ಪ್ರಧಾನ ಮಂತ್ರಿ ಜನ-ಧನ ಯೋಜನೆ (PMJDY)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಧಾನ ಮಂತ್ರಿ ಜನ-ಧನ ಯೋಜನೆ (PMJDY)
ಘೋಷವಾಕ್ಯಮೇರಾ ಖಾತಾ-ಭಾಗ್ಯ ವಿಧಾತಾ
ಮುಖ್ಯಸ್ಥಭಾರತ ಸರ್ಕಾರ
ಪ್ರಧಾನಮಂತ್ರಿನರೇಂದ್ರ ಮೋದಿ
ಮುಖ್ಯ ವ್ಯಕ್ತಿಗಳುದೇಬಶೀಶ್ ಪಾಂಡಾ (ಉಸ್ತುವಾರಿ),

ಸಂಜೀವ್ ಕೌಶಿಕ್(ಹೆಚ್ಚುವರಿ ಕಾರ್ಯದರ್ಶಿ), ಸುಚೀಂದ್ರ ಮಿಶ್ರಾ(ಯೋಜನಾ ನಿರ್ದೇಶಕ), ಅನಿಂದಿತಾ ಸಿನ್ಹಾ ರೇ(ನಿರ್ದೇಶಕಿ),

ಅಶೋಕ್ ಕುಮಾರ್ ಡೋಗ್ರಾ(ಉಪ ಕಾರ್ಯದರ್ಶಿ)
ಸ್ಥಾಪನೆಅಗಸ್ಟ್ ೧೫, ೨೦೧೪
ಜಾರಿಯಗಿದ್ದುಅಗಸ್ಟ್ ೨೮, ೨೦೧೪
ಅಧೀಕೃತ ಜಾಲತಾಣwww.pmjdy.gov.in

ಪ್ರಧಾನ ಮಂತ್ರಿ ಜನ್-ಧನ್ ಯೋಜನೆ (ಆಂಗ್ಲ ಸಂಕ್ಷಿಪ್ತ- PMJDY), ಭಾರತದ ಕಟ್ಟಕಡೆಯ ನಾಗರಿಕನಿಗೂ ಆರ್ಥಿಕ ಸೇವೆ ಸಿಗುವಂತಾಗಲು ಮತ್ತು ದೇಶದ ಆರ್ಥಿಕ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ, ಭಾರತ ಸರ್ಕಾರವು ಘೋಷಿಸಿದ ಒಂದು ಯೋಜನೆಯಾಗಿದೆ. ಈ ಯೋಜನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಗಸ್ಟ್ ೧೫ ೨೦೧೪ರಂದು ಘೋಷಿಸಿದರು[೧] ಮತ್ತು ೨೮ನೇ ಆಗಸ್ಟ್ ೨೦೧೪ರಂದು ಈ ಯೋಜನೆಯು ಅಧೀಕೃತವಾಗಿ ಜಾರಿಯಾಯಿತು.[೧]

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ನಿಯಂತ್ರಣದಲ್ಲಿ ಇರುವ ಹಣಕಾಸು ಸೇವೆಗಳ ಇಲಾಖೆಯು ಈ ಯೋಜನೆಯನ್ನು ನಡೆಸುತ್ತಿದ್ದು, ಅಭಿಯಾನವು ಜಾರಿಯಾದ ಮೊದಲ ದಿನವೇ ೧.೫ ಕೋಟಿ ಖಾತೆಗಳನ್ನು ದೇಶದಾದ್ಯಂತ ವಿವಿಧ ಬ್ಯಾಂಕುಗಳಲ್ಲಿ ತೆರೆಯಲಾಯಿತು. ೮ ಸೆಪ್ಟೆಂಬರ್ ೨೦೨೧ರವರೆಗಿನ ಮಾಹಿತಿಯಂತೆ, ಒಟ್ಟು ೪೩,೨೮,೮೯,೩೦೧ರಷ್ಟು ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಒಟ್ಟು ೧,೪೫,೦೫೦.೭೬ ಕೋಟಿ ಮೊತ್ತ ಈ ಖಾತೆಗಳಲ್ಲಿ ಜಮೆಯಾಗಿದೆ.[೨]

ಇತಿಹಾಸ ಮತ್ತು ವಿವರಗಳು[ಬದಲಾಯಿಸಿ]

2014ರ ಆಗಸ್ಟ್ 28ರಂದು ಆರಂಭವಾದ ಈ ಯೋಜನೆಯ ಧ್ಯೇಯವಾಕ್ಯ ‘ಮೇರಾ ಖಾತಾ-ಭಾಗ್ಯ ವಿಧಾತಾ’ ಎಂಬುದಾಗಿದೆ. ಈ ಯೋಜನೆ ಮತ್ತು ವೈಶಿಷ್ಟ್ಯಗಳು :

