ಪುಷ್ಪಾಂಜಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಷ್ಪಾಂಜಲಿ (ಪುಷ್ಪ - ಹೂವು , ಅಂಜಲಿ - ಮಡಚಿದ ಕೈಗಳಿಂದ ಅರ್ಪಣೆ) ಭಾರತೀಯ ದೇವತೆಗಳಿಗೆ ಹೂವುಗಳ ಅರ್ಪಣೆ. ಪುಷ್ಪಾಂಜಲಿ ಒಂದು ಪ್ರದರ್ಶನದಲ್ಲಿನ ಮೊದಲ ನೃತ್ಯ. ಅದು ನೃತ್ಯದ ಅಧಿಪತಿ ನಟರಾಜ, ಗುರು, ಸಂಗೀತಗಾರರು ಮತ್ತು ಪ್ರೇಕ್ಷಕರಿಗೆ ವಂದನೆ.


ಲಕ್ಷಣಗಳು[ಬದಲಾಯಿಸಿ]

  1. ಸ್ವರ ಅಥವಾ ಶೊಲ್ಕಟ್ಟನ್ನು, ರಾಗ, ತಾಳಕ್ಕೆ ಸರಿಯಾಗಿ ಜೋಡಿಸಿ ಪುಷ್ಪಾಂಜಲಿಯನ್ನು ರಚಿಸಲಾಗುತ್ತದೆ.
  2. ಕೆಲವು ಪುಷ್ಪಾಂಜಲಿಯಲ್ಲಿ ಸಾಹಿತ್ಯವಿರುತ್ತದೆ. ಸಾಹಿತ್ಯವು ದೇವರ ಕುರಿತು ಇರುತ್ತದೆ.
  3. ಪುಷ್ಪಾಂಜಲಿಯು ಭಕ್ತಿ ಪ್ರಧಾನವಾಗಿರುತ್ತದೆ.

ನರ್ತನ ವಿಧಾನ[ಬದಲಾಯಿಸಿ]

ನರ್ತಕಿಯರು ಕೈಯಲ್ಲಿ, ಪುಷ್ಪಪುಟ ಹಸ್ತದಲ್ಲಿ ಹೂವನ್ನು ಹಿಡಿದು ರಂಗವನ್ನು ಪ್ರವೇಶಿಸಬೇಕು. ನಂತರ ಹೂವನ್ನು ಹಿಡಿದು ನೃತ್ಯ ಮಾಡುತ್ತಾ, ನಟರಾಜ, ಇಷ್ಟ ದೇವತೆ, ಗುರು-ಹಿರಿಯರಿಗೆ, ರಂಗಮಂಟಪಕ್ಕೆ ಪುಷ್ಪವನ್ನು ಅರ್ಪಿಸಿ ವಂದಿಸಬೇಕು. ಪ್ರತೀ ದೇವರಿಗೂ ಪ್ರತ್ಯೇಕ ಹೂವುಗಳನ್ನು ಅರ್ಪಿಸಬೇಕು ಎಂಬ ನಿಯಮವಿದೆ.