ವಿಷಯಕ್ಕೆ ಹೋಗು

ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ

[ಬದಲಾಯಿಸಿ]

ಸುದ್ದಿಯ ಪ್ರಸಾರ, ಅದರ ಬೆಳೆವಣಿಗೆ ಮತ್ತು ಸುದ್ದಿಯನ್ನು ತರುವ ಬಗೆ ಇವುಗಳ ವಿಚಾರದಲ್ಲಿ ಸಂಶೋಧನೆ ನಡೆಸಿ ಪ್ರಪಂಚದ ಪತ್ರಿಕಾಲೋಕಕ್ಕೆ ಮಾರ್ಗದರ್ಶನ ಮಾಡುವ ಮುಖ್ಯ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ.[] ಇದರ ಕೇಂದ್ರ ಕಚೇರಿ ಸ್ವಿಟ್ಜರ್ಲ್ಯಾಂಡ್ ನ ಜ಼Æರಿಟ್ ಪಟ್ಟಣದಲ್ಲಿದೆ. ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದ ಈ ಸಂಸ್ಥೆ ಪ್ರಪಂಚದ ಯಾವ ಸರ್ಕಾರದ ಹಿಡಿತಕ್ಕೂ ಒಳಪಟ್ಟಿಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು, ನಾನಾ ದೇಶದ ಪತ್ರಿಕೋದ್ಯಮಿಗಳಲ್ಲಿ ಪರಸ್ಪರ ಮಧುರ ಬಾಂಧವ್ಯವನ್ನು ಹುಟ್ಟಿಸುವುದು, ಸುದ್ದಿ ನಿಷ್ಪಕ್ಷಪಾತವಾಗಿ ಯಾರ ಭಯ ಮತ್ತು ದಯಾದಾಕ್ಷಿಣ್ಯಕ್ಕೊಳಗಾಗದೆ ಪ್ರಚುರವಾಗುವಂತೆ ಮಾಡುವುದು, ಪತ್ರಿಕೋದ್ಯಮದ ವಿವಿಧ ಸಾಧನೆಗಳನ್ನು ಬೆಳೆಸುವುದು -ಇವು ಈ ಸಂಸ್ಥೆ ಮಾಡುತ್ತಿರುವ ಇತರ ಮುಖ್ಯ ಕೆಲಸಗಳು. ಪ್ರಪಂಚದ 45 ದೇಶಗಳಲ್ಲಿರುವ ಪತ್ರಿಕೆಗಳ ಪೈಕಿ ಸುಮಾರು 600 ಪತ್ರಿಕೆಗಳ 1300 ಪ್ರತಿನಿಧಿಗಳು ಈ ಸಂಸ್ಥೆಯ ಸದಸ್ಯರು. ಇದರ ಅಂಗಸಂಸ್ಥೆಯೊಂದು ಭಾರತದಲ್ಲೂ ಇದೆ. ಇದು ಪ್ರತಿ ವರ್ಷವೂ ಪತ್ರಿಕೋದ್ಯಮಿಗಳ ಉಪಯೋಗಕ್ಕಾಗಿ ವಿಚಾರಗೋಷ್ಠಿಗಳನ್ನು, ತರಬೇತಿ ತರಗತಿಗಳನ್ನು, ಪರಸ್ಪರ ವಿನಿಮಯ ಚರ್ಚೆಗಳನ್ನು ಏರ್ಪಡಿಸುತ್ತದೆ.

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2006-11-13. Retrieved 2016-05-03.