ವಿಷಯಕ್ಕೆ ಹೋಗು

ಗೋಲಿಹೇನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗೋಲಿಹೇನು

ಕ್ರಸ್ಟೇಸಿಯ ವರ್ಗದ ಐಸಾಪೊಡ ಗಣಕ್ಕೆ ಸೇರಿದ ಒಂದು ನೆಲವಾಸಿ ಪ್ರಾಣಿ. ಇದನ್ನು ಮುಟ್ಟಿದಾಗ ಗುಂಡಗೆ ಗೋಲಿಯಂತೆ ಸುತ್ತಿಕೊಳ್ಳುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಆರ್ಮಡಿಲಿಡಿಯಂ ವಲ್ಗೇರ್ ಇದರ ಶಾಸ್ತ್ರೀಯ ನಾಮ. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದಕ್ಕೆ ವುಡ್ ಲೌಸ್, ಪಿಲ್ಬಗ್ ಎಂಬ ಹೆಸರುಗಳಿವೆ. ಇದೇ ಗಣಕ್ಕೆ ಸೇರಿದ ಏಸೆಲಸ್ ಕಮ್ಯೂನಿಸ್, ಪಾರ್ಸೆಲಿಯೋ ಸ್ಕೇಬರ್, ಲಿಮ್ನೋರಿಯ ಲಿಗ್ನೋರಂ ಮುಂತಾದವುಗಳಿಗೂ ಗೋಲಿಹೇನು ಎಂಬ ಹೆಸರೇ ಇದೆ. ಕಪ್ಪುಬಣ್ಣದ ಮತ್ತು ಮೇಲಿನಿಂದ ಕೆಳಕ್ಕೆ ಚಪ್ಪಟೆಯಾಗಿರುವ ದೇಹ, ಮೋಟಾದ ಉದರ ಭಾಗ ಮತ್ತು ಆಂಟೆನೀಗಳು-ಇವು ಗೋಲಿಹೇನಿನ ಮುಖ್ಯ ಲಕ್ಷಣಗಳು. ಇದು ಮನೆಯಲ್ಲಿ ತೇವ ಹೆಚ್ಚಾಗಿರುವ ಸ್ಥಳಗಳಲ್ಲಿ, ಒಟ್ಲುಪಾತಿ ಮತ್ತು ಗಾಜಿನ ಮನೆಗಳಲ್ಲಿ ಬೆಳೆಸುವ ಸಸ್ಯಗಳ ಬಳಿ ವಾಸಿಸುತ್ತದೆ; ಬೇರುಗಳನ್ನು ಮತ್ತು ತುಂಬ ಎಳೆಯ ಸಸಿಗಳ ಕಾಂಡಗಳನ್ನು ತಿಂದು ಬದುಕುತ್ತದೆ. ಇದರಿಂದ ಕೆಲವೊಮ್ಮೆ ಪಿಡುಗಾಗುವುದುಂಟು.


5 ಭಾಗ ಸಕ್ಕರೆ 1 ಭಾಗ ಪ್ಯಾರಿಸ್ ಗ್ರೀನ್ ಇರುವ ಮಿಶ್ರಣವನ್ನು ಅಥವಾ ಶೇ. 2 ಕ್ಲೋರ್ಡೇನ್ ಪುಡಿಯನ್ನು ದೂಳಿಸುವುದರಿಂದ ಇಲ್ಲವೆ ಪ್ಯಾರಥಿಯಾನನ್ನು ಒಂದು ಗ್ಯಾಲನ್ ನೀರಿಗೆ ಒಂದು ಟೀ ಚಮಚದಷ್ಟು ಪ್ರಮಾಣದಲ್ಲಿ ಸೇರಿಸಿ ಸಿಂಪಡಿಸುವುದರಿಂದ ಗೋಲಿಹೇನನ್ನು ನಿಯಂತ್ರಿಸಬಹುದು.