ಕಬ್ಬಿಣದ ಶಸ್ತ್ರ ಚಿಕಿತ್ಸಕರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಕ್ಟರ್ ಮಾಡುವಂತಹ ಆಪರೆಷನ್ ಗಳನ್ನು ಇಂದು ರೊಬೋಟ್ ಮಾಡಲು ಪ್ರಾರಂಭವಾಗಿವೆ.ಅದರಲ್ಲೂ ಆಪರೇಷನಂತಹ ಸೂಕ್ಷ್ಮ ವಾದ ಆಪರೇಷನ್ ಗಳನ್ನು ರೋಬೋಟ್ ಮಾಡುತ್ತಿವೆ . ೨೦೦೯ರಲ್ಲಿ ಅಮೇರಿಕಾದಲ್ಲಿ ರೊಬೋಟೊನಿಂದ ಪ್ರೊಸ್ಟೆಟ ಆಪರೇಷನ್ ಮಾಡಿಸಿಕೊಳ್ಳಲು ೭೩೦೦೦ ಜನ ನೋಂದಾವಣೆ ಮಾಡಿಸಿದ್ದಾರೆ . ರೊಬೋಟ್ ನ ಸಣ್ಣ ಕೈಗಳಿಂದ ರೋಗ ತಾಗಿದ ಅಂಗಾಂಶಗಳನ್ನು ಬಹಳ ಸುಲಭವಾಗಿ ತಗೆಯಬಹುದು ಅದು ಕೂಡ ಕಡಿಮೆ ಅವಧಿ ಮತ್ತು ಕಡಿಮೆ ರಕ್ತ ಸ್ರಾವದಿಂದ ಅದೇ ಆಪರೇಷನ್ ಗಳನ್ನು ಮನುಷ್ಯ ಮಾಡ ಬೇಕಾದರೆ ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ರಕ್ತ ಸ್ರಾವವು ಹೆಚ್ಚು ಆಗುತ್ತದೆ. ಕಾರಣ ಇವನ ಕೈಗಳು ರೊಬೋಟ್ ಕೈಗಳಂತೆ ಸೂಕ್ಷ್ಮ ವಾಗಿಲ್ಲ. ಹಾಗಾಗಿ ಹೆಚ್ಚು ದೊಡ್ಡದಾಗಿ ಚರ್ಮವನ್ನು ಕೊಯ್ಯಬೇಕಾಗಿರುತ್ತದೆ ಇದರಿಂದ ಗಾಯ ದೊಡ್ಡದಾಗಿ ಅದು ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ . ಈಎಲ್ಲಾ ಕಾರಣಗಳಿಂದ ಇಂದು ಅಮೇರಿಕದಂಥ ದೊಡ್ಡ ಮುಂದುವರೆದ ರಾಷ್ಟ್ರಗಳಲ್ಲಿ ಜನರು ರೊಬೋಟ್ ಮೂಲಕ ಆಪರೇಷನ್ ಮಾಡಿಸಿಕೊಳ್ಳಲು ಇಚ್ಚಿಸುತ್ತಾರೆ . ಆದರೆ ರೊಬೋಟ್ ಗಳ ಶಸ್ತ್ರ ಚಿಕಿತ್ಸೆಗೆ ಹಣ ಹೆಚ್ಚು ಖರ್ಚಾಗುತ್ತದೆ. ಮುಂದುವರಿದ ದೇಶಗಳಲ್ಲಿ ಇವುಗಳ ಚಿಕಿತ್ಸೆ ಹೆಚ್ಚು ಬಡರಾಷ್ಟ್ರಗಳಲ್ಲಿ ಕಡಿಮೆ.