ಕರ್ನಾಟಕ ಬಂಧು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಬಂಧು : ಗದಗ ಜಿಲ್ಲೆ ಗದಗಿನಿಂದ ಪ್ರಕಟ ವಾಗುತ್ತಿರುವ, ಮುಖ್ಯವಾಗಿ ಪ್ರಾದೇಶಿಕ ಸ್ವರೂಪದ ವಾರಪತ್ರಿಕೆ. ಸ್ಥಾನಿಕ ಸಮಸ್ಯೆಗಳ ಮತ್ತು ಸ್ಥಾನಿಕ ಸಮಾಜಗಳ ಪರಿಚಯ, ಕಥೆ, ಕವನ, ಪ್ರಬಂಧಗಳನ್ನು ಒಳಗೊಂಡಿರುತ್ತದೆ. ಇದು ೧೯೩೦ಅಕ್ಟೋಬರಿನಲ್ಲಿ ಆರಂಭವಾಯಿತು. ಚೆನ್ನಬಸವಸ್ವಾಮಿ ವಿರೂಪಾಕ್ಷಯ್ಯಸ್ವಾಮಿ ಹಿರೇಮಠ ಅವರು ಪತ್ರಿಕೆಯ ಒಡೆಯರು, ಸಂಪಾದಕರು ಮತ್ತು ಪ್ರಕಾಶಕರು. ಪ್ರಾರಂಭದಲ್ಲಿ ಪತ್ರಿಕೆಯಲ್ಲಿ ಕಿರೀಟ ಅರ್ಧ ಆಕಾರದ 16 ಪುಟಗಳಿದ್ದುವು. ೧೯೩೪ರಲ್ಲಿ ಇದನ್ನು 28ಕ್ಕೆ ಹೆಚ್ಚಿಸಲಾಯಿತು. ಅಲ್ಲದೆ ಲೇಖನಗಳೊಂದಿಗೆ ಚಿತ್ರಗಳನ್ನು ಪ್ರಕಟಿಸಲು ಉಪಕ್ರಮಿಸಿ ಪತ್ರಿಕೆಯ ಸ್ವರೂಪವನ್ನು ಆಕರ್ಷಕವಾಗಿಸಿ ಸಚಿತ್ರ ಗೊಳಿಸಲಾಯಿತು. ಪತ್ರಿಕೆಯ ಪ್ರಸಾರ ಪ್ರಾರಂಭದಲ್ಲಿ ೭೦೦-೮೦೦. ಆದರೆ ಪುಟಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಬೆಲೆ ಒಂದೇ ಆಣೆ ಇದ್ದುದ ರಿಂದ ಪತ್ರಿಕೆಯ ಪ್ರಸಾರ ಮೊದಲಿದ್ದ ರಿಂದ ಸು.೫,೦೦೦-೬,೦೦೦ಕ್ಕೆ ಏರಿತ್ತು. ಈಗ ಇದರ ಪ್ರಸಾರ ಸಂಖ್ಯೆಯೂ ಪುಟಗಳ ಸಂಖ್ಯೆಯೂ ಕಡಿಮೆಯಾಗಿದೆ. ಡಿಮೈ ಅರ್ಧ ಆಕಾರದ 12 ಪುಟಗಳಿವೆ. *