ವಿಕ್ಟರ್ ಹ್ಯೂಗೊ
ವಿಕ್ಟರ್ ಹ್ಯೂಗೊ | |
---|---|
ಜನನ | Victor Marie Hugo ೨೬ ಫೆಬ್ರವರಿ ೧೮೦೨ Besançon, France |
ಮರಣ | 22 May 1885 Paris, France | (aged 83)
ವೃತ್ತಿ | Poet, playwright, novelist, essayist, visual artist, statesman, human rights campaigner[ಸೂಕ್ತ ಉಲ್ಲೇಖನ ಬೇಕು] |
ರಾಷ್ಟ್ರೀಯತೆ | French |
ಸಾಹಿತ್ಯ ಚಳುವಳಿ | Romanticism |
ಸಹಿ |
ವಿಕ್ಟರ್ ಹ್ಯೂಗೊ (೨೬ ಫೆಬ್ರುವರಿ ೧೮೦೨ - ೨೨ ಮೇ ೧೮೮೫ ) ಫ್ರಾನ್ಸ್ ದೇಶದ ಪ್ರಸಿದ್ಧ ಕವಿ, ಕಾದಂಬರಿಕಾರ ಮತ್ತು ನಾಟಕಕಾರ. ಫ್ರೆಂಚ್ ಸಾಹಿತ್ಯದ ರೊಮ್ಯಾಂಟಿಕ್ ಯುಗದ ನೇತಾರ. ಫ್ರಾನ್ಸ್ ದೇಶದ ಹೊರಗೆ ಈತನ ಲೆ ಮಿಸರೆಬಲ್ಸ್ ಮತ್ತು ನಾಟರ್ ಡ್ಯಾಂ ಡೆ ಪ್ಯಾರಿಸ್ ಕೃತಿಗಳು ಸುಪ್ರಸಿದ್ಧವಾಗಿವೆ. ಇವನು ಸಾವಿರಾರು ಚಿತ್ರಗಳನ್ನೂ ಬರೆದಿದ್ದು, ಮರಣದಂಡನೆಯ ರದ್ದತಿಯಂತಹ ಸಾಮಾಜಿಕ ಸಂಗತಿಗಳ ಪ್ರಚಾರಕನಾಗಿ ವ್ಯಾಪಕ ಗೌರವವನ್ನು ಗಳಿಸಿದ್ದಾನೆ.
ಬದುಕು
[ಬದಲಾಯಿಸಿ]ಫ್ರಾನ್ಸ್ನ ಬೆಸಾಂಕನ್ ಎಂಬಲ್ಲಿ 1802ರಲ್ಲಿ ಜನಿಸಿದ. ಈತ 17ನೆಯ ವಯಸ್ಸಿನಲ್ಲಿಯೇ ಫ್ರೆಂಚ್ ಭಾಷೆಯಲ್ಲಿ ಅದ್ಭುತ ಪ್ರಾವೀಣ್ಯ ಪಡೆದಿದ್ದ. ತನ್ನ ಸಹೋದರರೊಂದಿಗೆ ಸೇರಿ ದ ಲಿಟರರಿ ಕನ್ಸರ್ವೇಟಿವ್ ಎಂಬ ಪತ್ರಿಕೆಯನ್ನು ಹೊರತಂದ.[೧] ರಾಜಕೀಯದಲ್ಲಿಯೂ ಆಸಕ್ತಿ ಹೊಂದಿದ್ದ. 1848 ರಲ್ಲಿ ಫ್ರೆಂಚ್ನ ಎರಡನೆಯ ಗಣರಾಜ್ಯ ಸ್ಥಾಪನೆ ಕಾಲದಲ್ಲಿ ಇವನ ಆಸಕ್ತಿ ಏಕಾಧಿಪತ್ಯದಿಂದ ಗಣರಾಜ್ಯದತ್ತ ಹರಿಯಿತು. ಹೊಸ ರಾಷ್ಟ್ರೀಯ ಗಣಪರಿಷತ್ತಿಗೂ ಆಯ್ಕೆಯಾದ. ಮತದ ಹಕ್ಕು, ಉಚಿತ ಶಿಕ್ಷಣ, ಪತ್ರಿಕಾ ಸ್ವಾತಂತ್ರ್ಯಗಳ ವಿಚಾರದಲ್ಲಿ ಆಸಕ್ತಿ ವಹಿಸಿದ. ಲೂಯಿ ನೆಪೋಲಿಯನ್ನ ಆಗಮನದ ಅನಂತರ ರಾಜಕೀಯ ಬದಲಾವಣೆಗಳಲ್ಲಿ ಸಕ್ರಿಯವಾಗಿ ಭಾಗಿಯಾದ. ಇದರ ಪರಿಣಾಮದಿಂದ 20 ವರ್ಷ ದೇಶಭ್ರಷ್ಟನಾಗಿ, ಗಡಿಪಾರಾಗಿ ಬೆಲ್ಜಿಯಂ ಹಾಗೂ ಇಂಗ್ಲಿಷ್ ಕಡಲ್ಗಾಲುವೆಯ ಜರ್ಸಿ ದ್ವೀಪಗಳಲ್ಲಿರಬೇಕಾಯಿತು. ಫ್ರಾನ್ಸಿಗೆ ಮರಳುವ ಅವಕಾಶವೊದಗಿದರೂ ಅದನ್ನು ತಿರಸ್ಕರಿಸಿ ತಾನು ಸ್ವಾತಂತ್ರ್ಯ ಪಡೆಯದ ಹೊರತು ಬಂಧಮುಕ್ತನಾಗಲಾರೆನೆಂದು ಘೋಷಿಸಿದ. ನೆಪೋಲಿಯನ್ ಅಧಿಕಾರದಿಂದ ಕೆಳಗಿಳಿದ ಅನಂತರವೇ ಫ್ರಾನ್ಸಿಗೆ ಮರಳಿದ.
