ವಿಷಯಕ್ಕೆ ಹೋಗು

ಆಧುನಿಕ ಆಂಗ್ಲ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಧುನಿಕವಾದ ಅಥವಾ ಆಧುನಿಕ ಸಾಹಿತ್ಯವೂ ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ೧೯ನೇ ಶತಮಾನದ ಆಂತ್ಯಕ್ಕೆ ಹಾಗೂ ೨೦ನೇಶತಮಾನದ ಫ್ರಾರಂಭದಲ್ಲಿ ಉಗಮವಾಯಿತು.ಆಧುನಿಕವಾದವು ಉದ್ದೇಶಪೂರ್ವಕವಾಗಿ ಸಾಂಪ್ರದಾಯಿಕ ಕಾವ್ಯಶೈಲಿಯಿಂದ ಹೊರಗುಳಿಯಿತು.ಆಧುನಿಕ ಬರಹಗಾರರು ಸಾಹಿತ್ಯಿಕ ಅಭಿವ್ಯಕ್ತಿ ಮತ್ತು ಬಗೆಗಳಲ್ಲಿ ಹೊಸ ಪ್ರಯೋಗಗಳನ್ನು ಕೈಗೊಳ್ಳುವುದರ ಮೂಲಕ 'ɛzra pound' ರ 'make it new' ಎಂಬ ತತ್ವಕ್ಕೆ ಆಂಟಿಕೊಂಡರು ಅಥವಾ ಆಯ್ಕೆಮಾಡಿಕೊಂಡರು.ಆಧುನಿಕ ಸಾಹಿತ್ಯ ಚಳುವಳಿಯೂ ಸಾಂಪ್ರಾದಾಯಿಕ ಮಾದರಿ ಪ್ರಾತಿನಿಧಿಕತ್ವದಿಂದ ಹೊರಬರುವ ಮತ್ತು ಹೊಸ ಸಂವೇದನಾ ಶಕ್ತಿಯನ್ನು ಅಭಿವ್ಯಕ್ತಪಡಿಸುವ ಪರಿಜ್ಞಾನಯುಕ್ತ ಆಕಾಂಕ್ಷೆ. ಪ್ರಥಮ ಮಹಾಯುದ್ದದಿಂದುಂಟಾದ ಭೀಕರ ಪರಿಣಾಮಗಳಿಂದಾಗಿ ಸಮಾಜದ ಬಗೆಗಿನ ಪೂರ್ವಕಲ್ಪನೆಗಳು ಬದಲಾಗುವುದರ ಜೊತೆಗೆ ಹೊಸಕಲ್ಪನೆಗಳು ಸೃಷ್ಟಿಯಾದವು.ಚಿಂತಕ ಸಿಗ್ಮಂಡ್ ಫ್ರಾಯ್ಡ್ ಮಾನವಕುಲದ ತಾರ್ಕಿಕತೆಯನ್ನು ಪ್ರಶ್ನಿಸಿದರು. ಪೀಠಿಕೆ ೧೮೮೦ ರಿಂದ ಹಿಂದಿನ ಜ್ಞಾನದ ಬೆಳಕಿನಲ್ಲಿ ಸಮಕಾಲೀನ ತಂತ್ರಗಳನ್ನು ಪರಿಷ್ಕರಿಸುವ ಬದಲಾಗಿ ಹಳೆಯ ತಂತ್ರಗಳನ್ನು ಬದಿಗಿರಿಸುವ ಪ್ರಯತ್ನ ಉಂಟಾಯಿತು.ಸಿಗ್ಮಂಡ್ ಫ್ರಾಯ್ಡ[೧೮೫೬-೧೯೩೯] ಮತ್ತು ಅರ್ನಸ್ಟ ಮ್ಯಾಕ್[೧೮೩೮-೧೯೧೬] ಇವರ ಸಿದ್ಧಾಂತಗಳು ಆಧುನಿಕ ಸಾಹಿತ್ಯದ ಮೇಲೆ ಮುಖ್ಯವಾಗಿ ಪರಿಣಾಮ ಭೀರಿದವು.