ವಿಷಯಕ್ಕೆ ಹೋಗು

ಆಲಿಂಗ್ಯಾಮ್ ಮಾರ್ಜರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಮಾರ್ಗೆರಿ ಆಲಿಂಗ್ಯಾಮ್
ಜನನಮಾರ್ಗೆರಿ ಲೂಯಿಸ್ ಆಲಿಂಗ್ಯಾಮ್
(೧೯೦೪-೦೫-೨೦)೨೦ ಮೇ ೧೯೦೪
Ealing, London, UK
ಮರಣ30 June 1966(1966-06-30) (aged 62)
ಕಾಲ್ಚೆಸ್ಟರ್, ಎಸೆಕ್ಸ್, ಇಂಗ್ಲೆಂಡ್, ಯುಕೆ
ವೃತ್ತಿಕಾದಂಬರಿಗಾರ್ತೀ
ಪ್ರಕಾರ/ಶೈಲಿರಹಸ್ಯ, ಅಪರಾಧ ವಿಜ್ಞಾನ

೧೯೦೪-೬೬. ಇಂಗ್ಲಿಷ್ ಕಾದಂಬರಿಕಾರ್ತಿ. ಜನನ ಲಂಡನ್ನಿನಲ್ಲಿ. ತಂದೆಯೂ ಬರೆಹಗಾರ. ಅನೇಕ ಪತ್ತೆದಾರಿ ಕಾದಂಬರಿಗಳನ್ನು ಬರೆದಳು. ೧೯೨೭ರಲ್ಲಿ ಕಲಾವಿದ ಯಂಗ್ ಮನ್ ಕಾರ್ಟರ್ ನನ್ನ ಮದುವೆಯಾದಳು. ಆಕೆ ಚಿತ್ರಿಸಿದ ಪತ್ತೆದಾರ ಆಲ್ಬರ್ಟ್ ಕ್ಯಾಂಪಿಯನ್ ಬಹಳ ಜನಪ್ರಿಯನಾದ.

ಕೃತಿಗಳು

[ಬದಲಾಯಿಸಿ]

ದಿ ಕ್ರೈಮ್ ಅಟ್ ಬ್ಲಾಕ್ ಡಡ್ಲಿ (೧೯೨೯), ಫ್ಲವರ್ ಫಾರ್ ದಿ ಜಜ್ (೧೯೩೬), ಮೋರ್ ವರ್ಕ್ ಫಾರ್ ದಿ ಅಂಡರ್ಟೇಕರ್ (೧೯೪೯), ದಿ ಟೈಗರ್ ಇನ್ ದಿ ಸ್ಮೋಕ್ (೧೯೫೨), ನೋ ಲವ್ ಲಾಸ್ಟ್ (೧೯೫೪)- ಇವು ಈಕೆಯ ಪ್ರಮುಖ ಕಾದಂಬರಿಗಳು. ಮಿಸ್ಟರ್ ಕ್ಯಾಂಪಿಯನ್ ಅಂಡ್ ಅದರ್ಸ್ (೧೯೩೯) ಈಕೆಯ ಕಥಾ ಸಂಕಲನ.