  • ಯಾವುದೇ ಕನಿಷ್ಠ ಮೊತ್ತವಿಲ್ಲದೇ ಪ್ರತಿಯೊ ಬ್ಬರೂ ಬ್ಯಾಂಕ್ ಖಾತೆ ತೆರೆಯಬಹುದು. ಖಾತೆ ತೆರೆಯಲು ಯಾವುದೇ ಶುಲ್ಕವೂ ಇರುವುದಿಲ್ಲ. ಪ್ರತಿಯೊಬ್ಬರೂ ಉಳಿತಾಯದ ಮಾರ್ಗೋಪಾಯ ಕಂಡುಕೊಳ್ಳಬಹುದು. ಬಡವರು ಲೇವಾದೇವಿ ಗಾರರಿಂದ ಸಾಲ ಪಡೆದು ಹೆಚ್ಚು ಬಡ್ಡಿ ನೀಡಿ ಬಡತನದಲ್ಲೇ ಬಳಲುವುದರಿಂದ, ಅಧಿಕ ಬಡ್ಡಿ ಸಾಲದ ಕೂಪದಿಂದ ಸುಲಭದಲ್ಲಿ ಬಿಡುಗಡೆ ಪಡೆ ಯಬಹುದು. ಮನೆಯಲ್ಲಿ ಅಸುರಕ್ಷಿತವಾಗಿ ಹಣ ಇಟ್ಟುಕೊಳ್ಳುವುದಕ್ಕೆ ಬದಲಾಗಿ ಸುರಕ್ಷಿತವಾಗಿ ಬ್ಯಾಂಕ್‌ನಲ್ಲಿ ಇಡಬಹುದು. ಇಟ್ಟ ಹಣಕ್ಕೆ ಬಡ್ಡಿಯನ್ನೂ ಪಡೆಯಬಹುದು.
  • ಅನಕ್ಷರಸ್ಥರಿಗೆ ರೂಪೇ ಡೆಬಿಟ್ ಕಾರ್ಡ್ ವ್ಯವಹಾರ ಕಠಿಣವಾಗಿ ರುವುದರಿಂದ ಅದನ್ನು ನೀಡುವಾಗ ಅದರ ಸುರಕ್ಷತೆ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು ಮಾರ್ಗ ದರ್ಶನ ನೀಡುತ್ತಾರೆ. ಜನಧನ ಯೋಜನೆಯಲ್ಲಿ ಜಂಟಿ ಖಾತೆ ಸಹ ತೆರೆಯಬಹುದು. ಯಾವುದೇ ಶಾಖೆಯಲ್ಲಾದರೂ ಖಾತೆ ತೆರೆಯಬಹುದು. ಬ್ಯಾಂಕ್‌ನ ಒಂದು ಶಾಖೆಯಿಂದ ಬೇರೊಂದು ಶಾಖೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ದೇಶದ ಯಾವ ಬ್ಯಾಂಕ್ ಶಾಖೆಯ ಖಾತೆಗಾದರೂ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು.10 ವರ್ಷ ಮೇಲ್ಪಟ್ಟ ವಯಸ್ಸಿನವರು ಜನಧನ ಯೋಜನೆ ಖಾತೆ ತೆರೆಯಬಹುದು.
  • ಈಗಾಗಲೇ ಯಾವುದೇ ಬ್ಯಾಂಕಿನಲ್ಲಿ ಖಾತೆ ಇರುವವರು ಹೊಸದಾತಿ ಜನಧನ ಖಾತೆ ತೆರೆ ಯವ ಅವಶ್ಯಕತೆ ಇರುವುದಿಲ್ಲ. ಇರುವ ಖಾತೆಗೆ ರೂಪೇ ಕಾರ್ಡ್, ವಿಮಾ ಸೌಲಭ್ಯ ವಿಸ್ತರಿಸಲಾಗು ತ್ತದೆ. ಅವರ ಬ್ಯಾಂಕ್ ವ್ಯವಹಾರ ತೃಪ್ತಿಕರವಾಗಿ ದ್ದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
  • ಜನಧನ ಖಾತೆಗೆ ಚೆಕ್ ಸೌಲಭ್ಯ ಪಡೆಯಬಹುದು. ಆದರೆ ಖಾತೆಯಲ್ಲಿ ಕನಿಷ್ಠ ಮೊತ್ತ ಇರು ವಂತೆ ನೋಡಿಕೊಳ್ಳಬೇಕು. ಈ ಉಳಿತಾಯ ಖಾತೆ ಯಲ್ಲಿ ಇಡುವ ಹಣಕ್ಕೆ ವಾರ್ಷಿಕ ಶೇ 4ರ ಬಡ್ಡಿ ನೀಡಲಾಗುತ್ತದೆ. ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಶೇ 12ರಷ್ಟು ಬಡ್ಡಿ ವಿಧಿಸಲಾಗುತ್ತದೆ.
  • ಜನಧನ ಖಾತೆ ತೆರೆಯಲು ತೆರೆಯಲು ಆಧಾರ್ ಕಾರ್ಡ್ ಇದ್ದರೆ ಸಾಕು. ಬೇರಾವ ದಾಖಲೆಗಳ ಅವಶ್ಯಕತೆ ಇಲ್ಲ. ವಿಳಾಸ ಬದಲಾಗಿದ್ದಲ್ಲಿ ಸ್ವದೃಢೀಕರಣ ಸಾಕು. ಆಧಾರ್ ಕಾರ್ಡ್ ಇಲ್ಲದಿದ್ದರೆ, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಆಗಬಹುದು. ಇವ್ಯಾ ವುವೂ ಇಲ್ಲದಿದ್ದರೆ ಸರ್ಕಾರ/ಸರ್ಕಾರಿ ಸಂಸ್ಥೆ ವಿತರಿಸಿದ ಗುರುತಿನ ಚೀಟಿ/ ಪೋಟೋ ಸಹಿತ ಪತ್ರಕ್ಕಾದರೆ ಗೆಜೆಟೆಡ್ ಅಧಿಕಾರಿ ದೃಢೀಕರಣ ಇರಬೇಕು.

