ಇಸ್ಲಾಂ - ಕೆಲವು ತಪ್ಪು ಗ್ರಹಿಕೆಗಳು (ಪುಸ್ತಕ)
ಲೇಖಕರು | ಡಾ. ಅಸ್ಗರ್ ಅಲಿ ಎಂಜಿನಿಯರ್ |
---|---|
ಅನುವಾದಕ | ಹಸನ್ ನಯೀಂ ಸುರಕೋಡ |
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ತತ್ವಶಾಸ್ತ್ರ |
ಪ್ರಕಾರ | ಮತಧರ್ಮ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೨ |
ಪುಟಗಳು | ೯೬ |
ಐಎಸ್‍ಬಿಎನ್ | 978-81-8467-313-5 |
ಇಸ್ಲಾಂ - ಕೆಲವು ತಪ್ಪು ಗ್ರಹಿಕೆಗಳು ಡಾ. ಅಸ್ಗರ್ ಅಲಿ ಎಂಜಿನಿಯರ್ ಅವರು ಇಂಗ್ಲಿಷ್ ನಲ್ಲಿ ಬರೆದ ಪುಸ್ತಕ, ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ|| ಅಸ್ಗರ್ ಅಲಿ ಎಂಜಿನಿಯರ್ ಅವರ ಮೌಲಿಕ ಲೇಖನಗಳು ಇಸ್ಲಾಂ ತಪ್ಪು ತಿಳಿವಳಿಕೆಹಾಗೂ ಕೆಲವೊಂದು ಸಂದೇಹಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿವೆ. ಪ್ರವಾದಿಗಳ ಕಾಲದಲ್ಲಿನ ಇಸ್ಲಾಮಿನ ಮೂಲ ಸಂದೇಶ ಶಾಂತಿ, ಕರುಣೆ, ನ್ಯಾಯ ಮತ್ತು ಸತ್ಯಸಂಧತೆ. ಇವು ಶ್ರೇಷ್ಠ, ಶಾಶ್ವತ ಮೌಲ್ಯಗಳೆಂದು ಕುರ್‌ಆನ್‌ನಲ್ಲಿ ಉಲ್ಲೇಖವಿದೆ. ಕುರ್‌ಆನ್‌ನ ಸಂದೇಶ ಆಕ್ರಮಣ ಅಲ್ಲವೇ ಅಲ್ಲ ; ಕೇವಲ ಆತ್ಮರಕ್ಷಣೆಯ ಸಂದರ್ಭದಲ್ಲಿ ಮಾತ್ರ ಹೋರಾಡಲು ಅನುಮತಿ ಇದೆ.
ಜಿಹಾದ್ ಅಥವಾ 'ಧರ್ಮಯುದ್ಧ' ಪದ ಇತ್ತೀಚೆಗಿನ ದಿನಗಳಲ್ಲಿ ದುರ್ಬಳಕೆಯಾಗುತ್ತಿರುವ ಬಗ್ಗೆ ಕಾಳಜಿ ಇಲ್ಲಿದೆ. ಆತ್ಮಶುದ್ಧಿ ಮತ್ತು ಆಂತರ್ಯದ ಶುದ್ಧೀಕರಣಕ್ಕೆ ಮೂಲವಾಗುವ ಸಂದೇಶದ ಜಿಹಾದ್ ಇಂದು ಭಯೋತ್ಪಾದನೆಯ ಸಮರ್ಥಕರ ಘೋಷಣೆಯಾಗಿ, ಇಸ್ಲಾಂ ವಿರೋಧಿಸುವ ಅಮಾಯಕರ, ನಿರಪರಾಧಿಗಳ ಹತ್ಯೆಯ ಅಸ್ತ್ರವಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅಸ್ಗರ್ ಅಲಿಯವರು ವ್ಯಥಿತವಾಗಿ ಹೇಳುತ್ತಾರೆ. 