ಮ್ಯಾಕ್ ತನ್ನ 'The Science of Mechanics'[1883]ಎಂಬ ಕೃತಿಯಲ್ಲಿ ಮನಸ್ಸು ಒಂದು ಮೂಲಭೂತವಾದ ವಿನ್ಯಾಸವನ್ನು ಹೊಂದಿದೆ ಮತ್ತು ವಿಷಯಾತ್ಮಕ ಅನುಭವ ಮನಸ್ಸಿನ ವಿವಿಧ ಭಾಗಗಳ ಪರಸ್ಪರ ಅನ್ಯೂನ್ಯಕ್ರಿಯೆಯ ಮೇಲೆ ಆಧಾರಿತವಾಗಿದೆ ಎಂಬ ವಾದವನ್ನು ಮಂಡಿಸಿದನು. ಫ್ರಾಯ್ಡ್ ನ ಪ್ರಮುಖ ಕೃತಿ 'Studies of Hysteria'[1895]ಈ ಕೃತಿಯಲ್ಲಿ ವಿವರಿಸಿದಂತೆ ಈತನ ಪ್ರಕಾರ ಎಲ್ಲ ವಿಷಯಗಳ ನೈಜತೆಯೂ ಹೊರಜಗತ್ತಿನ ದೃಷ್ಟಿಯಲ್ಲಿ ಗುರಿ ಹಾಗೂ ಸಹಜ ಪ್ರವೃತ್ತಿ ಆಧಾರಿತವಾಗಿರುತ್ತವೆ.ಅರ್ನಸ್ಟ ಮ್ಯಾಕ್ ವಿಜ್ಞಾನಿ ಹಾಗೂ ತತ್ವಜ್ಞಾನಿಯಾದ ಈತನು ಐಸ್ಯಾಕ್ ನ್ಯೂಟನ್ ಹಾಗೂ ಐನ್ ಸ್ಟೈನನ ಸಾಪೇಕ್ಷಸಿದ್ಧಾಂತದ ವಿಮರ್ಶೆಯ ಮೂಲಕ ತಾರ್ಕಿಕ ಸ್ಪಷ್ಟತೆಯ ಮೇಲೆ ಗಾಢ ಪ್ರಭಾವ ಭೀರಿದನು. ಮೊದಲು ಹಲವು ಜನರ ನಂಬಿಕೆಯಂತೆ ಬಾಹ್ಯ ಮತ್ತು ಖಚಿತವಾದ ನೈಜತೆ ವ್ಯಕ್ತಿಯನ್ನು ಪ್ರೇರೆಪಿಸುತ್ತದೆ ಉದಾಹರಣೆಗೆ ಜಾನ್ ಲಾಕ್[೧೬೩೨-೧೭೦೪]ನ [ An Essay Concerning Human Understanding][1690] ಈತನ ಪ್ರಾಯೋಗಿಕವಾದದಲ್ಲಿ [Empiricism] ನ ಪ್ರಾರಂಭದಲ್ಲಿ ಮನಸ್ಸು ಸ್ವಚ್ಛ ಹಾಗೂ ಒಂದು ಖಾಲಿ ಹಾಳೆ ಎಂದು ಹೇಳುತ್ತಾನೆ.ಫ್ರಾಯ್ಡನ ಅಧ್ಯಯನದ ವಿವರಣೆಯಂತೆ ಅಪರಿಜ್ಞಾನಯುಕ್ತ ಮನಸ್ಸು ಮೂಲ ಪ್ರೇರಣೆಗಳಿಂದ ಮತ್ತು ಅವುಗಳನ್ನು ಸರಿಯಾಗಿಸುವ ಉದ್ದೇಶಿತ ನಿರ್ಬಂದಗಳಿಂದ ಕೂಡಿರುತ್ತದೆ.ಈ ಎರಡು ಅಂಶಗಳನ್ನು Carl Jung [1875-1961]ನ ಸಾಮೂಹಿಕ ಅಪರಿಜ್ಞಾನ ಮತ್ತು ಪರಜ್ಞಾನಯುಕ್ತ ಮನಸ್ಸು ಒಳಗೊಂಡಿರುತ್ತದೆ. Charles Darwin ನ ಸಿದ್ಧಾಂತ,ಮತ್ತು ಅರಿಸ್ಟಾಟಲ್ ನ ಪರಿಕಲ್ಪನೆಯಾದ 'ಮನುಷ್ಯ ಒಂದು