ವಿಷಯಕ್ಕೆ ಹೋಗು

ಅಕ್ಯಾಂತೋಫೀನಿಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ಯಾಂತೋಫೀನಿಕ್ಸ್
Acanthophoenix rubra
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Acanthophoenix

Species

ಅಕ್ಯಾಂತೋಫೀನಿಕ್ಸ್ ಒಂದು ಸುಂದರವಾದ ಉದ್ಯಾನ ಸಸ್ಯ.

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಪಾಮೀ (ಅರಿಕೇಸೀ) ಕುಟುಂಬದ ತಾಳೆ (ಪಾಮ್) ಜಾತಿಯ ಪ್ರಭೇದಗಳಲ್ಲಿ ಹೆಸರುವಾಸಿಯಾದದ್ದು; ಇದರ ಪ್ರಭೇದಗಳು ಸಾಧಾರಣ ಗಾತ್ರದಿಂದ ಹಿಡಿದು ದೊಡ್ಡ ಮರದ ಗಾತ್ರಕ್ಕೆ ಬೆಳೆಯುವುದರಿಂದ ಕುಂಡಗಳಲ್ಲೊ ಉದ್ಯಾನವನಗಳಲ್ಲೊ ಬೆಳೆಸಲು ಯೋಗ್ಯವಾಗಿವೆ.