ರೂಪೇ ಡೆಬಿಟ್ ಕಾರ್ಡ್[ಬದಲಾಯಿಸಿ]

  • ರೂಪೇ (Rupay) ಡೆಬಿಟ್ ಕಾರ್ಡ್ ಸೌಲಭ್ಯ ಪಡೆಯಬಹುದು. ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳಿಗೆ ಪರ್ಯಾಯವಾಗಿ ಆರಂಭಿಸಿರುವ ಭಾರತೀಯ ಡೆಬಿಟ್ ಕಾರ್ಡ್ ಇದಾಗಿದೆ. ಆದರೆ 45 ದಿನಗಳಲ್ಲಿ ಒಮ್ಮೆಯಾದರೂ ಇದನ್ನು ಬಳಸ ಬೇಕಾಗಿರುತ್ತದೆ.
ಎಲ್ಲ ಖಾತೆದಾರರಿಗೂ ಒಂದು ಲಕ್ಷದವರೆಗೆ ಅಪಘಾತ ವಿಮೆ ಮತ್ತು ಮೂವತ್ತು ಸಾವಿರದ ವರೆಗೆ ಜೀವವಿಮೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ನೇರ ಸೌಲಭ್ಯ ವರ್ಗಾವಣೆಗೆ ಇದು ಸಹಕಾರಿಯಾ ಗುತ್ತದೆ. ಪಿಂಚಣಿ ಮತ್ತು ವಿಮಾ ಸೌಲಭ್ಯ ಯೋಜನೆಗಳ ಲಾಭ ಪಡೆಯಲು ಅನುಕೂಲ ವಾಗುತ್ತದೆ.

ಸಾಲ ಸೌಲಭ್ಯ (ಓವರ್‌ ಡ್ರಾಫ್ಟ್‌)[ಬದಲಾಯಿಸಿ]

  • ಖಾತೆಯಲ್ಲಿ ಹಣವಿಲ್ಲದಿದ್ದರೂ ಅಗತ್ಯವಿದ್ದಾಗ ರೂ.10000ದವರೆಗೆ ಹಣ ಪಡೆಯಬಹುದು (ಓವರ್‌ ಡ್ರಾಫ್ಟ್‌). ಆದರೆ ಪ್ರತಿ ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಈ ಅವಕಾಶ. ಕುಟುಂಬದ ಮಹಿಳಾ ಸದಸ್ಯರಿಗೆ ಆದ್ಯತೆ. ಸರಿಯಾದ ಸಮಯಕ್ಕೆ ಬಡ್ಡಿ ಸಮೇತ ಮರುಪಾವತಿ ಮಾಡಿದರೆ ರೂ.5 ಸಾವಿರದ ಮಿತಿ ಹೆಚ್ಚಿಸಿಕೊಳ್ಳಬಹುದು. ಆದರೆ ಈ ಸೌಲಭ್ಯ ಖಾತೆ ನಿರ್ವಹಣೆ ತೃಪ್ತಿಕರವಾಗಿದ್ದರೆ ಮಾತ್ರ ಖಾತೆ ತೆರೆದ ಆರು ತಿಂಗಳ ನಂತರ ದೊರೆಯುತ್ತದೆ.

ಸದುಪಯೋಗ[ಬದಲಾಯಿಸಿ]

  • ಈ ಹಿಂದೆ ಇಂದಿರಾ ಗಾಂಧಿ ಅವರ ನೇತೃತ್ವದ ಸರ್ಕಾರವೂ ಕೈಗೊಂಡಿದ್ದ 20 ಅಂಶಗಳ ಕಾರ್ಯ ಕ್ರಮದಿಂದ ಹಿಡಿದು ಯುಪಿಇ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳಿದ್ದವು . ಇದರ ಸದುಪಯೋಗ ಮುಖ್ಯ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "PMJDY". pib.gov.in. Press Information Bureau Government of India. Retrieved 18 September 2021.
  2. "ಜನ್ ಧನ್ ಯೋಜನೆಯ ಅಂಕಿ ಅಂಶಗಳು". pmjdy.gov.in. Department of Financial Services, Government of India. Retrieved 18 September 2021.

ಕರ್ನಾಟಕ