ಈತ 1885ರಲ್ಲಿ ನಿಧನನಾದ.
ಸಾಹಿತ್ಯ
[ಬದಲಾಯಿಸಿ]ಓಡ್ಸ್ ಅಂಡ್ ವೇರಿಯಸ್ ಪೊಯಮ್ಸ್ (1822) ಇದು ಇವನ ಮೊದಲನೆಯ ಕವನ ಸಂಕಲನ. ಓಡ್ಸ್ ಅಂಡ್ ಬ್ಯಾಲೆಡ್ಸ್ (1826) ಹಾಗೂ ದ ಓರಿಯಂಟಲ್ (1829)- ಇವು ತರುಣ ರೊಮ್ಯಾಂಟಿಕ್ ಕವಿಗಳನ್ನು ಸಂಘಟಿಸಿ ಹೊರತಂದ ಕೃತಿಗಳು. ಇವನು ಪ್ರಸಿದ್ಧ ರೊಮ್ಯಾಂಟಿಕ್ ಕವಿ ಎಂದು ಹೆಸರು ಪಡೆಯಲು ಇವು ಕಾರಣವಾದುವು. ಕ್ರಾಮ್ವೆಲ್ (1877) ಒಂದು ಐತಿಹಾಸಿಕ ನಾಟಕ. ಇದರ ಮುನ್ನುಡಿಯಲ್ಲಿ ರೊಮ್ಯಾಂಟಿಕ್ ಸೌಂದರ್ಯ ಮೀಮಾಂಸೆಯನ್ನು ಪರಿಚಯಿಸಿದ್ದಾನೆ, ಸಾಂಪ್ರದಾಯಿಕ ಸಾಹಿತ್ಯ ತತ್ತ್ವಗಳನ್ನು ಮೀರಿ ಬರೆಯುವ ಅಗತ್ಯವನ್ನು ಇಲ್ಲಿ ಸೂಚಿಸಿದ್ದಾನೆ.
ಹರ್ನಾನಿ (1830) ಇವನ ಅತ್ಯಂತ ಪ್ರಸಿದ್ಧ ನಾಟಕ ಕೃತಿ. ಫ್ರೆಂಚ್ ರಂಗಭೂಮಿಯ ಹೊಸ ದಿಕ್ಕಿಗೆ ಇದು ಕಾರಣವಾಯಿತಲ್ಲದೆ, ಇವನನ್ನು ರೊಮ್ಯಾಂಟಿಕ್ ಯುಗದ ಮುಂಚೂಣಿಗೆ ತಂದು ನಿಲ್ಲಿಸಿತು.[೨] ದ ಕಿಂಗ್ ಈಸ್ ಅಮ್ಯೂಸ್ಡ್ (1832), ರೇಬ್ಲಾಸ್ (1838), ಲೀವ್ಸ್ ಆಫ್ ಆಟಂ (1831), ಸಾಂಗ್ಸ್ ಆಫ್ ಟ್ವಿಲೈಟ್ (1835) ಇನ್ನರ್ ವಾಯ್ಸಸ್ (1837), ರೇಸ್ ಅಂಡ್ ಶಾಡೋಸ್ (1840) ಮೊದಲಾದುವು ಇವನ ಇತರ ಕೃತಿಗಳು.[೩]
ದ ಚಸ್ಟಿಸ್ಮೆಂಟ್ಸ್ (1853) ವಿಡಂಬನಾ ಕಾವ್ಯ ಸಂಗ್ರಹ. ದ ಕಾನ್ಟೆಂಪ್ಲೇಷನ್ಸ್ (1856), ದ ಲೆಜೆಂಡ್ ಆಫ್ ಸೆಂಚುರೀಸ್ (1859), ಲೆಸ್ ಮಿಸರಬಲ್ (1862) ಕೃತಿಗಳು ಗಡೀಪಾರಾಗಿದ್ದ ಸಂದರ್ಭದಲ್ಲಿ ಈತ ಬರೆದುವು.
