ವಿಷಯಕ್ಕೆ ಹೋಗು

ಸ್ಯಾಮ್ಯುಯೆಲ್ ಸ್ಲೇಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಯಾಮ್ಯುಯೆಲ್ ಸ್ಲೇಟರ್ (ಜೂನ್ ೯,೧೭೬೮–ಏಪ್ರಿಲ್ ೨೧, ೧೮೩೫) ಅಮೇರಿಕದ ವಸ್ತ್ರೋದ್ಯಮದಲ್ಲಿ ತಮ್ಮ ಛಾಪುಮೂಡಿಸಿ, ಹಲವಾರು ಕೆಲಸಗಾರರಿಗೆ ನೌಕರಿಗಳನ್ನು ಕೊಟ್ಟು ಅವರ ಜೀವನ ಶೈಲಿಯನ್ನು ಉತ್ತಮಪಡಿಸುವಲ್ಲಿ ಶ್ರಮಿಸಿದ, ಒಬ್ಬ ಉದ್ಯೋಗಪತಿ. 'ಅಮೇರಿಕಾದ ಔದ್ಯೊಗಿಕ ಕ್ರಾಂತಿಯ|ಜನಕ'ನೆಂದು ಪ್ರಸಿದ್ಧರಾದ ('ಅಮೆರಿಕದ ಪ್ರೆಸಿಡೆಂಟ್ ಮಿ.ಆಂಡ್ರ್ಯು ಜ್ಯಾಕ್ಸನ್' ಈ ಪದವನ್ನು ಬಳಸಿದರು) ಒಬ್ಬ 'ಬ್ರಿಟಿಷ್ ಅಮೆರಿಕನ್ನರು'.[] ಆದರೆ ಬ್ರಿಟನ್ ನಲ್ಲಿ ಆತನನ್ನು 'ದೇಶದ್ರೋಹಿ' ಎಂದು ಹೀನಾಯವಾಗಿ ಖಂಡಿಸಿದ್ದರು. ಬ್ರಿಟನ್ ನಲ್ಲಿ ಕಂಡುಹಿಡಿದ ಯಂತ್ರಗಳ ತಂತ್ರಜ್ಞಾನದ 'ಪೇಟೆಂಟ್' ಗಳನ್ನು ಅವರು ನಕಲು ಮಾಡದಿದ್ದರೂ, ತಮ್ಮ ಸ್ಮರಣ ಶಕ್ತಿಯಿಂದಲೇ ಹತ್ತಿ ದಾರ, ಮತ್ತು ವಸ್ತ್ರದ ಯಂತ್ರಗಳ ಜ್ಞಾನ ವಾಹಿನಿಯನ್ನು ಅಮೆರಿಕಕ್ಕೆ ತಂದು, ಸ್ಥಾಪಿಸಿ, ಬ್ರಿಟನ್ನಿನ ಮಾರುಕಟ್ಟೆಗೆ ಕಂಟಕಪ್ರಾಯರಾದರೆಂಬ ಅಪಾದನೆ ಅವರ ಮೇಲಿತ್ತು. ತಮ್ಮ ೨೧ ನೆಯ ವಯಸ್ಸಿನಲ್ಲಿಯೇ ಹೊಸ ದೇಶದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಇಚ್ಛಿಸಿ, ಅಮೆರಿಕಕ್ಕೆ ವಲಸೆಹೋಗಿ, ತಮ್ಮ ಜ್ಞಾಪಕ ಶಕ್ತಿಯಿಂದಲೇ ಯಂತ್ರಗಳನ್ನು ನಿರ್ಮಿಸಿ, ೧೩ ಸ್ಪಿನ್ನಿಂಗ್ ಮಿಲ್ ಗಳ ಮಾಲಿಕರಾದರು. 'ರೋಡ್ ದ್ವೀಪ'ದಲ್ಲಿ 'ಟೆನೆಂಟ್ ಹೊಲ'ಗಳನ್ನು ಖರೀದಿಸಿ, ಅವುಗಳನ್ನು ಫ್ಯಾಕ್ಟರಿಯನ್ನಾಗಿ ಮಾರ್ಪಡಿಸಿದರು.'ಬೆಲ್ಪುರ್ ನ, ಸ್ಲೇಟರ್ ವಿಲ್ಲೆ' ಯ ಊರಿನ ಸುತ್ತಲೂ ಬಟ್ಟೆ ಗಿರಣಿಗಳನ್ನು ಸ್ಥಾಪಿಸಿದರು. ಮಾಲೀಕ 'ಜೆಡಿಯ ಸ್ತ್ರುಟ್,' ನ 'ಕ್ರಾಮ್ ಫರ್ಡ್ ಮಿಲ್'ನಲ್ಲಿ 'ವಾಟರ್ ಫ್ರೇಮ್' ಬಳಸಿ, 'ರಿಚರ್ಡ್ ಆರ್ಕ್ ರೈಟ್' ನಿರ್ಮಿತಿಯ ಯಂತ್ರಗಳಲ್ಲಿ ಕೆಲಸ ಆರಂಭಿಸಿದರು.

