ವಿಷಯಕ್ಕೆ ಹೋಗು

ಕರ್ಲಿ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dorab wolf-herring
Temporal range: 55–0 Ma
Eocene to Present[]
Dorab wolf-herring
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕುಟುಂಬ:
Chirocentridae

ಕುಲ:
Chirocentrus

Cuvier, 1816
ಪ್ರಜಾತಿ:
Chirocentrus dorab

(Forsskål, 1775)

ಕರ್ಲಿ ಮೀನು ಕೈರೋಸೆಂಟ್ರಿಡೆ ಕುಟುಂಬಕ್ಕೆ ಸೇರಿದ ಕೈರೊಸೆಂಟ್ರಸ್ ದೊರಬ್ ಎಂಬ ವೈಜ್ಞಾನಿಕ ಹೆಸರಿನ ಸಮುದ್ರವಾಸಿ ಮೀನು. ಇಂಗ್ಲಿಷಿನಲ್ಲಿ ಸೇಬರ್ ಫಿಷ್ ಅಥವಾ ದೊರಬ್ ಎನ್ನುತ್ತಾರೆ. ಇದಕ್ಕೆ ಕಡಲ್ ಬಳೆ, ಕರ್ಲಿ ಬಳೆ, ಕೋಡು ಬಳೆ ಎಂದೂ ಕರೆಯುತ್ತಾರೆ. ಹೆರ್ರಿಂಗ್ ಮೀನುಗಳ ಹತ್ತಿರದ ಸಂಬಂಧಿ. ಮಧ್ಯ ಪೆಸಿಫಿಕ್ ನಿಂದ ಆಫ್ರಿಕವರೆಗೆ ಇವು ಕಂಡಿಬರುತ್ತವೆ. ಭಾರತಸಮುದ್ರಗಳಲ್ಲಿ ಇದು ಸರ್ವೇ ಸಾಮಾನ್ಯ.

ಲಕ್ಷಣಗಳು

[ಬದಲಾಯಿಸಿ]

ಉದ್ದನೆಯ ಅಥವಾ ಬಲು ಸಂಕುಚಿತಗೊಂಡ ದೇಹ, ಉದರದ ಈಜುರೆಕ್ಕೆಯ ಮೇಲಿರುವ ಸಣ್ಣಕೂದಲುಗಳಂಥ ಅರಗಳು (ರೇ) ಮತ್ತು ಎದೆಯ ಭಾಗದ ಈಜುರೆಕ್ಕೆಯ ಕಕ್ಷದಲ್ಲಿರುವ ಒಂದು ಶಲ್ಕ (ಸ್ಕೇಲ್) -ಇವು ಈ ಮೀನಿನ ಮುಖ್ಯ ಲಕ್ಷಣಗಳು.

ಇದು ತೀವ್ರತರವಾದ ಮಾಂಸಾಹಾರಿ ಮೀನು. ಸಾಮಾನ್ಯವಾಗಿ ಸಾಗರದ ಇತರ ಮೀನುಗಳನ್ನು ತಿಂದು ಜೀವಿಸುತ್ತದೆ. ಆಶ್ಚರ್ಯವೆಂದರೆ ಇತರೆ ಹೆರ್ರಿಂಗ್ ಮೀನುಗಳು ಸಣ್ಣ ಫ್ಲವಕಗಳನ್ನು ತಿಂದು ಜೀವಿಸುತ್ತವೆ. ದೊರಬ್ ಮೀನಿನ ಕರುಳಿನಲ್ಲಿರುವ ಸುರುಳಿ ಕವಾಟ (ಸ್ಪೈರಲ್ ವಾಲ್ವ್‌)ನಿಂದ ಇತರ ಹೆರ್ರಿಂಗ್ ಮೀನುಗಳಿಗಿಂತ ಇದನ್ನು ವಿಭಿನ್ನವಾಗಿಸಿದೆ. ಈ ರೀತಿಯ ಕವಾಟ ಶಾರ್ಕ್ ಮತ್ತು ರೇ ಮೀನುಗಳಲ್ಲಿ ಕಾಣಿಸುತ್ತದೆ. ಇಷ್ಟಲ್ಲದೆ ಈ ಮೀನುಗಳಿಗೆ ದೊಡ್ಡ ಕೋರೆಹಲ್ಲುಗಳೂ ಸಹ ಇವೆ. ಇದು ಸುಮಾರು ೧೨ ಅಡಿಗಳವರೆಗೆ ಬೆಳೆಯುತ್ತದೆ. ಇತರೆ ಹೆರ್ರಿಂಗ್ಗಳ ಸುಮಾರು ಐದುಪಟ್ಟು. ಆಹಾರದ ಮೀನುಗಳಲ್ಲಿ ಈ ಮೀನು ಬಹು ಮುಖ್ಯವಾದುದೆಂದು ಹೆಸರಾಗಿದೆ.

ಉಪಯೋಗಗಳು

[ಬದಲಾಯಿಸಿ]

ಕರ್ಲಿ ಮೀನು ಒಂದು ಪ್ರಮುಖ ಆಹಾರದ ಮೀನಾಗಿದೆ.ಇದನ್ನು ತಾಜಾ,ಒಣಗಿಸಿ ಹಾಗೂ ಸಂಸ್ಕರಿಸಿ ಮಾರುತ್ತಾರೆ.[] ಪ್ರಪಂಚದ ಕರ್ಲಿಮೀನಿನ ಮೀನುಗಾರಿಕೆ ಅಂಕಿ ಅಂಶ ಈ ಕೆಳಗಿನಂತಿದೆ.

Global capture of Dorab wolf-herrings in tonnes reported by the FAO, 1950–2009 []

ಉಲ್ಲೇಖಗಳು

[ಬದಲಾಯಿಸಿ]
  1. Sepkoski, Jack (2002). "A compendium of fossil marine animal genera". Bulletins of American Paleontology. 364: p.560. Archived from the original on 2011-07-23. Retrieved 2008-01-08. {{cite journal}}: |pages= has extra text (help); Cite has empty unknown parameter: |coauthors= (help)
  2. ೨.೦ ೨.೧ Chirocentrus dorab (Forsskål, 1775) FAO, Species Fact Sheet. Retrieved April 2012.