ಎತ್ತರ-ತೂಕ-ಆರೋಗ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಬೇಸಿಟಿ ಅಥವಾ ಅಧಿಕ ಕೊಬ್ಬಿನ ಖಾಹಿಲೆ ಯಾ ಕೊಬ್ಬಿನ ತೊಂದರೆ[ಬದಲಾಯಿಸಿ]

ಒಬ್ಯಾಸಿಟಿ ಆದಾಗ

ಒಂದು ವ್ಯಕ್ತಿಯಲ್ಲಿ ಬೊಜ್ಜು - ಒಬೇಸಿಟಿ (Obesity) ಅಥವಾ ಅಧಿಕ ಕೊಬ್ಬಿನ ಖಾಹಿಲೆ ಯಾ ಕೊಬ್ಬಿನ ತೊಂದರೆ ಕಂಡುಬಂದರೆ ಅದರ ಪ್ರಮಾಣವನ್ನು ಈ ತೂಕ-ಹೋಲಿಕೆ ಪಟ್ಟಿಯಿಂದ ಅರಿಯಬಹುದು.

  • ಇದರಲ್ಲಿ ಅವರವರ ಎತ್ತರಕ್ಕೆ ಆರೋಗ್ಯವಂತರು ಇರಬೇಕಾದ ತೂಕವನ್ನು ಕೊಟ್ಟಿದೆ. ಉದಾಹರಣೆಗೆ ೪ ಅಡಿ,೬ ಅಂಗುಲ ಎತ್ತರ ಇರುವವರು ೨೮ ರಿಂದ ೩೫ ಕಿಲೋಗ್ರಾಮ ತೂಕದ ಒಳಗಿದ್ದರೆ ಅದು ಬೊಜ್ಜು ಎನಿಸಿಕೊಳ್ಳುವುದಿಲ್ಲ. ಅದಕ್ಕೂ ಹೆಚ್ಚಿದ್ದರೆ ಅದು ಆರೋಗ್ಯಕರವಲ್ಲ. ವೈದ್ಯರ ಸಲಹೆ ಅಥವಾ ತಜ್ಞರ ಸಲಹೆ ಪಡೆದು ತೂಕ ಕಡಿಮೆ ಮಾಡಿಕೊಳ್ಳಬೇಕು. ಈ ಪಟ್ಟಿಯಲ್ಲಿ ತಿಳಿಸಿದ ಪ್ರಮಾಣಕ್ಕಿಂತ ಕಡಿಮೆ ತೂಕವಿದ್ದರೂ ಅದು ಅರೋಗ್ಯಕರವಲ್ಲವೆಂದು ತಿಳಿಯಲಾಗುವುದು. ಆಗಲೂ ಜಾಹಿರಾತಿನ ಮೊರೆ ಹೋಗುವುದರ ಬದಲು, ತಜ್ನರ ಸಲಹೆ ಪಡೆಯುವುದು ಒಳ್ಳೆಯದು.
ಗಂಡು - - . ಹೆಣ್ಣು - -
ಅಡಿ-ಅಂ. ಮೀ.ಮಿ ತೂಕ.ಕೆಜಿ . ಅಡಿ-ಅಂ. ಮೀ. ತೂಕ.ಕೆಜಿ
4-6 1..35 28-35 . 4-6 1..35 28-35
4-7 1..38 30-39 . 4-7 1..38 30-37
4-8 1..40 33-40 . 4-8 1..40 32-40
4-9 1..43 35-44 . 4-9 1..43 35-42
4-10 1..45 38-46 . 4-10 1..45 36-45
4-11 1..48 40-50 . 4-11 1..48 39-47
5-0 1..5(1.8) 43-53 . 5-0 1..5(1.8) 40-50
5-1 1..52 45-55 . 5-1 1..52 43-52
5-2 1..55 48-59 . 5-2 1..55 45-55
5-3 1..58 50-61 . 5-3 1..58 47-57
5-4 1..6 53-65 . 5-4 1..6 49-60
5-6 1..70 58-70 . 5-6 1..70 53-65
5-7 1..7 60-74 . 5-7 1..7 55-77
5-8 1.72 63-76 . 5-8 1.72 57-70
5-9 1..73 65-80 . 5-9 1..73 59-72
5-10 1.75 67-83 . 5-10 1.75 61-75
5-11 1...88 70-85 . 5-11 1...88 63-77
6-0 1..825 72-89 . 6-0 1..825 65-80
6-1 - 74-91 . 6-1 - 67-80
6-2 - 76-93 6..2 - 69-82
6-3 - 78-95 6-3 - 70-80

ಎತ್ತರ-ತೂಕದ ಸೂತ್ರ[ಬದಲಾಯಿಸಿ]

D. Robinson Formula (1983)
  • 52 kg + 1.9 kg per inch over 5 feet (man)
  • 49 kg + 1.7 kg per inch over 5 feet (woman)
  • D. R. Miller Formula (1983)
  • 56.2 kg + 1.41 kg per inch over 5 feet (man)
  • 53.1 kg + 1.36 kg per inch over 5 feet (woman)

