ವಿಷಯಕ್ಕೆ ಹೋಗು

ಸತೀಶ್ ಆಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸತೀಶ್ ಆಚಾರ್ಯ
ಸತೀಶ್ ಆಚಾರ್ಯ
Bornಮಾರ್ಚ್‌ 24
NationalityIndia ಭಾರತೀಯ
Alma materಮಂಗಳೂರು ವಿಶ್ವವಿದ್ಯಾಲಯ
Occupationವ್ಯಂಗ್ಯ ಚಿತ್ರಕಾರ
Spouseಡಾ. ಅಮೃತಾ
Childrenಸೋಹನ್
Websitehttp://cartoonistsatish.blogspot.com

ಸತೀಶ್ ಆಚಾರ್ಯ ಅವರು ಭಾರತದ ವ್ಯಂಗಚಿತ್ರಕಾರರಲ್ಲೊಬ್ಬರು. ಇವರ ಊರು ಕುಂದಾಪುರ. [] ಇತ್ತೀಚಿಗೆ ಫೋರ್ಬ್ಸ್ ಪತ್ರಿಕೆ ಬಿಡುಗಡೆ ಮಾಡಿದ ೨೪ ಥಿಂಕರ್ಸ್ ಪಟ್ಟಿಯಲ್ಲಿ ಸತೀಶ್‌ ಆಚಾರ್ಯ ಸಹ ಸ್ಥಾನ ಪಡೆದಿದ್ದಾರೆ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ವ್ಯಂಗ್ಯ ಚಿತ್ರಗಳನ್ನು ತಾವೇ ಪುಸ್ತಕ, ದೈನಿಕ ಪತ್ರಿಕೆಗಳು ಮೊದಲಾದವುಗಳನ್ನು ಗಮನಿಸಿ ಕಲಿತರು. ಚಿಕ್ಕವರಾಗಿದ್ದಾಗಲೇ ತರಂಗ, ಸುಧಾ, ಮಯೂರ ಮೊದಲಾದ ಪತ್ರಿಕೆಗಳಿಗೆ ತಮ್ಮ ವ್ಯಂಗ್ಯ ಚಿತ್ರಗಳನ್ನು ಕಳುಹಿಸುತ್ತಿದ್ದರು. ಕುಂದಾಪುರದ ಭಂಡಾರ್ಕರ್ ಕಾಲೇಜ್ ನಲ್ಲಿ ಬಿ.ಕಾಂ ಪದವಿಗಳಿಸಿದರು. ನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಬಿ.ಎ.(ವಾಣಿಜ್ಯ) ಪದವಿ ಗಳಿಸಿದರು. ಮುಂಬಯಿ ನಗರಕ್ಕೆ ಹೋಗಿ ಜಾಹಿರಾತು ಸಂಸ್ಥೆಯೊಂದರಲ್ಲಿ ಅಕೌಂಟ್ ಅಧಿಕಾರಿಯಾಗಿ ನೌಕರಿ ಗಳಿಸಿದರು. ಆದರೆ ಅದನ್ನು ಬಿಟ್ಟು ಕಾರ್ಟೂನ್ ಬರೆಯುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂಬಯಿ ನಗರದ 'ಮಿಡ್ ಡೇ' ಪತ್ರಿಕೆಯಲ್ಲಿ ಪ್ರತಿದಿನವೂ ಪ್ರಕಟಿಸುತ್ತಿದ್ದ ಚಿತ್ರಗಳನ್ನು ಸತೀಶ್ ತಯಾರು ಮಾಡಿ ಒದಗಿಸುತ್ತಿದ್ದರು. ೨೦೦೩ ರಲ್ಲಿ ರಾಜಕೀಯ ವಲಯದ ಕಾರ್ಟೂನ್ ರಚನೆಯಲ್ಲಿ ಆಸಕ್ತಿ ವಹಿಸಿದರು. ಸತೀಶರು Charlie Hebdo Massacre ಎಂಬ ರಚಿಸಿದ ಕಾರ್ಟೂನ್ ಶ್ರೇಣಿ ರಚಿಸಿದ್ದರು. ಅವರ ಕಾರ್ಟೂನ್ ಗಳು 'ವಾಲ್ ಸ್ಟ್ರೀಟ್ ಜರ್ನಲ್', 'ಟೈಮ್ಸ್', ಮತ್ತು 'ಗಾರ್ಡಿಯನ್' ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಪುಸ್ತಕಗಳು

[ಬದಲಾಯಿಸಿ]

ಆಚಾರ್ಯ ಒಟ್ಟಾರೆ ೩ ಕಾರ್ಟೂನ್ ಪುಸ್ತಕಗಳನ್ನು ಬರೆದಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

  1. ಮೈ ಹೂ ಅಂಡ್ ಆಪ್ (English),
  2. ಕಾರ್ಟೂನಿಸ್ಟಾ (ಕನ್ನಡ)
  3. ನೇಗಿಪುಗ್ಗಿ (ಕುಂದಾಪ್ರ ಕನ್ನಡದಲ್ಲಿ)
  4. cricket-cartoon-book Non-Striker

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. ಕಾರ್ಟೂನು-ಕುಂದಾಪ್ರ-ಪ್ರಸ್
  2. Satish Acharya's Charlie Hebdo Cartoon grabsworld's attraction, Jan,18,2015, Daiji world Media Network-Mangaluru
  3. minds-that-(should)-matter,Raju nari setti, Jan, 2, 2015

ಉಲ್ಲೇಖಗಳು

[ಬದಲಾಯಿಸಿ]
  1. http://www.daijiworld.com/news/news_disp.asp?n_id=291225