ಶಿರ್ಲಾಲಿನ ಗೊಮ್ಮಟೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಸುತ್ತಲೂ ಬೆಟ್ಟಗುಡ್ಡ ಪ್ರದೇಶ. ಅದರಾಚೆ ಹೆಮ್ಮರಗಳಿಂದ ಕೂಡಿದ ದಟ್ಟಕಾಡು . ಮಳೆಗಾಲದ ಧಾರಾಕಾರ ಮಳೆಗಳಿಂದಾಗಿ ಎಲ್ಲೆಂದರಲ್ಲಿ ಹರಿಯುವ ಸಣ್ಣ ಸಣ್ಣ ಝರಿಗಳು, ಎತ್ತರದಿಂದ ನೀರು ಧುಮುಕುವಾಗ ಉಂಟಾದ ಬೆಳ್ಳನೆಯ ನೊರೆಯಿಂದ ಕೂಡಿದ ಅಬ್ಬಿ ಜಲಪಾತದ ಸುಂದರ ದ್ರಶ್ಯ. ಅದಕ್ಕಿಂತಲೂ ಸದಾ ಹಸಿರಿನಿಂದಿರುವ, ಕಂಗೊಳಿಸುವ ಸಹ್ಯಾದ್ರಿ ಪರ್ವತ ಶ್ರೇಣಿ .ಅದರ ನಡುವೆ ಎಲ್ಲರ ಗಮನವನ್ನು ಕೇಂದ್ರೀಕರಿಸುವ ವಲ್ಮೀಕದಂತಿರುವ(ಹುತ್ತ) ಪರ್ವತ ಪ್ರದೇಶದ ಇರುವಿಕೆ. ಪರಶುರಾಮನ ಸ್ರಷ್ಟಿಯ ಈ ಸ್ಥಳದಲ್ಲಿ ಸಂಸ್ಕೃತದ ವಲ್ಮೀಕಕ್ಕೆ ಪೂಜ್ಯಸ್ಥಾನ. ಅದರ ಇರುವಿಕೆಯೂ ವಲ್ಮೀಕದಂತಿರುವುದರೊಂದ ಅದರ ತದ್ಭವ ರೂಪದಲ್ಲಿ ವಾಲಿಕುಂಜವೆಂದು ಪ್ರಸಿಧ್ದಿ ಪಡೆಯಿತು. ಈ ಪ್ರದೇಶದಲ್ಲಿ ತುಳು ಸಂಸ್ಕೃತಿ ಪ್ರಚಲಿತವಾಗಿರುವುದರಿಂದ ಮಾತೃಪ್ರಧಾನ ಕುಟುಂಬದಲ್ಲಿ ಅಜ್ಜಿಗೆ ಪ್ರಾಶಸ್ತ್ಯ . ಆದ್ದರಿಂದ ತುಳುವಿನಲ್ಲಿ ಅಜ್ಜಿಕುಂಜವೆಂದು ಕರೆಯಲ್ಪಟ್ಟಿತು. ಆಂಗ್ಲರ ಆಳ್ವಿಕೆಯ ಕಾಲದಲ್ಲಿ ಈ ಪರ್ವತ ಶ್ರೇಣಿ ಘಟ್ಟವನ್ನೂ, ಊರನ್ನೂ ಪ್ರತ್ಯೇಕಿಸುವಂತೆ ಅಡ್ಡಗೋಡೆಯಾಗಿರುವುದನ್ನು ಗಮನಿಸಿ ವಾಲ್ಕುಂಜವೆಂದೂ ತನ್ನ ಇರುವಿಕೆಯನ್ನೂ ಸಾರುತ್ತಾ ಬರುತ್ತಿದೆ. ಇಂತಹ ರಮ್ಯ ಪರಿಸರದಲ್ಲಿ ಇರುವಂತಹ ಗ್ರಾಮವೆ ಶಿರ್ಲಾಲು. ಇಲ್ಲಿಗೆ ಬಂದಾಕ್ಷಣ ನಮ್ಮನ್ನು ಕೈಬೀಸಿ ಕರೆಯುವಂತಹ ಪವಿತ್ರ ಕ್ಷೇತ್ರವೇ ಅತಿಶಯ ಕ್ಷೇತ್ರ ಶಿರ್ಲಾಲು ಬಸದಿ. ಈ ಗ್ರಾಮವು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನಿಂದ ಸುಮಾರು ೨೪ ಕಿಲೋ ಮೀಟರ್ ದೂರದಲ್ಲಿದೆ ಎಂದು ಹೇಳಬಹುದು.