'ಅಧಿಕಾರಕ್ಕಾಗಿ ನಡೆದ ಯುದ್ಧಗಳನ್ನು ಜಿಹಾದ್ ಎಂದು ಆಗಾಗ ಕರೆಯಲಾಗಿದ್ದು ದುರದೃಷ್ಟಕರ' ಎನ್ನುತ್ತಾರೆ. ಭಯೋತ್ಪಾದಕರು ಬಳಸುವ ಪದ ಜಿಹಾದ್ ಬದಲಿಗೆ "ಫಸಾದ್" (ಕುತಂತ್ರ)ವಾಗಿರಬೇಕಾಗಿತ್ತು ಎಂದು ಟೀಕಿಸುತ್ತಾರೆ. "ಈಗ ಇಸ್ಲಾಮಿ ಮೌಲ್ಯಗಳ ಕುರಿತು ಸೂಕ್ತ ಶಿಕ್ಷಣ ಪಡೆದ ಯುವಕರೇ ಕರುಣೆ ಹಾಗೂ ಮನುಷ್ಯ ಜೀವದ ಘನತೆಯನ್ನು ಎತ್ತಿ ಹಿಡಿಯುವುದು ಮತ್ತು ಇಸ್ಲಾಮಿನ ಹೆಸರಿನಲ್ಲಿ ರಾಕ್ಷಸೀ ಕೃತ್ಯಗಳನ್ನು ತಡೆಯುವುದನ್ನು ತಮ್ಮ ಕರ್ತವ್ಯವೆಂದು ಭಾವಿಸಬೇಕು. ಅದುವೇ ನಿಜವಾದ ಜಿಹಾದ್ ಆದೀತು" ಎನ್ನುತ್ತಾರೆ. ಕುರಾನ್ ಮುಸ್ಲಿಮೇತರರ ಮೇಲೆ ಹಲ್ಲೆ ಮಾಡಲು ಪ್ರಚೋದಿಸುತ್ತದೆ ಎನ್ನುವ ಇಸ್ಲಾಮ್ ವಿರೋಧಿಗಳ ವಾದವನ್ನು ಸತ್ಯವಿರೋಧಿಯಾದದ್ದು ಎನ್ನುವುದಕ್ಕೆ ಸಾಕಷ್ಟು ಸಂದೇಶಗಳನ್ನು ಸಾದರ ಪಡಿಸುತ್ತಾರೆ. ಪ್ರವಾದಿಯವರ ಬದುಕಿನಲ್ಲಿ ಸಹನೆ, ಶಾಂತಿ, ನ್ಯಾಯ, ಸಮಾನತೆ, ಮಹಿಳೆಯರ, ದುರ್ಬಲರ ಬಗ್ಗೆ ಸಹಾನುಭೂತಿ, ಅಹಿಂಸೆಯ ಪ್ರತಿಪಾದನೆಯನ್ನು ಘಟನೆಗಳ ಮೂಲಕ ಹೇಳುತ್ತಾರೆ. ಡಾ. ಅಸ್ಗರ ಅಲಿ ಎಂಜಿನಿಯರ್ ಏಷಿಯನ್ ಮುಸ್ಲಿಂ ಆಕ್ಷನ್ ನೆಟ್ ವರ್ಕ ಸಂಘಟನೆಯ ಅಧ್ಯಕ್ಷರು. ಮುಸ್ಲಿಂ ಸಮುದಾಯದಲ್ಲಿನ ಗ್ರಹಿಕೆಗಳನ್ನು ತಾತ್ವಿಕ ವಿಮರ್ಶಾನೆಲೆಯಲ್ಲಿ ಬರೆಯಬಲ್ಲ ಲೇಖಕರಲ್ಲೊಬ್ಬರು. ಈ ಲೇಖನಗಳನ್ನು ಅನುವಾದಿಸಿರುವವರು ಹಸನ್ ನಯೀಂ ಸುರಕೋಡ.
ನೋಡಿ-ಹೆಚ್ಚಿನ ಓದಿಗೆ
[ಬದಲಾಯಿಸಿ]- ತಲಾಖ್ ಎಂಬ ತೂಗುಗತ್ತಿ ಮತ್ತು ಪೂರ್ವಾಗ್ರಹ;ಸಾರಾ ಅಬೂಬಕರ್;27 Oct,2016 Archived 2016-11-02 ವೇಬ್ಯಾಕ್ ಮೆಷಿನ್ ನಲ್ಲಿ.