ಇವನು ಪ್ರಸಿದ್ಧಿಗೆ ಬಂದದ್ದು ನಾಟಕಗಳಿಂದಲೆ ಆದರೂ ಬ್ರಿಟನ್ ಹಾಗೂ ಸಂಯುಕ್ತ ರಾಷ್ಟ್ರಗಳಲ್ಲಿ ಇವನನ್ನು ಶ್ರೇಷ್ಠ ಕಾದಂಬರಿಕಾರ ಎಂದು ಗುರುತಿಸಲಾಗಿದೆ. ಫ್ರಾನ್ಸ್ನಲ್ಲಿ ಇವನ ಕಾವ್ಯಗಳಿಗೆ ಅಪಾರ ಮನ್ನಣೆ ದೊರೆತಿದೆ.
ಕನ್ನಡದಲ್ಲಿ ಈತನ ಕೃತಿಗಳು, ಅಂತರ್ಜಾಲದಲ್ಲಿ
[ಬದಲಾಯಿಸಿ]ಈತನ ಲೆ ಮಿಸರೆಬಲ್ಸ್ (Les Misérables) ಕೃತಿಯ ಕನ್ನಡ ಅನುವಾದವನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ[ಶಾಶ್ವತವಾಗಿ ಮಡಿದ ಕೊಂಡಿ] ಓದಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Frey, J.A.; Laster, A.; Hugo, V. (1999). A Victor Hugo Encyclopedia. ABC-Clio ebook (in ಪೊಲಿಶ್). Greenwood Press. p. 201. ISBN 978-0-313-29896-7.
- ↑ State Library of Victoria. "Victor Hugo: Les Misérables – From Page to Stage research guide". Archived from the original on 14 July 2014.
- ↑ Brockett, Oscar G. History of the Theatre. Eight Edition. Boston: Allyn & Bacon, 1999. p. 339.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- France of Victor Hugo Archived 2017-03-29 ವೇಬ್ಯಾಕ್ ಮೆಷಿನ್ ನಲ್ಲಿ.
- Guernsey’s Official Victor Hugo Website Archived 2008-04-08 ವೇಬ್ಯಾಕ್ ಮೆಷಿನ್ ನಲ್ಲಿ.
- Guernsey’s Victor Hugo International Music Festival Archived 2016-06-13 ವೇಬ್ಯಾಕ್ ಮೆಷಿನ್ ನಲ್ಲಿ.
- Victor Hugo Central
- Victor Hugo's works: text, concordances and frequency lists
- Les Misérables at CliffsNotes.com
- Victor Hugo le dessinateur Archived 2013-07-10 ವೇಬ್ಯಾಕ್ ಮೆಷಿನ್ ನಲ್ಲಿ.
- Official site of the Société des Amis de Victor Hugo Archived 2008-04-11 ವೇಬ್ಯಾಕ್ ಮೆಷಿನ್ ನಲ್ಲಿ.
- Official site of the Festival international Victor Hugo et Égaux Archived 2017-03-29 ವೇಬ್ಯಾಕ್ ಮೆಷಿನ್ ನಲ್ಲಿ.
- Victor Hugo at the Internet Book List
Online works
- Works by ವಿಕ್ಟರ್ ಹ್ಯೂಗೊ at Project Gutenberg
- English translation of Hugo's At Dawn Tomorrow (Demain, dès l'aube)
- Translation of Victor Hugo note found in "Hunchback of Notre Dame," french edition Archived 2017-03-28 ವೇಬ್ಯಾಕ್ ಮೆಷಿನ್ ನಲ್ಲಿ.
- (French) Les Voix intérieures – at athena.unige.ch Archived 2013-06-16 ವೇಬ್ಯಾಕ್ ಮೆಷಿನ್ ನಲ್ಲಿ.
- Translation of The legend of Victor Hugo by Paul Lafargue Archived 2017-03-27 ವೇಬ್ಯಾಕ್ ಮೆಷಿನ್ ನಲ್ಲಿ.
- The Century Was Two Years Old : Victor Hugo The Lilly Library, Bloomington IN
- CS1 ಪೊಲಿಶ್-language sources (pl)
- Articles with unsourced statements from January 2012
- Articles with invalid date parameter in template
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with French-language external links
- ನಾಟಕಕಾರರು
- ಕಾದಂಬರಿಕಾರರು
- ಕವಿಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