ವಿಷಯಕ್ಕೆ ಹೋಗು

ಸಾಧಕನ ಹೆಜ್ಜೆಗಳು (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಧಕನ ಹೆಜ್ಜೆಗಳು (ಪುಸ್ತಕ)
ಲೇಖಕರುಟಿ. ಆರ್. ಅನಂತರಾಮು
ದೇಶಭಾರತ
ಭಾಷೆಕನ್ನಡ
ವಿಷಯಜೀವನ ಚರಿತ್ರೆ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪, ೭ನೆ ಮುದ್ರಣ
ಪುಟಗಳು೧೧೦
ಐಎಸ್‍ಬಿಎನ್81-8467-414-7

ಟಿ. ಆರ್. ಅನಂತರಾಮುರವರು ಬರೆದ ಸಾಧಕನ ಹೆಜ್ಜೆಗಳು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಬದುಕು - ಸಾಧನೆ ಜೀವನ ಚರಿತ್ರೆ

ಸರ್ ಎಂ. ವಿ. ಎಂದೊಡನೆ ನೂರೆಂಟು ಚಿತ್ರಗಳು ಥಟ್ಟೆಂದು ಕಣ್ದಮುಂದೆ ನಿಲ್ಲುತ್ತವೆ. ಅಸಾಧಾರಣ ಎಂಜಿನಿಯರ್, ಅನನ್ಯ ರಾಷ್ಟ್ರಪ್ರೇಮ, ಕರ್ತವ್ಯನಿಷ್ಠ ಅಧಿಕಾರಿ, ದಕ್ಷ ಆಡಳಿಗಾರ, ಭವ್ಯ ಭಾರತ ನಿರ್ಮಾಣದ ಕನಸುಗಾರ. 'ಕೈಗಾರಿಕೆ ಇಲ್ಲವೇ ಸರ್ವನಾಶ' ಎಂದು ಎಚ್ಚರಿಸಿದ ರಾಷ್ಟ್ರಚಿಂತಕ. ಜ್ಞಾನದಾಸ್ಯವನ್ನು ಧಿಕ್ಕರಿಸಿದ ಧೀಮಂತ. ಆತ್ಮಾಭಿಮಾನವನ್ನು ಬಲಿಗೊಡದ ಆದರೆ ಅಹಂಕಾರಕ್ಕೆಡೆಗೊಡದ ಛಲವಾದಿ.

ವಿಶ್ವೇಶ್ವರಯ್ಯನವರ ಬದುಕು, ಸಾಧನೆಯನ್ನು ಕಂಡ, ಕೇಳದ, ಓದಿದ ಯಾರೊಬ್ಬರಿಗೂ ಅವರ ಸದಾ ಸ್ಪೂರ್ತಿಯ ನೆಲೆ, ದೇಶ, ಕಾಲವನ್ನು ಮೀರಿದ ಸೇವೆ ಸರ್. ಎಂ. ವಿ ಅವರದು. ಆಳರಸರನ್ನು ಓಲೈಸಲು ಹೋಗದೆ, ನಾಡಿನ ಪ್ರಗತಿಯನ್ನಷ್ಟೇ ಉಸಿರಾಡಿದ ಜೀವ, ನಿಜವಾದ ಅರ್ಥದಲ್ಲಿ ಸರ್ ಎಂ ವಿ ಯಂತ್ರರ್ಷಿ.

"ಸಾಧಕನ ಹೆಜ್ಜೆಗಳು" ಸರ್. ಎಂ. ವಿಶ್ವೇಶ್ವರಯ್ಯನವರ ತಂತ್ರಜ್ಞಾನ, ಆಡಳಿತ ದಕ್ಷತೆ, ದೂರದರ್ಶಿತ್ವವನ್ನು ಕೇಂದ್ರವಾಗಿರಿಸಿಕೊಂಡು ಅವರ ಬದುಕಿನ ಒಳನೋಟಗಳನ್ನು ಹಿಡಿದಿಟ್ಟರುವ ಕೃತಿ. ಈ ಮಹಾಮೇಧಾವಿಯನ್ನು ಕುರಿತು ಕನ್ನಡದಲ್ಲಿ ಅನೇಕ ಕೃತಿಗಳು ಹೋರಬಂದಿದೆ ನಿಜ. ಸಾಧಕನ ಹೆಜ್ಜೆಗಳು ಕೃತಿಯಲ್ಲಿ ಈ ಮೇರು ಪುರುಷನ ಬದುಕನ್ನು ಮತ್ತೊಂದು ಕೋನದಲ್ಲಿ ನೋಡಲಾಗಿದೆ. ಅವರ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚವ ಸಂದರ್ಭ ಬಂದಾಗಲ್ಲೆಲ ಈ ಚತುರಮತಿ ಅದನ್ನು ಗೆದ್ದ ಬಗೆ ಹೇಗೆಂಬುದನ್ನು ಕೃತಿಯುದ್ದಕ್ಕೂ ಸರಳವಾಗಿ ತೆರೆದಿಡಲಾಗಿದೆ. ಈ ಅನನುಕರಣೀಯನ ಹೆಜ್ಜೆಗಳನ್ನರಸಿ ಹೊರಟವರಿಗೆ ಇಲ್ಲಿದೆ ಸಂತತ ಪ್ರೇರಣೆ.