ಬೊಜ್ಜಿಗೆ ಒಂದು ಕಾರಣ-ಸಂಶೋಧನೆ[ಬದಲಾಯಿಸಿ]

  • ಗರ್ಭಿಣಿಯಾಗುವುದಕ್ಕೂ ಮುನ್ನವೇ ಅಧಿಕ ಕೊಬ್ಬಿನ ಅಂಶಗಳುಳ್ಳ ಆಹಾರದಿಂದ ಬೊಜ್ಜು ಬೆಳೆಸಿಕೊಂಡ ಮಹಿಳೆಯರು ತಮ್ಮ ನಂತರದ ಮೂರು ತಲೆಮಾರಿಗೆ ಸ್ಥೂಲಕಾಯದ ಶಾಪವನ್ನು ವರ್ಗಾಯಿಸುತ್ತಾರೆ.
  • ಈ ತಾಯಂದಿರ ಮಕ್ಕಳು ಅತ್ಯಂತ ಹಿತಮಿತ ಹಾಗೂ ಆರೋಗ್ಯಕರ ಶೈಲಿಯ ಆಹಾರ ಪದ್ಧತಿ ಅನುಸರಿಸಿದರೂ ಅವರಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ ಸಂಶೋಧಕರು. ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಈ ಅಂಶ ಬೆಳಕಿಗೆ ಬಂದಿದೆ.
  • ತಾಯಂದಿರಲ್ಲಿನ ಬೊಜ್ಜುತನ, ಅವರ ಮೂರು ತಲೆಮಾರಿನ ಜನರಲ್ಲಿ ಮಧುಮೇಹ ಟೈಪ್‌–2, ಹೃದಯ ಸಂಬಂಧಿ ಕಾಯಿಲೆ ಮತ್ತು ವಂಶವಾಹಿಯಲ್ಲಿನ ಅಸಹಜತೆಗಳಿಗೆ ಕಾರಣವಾಗುವ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಕೆಲ್‌ ಮೊಲೀ.
  • ಅಮ್ಮಂದಿರಲ್ಲಿನ ಬೊಜ್ಜು ಮತ್ತು ಅದರಿಂದ ಹುಟ್ಟಿಕೊಂಡ ಜೀರ್ಣಕ್ರಿಯೆ ಸಮಸ್ಯೆಗಳು ಮೈಟೊಕಾಂಡ್ರಿಯದ ಡಿಎನ್‌ಎ ಮೂಲಕ ಮಕ್ಕಳಿಗೂ ದಾಟುತ್ತವೆ. ಜೀರ್ಣಕ್ರಿಯೆ ಸಮಸ್ಯೆಯುಳ್ಳ ಇಲಿಗಳ ಮೇಲೆ ಅಧ್ಯಯನ ನಡೆಸಿದಾಗ,
  • ಅವುಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಮೈಟೊಕಾಂಡ್ರಿಯದ ಸಮಸ್ಯೆಯು ಅದರ ಮೂರು ಪೀಳಿಗೆಗೂ ತಾಯಿಯ ಅಂಡಾಣುವಿನ ಮೂಲಕ ರವಾನೆಯಾಗುವುದು ಖಚಿತವಾಗಿದೆ.
  • ಶೇ 60ರಷ್ಟು ಕೊಬ್ಬಿನಂಶ ಮತ್ತು ಶೇ 20ರಷ್ಟು ಸಕ್ಕರೆಯ ಅಂಶದ ಆಹಾರ ನೀಡಿ ಸ್ಥೂಲಕಾಯಿಗಳನ್ನಾಗಿಸಿದ ಇಲಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿದೆ.
  • ದಶಕಗಳಿಂದ ನಮ್ಮ ಆಹಾರ ಪದ್ಧತಿ ಹದ ತಪ್ಪಿದೆ. ಫಾಸ್ಟ್‌ಫುಡ್‌ ಮತ್ತು ಅಸುರಕ್ಷಿತ ಆಹಾರಗಳ ಅತಿಯಾದ ಸೇವನೆಯು ಈಗಿನ ಸ್ಥೂಲಕಾಯದ ಸಮಸ್ಯೆಗೆ ಕಾರಣವಾಗಿದೆ.
  • ಮನುಷ್ಯರಲ್ಲಿ ಮಕ್ಕಳ ಆಹಾರ ಸೇವನೆ ಹೆಚ್ಚೂ ಕಡಿಮೆ ಪೋಷಕರಂತೆಯೇ ಇರುತ್ತದೆ. ಹೀಗಾಗಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ತಿಳಿದುಕೊಂಡ ಕಾಯಿಲೆಗಳ ಅಪಾಯ ಮನುಷ್ಯರಲ್ಲಿ ಇನ್ನೂ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ.
  • [೧]