ಶಿರ್ಲಾಲು ಗ್ರಾಮ ಹಿಂದೆ ಕುಗ್ರಾಮವಾಗಿತ್ತು. ಅಂದರೆ ಶಿರ್ಲಾಲಿಗೆ ಬರಬೇಕಾದರೆ ಸಾರಿಗೆಯ ವ್ಯವಸ್ಥೆಯೇ ಇದ್ದಿರಲಿಲ್ಲ. ಅಜೆಕಾರಿನಿಂದ ಶಿರ್ಲಾಲಿಗೆ ಬರಬೇಕಾದರೆ ಒಂದು ಹೊಳೆ ಅಡ್ಡಲಾಗಿರುತಿತ್ತು. ಅದೇ ರೀತಿಯಾಗಿ ಕೆರ್ವಾಶೆಯಿಂದ ಶಿರ್ಲಾಲಿಗೆ ಬರಲು ಅಡ್ಡಲಾಗಿ ಇನ್ನೊಂದು ಹೊಳೆ ಇದ್ದಿತು.ಈ ಎರಡು ಹೊಳೆಗಳನ್ನು ದಾಟಿ ಶಿರ್ಲಾಲಿಗೆ ಬರಬೇಕಿತ್ತು. ಆ ಕಾಲದಲ್ಲಿ ಒಂದೇ ಬಸ್ಸಿನ ವ್ಯವಸ್ಥೆ ಇದ್ದಿತು. ಹಿಂದೆ ಶಿರ್ಲಾಲಿನಲ್ಲಿ ಒಂದೇ ಪ್ರಾಥಮಿಕ ಶಾಲೆಯಿತ್ತು. ಆದರೆ ಅದು ಖಾಸಗಿಯವರ ಕಟ್ಟಡದಲ್ಲಿ ನಡೆಯುತ್ತಿತ್ತು. ಊರಿನ ಗ್ರಾಮ ಪಂಚಾಯ್ತಿಯು ಸಹಾ ಖಾಸಗಿಯವರ ಕಟ್ಟಡದಲ್ಲಿ ಇತ್ತು. ಅದೇ ರೀತಿಯಾಗಿ ಊರಿನ ಅಂಚೆ ಕಛೇರಿಯೂ ಸಹಾ ಖಾಸಗಿಯವರ ಕಟ್ಟಡದಲ್ಲೇ ಇದ್ದಿತು.

ಈ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಿ ಶಿರ್ಲಾಲಿನ ಅಭಿವೃದ್ಧಿಯ ಬಗ್ಗೆ ೨೦-೨೫ ವರ್ಷದ ಹಿಂದೆ ರಾಜಕೀಯ ಮತ್ತು ಊರಿನ ಗಣ್ಯ ವ್ಯಕ್ತಿಗಳ ದುರಾಲೋಚನೆಯ ದೃಷ್ಟಿಯಿಂದ ನಮ್ಮ ಗ್ರಾಮವನ್ನು ಯಾವ ರೀತಿಯಲ್ಲಿ ಅಭಿವೃದ್ಧಿಯ ಗ್ರಾಮವನ್ನಾಗಿ ಮಾಡಬಹುದೆಂದು ಯೋಚಿಸಿ ಶಿರ್ಲಾಲಿನ ಶಾಲೆಯನ್ನು ಹೊಸತಾಗಿ ಊರಿನವರ ಸಹಕಾರದಿಂದ ಸರಕಾರದ ಸ್ವಂತ ಕಟ್ಟಡವನ್ನಾಗಿ ೧೯೬೫ರಲ್ಲಿ ಕಟ್ಟಲಾಯಿತು. ಸುಮಾರು ೧೯೭೫ರಲ್ಲಿ ಗ್ರಾಮ ಪಂಚಾಯತ್ ಕಟ್ಟಡವನ್ನು ಕಟ್ಟಲಾಯಿತು. ಶಿರ್ಲಾಲಿಗೆ ಬರಲು ಸಂಪರ್ಕ ಸೇತುವೆಗಳು ನಿರ್ಮಾಣವಾಗಿ ಸಂಚಾರಕ್ಕೆ ಅನುಕೂಲವಾಗಿದೆ.

