ಆಟ್ಟೋ ವಾನ್ ಗೇರಿಕೆ
ಗೋಚರ
ಆಟ್ಟೋ ವಾನ್ ಗೇರಿಕೆ | |
---|---|
ಜನನ | ನವಂಬರ್ 20, 1602 Magdeburg, Germany |
ಮರಣ | ಮೆ 11, 1686 (aged 83) ಹಂಬರ್ಗ್, ಜರ್ಮನಿ |
ಪೌರತ್ವ | ಜರ್ಮನ್ |
ರಾಷ್ಟ್ರೀಯತೆ | ಜರ್ಮನ್ |
ಕಾರ್ಯಕ್ಷೇತ್ರ | ಭೌತವಿಜ್ಞಾನಿ, ರಾಜಕಾರಣಿ |
ಪ್ರಸಿದ್ಧಿಗೆ ಕಾರಣ | Research and experiment for vacuums |
ಆಟ್ಟೋ ವಾನ್ ಗೇರಿಕೆ(Otto von Guericke)1602-86. ಜರ್ಮನಿಯ ಭೌತವಿಜ್ಞಾನಿ.
ಬಾಲ್ಯ ಮತ್ತು ಜೀವನ
[ಬದಲಾಯಿಸಿ]1602ನೆಯ ನವೆಂಬರ್ 20ರಂದು ಪ್ರಷ್ಯನ್ ಸ್ಯಾಕ್ಸನಿಯ ಮ್ಯಾಗ್ಡೆಬರ್ಗ್ ಎಂಬಲ್ಲಿ ಜನನ. ಜರ್ಮನಿಯ ಲೇಡನ್ನಲ್ಲಿ ನ್ಯಾಯ ಹಾಗೂ ಗಣಿತಶಾಸ್ತ್ರಗಳ ಅಭ್ಯಾಸ. ಎರ್ಫರ್ಟ್ ಎಂಬಲ್ಲಿ ಮುಖ್ಯ ಎಂಜಿನಿಯರ್ ಆಗಿ ನೇಮಕ (1626). ಮ್ಯಾಗ್ಡೆಬರ್ಗ್ನ ಉಪಮೇಯರ್ ಆಗಿ (1627) ಬಳಿಕ ಅದೇ ನಗರದ ಮೇಯರ್ ಆಗಿ (1646) ಆಯ್ಕೆ. ಮುಂದೆ ಬ್ರಾಂಡ್ನ್ಬರ್ಗ್ನ ಮ್ಯಾಜಿಸ್ಟ್ರೇಟ್ ಆಗಿ ಕೂಡ ನೇಮಕಗೊಂಡ.
ಸಂಶೋಧನೆಗಳು
[ಬದಲಾಯಿಸಿ]- ತನ್ನ ವಿರಾಮ ಕಾಲವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಅದರಲ್ಲೂ ವಾಯುಶಾಸ್ತ್ರ ಅಭ್ಯಾಸ ಮತ್ತು ಸಂಶೋಧನೆಯಲ್ಲಿ ಕಳೆಯುತ್ತಿದ್ದ. ಗೆಲಿಲಿಯೊ, ಪಾಸ್ಕಲ್ ಮತ್ತು ಟಾರಿಸೆಲ್ಲಿ ಇವರ ಸಂಶೋಧನೆಗಳಿಂದ ಪ್ರಭಾವಿತನಾಗಿ ನಿರ್ವಾತ ಉಂಟುಮಾಡುವ ವಿಧಾನಗಳನ್ನು ಕುರಿತು ಪ್ರಯೋಗಗಳನ್ನು ಮಾಡಿದ. ಈ ದಿಶೆಯಲ್ಲಿ ಗೇರಿಕೆ ಅನೇಕ ವಿಫಲತೆಗಳನ್ನು ಅನುಭವಿಸಿದ. ತರುವಾಯ ವಾಯುರೇಚಕವನ್ನು ರಚಿಸುವುದರಲ್ಲಿ ಯಶಸ್ವಿಯಾದ (1650).
