಾರಿಕಾ ಸಂಸತ್ತಿನಲ್ಲಿ ಮೂರು ಮಂಡಲ ಸಂಶೋಧನಾ ಮಂಡಲವಾಗಿದ್ದು ಅಭಿಯಂತರರು ಮತ್ತು ಕಲಾಕಾರರಿರುತ್ತಾರೆ. ಇವರು ಸಾರ್ವಜನಿಕ ಕಾಮಗಾರಿಗಳ ಯೋಜನೆಯನ್ನು ರೂಪಿಸುತ್ತಾರೆ. ಎರಡನೇ ಮಂಡಲವಾದ ಪರಿಶೀಲನಾ ಮಂಡಲದಲ್ಲಿ ವಿಗ್ಝ್ಣಾನಿಗಳಿರುತ್ತಾರೆ. ಇವರು ಯೋಜನೆಗಳ ಪರಿಶೀಲನೆ ಜೊತೆಗೆ ಶಿಕ್ಷಣದ ಉಸ್ತುವಾರಿ ನಡೆಸುತ್ತಾರೆ. ಮೂರನೇ ಮಂಡಲವಾದ ನಿರ್ವಹಣ ಮಂಡಲದಲ್ಲಿ ನಾಯಕರುಗಳಿರುತ್ತಾರೆ. ಇವರುಗಳು ಯೋಜನೆಗಳ ಅನುಷ್ಟಾನ ಮತ್ತು ಹಣಕಾಸಿನ ನಿಯಂತ್ರಣ ಕಾರ್ಯದಲ್ಲಿ ತೊಡಗಿರುತ್ತಾರೆ. ಹೀಗೆ ಸೈಮನ್ ಕೇಂದ್ರೀಕೃತ ಯೋಚಿತ ಆರ್ಥಿಕತೆಯ ಒಂದು ಅತ್ಯುತಮ ಯೋಜನೆಯನ್ನು ರೂಪಿಸಿದ. ಸೈಂಟ್ ಸೈಮನ್ ನಿರಂಕುಶ ಪ್ರಭುತ್ವದ ಪರವಾಗಿದ್ದ. ಅವನನ್ನು ಸಮಾಜವಾದದ ಪ್ರತಿಪಾದಕ ಎಂದು ಪರಿಗಣಿಸಲಾಗಿದೆ. ಆದರೆ ಅವನ ವಿಚಾರಧಾರೆಗಳಲ್ಲಿ ಸಮಾಜವಾದಿ ಅಂಶಗಳ ಪ್ರಮಾಣ ಕನಿಷ್ಟವಾಗಿದೆ. ಅವನು ಒಂದು ರಾಷ್ಟ್ರವನ್ನು ಪಿರಮಿಡ್ಡಿನ ಮೇಲಿರುವ ಸೊಗಸಾದ ವಜ್ರವಾಗಿದೆ. ಅವನು ಆಸ್ತಿಯ ಸಾಂಘಿಕ ಮಾಲಿಕತ್ವಕ್ಕೆ ಕರೆ ನೀಡಿದನಾದರೂ ಖಾಸಗಿ ಆಸ್ತಿಯ ಹಕ್ಕನ್ನು ರದ್ದುಪಡಿಸಬೇಕು ಎಂದು ಹೇಳಲಿಲ್ಲ.ಬಡವರು ಮತ್ತು ದುರ್ಬಲ ವರ್ಗದವರ ಬಗ್ಗೆ ಕಾಳಜಿ ಉಳವರು. [] , []

ಉಲ್ಲೇಖನಗಳು

[ಬದಲಾಯಿಸಿ]