ವಿಷಯಕ್ಕೆ ಹೋಗು

ಹಲಸಿನ ಹಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಲಸಿನ ಹಣ‍್ಣು ಸಂಸ್ಕ್ರತದಲ್ಲಿ 'ಪನಸ' ಎಂದು ಕರೆಯುವ , ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಹತ್ತರಂದ ಹನ್ನೆರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವ್ರತವಾಗಿದೆ. ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮನ್ ಗಳು , ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್ , ಕ್ಯಾಲ್ಶಿಯಮ್ , ಪೊಟಾಶಿಯಮ್ ಅಂಶಗಳಿವೆ .

ಇದರಲ್ಲಿನ ಔಷಧೀಯ ಗುಣಗಳು

[ಬದಲಾಯಿಸಿ]
  1. ವಯಸ್ಥಾಪಕ ಗುಣಅಂದರೆ ಮುಪ್ಪನ್ನು ಮುಂದೂಡುವ ಗುಣವನ್ನು ಹೊಂದಿದೆ.
  2. ಈ ಹಣ್ಣನ್ನು ನಿತ್ಯವೂ ನಿಯಮಿತವಾಗಿ ಸೇವಿಸಿದರೆ ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್ಗಳು ಕ್ಯಾನ್ಸರ್ನಲ್ಲಿ ಪ್ರತಿಬಂಧಕವಾಗಿ ಕಾರ್ಯವೆಸಗುತ್ತದೆ .
  3. ಅಧಿಕ ವಿಟಮಿನ್ ಎ ಇರುವುದರಿಂದ ಕಣ್ಣಿನ ತೊಂದರೆಗಳಿಗೆ ಮುಖ್ಯವಾಗಿ ಇರುಳುಗಣ್ಣು ತೊಂದರೆಗಳಿಗೆ ಉತ್ತಮ .
  4. ಇದರಲ್ಲಿರುವ ತಾಮ್ರದ ಅಂಶ ಥೈರಾಯಿಡ್ ತೊಂದರೆಗಳಿಗೆ ಹಿತಕರ .
  5. ಹಲಸಿನ ಹಣ್ಣಿನ ಸೊನೆ[ಹಾಲು] ಒಣಗಿಸಿದಾಗ ಅದರಲ್ಲಿ ಆರ್ಟೋಸ್ಟಿರಾನ್ ಎಂಬ ರಾಸಾಯನಿಕ ಅಂಶವು ಸಿಗುತ್ತದೆ . ಇದು ಪುರುಷರ ಹಾರ್ಮೋನ್-ಆಂಡ್ರೋಜೆನ್ ನಂತೆ ಕಾರ್ಯ ವೆಸಗುತ್ತದೆ .
  6. ಜ್ವರ ಮತ್ತು ಭೇದಿ ಉಂಟಾದಾಗ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಗುಣಕಾರಿ.
ಹಲಸಿನ ಹಣ್ಣು
Jackfruit hanging from the trunk
Jackfruit garden in Bangladesh
Jackfruit flesh
Opened jackfruit

ಹಲಸಿನ ತಿನಿಸುಗಳು

[ಬದಲಾಯಿಸಿ]
ಹಲಸಿನ ಕಾಯಿಯ ಚಿಪ್ಸ್