ಭಾರತದ ಮಕ್ಕಳಲ್ಲಿ ಬೊಜ್ಜು[ಬದಲಾಯಿಸಿ]

  • ಎಳೆಮಕ್ಕಳ ಬೊಜ್ಜಿಗೆ ಅನಾರೋಗ್ಯಕರ ಆಹಾರ ಶೈಲಿ ಮತ್ತು ಕಡಿಮೆ ದೈಹಿಕ ಚಟುವಟಿಕೆ ಕಾರಣ ಎಂದೂ ವರದಿ ಹೇಳಿದೆ. ‘ಶೇ 25ರಷ್ಟು ಮಕ್ಕಳು ಪ್ರತಿ ದಿನ ಮೂರು ತಾಸಿಗೂ ಹೆಚ್ಚು ಟಿ.ವಿ ಮತ್ತು ಕಂಪ್ಯೂಟರ್‌ ಮುಂದೆ ಕಳೆಯುತ್ತಾರೆ. ಇದು ದೆಹಲಿಯ ಏಮ್ಸ್‌ನ ಸಮುದಾಯ ಆರೋಗ್ಯ ವಿಭಾಗದ ಪ್ರೊ. ಆನಂದ ಕೃಷ್ಣನ್‌‍ ಅಭಿಪ್ರಾಯ.
  • ಬೊಜ್ಜಿನಿಂದಾಗಿ ಮಕ್ಕಳಿಗೆ ಸಕ್ಕರೆ ಕಾಯಿಲೆ (ವಿಧ–2), ಹೃದಯ ಕಾಯಿಲೆಗಳು, ಲಕ್ವ, ಕೆಲವು ವಿಧದ ಕ್ಯಾನ್ಸರ್‌ ಕಾಯಿಲೆ ಬರುವ ಅಪಾಯ ಹೆಚ್ಚು. ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆ ರೋಗಗಳು ಹೆಚ್ಚಲು ಕಾರಣ.ಬೊಜ್ಜಿನ ಸಮಸ್ಯೆ ಹೆಚ್ಚುವಲ್ಲಿ ಆಹಾರ ಉದ್ಯಮದ ಪಾಲೂ ಇದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಇರುವ ಹದಿಹರೆಯದವರ ಸಂಖ್ಯೆ 24.3 ಕೋಟಿ. ಅಂದರೆ ಜಗತ್ತಿನ ಒಟ್ಟು ಹದಿಹರೆಯದವರಲ್ಲಿ ಶೇ 25ರಷ್ಟು ಭಾಗ ಮಕ್ಕಳು ಭಾರತದಲ್ಲಿಯೇ ಇದ್ದಾರೆ. ಹಾಗಾಗಿ ಮಕ್ಕಳಲ್ಲಿನ ಬೊಜ್ಜು ಸಮಸ್ಯೆ ಪರಿಹಾರಕ್ಕಾಗಿಯೇ ವಿಶೇಷ ಯೋಜನೆ ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ.
  • ಭಾರತದ ಮಕ್ಕಳಲ್ಲಿ ಬೊಜ್ಜು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇಲ್ಲಿನ ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಬೊಜ್ಜು ದೇಹವನ್ನು ಹೊಂದಿರುತ್ತದೆ. ಭವಿಷ್ಯದಲ್ಲಿ ಈ ಮಕ್ಕಳು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚು ಎಂದು ವರದಿಯೊಂದು ಹೇಳಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪಾಪ್ಯುಲೇಷನ್‌ ರೆಫರೆನ್ಸ್‌ ಬ್ಯೂರೊ (ಪಿಆರ್‌ಬಿ)ದ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.

[೨]

ಭಾರತಕ್ಕೆ ಚಿಕಿತ್ಸೆಬರುವ ಮಹಿಳೆ[ಬದಲಾಯಿಸಿ]

  • ೨೦೧೬ ರಲ್ಲಿ ಅತಿಹೆಚ್ಚು ತೂಕದ ಮಹಿಳೆ ೫೦೦ ಕೆಜಿ:[[೧]]

ನೋಡಿ[ಬದಲಾಯಿಸಿ]

  • Obesity-ಒಬೇಸಿಟಿ ಇಂಗ್ಲಿಷ್ ತಾಣ[[೨]]

[[೩]] [[malinisdelights.blogspot.com 561 × 417 BMI Chart, Height to Weight Chart for Indians]]

ಆಧಾರ[ಬದಲಾಯಿಸಿ]

  • ಗೂಗಲ್ -

[[೪]] [[೫]] ಮಾಲಿನಿ ಚಾರ್ಟ್:ಗಳು; -

  1. ದಿ.30/6/2016:prajavani:ಬೊಜ್ಜು-ಮೂರು-ಪೀಳಿಗೆಗೆ-ಮಾರಕ[[೬]]
  2. ಶೇ 20ರಷ್ಟು ಮಕ್ಕಳಲ್ಲಿ ಬೊಜ್ಜು ಸಮಸ್ಯೆ[[೭]]