ಜನನ, ವೃತ್ತಿಜೀವನ

[ಬದಲಾಯಿಸಿ]

'ಇಂಗ್ಲೆಂಡ್ ನ, ಡರ್ಬಿ ಶೈರ್' ನಲ್ಲಿ, ಜೂನ್, ೯, ೧೭೬೮ ರಲ್ಲಿ ೫ ನೆಯ ಮಗನಾಗಿ ಜನಿಸಿದರು. ಅವರ ತಂದೆ ಒಬ್ಬ ಕೃಷಿಕರು. ಅವರಿಗೆ, ೮ ಮಕ್ಕಳು. 'ಸ್ಯಾಮ್ಯುಯೆಲ್,' ಪ್ರಾರಂಭದ ದಿನಗಳಲ್ಲಿ 'ಜ್ಯಾಕ್ ಸನ್' ಎನ್ನುವರು ನಡೆಸುತ್ತಿದ್ದ ಶಾಲೆಯಲ್ಲಿ ಕಲಿತರು. ೧೦ ನೆಯ ವಯಸ್ಸಿನಲ್ಲೇ ನೌಕರಿಗಾಗಿ 'ಮಿಲ್' ಗಳಲ್ಲಿ ಪ್ರಯತ್ನಿಸಿದರು. ಸ್ಲೇಟರ್, 'ಬ್ರಿಟನ್ನಿನ ಹತ್ತಿ ಬಟ್ಟೆ ಉತ್ಪಾದನಾ ಮಿಲ್' ಗಳಲ್ಲಿ 'ಅಪ್ರೆಂಟಿಸ್' ಆಗಿ ಸೇರಿ ಕಸುಬನ್ನು ಚೆನ್ನಾಗಿ ಕಲಿತರು. ೧೭೮೨ ರಲ್ಲಿ ಅವರ ತಂದೆ ಮರಣಿಸಿದರು. ೨೧ ವರ್ಷದಲ್ಲೇ ಹತ್ತಿ ಗಿರಣಿಯ ಕೆಲಸಗಳಲ್ಲಿ ಒಳ್ಳೆಯ ತರಪೇತಿ,ಮತ್ತು ಅನುಭವಿಯಾದರು. ದೂರದ ಅಮರಿಕದಲ್ಲಿ ಅದೇ ತರಹದ ಯಂತ್ರಗಳ ನಿರ್ಮಾಣಕ್ಕೆ ಬಹಳ ಬೇಡಿಕೆಯಿತ್ತು. ಬ್ರಿಟನ್ ನ ಕಾನೂನು ಪ್ರಕಾರ ಆಯಂತ್ರಗಳನ್ನು ಅಮೆರಿಕಕ್ಕೆ ತರುವಂತಿರಲಿಲ್ಲ. 1789 ರಲ್ಲಿ ಸ್ಯಾಮ್ಯುಯೆಲ್ ಸ್ಲೇಟರ್, 'ನ್ಯುಯಾರ್ಕ್ ನಗರ'ಕ್ಕೆ ಹೋದರು. 1789 ರಲ್ಲಿ ಹೆಸರಾಂತ ವರ್ತಕ 'ಮೋಸೆಸ್ ಬ್ರೌನ್', 'ಪಾಟುಕೆಟ್' ನಗರಕ್ಕೆಯಾವುದೋ ಕೆಲಸದ ನಿಮಿತ್ತ ಬಂದರು. ಸ್ಲೇಟರ್ ಅವರನ್ನು ಭೆಟ್ಟಿಯಾದರು.

ವಿಲಿಯಂ ಆಲ್ಮಿ ಮತ್ತು ಸ್ಮಿತ್ ಬ್ರೌನ್ ಜೊತೆ

[ಬದಲಾಯಿಸಿ]

'ಸ್ಯಾಮ್ಯುಯೆಲ್,' 'ಅಳಿಯ ವಿಲಿಯಂ ಆಲ್ಮಿ', ಮತ್ತು 'ಕಸಿನ್ ಸ್ಮಿತ್ ಬ್ರೌನ್' ಜೊತೆಯಲ್ಲಿ 'ಬ್ಲಾಕ್ ಸ್ಟೋನ್ ನದಿ'ಯ ಹತ್ತಿರದಲ್ಲಿ 'ಆಲ್ಮಿ ಅಂಡ್ ಬ್ರೌನ್' ಎಂಬ ಹೆಸರಿನ ಕಂಪೆನಿಯನ್ನು ತೆರೆದರು. ಅಲ್ಲಿ ಬಟ್ಟೆ ತಯಾರಿಸಿ ಮಾರುವ ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ದಾರವನ್ನು 'ಸ್ಪಿನ್ನಿಂಗ್ ವ್ಹೀಲ್ವ್ಹಿ,' 'ಜೆನ್ನಿ' ಮತ್ತು 'ಫ್ರೆಮ್ಸ್' ನಲ್ಲಿ 'ವಾಟರ್ ಶಕ್ತಿ' ಬಳಸಿ ನಡೆಸುವ ಒಂದು ೩೨ ಪಿಂಡಲ್ ನ ಫ್ರೇಮ್ ಫ್ಯಾಕ್ಟರಿಯನ್ನು ಆಗಸ್ಟ್ ನಲ್ಲಿ ಕೊಂಡರು. 'ಆರ್ಕ್ ರೈಟ್ ಮಾಡೆಲ್' ನಂತೆ ಅಲ್ಲಿ ಕೆಲಸಮಾಡಲಾಗಲಿಲ್ಲ. ೧೭೯೦ ರ ಓ ಕಾಮ್ತ್ರಕ್ತ್ ಸೈನ್ ಮಾಡಿದರು. ೧೦-೧೨ ಕೆಲಸಗಾರರಿಗೆ ನೌಕರಿ ಸಿಕ್ಕಿತು. 1793 ಒಂದು ಗಿರಣಿ ಆರಂಭಿಸಿದರು.ಕಾರ್ಡಿಂಗ್,ಡ್ರಾಯಿಂಗ್ ರೋವಿಂಗ್ ಮೆಶಿನ್ ಗಳನ್ನು ಚಲಾಯಿಸಲು ಕಲಿತಿದ್ದರು. ಹೆಂಡತಿ 'ಹೆನ್ನಾ ವಿಲ್ಕಿನ್ ಸನ್' ಹೊಲಿಗೆಗೆ ಬಳಸುವ ಬಹಳ ಗಟ್ಟಿ ಹತ್ತಿ ದಾರ ಕಂಡುಹಿಡಿದರು. 1793 ಮೊದಲ ಪೇಟೆಂಟ್ ಗಳಿಸಿದ ಮಹಿಳೆಯಾದರು. 'ಮ್ಯಾನೆಜ್ ಮೆಂಟ್' ಬಗ್ಗೆ ಗಮನಕೊಟ್ಟರು. ಇಂಗ್ಲೆಂಡ್ ನ ಹಳ್ಳಿಯ ವಾತಾವರಣ, ಮತ್ತು ಫ್ಯಾಕ್ಟರಿ ಪದ್ಧತಿಯನ್ನು ಅನುಸರಿಸಿದರು. ೭-೧೨ ರ ವರೆಗಿನ ಮಕ್ಕಳಿಗೆ ೧೭೯೦ ರಲ್ಲಿ ಕೆಲಸ ಕೊಟ್ಟರು. ಕೆಲಸಗಾರರನ್ನು ಅಕ್ಕ ಪಕ್ಕದ ಗ್ರಾಮಗಳಿಂದ ತಂದು ಅವರಿಗೆ ತರಪೇತಿಕೊಟ್ಟು ಇಂಗ್ಲೆಂಡ್ ಪರಿವಾರ ಪದ್ಧತಿಯಿಂದ ಸಮರ್ಪಕ ಸಹಾಯ ದೊರೆಯಲಿಲ್ಲ. ಒಬ್ಬ ಸದಸ್ಯ ಕೆಲಸದಲ್ಲಿದ್ದರೆ, ಅವರ ಪೂರ್ತಿ ಪರಿವಾರಕ್ಕೆ ವಸತಿ ಸೌಕರ್ಯ ಮೊದಲಾದ ವ್ಯವಸ್ಥೆ ಮಾಡಬೇಕಾಯಿತು. ರವಿವಾರದ ಒಂದು ಪಾಠ ಶಾಲೆಗೇ ಕಾಲೇಜ್ ವಿದ್ಯಾರ್ಥಿಗಳು ಬಂದು, ಮಕ್ಕಳಿಗೆ ಓದು ಬರಹ ಕಲಿಸುವ ಏರ್ಪಾಡು ಮಾಡಿದರು.

ವಿಸ್ತರಣೆ

[ಬದಲಾಯಿಸಿ]

1793, ರಲ್ಲಿ 'ಆಲ್ಮಿ ಬ್ರೌನ್ ಅಂಡ್ ಸ್ಲೇಟರ್ ಕಂಪೆನಿ' ಜೊತೆ ಗೂಡಿ, 'ಸ್ಲೇಟರ್' ೭೨ ಸ್ಪಿಂಡಲ್ ಗಳ ಹೊಸ ಮಿಲ್ ಶುರುಮಾಡಿದರು. ಹತ್ತಿಯಲ್ಲಿನ ಬೀಜಗಳನ್ನು ಪ್ರತ್ಯೇಕಗೊಳಿಸಲು ಉಪಯೋಗಕ್ಕೆ ತಂದ ಅಮೆರಿಕದ ಸಂಶೋಧಕ,'ಎಲಿ ವಿಟ್ನಿ' ರವರ ಹೊಸ ಪೇಟೆಂಟ್ ನಿಂದ ಆರಂಭವಾದ 'ಜಿನ್ನಿಂಗ್ ಮಿಲ್' 1794 ರಲ್ಲಿ ಕಾರಿಗರ್ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಯಿತು. ಚಿಕ್ಕ ಸ್ಟೇಪಲ್ ಹತ್ತಿ ಬೆಳೆಸುವ ಕಾರ್ಯಕ್ಕೆ ತಿರುವು ನೀಡಿ ಉತ್ತರ ಅಮೇರಿಕಾದ ದಕ್ಷಿಣ ಭಾಗಕ್ಕೆ ಹತ್ತಿ ಬೆಳೆ, 'ನ್ಯೂ ಇಂಗ್ಲೆಂಡ್ ಹತ್ತಿ ಗಿರಣಿ'ಗಳಿಗೆ ದಕ್ಷಿಣದ ಕಪ್ಪು ವರ್ಣೀಯರ ಸಹಾಯದಿಂದ ತಮಗೆ ಬೇಕಾದ ಕಚ್ಚಾಹತ್ತಿ ತರಬೇಕಾಗಿತ್ತು. 'ಸ್ಲೇಟರ್' ರವಿವಾರದ ಶಾಲೆಗಳನ್ನು 'ನ್ಯೂ ಇಂಗ್ಲೆಂಡ್' ನಲ್ಲಿ ಜಾರಿಗೆ ತಂದರು. ಅಮೇರಿಕಾದ ಬೇರೆ ಭಾಗಗಳಿಗೂ ಹರಡಿತು. 1798 ರಲ್ಲಿ ಸ್ಯಾಮುಯೆಲ್ ಸ್ಲೇಟರ್ 'ಆಲ್ಮಿ ಬ್ರೌನ್ ಕಂಪೆನಿ'ಯ ಜೊತೆ ಬಿಟ್ಟರು.'ಸ್ಲೆತರ್ ಒಜೆಲ್ ವಿಲ್ಕಿನ್ಸನ್ ಕಂ' ಅಸ್ತಿತ್ವಕ್ಕೆ ಬಂತು. ಮಾವನವರ ರೋಡ್ ಐಲೆಂಡ್, ಮೆಸ್ಯಾಚುಸೆಟ್ಸ್, 'ಕನೆಕ್ಟಿಕಟ್', ನ್ಯೂ ಹ್ಯಾಂಪ್ ಶೈರ್' ಗಳಲ್ಲಿ ಮಿಲ್ ತೆರೆದರು.

1799 ಇಂಗ್ಲೆಂಡ್ ನಿಂದ ಬಂದ ಅವರ ಸೋದರ, 'ಜಾನ್ ಸ್ಲೇಟರ್' ಅವರ ಜೊತೆ ಸೇರಿದರು. ಅವರು,'ಮ್ಯುಲ್ ಯಂತ್ರದಲ್ಲಿ ಕೆಲಸಮಾಡಲು ತರಪೇತಿ' ಗಳಿಸಿದ್ದರು.[] 'ವ್ಹೈಟ್ ಮಿಲ್',ಎಂಬ ಹೆಸರಿನಲ್ಲಿ ಕೆಲಸ ಆರಂಭಿಸಿದರು. 1810 ಸ್ಲೇಟರ್ ೩ ಮಿಲ್ ಗಳ ಮಾಲೀಕರಾದರು. 1823, ರಲ್ಲಿ ಮತ್ತೊಂದು ಮಿಲ್, ಕನೆಕ್ಟಿಕಟ್ ನಲ್ಲಿ ಖರೀದಿಸಿದರು. ಬೇಕಾದ ಫ್ಯಾಕ್ಟರಿ ಸ್ಥಾಪಿಸಿದರು. ಭಾವ-ಮೈದುನನ ಜೊತೆಸೇರಿ. ತಯಾರಿಸುವ ಕಾರ್ಖಾನೆ ತೆರೆದರು, ಆದರೆ ಅಷ್ಟೊಂದು ವಹಿವಾಟುಗಳನ್ನೂ ನಿಯಂತ್ರಿಸುವ ಶಕ್ತಿ ಸಾಲದೇ ಪರಿವಾರದ ಸದಸ್ಯರಲ್ಲದೆ ಬೇರೆಯವರನ್ನು ನೇಮಿಸಲು ಇಚ್ಛಿಸಲಿಲ್ಲ. 1829, ನಲ್ಲಿ ಬಾಲ ಕಾರ್ಮಿಕರನ್ನು ತಮ್ಮ ಜೊತೆ ಸೇರಿಸಿಕೊಂಡು,'ಸ್ಲೇಟರ್ ಅಂಡ್ ಸನ್ಸ್' ಪ್ರಾರಂಭಿಸಿದರು. ಮಗ, 'ಹೊರಾಶಿಯೊ ನೆಲ್ಸನ್ ಸ್ಲೇಟರ್', ತಂದೆಯವರ ಗಿರಣಿಯನ್ನು ಸಂಪೂರ್ಣವಾಗಿ ಪುನರ್ನಿರ್ಮಿಸಿದನು. ಕಾರ್ಯವಿಧಾನಗಳಲ್ಲಿ ಕಚ್ಚಾವಸ್ತು, ಮತ್ತು ಸಮಯ ಪೋಲಾಗುವುದನ್ನು ಸುಧಾರಿಸಿ, ಉಳಿತಾಯಕ್ಕೆ ಆದ್ಯತೆ ಕೊಟ್ಟನು. ಹಳೆಯ ಕಾರ್ಯವಿಧಿಗಳನ್ನೂ ಸ್ಥಗಿತಗೊಳಿಸಿದನು. ಹೀಗೆ ಶುರುವಾದ ಕಂ.ಅಮೇರಿಕಾದ ಅತ್ಯಂತ ಪ್ರಮುಖ ಮತ್ತು ಮಾರ್ಗದರ್ಶಕ ಕಂಪೆನಿಯಾಗಿ ಬೆಳೆಯಿತು. ಸ್ಲೇಟರ್ ಕೆಲಸಗಾರರನ್ನು ತಂದು ಕೊಡುವ 'ಖಾಸಗಿ ಏಜೆಂಟ್ಸ್' ಗಳನ್ನು ಇಟ್ಟುಕೊಂಡನು. ಜಾಹಿರಾತುಗಳನ್ನು ಕೊಟ್ಟು, ಹೆಚ್ಚು ಹೆಚ್ಹು ಪರಿವಾರಗಳನ್ನು ತನ್ನ ಕಂಪೆನಿಗೆ ಕೆಲಸಕ್ಕೆ ಬರಲು ಆಕರ್ಷಿಸಲು ಪ್ರಯತ್ನನಡೆಯಿತು.