ಲಕ್ಷಣಗಳು

[ಬದಲಾಯಿಸಿ]
A. rubra flowers

ಎಲೆ ಸಂಯುಕ್ತಗರಿಯ ರೂಪದಲ್ಲಿದೆ; ಕಿರುಗರಿಗಳು ನೀಳಾಕಾರವಾಗಿದ್ದು ಭರ್ಜಿಯಾಕಾರದ ಮೊನಚುತುದಿ ಉಳ್ಳವಾಗಿವೆ. ಅಪರೂಪವಾಗಿ ಲಂಬಾಗ್ರ ತುದಿಯವೂ ಉಂಟು. ಕಾವು ಮೂರು ಮುಖವಾಗಿರುತ್ತದೆ. ಇದರ ರೆಕ್ಕೆಗಳ ಅಂಚು ನಯವಾಗಿರುತ್ತದೆ. ಮುಳ್ಳು ಅಂಚೂ ಉಂಟು. ಹೂಗೊಂಚಲು ಎರಡು ಭಾಗವಾಗಿರುವ ತಾಳಗುಚ್ಛದ ಮಾದರಿಯಲ್ಲಿದೆ. ಚಪ್ಪಟೆಯಾಗಿರುವ ಎರಡುಭಾಗದ ಉಪಪತ್ರಯುಗ್ಮವೂ ಇದೆ. ತಿರುಪು ಮೊಳೆಯಾಕಾರವಾಗಿ ಜೋಡಣೆಯಾಗಿರುವ ಹೂವಿನ ಮೂರು ಸಾಲುಗಳಿವೆ. ಲಿಂಗ ಪ್ರತ್ಯೇಕವಾಗಿದೆ. ಹೂವು, ಉಪಪತ್ರ ಯುಗ್ಮ ಮತ್ತು ಹೂದಳ ಇವೆಲ್ಲ ಕೆಂಪು, ನಸುಗೆಂಪು ಅಥವಾ ಕಿತ್ತಳೆಬಣ್ಣವಾಗಿರುವುದುಂಟು. ಗಂಡು ಹೂಗಳಲ್ಲಿ 12 ಕೇಸರಗಳು ಇವೆ. ಹೆಣ್ಣು ಹೂಗಳಲ್ಲಿ ಬಂಜೆ ಕೇಸರುಗಳು ಉಂಗುರಾಕೃತಿಯಲ್ಲಿವೆ. ಅಕ್ಯಾಂತೋಫೀನಿಕ್್ಸ ಕ್ರೈನಿಟ ಎಂಬ ಪ್ರಭೇದ ಸು. 25ಕಿಮೀ ಎತ್ತರ ಬೆಳೆಯುತ್ತದೆ. ಗರಿಗಳು ಸು. 5ಕಿಮೀ ಉದ್ದವಾಗಿದ್ದು, ತೊಟ್ಟಿನ ಬುಡಭಾಗದಲ್ಲಿ ಒತ್ತಾದ ಒರಟಾದ ಉದ್ದವಾದ ಮುಳ್ಳುಗಳು ಇರುತ್ತವೆ. ಎಲೆ ತೊಟ್ಟಿನ ಅಗಲವಾದ ಭಾಗದಲ್ಲಿ ಒರಟಾದ ಕಪ್ಪುಬಣ್ಣದ ಬಿರುಸು ರೋಮಗಳೂ ಮುಳ್ಳುಗಳೂ ಇರುತ್ತವೆ. ಕಿರುಗರಿಗಳ ತಳಭಾಗ ಬಿಳಿಯ ಬಣ್ಣವಾಗಿದೆ. ಹೂಗೊಂಚಲು ಕಪ್ಪುಬಣ್ಣದ ತಾಳಗುಚ್ಛದ ಮಾದರಿಯಲ್ಲಿದೆ. ಹೂಗೊಂಚಲಲ್ಲಿ ಕಂದುಬಣ್ಣದ ನಾರು ಮತ್ತು ಮುಳ್ಳು ಇರುತ್ತವೆ. ಪುಷ್ಪಪತ್ರ ಮತ್ತು ದಳಗಳು ಕೆಂಪು, ಕಂದು ಅಥವಾ ಬಿಳುಪು ಬಣ್ಣವಾಗಿರುತ್ತವೆ. ಅಕ್ಯಾಂತೋಫೀನಿಕ್್ಸ ರುಬ್ರ ಎಂಬ ಪ್ರಭೇದ ಸಸ್ಯ ಸುಮಾರು 20ಮೀ ಎತ್ತರ ಬೆಳೆಯುತ್ತದೆ. ಎಳೆಯ ಸಸ್ಯದ ಎಳೆಯ ಗರಿಗಳು ಅತಿ ಹಸಿರುಬಣ್ಣವಾಗಿರುತ್ತವೆ. ನಾಳಗಳು ಕೆಂಪು. ಗರಿಗಳು 2-4ಮೀ ಉದ್ದವಾಗಿವೆ. ನವಿರಾದ ರೋಮಗಳು ಗರಿತೊಟ್ಟಿನ ಮೇಲುಭಾಗದಲ್ಲಿವೆ. ತೊಟ್ಟಿನ ಬುಡದ ಅಗಲವಾದ ಭಾಗದಲ್ಲಿ ನೇರವಾಗಿ, ಒರಟಾಗಿರುವ ಕಪ್ಪುಬಣ್ಣದ ಮುಳ್ಳುಗಳು ಇರುತ್ತವೆ. ಹೂಗೊಂಚಲು ಹಿಂದಕ್ಕೆ ಬಾಗಿದ ಮುಳ್ಳುಗಳಿಂದ ಕೂಡಿರುತ್ತದೆ. ಪುಷ್ಪಪತ್ರ ಕೂಡಿಕೊಂಡಿದ್ದು ದಳಗಳು ಕೆಂಪು ಅಥವಾ ಕಂದುಬಣ್ಣವಾಗಿರುತ್ತವೆ.

ಸಸ್ಯಾಭಿವೃದ್ಧಿ

[ಬದಲಾಯಿಸಿ]

ಅಕ್ಯಾಂತೋಫೀನಿಕ್ಸ್ ಸಸ್ಯಗಳನ್ನು ಬೀಜಗಳಿಂದ ವೃದ್ಧಿಮಾಡಬಹುದು. ಬಿತ್ತನೆ ಮಾಡಿದ ಬೀಜಗಳು ಮೊಳೆಯಲು 2-3 ವರ್ಷಗಳ ಕಾಲ ಬೇಕಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Wendland, H. A. Flores des Serres et des Jardins de l'Europe 16:181. 1867.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]