ಕದಿರರೆಮ್ಮವ್ವೆ
ಕದಿರರೆಮ್ಮವ್ವೆ | |
---|---|
ಜನನ | 1160 |
ಅಂಕಿತನಾಮ | ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರ |
ಕದಿರರೆಮ್ಮವ್ವೆ ನೂಲುವ ಕಾಯಕದವಳು. ತನ್ನ ಕಾಯಕದೊಂದಿಗೆ ಆಧ್ಯಾತ್ಮವನ್ನು ಸಮನ್ವಯಗೊಳಿಸಿ ಪ್ರೌಢವೆನಿಸುವ 'ಬೆಡಗಿನ ವಚನ'ಗಳನ್ನೂ ರಚಿಸಿದ್ಧಾಳೆ. ಈಕೆಯ ವಚನಗಳ ಅಂಕಿತ "ಕದಿರೆಮ್ಮಿಯೊಡೆಯ ಗುಮ್ಮೇಶ್ವರ". ಹರಿಹರ ತನ್ನ ಲಿಂಗಾರ್ಚನೆಯ ರಗಳೆಯಲ್ಲಿ ರೆಮ್ಮವ್ವೆಯ ಹೆಸರನ್ನು ಸ್ಮರಿಸಿದ್ದಾನೆ.
ವಚನಗಳ ವೈಶಿಷ್ಟ್ಯ
[ಬದಲಾಯಿಸಿ]ತನಗೆ ಜೀವನ ರೂಪಿಸಿ ಕೊಳ್ಳಲು, ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟ ಶರಣರನ್ನು ಕೃತಜ್ಞತೆಯಿಂದ ಸ್ಮರಿಸಿರುವಳು. ನೂಲುವ ಕಾಯಕದಿಂದ ಬಂದ ಹಣದಲ್ಲಿ ಗುರು, ಲಿಂಗ, ಜಂಗಮ ಸೇವೆ, ದಾಸೋಹ ಮಾಡುವುದು, ಶರಣರ ಅನುಭಾವಗೋಷ್ಠಿಗಳಲ್ಲಿ ಭಾಗವಹಿಸುವುದು ಈಕೆಯ ನಿತ್ಯ ನೇಮವಾಗಿತ್ತು. ಶಿವ ಅವಳ ಅಲೌಕಿಕ ಆಧ್ಯಾತ್ಮಿಕ ಪತಿ. ಈತ ಮನ ಎಂಬ ಸೈನ್ಯದ ಚಟುವಟಿಕೆಗಳನ್ನು ನಿಯಂತ್ರಿಸುವವನು ಎನ್ನುತ್ತಾಳೆ. ಸೃಷ್ಠಿ, ಸ್ಥಿತಿ ,ಲಯಕಾರರಾದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ತನ್ನ ಕದಿರ ಕಾಯಕದ ದೃಷ್ಟಾಂತಗಳೊಂದಿಗೆ ಅಂತರ್ಗತಗೊಳಿಸಿರುವಳು. ಈಕೆಯ ನಾಲ್ಕು ವಚನಗಳು ದೊರಕಿವೆ.
ನಾ ತಿರುಗುವ ರಾಟೆಯ ಕುಲ-ಜಾತಿ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ
ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ
ತಿರುಹಲಾಗಿ ಸುತ್ತಿತು ನೂಲು
ಕದಿರು ತುಂಬಿತ್ತು ರಾಟೆಯ ತಿರುಹಲಾರೆ
ಎನ್ನ ಗಂಡ ಕುಟ್ಟಿಹ ಇನ್ನೇವೆ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರ ?