ವಿಷಯಕ್ಕೆ ಹೋಗು

ವೆಂಕಟರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ನಾಡು ಕಂಡ ಅಪರೂಪದ ಕನ್ನಡಪರ ಹೋರಾಟಗಾರ ಮತ್ತು ರೈತ ಮುಖಂಡ ಡಾ.ಎನ್.ವೆಂಕಟರೆಡ್ಡಿ ಇಲ್ಲಿನ ಜನರ ಮನಸ್ಸಿನಲ್ಲಿ ಅವಿಚ್ಛಿನ್ನವಾಗಿ ಉಳಿದಿರುವ ವ್ಯಕ್ತಿತ್ವ. ತನ್ನ ಇಡೀ ಬದುಕನ್ನು ಸಮಾಜಕ್ಕಾಗಿ ಮುಡಿಪಿಟ್ಟ ಧೀಮಂತ. ಸಾಮಾನ್ಯ ವೈದ್ಯರಾಗಿ ಆಕಸ್ಮಿಕವೋ ಎಂಬಂತೆ ಬಳ್ಳಾರಿ ಪ್ರಾಂತ್ಯದಿಂದ ದೊಡ್ಡಬಳ್ಳಾಪುರಕ್ಕೆ ಬಂದ ಅವರು ಇಲ್ಲೇ ನೆಲೆನಿಂತು ಬೆಳೆದ ಬಗೆ ನಿಜಕ್ಕೂ ವಿಸ್ಮಯಕಾರಿ. ಇಲ್ಲಿನ ಖಾಸಗಿ ಕ್ಲಿನಿಕ್ವೊಂದಕ್ಕೆ ತಾತ್ಕಾಲಿಕ ವೈದ್ಯರಾಗಿ 1980-81ರಲ್ಲಿ ಬಂದ ಅವರು ಕೆಲವೇ ದಿನಗಳಲ್ಲಿ ಅಪಾರ ಜನಮನ್ನಣೆಗೆ ಪಾತ್ರರಾದರು.

ಬಡವರ ಡಾಕ್ಟ್ರು

[ಬದಲಾಯಿಸಿ]

ವೆಂಕಟರೆಡ್ಡಿಯವರನ್ನು ದೊಡ್ಡಬಳ್ಳಾಪುರದ ಜನ ಕರೆಯೋದು 'ರೆಡ್ಡಿ ಡಾಕ್ಟ್ರು,..ಬಡವರ ಡಾಕ್ಟ್ರು' ಅಂತನೇ. ತನ್ನ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಮ್ಮ ಪ್ರೀತಿ ತುಂಬಿದ ವಿಶ್ವಾಸಪೂವ೯ಕ ಮಾತುಗಳ ಮೂಲಕವೇ ಆತ್ಮವಿಶ್ವಾಸದ ಚಿಕಿತ್ಸೆ ನೀಡುತ್ತಿದ್ದ ಅವರು ಬಡವರು, ಕಾಮಿ೯ಕರು, ಕೂಲಿಕಾರರಿಗೆ ಉಚಿತವಾಗೇ ಚಿಕಿತ್ಸೆ ಕೊಟ್ಟು ವಿಶ್ವಾಸ ಸಂಪಾದಿಸಿದರು. ಹಣದಿಂದಲೇ ರೋಗಿಗಳನ್ನು ಅಳೆಯುವ ಇಂದಿನ ವೈದ್ಯರುಗಳಿಗೆ ನಿಜಕ್ಕೂ ವೆಂಕಟರೆಡ್ಡಿ ಮಾದರಿ.

ಅಪ್ಪಟ ಚಳವಳಿಗಾರ

[ಬದಲಾಯಿಸಿ]

ತುಳಿತಕ್ಕೊಳಗಾದವರನ್ನು ಎಚ್ಚರಿಸಿ, ಹಕ್ಕುಗಳ ಕುರಿತ ಜಾಗೖತಿ ಮೂಡಿಸಿ ಹೋರಾಟ ಕಿಚ್ಚು ಹಚ್ಚಿದ ಅಪ್ಪಟ ಚಳವಳಿಗಾರ ಅವರು. ಗೋಕಾಕ್ ಚಳವಳಿಯ ಸಂದಭ೯ದಲ್ಲಿ ದೊಡ್ಡಬಳ್ಳಾಪುರದಲ್ಲಿ ಕನ್ನಡ ಕ್ರಿಯಾ ಸಮಿತಿ, ಕನ್ನಡ ಶಕ್ತಿ ಕೇಂದ್ರದ ಮೂಲಕ ನಿರಂತರ ಹೋರಾಟ ಸಂಘಟಿಸಿದವರಲ್ಲಿ ರೆಡ್ಡಿಯವರದ್ದು ಗಣನೀಯ ಪಾತ್ರ. ತದ ನಂತರದಲ್ಲಿ ಕನ್ನಡ ಜಾಗೖತ ಪರಿಷತ್ತಿನ ಸ್ಥಾಪನೆ, ಕನ್ನಡ ಚಳವಳಿಯನ್ನೇ ಒಂದು ರಾಜಕೀಯ ಶಕ್ತಿಯಾಗಿ ಮಾಡುವ ಮೂಲಕ ಕನ್ನಡದ ಶಾಶ್ವತ ಉಳಿವಿನ ಕನಸು ಸಾಕಾರಗೊಳಿಸಿದರು. ಬೀದಿ ಬದಿಯ ಕೂಲಿಕಾರರನ್ನೂ ಬಿಡದೆ ಎಲ್ಲರನ್ನೂ ಪ್ರಭಾವಿಸಿ ಚಳವಳಿಯ ಛಾಳಿ ಬೆಳೆಸಿದರು.ನೆಲದ ಸಂಸ್ಕೖತಿಯ ಚಿಂತನೆಯನ್ನು ಹುಟ್ಟುಹಾಕಿ ತನ್ನತನದ ಪ್ರತಿಷ್ಠೆಯನ್ನು ಪ್ರತಿಯೊಬ್ಬರೂ ಕಂಡುಕೊಳ್ಳಬೇಕು ಎಂಬ ಆಶಾವಾದ ಅವರದಾಗಿತ್ತು. ಸ್ಥಳೀಯ ಸಂಸ್ಕೖತಿ, ಜನಪರ ಧ್ವನಿ, ಬದುಕಿನ ಹೋರಾಟದ ಚಿಂತನೆ ಮೈಗೂಡಿಸಿಕೊಂಡವರು.