ನ್ಯೂ ಇಂಗ್ಲೆಂಡ್ ನಲ್ಲಿ

[ಬದಲಾಯಿಸಿ]

1800 ರ ಹೊತ್ತಿಗೆ ಸ್ಲೇಟರ್ ಮಿಲ್ ನ ಯಶಸ್ಸಿನಿಂದ ಪ್ರಭಾವಿತರಾಗಿ ಹಲವಾರು ಉದ್ಯಮಿಗಳು ಬಂಡವಾಳ ಹಾಕಿ, ಹತ್ತಿ ಗಿರಣಿಗಳನ್ನು ತೆರೆದರು. 1810 ರಲ್ಲಿ 'ಟ್ರೆಷರಿ ಸೆಕ್ರೆಟರಿ. ಆಲ್ಬರ್ಟ್ ಗಲಟಿನ್' ಪ್ರಕಟಿಸಿದ ಪ್ರಕಾರ ಅಮೇರಿಕಾದಲ್ಲಿ ಸುಮಾರು 50 ಹತ್ತಿ ದಾರ ತಯಾರಿಸುವ ಗಿರಣಿಗಳು ಜಾರಿಯಲ್ಲಿದ್ದವು. 1807 ರಲ್ಲಿ ಬ್ರಿಟನ್ ನಿಂದ ವ್ಯಾಪಾರ ನಿಷೇಧ, ಮತ್ತು ಆಮದು ಸ್ಥಗಿತ. 1812 ರ ಯುದ್ಧದ ಮೊದಲೇ ಆಗ ಬ್ರಿಟನ್ ನಲ್ಲಿ ಯಂತ್ರೋದ್ಯಮ, 'ನ್ಯೂ ಇಂಗ್ಲೆಂಡ್' ನಲ್ಲಿ ತ್ವರಿತಗತಿಯಲ್ಲಿ ಶುರುವಾಯಿತು. 1815, ರಲ್ಲಿ 'ಬ್ರಿಟನ್-ಅಮೆರಿಕಗಳ ಮಧ್ಯೆನಡೆದ ಯುದ್ಧ ಸಮಾಪ್ತಿಗೊಂಡ ಸಮಯದಲ್ಲಿ, 'ಪ್ರಾವಿಡೆನ್ಸ್' ನ 30 ಮೈಲಿ ದೂರದಲ್ಲಿ 140 ಹತ್ತಿ ಕೈಗಾರಿಕಾ ಘಟಕಗಳು ಕಾಣಿಸಿಕೊಳ್ಳಲಾರಂಭಿಸಿದವು. 26,000 ಜನ ಕೆಲಸಗಾರರು 130,000 ಸ್ಪಿನ್ದಲ್ಸ್ ಗಳನ್ನೂ ನಡೆಸುತ್ತಿದ್ದರು. ಅಮೇರಿಕಾದ ವಸ್ತ್ರ-ಕೈಗಾರಿಕೋದ್ಯಮ, ಭದ್ರವಾಗಿ ನೆಲೆಯೂರಿತು. 1810 ರಲ್ಲಿ 'ಫ್ರಾನಿಸಿಸ್ ಕಬಾಟ್' ಒಂದು ಮಿಲ್ ಸ್ಥಾಪಿಸಿದರು. ಅದು 'ವಾಲ್ಥಾಂ' ನಲ್ಲಿ ಲಾಭಗಳಿಸಿತು. 1826, ರಲ್ಲಿ 'ಲಾಯೋಲ್' ಗತಿಸಿದ್ದ. ಆದರೂ 'ವಾಲ್ಥಂ ಮಾದರಿ' ಲಾಯೋಲ್ ನಾಗರಿಕರಿಗೆ ಬಹಳ ಪ್ರಿಯವಾಗಿತ್ತು.