- ಇದರ ಜೊತೆಗೆ ಸುತ್ತುತ್ತಿರುವ ಗಂಧಕದ ಚಂಡಿನ ವಿದ್ಯುದೀಕರಣದ ಮೇಲೆ ಆಧಾರಗೊಂಡಿರುವ ಒಂದು ವಿದ್ಯುದ್ಯಂತ್ರವನ್ನು ಕೂಡ ರಚಿಸಿದ. ಧೂಮಕೇತುಗಳು ಕಾಣಿಸಿಕೊಳ್ಳುವ ಅವಧಿಕಾಲವನ್ನು ಗಣಿಸಿದ. ಗೇರಿಕೆ ಬರೆದ ಎಕ್ಸ್ಪೆರಿಮೆಂಟ ನೋವ ಮ್ಯಾಗ್ಡೆಬರ್ಗಿಕ ಡೀ ವ್ಯಾಕ್ಯು ಓ ಸ್ಪೇಶಿಯೋ ಎಂಬ ಪುಸ್ತಕ ಬಹು ಪ್ರಸಿದ್ಧವಾದದ್ದು. ಅದರಲ್ಲಿ ಮ್ಯಾಗ್ಡೆಬರ್ಗ್ ಪ್ರಯೋಗ ಎಂಬ ಒಂದು ಚಿತ್ರವಿದೆ.
- ಒಳಗೆ ನಿರ್ವಾತಗೊಳಿಸಿರುವ ಮತ್ತು ಪರಸ್ಪರ ಅಂಟಿಕೊಂಡಿರುವ ಟೊಳ್ಳಾದ ಎರಡು ಅರ್ಧಗೋಳಗಳನ್ನು ಕುದುರೆಗಳ ಎರಡು ಗುಂಪು ವಿರುದ್ಧ ದಿಕ್ಕಿನಲ್ಲಿ ಎಳೆದರೂ ಆ ಅರ್ಧಗೋಳಗಳನ್ನು ಬೇರ್ಪಡಿಸಲಾಗದು ಎಂಬುದನ್ನು ತೋರಿಸುವುದೇ ಆ ಚಿತ್ರ.
ನಿಧನ
[ಬದಲಾಯಿಸಿ]1686ರ ಮೇ11 ರಂದು ಗೇರಿಕೆ ಮೃತನಾದ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Otto von Guericke ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- Works by or about ಆಟ್ಟೋ ವಾನ್ ಗೇರಿಕೆ at Internet Archive
- Otto-von-Guericke University at Magdeburg
- slub-dresden.de slub-dresden.de Archived 2015-09-27 ವೇಬ್ಯಾಕ್ ಮೆಷಿನ್ ನಲ್ಲಿ.
- Short Biography Archived 2018-10-05 ವೇಬ್ಯಾಕ್ ಮೆಷಿನ್ ನಲ್ಲಿ.
- Extensive pages on the Guericke Year in Magdeburg Archived 2003-09-09 ವೇಬ್ಯಾಕ್ ಮೆಷಿನ್ ನಲ್ಲಿ.
- The famous half-spheres Archived 2013-01-05 at Archive.is
- Otto of Guericke and Magdeburg hemisphere video Archived 2004-12-09 ವೇಬ್ಯಾಕ್ ಮೆಷಿನ್ ನಲ್ಲಿ. (currently not available)
- English video translation
- Online source material for Otto von Guericke[permanent dead link]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವರ್ಗಗಳು:
- Commons link is on Wikidata
- Articles with Internet Archive links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Webarchive template archiveis links
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- ಭೌತವಿಜ್ಞಾನಿಗಳು
- ಭೌತಶಾಸ್ತ್ರ
- ವಿಜ್ಞಾನಿಗಳು
- ಜರ್ಮನಿ