ಹೋರಾಟದ ಹರಿಕಾರ

[ಬದಲಾಯಿಸಿ]

ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ, ಬದುಕಿನ ಹೋರಾಟ, ಮಹಿಷಿ ವರದಿ ಜಾರಿಗೆ ಹೋರಾಟದ ನೇತೖತ್ವ ವಹಿಸಿದ್ದ ಅವರು, ಇತ್ತೀಚಿನ ದಿನಗಳಲ್ಲೂ ಹೋರಾಟದ ಮುಂಚೂಣಿಯಲ್ಲಿದ್ದ ಅವರು 2011ರಲ್ಲಿ ಜಿಕೆವಿಕೆಯ ಕೖಷಿ ಅಧ್ಯಯನ ಕೇಂದ್ರದ ಮೇಲೆ ದಾಳಿ ಮಾಡಿ ಬಿಟಿ ಭತ್ತದ ತಳಿಯನ್ನು ನಾಶ ಮಾಡುವ ಮೂಲಕ ಈ ನೆಲದ ರೈತರ ಸಂಕಷ್ಟಕ್ಕೆ ಸ್ಪಂದಿಸಿದವರು. ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಜಾರಿಯಾಗಬೇಕು. ಪರಮಶಿವಯ್ಯ ವರದಿ ಜಾರಿಗೆ ಬರಬೇಕು ಎಂದು ತಿಂಗಳುಗಟ್ಟಲೆ ಹೋರಾಟಗಳನ್ನು ಸಂಘಟಿಸಿ, ಬೆಳೆಸಿದವರು.

ರೈತ ಸಂಘಕ್ಕೆ ಸಂಜೀವಿನಿ

[ಬದಲಾಯಿಸಿ]

ಕೆಲ ತಿಂಗಳ ಹಿಂದೆ ರಾಜ್ಯ ರೈತ ಸಂಘ ಒಡೆದು ಹೋಳಾಗುವ ಆತಂಕ ಎದುರಾದಾಗ ಶಿಸ್ತುಪಾಲನಾ ಸಮಿತಿಯ ನೇತೖತ್ವ ವಹಿಸಿದ್ದ ವೆಂಕಟರೆಡ್ಡಿ ಎರಡೂ ಬಣಗಳ ಮಧ್ಯೆ ಸಮನ್ವಯ ಸಾಧಿಸಿ ರೈತ ಸಂಘದ ಉಳಿವು-ಬೆಳವಣಿಗೆಗೆ ಶ್ರಮಿಸಿದವರು. ತನ್ನದೇ ಆದ ಅಭಿಮಾನಿ ಕಾರ್ಯಕತ೯ರ ಪಡೆ ಹೊಂದಿದ್ದ ಅವರ ಹೋರಾಟ ಯಾವತ್ತೂ ವೈಫಲ್ಯ ಕಂಡಿಲ್ಲ. ರೈತ ಹೋರಾಟ, ಕನ್ನಡಪರ ಹೋರಾಟಗಳಲ್ಲಿ ಹಲವು ಬಾರಿ ಜೈಲು ಕಂಡಿರುವ ಅವರು ಗಭ೯ಗುಡಿ ಸಂಸ್ಕೖತಿ, ಪ್ರಭುತ್ವಶಾಹಿಯನ್ನು ವಿರೋಧಿಸುತ್ತಲೇ ಬಂದವರು.

ಮಾಗ೯ದಶಿ೯

[ಬದಲಾಯಿಸಿ]

ಹೋರಾಟಗಾರ ತನ್ನ ಮುಂದಿನ ಪೀ:ಳಿಗೆಗೂ ಮಾಗ೯ದಶಿ೯ಯಾಗಿರಬೇಕು. ಆತ ಸೖಷ್ಠಿಸುವ ಹೊಸಪೀಳಿಗೆ ತಾನು ಹುಟ್ಟುಹಾಕಿದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಪದೇ ಪದೇ ಹೇಳುತ್ತಿದ್ದ ಅವರು ನೂರಾರು ಕನ್ನಡ ಚಳವಳಿಗಾರರನ್ನು ಹುಟ್ಟುಹಾಕಿದರು. ನಿರಂತರ 4 ದಶಕಗಳ ಅವರ ಹೋರಾಟ ಈಗ ತಾಕಿ೯ಕ ಅಂತ್ಯ ಕಂಡಿದೆ. ಡಾ.ವೆಂಕಟರೆಡ್ಡಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅವರು ಹಾಕಿಕೊಟ್ಟ ಅಡಿಪಾಯ, ಮಾಗ೯ದಶ೯ನ ಇನ್ನಾದರೂ ಸಾಕಾರಗೊಳ್ಳಬೇಕಿದೆ.