'ಸ್ಯಾಮ್ಯುಯೆಲ್ ಸ್ಲೇಟರ್', ಎಪ್ರಿಲ್ ೨೧, ೧೮೩೫ ರಲ್ಲಿ, ನಿಧನರಾದರು. 'ಮೆಸಾಚುಸೆಟ್ಸ್ ನಗರ' ಮೊತ್ತಮೊದಲ ದೊಡ್ಡ ಗಾತ್ರದ ಫ್ಯಾಕ್ಟರಿ, 'ಸ್ಲೇಟರ್ ಗೌರವ ಸಮರ್ಪಣೆ'ಯಾಗಿ ಕಾರ್ಯಾರಂಭಮಾಡಿತು. 'ಲಾಯಲ್' ಒಂದು ಮಾದರಿ ಯಂತ್ರನಗರವಾಗಿ ಬಹಳ ಪ್ರಖ್ಯಾತವಾಯಿತು. 'ವೆಬ್ಸ್ಟರ್ ಮೆಸ್ಸಾಚು ಸೆಟ್ಸ್' ನಲ್ಲಿ ೧೮೩೨ ರಲ್ಲಿ ಗ್ರಾಮವನ್ನು ಸ್ಥಾಪಿಸಿದ್ದರು. ಗೆಳೆಯ 'ಸೆನೆಟರ್ ಡೆನಿಯಲ್ ವೆಬ್ಸ್ಟರ್' ಹೆಸರಿನಲ್ಲಿ ಸಾಯುವ ಹೊತ್ತಿಗೆ ೧೩ ಮಿಲ್ ಗಳನ್ನೂ ಹೊಂದಿದರು. ೧ ಮಿಲಿಯನ್ ಡಾಲರ್ ಮಾಲೀಕನೆಂದು ಪ್ರಸಿದ್ಧರಾಗಿದ್ದರು.

ಸ್ಲೇಟರ್ ಸ್ಮರಣ ಮಂದಿರದ ಸ್ಥಾಪನೆ

[ಬದಲಾಯಿಸಿ]

'ಸ್ಯಾಮ್ಯುಯೆಲ್ ಸ್ಲೇಟರ್,' ಸ್ಥಾಪಿಸಿದ್ದ ಮೊಟ್ಟಮೊದಲ 'ಸ್ಲೇಟರ್ ಟೆಕ್ಸ್ ಟೈಲ್ಸ್ ಮಿಲ್' ಇಂದಿಗೂ ಕಾಣಿಸುತ್ತದೆ. 'ನ್ಯಾಷನಲ್ ರೆಕಾರ್ಡ್ ಆಫ್ ಹಿಸ್ಟಾರಿಕ್ ಪ್ಲೇಸಸ್' ಎಂಬ ಹೆಸರಿನಲ್ಲಿ ಒಂದು 'ಭವ್ಯ ವಸ್ತು ಸಂಗ್ರಹಾಲಯ' ನಿರ್ಮಾಣವಾಗಿದೆ. 'ಅಮೇರಿಕಾದ ವಸ್ತ್ರೋದ್ಯಮ ದ ಸ್ಥಾಪನೆ', ಮತ್ತು ಬೆಳವಣಿಗೆಗೆ 'ಸ್ಯಾಮ್ಯುಯಲ್ ಸ್ಲೇಟರ್' ಕೊಡುಗೆ ಅಪಾರ. ಅಮೆರಿಕನ್ ಜನತೆ ಅವರನ್ನು ಇಂದಿಗೂ ಗೌರವದಿಂದ ನೆನೆಯುತ್ತಾರೆ. ರಾಷ್ಟ್ರದ ಪ್ರವಾಸೋದ್ಯಮ ಇಲಾಖೆಯ ಪ್ರಮುಖ ಆಕರ್ಷಣೆಯಾಗಿ 'ರೋಡ್ ಐಲೆಂಡ್' ನ ಅವರ 'ಸ್ಲೇಟರ್ ಮಿಲ್' ಶೋಭಾಯಮಾನವಾಗಿ ಪರ್ಯಟಕರ ಗಮನ ಸೆಳೆಯುತ್ತಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Father of American Industrial Revolution
  2. The Textile Revolution Samuel Slater builds spinning mills By Mary Bellis Inventors Expert