ವಿಷಯಕ್ಕೆ ಹೋಗು

ಆರ್. ವಿ. ದೇಶಪಾಂಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ ವಿ ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆಹಳಿಯಾಳ ಕ್ಷೇತ್ರದ ಶಾಸಕ. ಸತತ ೧೦ ವರ್ಷ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿದ್ದುದು ಇವರ ಹೆಗ್ಗಳಿಕೆ.

ಬಾಲ್ಯ ಮತ್ತು ಕುಟುಂಬ

[ಬದಲಾಯಿಸಿ]

ರಾಧಾ ದೇಶಪಾಂಡೆ ಇವರ ಪತ್ನಿ. ಪ್ರಸಾದ್ ಮತ್ತು ಪ್ರಶಾಂತ್ ಇವರ ಮಕ್ಕಳು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭೆ ಕ್ಷೇತ್ರವನ್ನು ಸತತ ೫ ಬಾರಿ ಪ್ರತಿನಿಧಿಸಿದ್ದಾರೆ. ೧೯೯೪-೯೯ರವರೆಗೆ ಜನತಾ ದಳದಿಂದ ಮತ್ತು ೧೯೯೯-೨೦೦೪ರವರೆಗೆ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿದ್ದರು. ಪ್ರಸಕ್ತ ೨೦೧೩ರ ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದಾರೆ.

ರಾಜಕೀಯ ಬದುಕು

[ಬದಲಾಯಿಸಿ]
  • ೧೯೯೪ರಲ್ಲಿ ದೇವೇಗೌಡರ ಸರ್ಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿ, ಬೆಂಗಳೂರು ಐ ಟಿ ಪಿ ಎಲ್, ಬೆಂಗಳೂರು ಐ ಐ ಐ ಟಿ, ಮೈಸೂರಿನ ಇನ್ಫ಼ೋಸಿಸ್ ತರಬೇತಿ ಕೇಂದ್ರ ಸ್ಥಾಪನೆಗೆ ಶೀಘ್ರ ಅನುಮತಿ ಕೊಡಿಸಿದ್ದು ಇವರ ಹೆಗ್ಗಳಿಕೆ.
  • ೧೯೯೯ರಲ್ಲಿ ಜನತಾದಳ ಪಕ್ಷ ಹೋಳಾದಾಗ, ರೋಷನ್ ಬೇಗ್ ರೊಂದಿಗೆ ಭಾರತೀಯ ಕಾಂಗ್ರೆಸ್ ಪಕ್ಷ ಸೇರಿದರು. ಎಸ್ ಎಂ ಕೃಷ್ಣರ ಸಚಿವ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾದರು.
  • []

[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-03-05. Retrieved 2015-06-08.
  2. http://www.deccanherald.com/content/161413/deshpande-hailed-promoting-it.html


[ಬದಲಾಯಿಸಿ]