ಜೀವಿ ' ಎಂಬುದನ್ನು ಪುನಃಸ್ಥಾಪಿಸಿತು.Jung ನ ಸಲಹೆಯಂತೆ ಮಾನವನ ಮೂಲ ಪ್ರೇರಣೆಗಳು, ಹುಡುಗಾಟದ ಅಥವಾ ಅಜ್ಞಾನದ ಉತ್ಪನ್ನವಲ್ಲ,ಅದರೆ ಅದಕ್ಕೆ ಬದಲಾಗಿ ಅವುಗಳು ಮನುಷ್ಯ ಜೀವಿಯ ಮೂಲ ಸ್ವಭಾವದಿಂದ ಬಂದಿವೆ. Friedrich Nietzsche ಯೂ ಒಬ್ಬ ಆಧುನಿಕವಾದಿ ಈತನ ಮನೋವೈಜ್ಞಾನಿಕ ವಿಶ್ಲೇಷಣೆಯಂತೆ ಅಧಿಕಾರದ ದಾಹವೂ ಸತ್ಯ ಅಥವಾ ವಸ್ತುಗಳಿಗಿಂತ ಮುಖ್ಯವಾದದ್ದು.ಮತ್ತೊಂದು ಕಡೆ Henri Bergson[1859-1941] ನು ವೈಜ್ಞಾನಿಕ ಸಮಯ ಮತ್ತು ನೇರವಾದ, ವಿಷಯಾತ್ಮಕ ,ಕಾಲಕ್ಕೆ ತಕ್ಕ ಮಾನವನ ಅನುಭವಗಳ ನಡುವಿನ ವ್ಯತ್ಯಾಸಕ್ಕೆ ಒತ್ತನ್ನು ನೀಡಿದನು. ಈತನ ಕೃತಿಯಾದ 'Work on Time and Conciouness' ೨೦ನೇ ಶತಮಾನದ ಕಾದಂಬರಿಕಾರರ ಮೇಲೆ ಪರಿಣಾಮ ಭೀರಿತು,ಅದರಲ್ಲೂ ಯಾವ ಕಾದಂಬರಿಕಾರರು ತಮ್ಮ ಕಾದಂಬರಿಗಳಲ್ಲಿ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿದ್ದರೊ ಉದಾಹರಣೆಗೆ,Dorothy Richardson's Pointed Roofs[1915],James Joyce's,Ulysses[1922],Virginia Woolf's[1882-1941]Mrs, Dalloway[1925],To the Lighthouse[1927] ಅದರ ಜೊತೆಗೆ Bergson ರ ತತ್ವಜ್ಞಾನವಾದ ಜೀವಚೈತನ್ಯ ,ಜೀವನದ ಒತ್ತಡ ಮುಖ್ಯವಾದದ್ದು ಮತ್ತು ಇದು ಎಲ್ಲದರಲ್ಲೂ ಸಹ ಒಂದು ರೀತಿಯ ಸೃಜನಾತ್ಮಕ ವಿಕಸನವನ್ನು ತಂದಿತು.ಭೌದ್ಧಿಕ ಪ್ರಾಮುಖ್ಯತೆಯನ್ನು ನಿರಾಕರಿಸದೆ,ಈತನ ತತ್ವಜ್ಞಾನವು ಸಹಜತೆಗೆ ಒಂದು ಉತ್ತಮ ಸ್ಥಾನ ಕಲ್ಪಿಸಿತು.ಈ ಎಲ್ಲಾ ಚಿಂತಕರು ವಿಕ್ಟೋರಿಯನ್ ಚಿಂತಕರ ಮೇಲಿನ ಅಪನಂಬಿಕೆಯಿಂದ ಒಂದುಗೂಡಿದ್ದರು.