ಪ್ರಾಚೀನ ಕಾಲದಲ್ಲಿ ಜೈನ ಸಮಾಜದವರು ಅನಂತನಾಥ ಸ್ವಾಮಿ ಬಸದಿಯನ್ನು ನಿರ್ಮಿಸಿದರು. ಜೈನರು ಜಿನೇಶ್ವರನ ಆರಾಧಕರಾದುದರಿಂದ ಅನಂತಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿಯನ್ನು ನಿರ್ಮಾಣ ಮಾಡಲಾಯಿತು. ಈ ಬಸದಿಯ ವಿಶೇಷತೆಯೆಂದರೆ ಇಷ್ಟಾರ್ಥವನ್ನು ನೆರವೇರಿಸುವಂತಹ ಶಕ್ತಿಯಿದೆ. ಎಷ್ಟೋ ಜನರ ಇಷ್ಟಾರ್ಥಗಳು ನೆರವೇರಿದೆ. ಕಷ್ಟ ಕಾಲದಲ್ಲಿ ಎಷ್ಟೋ ಜನ ಈ ಅಮ್ಮನನ್ನು ಬೇಡಿಕೊಂಡಲ್ಲಿ ಎಷ್ಟೋ ಜನ ಒಳಿತನ್ನು ಕಂಡುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಂದರೆ ೧೯೯೦ ರಿಂದ ೨೦೧೫ರವರೆಗಿನ ಅಭಿವೃದ್ಧಿಯನ್ನು ನೋಡಿದರೆ ಜನಮಅನಸವೇ ಬೆರಗಾಗುವಂತಹ ಕೆಲಸಕಾರ್ಯಗಳು ನಡೆದಿದೆ. ಅಂದರೆ ಹಿಂದೆ ಅನಂತಸ್ವಾಮಿ ಬಸದಿಯೊಂದೇ ಇತ್ತು. ಇತ್ತೀಚಿಗೆ ಬಸದಿಯ ಪರಿಸರದಲ್ಲಿ ನೂತನವಾಗಿ ಬೆಟ್ಟವನ್ನು ನಿರ್ಮಿಸಿ ಆ ಬೆಟ್ಟದಲ್ಲಿ ಆದಿನಾಥ ಸ್ವಾಮಿ, ಭರತ ಕೇವಲಿ ಸ್ವಾಮಿ ಮತ್ತು ಬಾಹುಬಲಿ ಕೇವಲಿ ಸ್ವಾಮಿಯವರ ೧೧ ಅಡಿ ಎತ್ತರದ ಏಕಶಿಲಾ ಭವ್ಯ ಮೂರ್ತಿಗಳನ್ನು ನಿರ್ಮಿಸಲಾಯಿತು ಹಾಗೂ ಬಸದಿಯ ಹತ್ತಿರದಲ್ಲಿ ಸಭಾಭವನವನ್ನು ನಿರ್ಮಿಸಲಾಗಿದೆ. ಸುಂದರವಾದ ಒಂದು ಮುನಿ ನಿವಾಸವನ್ನು ನಿರ್ಮಿಸಲಾಗಿದೆ.ಅದೇ ರೀತಿಯಾಗಿ ಅದರ ಪಕ್ಕದಲ್ಲಿಯೇ ಎರಡು ಅಂತಸ್ತಿನ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿದೆ. ೧೮ ಅಡಿ ಎತ್ತರದ ಬೆಳ್ಳಿ ರಜತ ರಥವಿದೆ.

ಇನ್ನು ಶಿರ್ಲಾಲಿನ ಗೊಮ್ಮಟ್ಟೇಶ್ವರನ ಬಗ್ಗೆ ಹೇಳುವುದಾದರೆ ಶ್ರೀಯುತ ರತ್ನವರ್ಮ ಪೂವಣಿಯವರಿಗೆ ಮಹಾಮಾತೆ ಪದ್ಮಾವತಿ ದೇವಿಯ ಪ್ರೇರಣೆಯಿಂದ ಹಾಗೂ ಶ್ರವಣ ಬೆಳಗೊಳದ ಪೂಜ್ಯ ಕರ್ಮಯೋಗಿ ಸ್ವಸ್ತಿ ಶ್ರೀ ಚಾರುಕೀರ್ತೀ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಂತೆ ಆದಿನಾಥ ಸ್ವಾಮಿ, ಭರತಕೇವಲಿ ಸ್ವಾಮಿ ಮತ್ತು ಬಾಹುವಲಿ ಕೇವಲಿ ಸ್ವಾಮಿಯವರ ೧೧ ಅಡಿ ಎತ್ತರದ ಭವ್ಯ ಮೂರ್ತಿಯನ್ನು ಸಿಧ್ಧಗಿರಿ ಬೆಟ್ಟದಲ್ಲಿ ೨೦೧೩ನೇ ಫೆಬ್ರವರಿ ೧೮ರಂದು ಪ್ರತಿಷ್ಟಾಪಿಸಲಾಯಿತು.