ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಹೃತಿಕ್ ರೋಶನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೃತಿಕ್‌ ರೋಷನ್ ೧೯೭೪ ರ ಜನವರಿ ೧೦ ರಂದು ಜನಿಸಿದರು. ಇವರು ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟರಾಗಿದ್ದಾರೆ. ೧೯೮೦ ರ ಸಿನಿಮಾಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡ ನಂತರ ರೋಷನ್ ಮೊದಲ ಬಾರಿಗೆ ೨೦೦೦ ದಲ್ಲಿ ' ಕಹೋ ನಾ ಪ್ಯಾರ್ ಹೈ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದರು. ಇದಕ್ಕಾಗಿ ರೋಷನ್‌ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಪುರುಷ ವಿಭಾಗದಲ್ಲಿನ ಆರಂಭಿಕ ನಟನಿಗೆ ನೀಡುವ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗಳಿಸಿದರು. ೨೦೦೧ ರಲ್ಲಿ ಭಾವಾವೇಶದ ಚಿತ್ರವಾದ ಕಭಿ ಖುಷಿ ಕಭಿ ಗಮ್ ನಲ್ಲಿ ಕಾಣಿಸಿಕೊಂಡರು. ಇದು ಸಾಗರೋತ್ತರ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತದ ಚಲನಚಿತ್ರವಾಯಿತು. ಅಲ್ಲದೇ ಅವರ ವಾಣಿಜ್ಯಿಕವಾಗಿ ದೊಡ್ಡ ಯಶಸ್ಸನ್ನು ಕಂಡ ಚಿತ್ರವಾಯಿತು. ಅನಂತರ 2002–03 ರಿಂದ ಅನೇಕ ಗಮನಾರ್ಹ ಅಭಿನಯಗಳನ್ನು ನೀಡುವ ಮೂಲಕ, ವಾಣಿಜ್ಯಿಕವಾಗಿ ಯಶಸ್ವಿಯಾಗಿ ಕೋಯಿ ಮಿಲ್ ಗಯಾ ಚಲನಚಿತ್ರದಲ್ಲಿ ಮತ್ತು ಅದರ ಅನಂತರದ ಕ್ರಿಶ್ ನಲ್ಲಿ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿದರು. ಇವೆರಡು ಅವರಿಗೆ ಅನೇಕ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ತಂದುಕೊಟ್ಟವು. ರೋಷನ್‌ ಅವರ ಮೂರನೆಯ ಅತ್ಯುತ್ತಮ ನಟನಿಗೆ ನೀಡುವ ಫಿಲ್ಮ್ ಫೇರ್ ಪ್ರಶಸ್ತಿಯನ್ನು ೨೦೦೬ ರಲ್ಲಿ ಪಡೆದುಕೊಂಡರು. ಇದನ್ನು ಸಾಹಸಮಯ ಚಲನಚಿತ್ರ ಧೂಮ್ ೨ ರಲ್ಲಿನ ಅವರ ಮನಮೋಹಕ ಅಭಿನಯಕ್ಕಾಗಿ ಗಳಿಸಿದರು. ತರುವಾಯ ಜೋಧಾ ಅಕ್ಬರ್ ಚಲನಚಿತ್ರದ, ಅವರ ಅಭಿನಯಕ್ಕಾಗಿ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದರು. ಈ ಚಿತ್ರಕ್ಕಾಗಿ ಗೋಲ್ಡನ್ ಮಿನ್ ಬಾರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್(ಗೋಲ್ಡನ್ ಮಿನ್ ಬಾರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ) ನಲ್ಲಿ ಅವರ ಮೊಟ್ಟ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡರು. ಈ ಸಾಧನೆಯು ಅವರನ್ನು ಹಿಂದಿ ಸಿನಿಮಾರಂಗದ ಸಮಕಾಲೀನ ನಾಯಕ ನಟರನ್ನಾಗಿಸಿತು.

ವೈಯಕ್ತಿಕ ಜೀವನ

[ಬದಲಾಯಿಸಿ]
  • ರೋಷನ್‌, ಚಲನಚಿತ್ರ ರಂಗದಲ್ಲಿ ಹೆಸರಾಂತ ವ್ಯಕ್ತಿಗಳಾದ ಪಂಜಾಬೀ ಹಿಂದೂ ಕುಟುಂಬದ ಪುತ್ರರಾಗಿ ಮುಂಬೈನಲ್ಲಿ ಜನಿಸಿದರು. ಚಲನಚಿತ್ರ ನಿರ್ದೇಶಕರಾದ ಇವರ ತಂದೆ ರಾಕೇಶ್ ರೋಷನ್‌, ಸಂಗೀತ ನಿರ್ದೇಶಕ ರೋಷನ್‌ ರವರ ಪುತ್ರರಾಗಿದ್ದಾರೆ. ಇವರ ತಾಯಿಯಾದ ಪಿಂಕಿ, ನಿರ್ಮಾಪಕ ಮತ್ತು ನಿರ್ದೇಶಕ ಜೆ. ಓಂ ಪ್ರಕಾಶ್ ರವರ ಪುತ್ರಿಯಾಗಿದ್ದಾರೆ. ಹೃತಿಕ್‍ಗೆ, ಸುನೈನಾ ಎಂಬ ಹಿರಿಯ ಸಹೋದರಿ ಇದ್ದಾರೆ. ಇವರ ಚಿಕ್ಕಪ್ಪ ರಾಜೇಶ್ ರೋಷನ್‌ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದಾರೆ.
  • ಬಾಲ್ಯದಲ್ಲಿ ರೋಷನ್‌ ಬಾಂಬೆ ಸ್ಕಾಟಿಷ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದರು. ಅನಂತರ ಅವರು ಸಿಡನ್ ಹ್ಯಾಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದರೊಂದಿಗೆ ವಾಣಿಜ್ಯದಲ್ಲಿ ಪದವಿ ಗಳಿಸಿದರು. ಒಂದು ಸಂದರ್ಶನದ ಸಂದರ್ಭದಲ್ಲಿ ಹೃತಿಕ್, ಬಿಕ್ಕಲುತನದ ಕಾರಣ ಬಾಲ್ಯದಲ್ಲಿ ಅವರಿಗೆ ಮಾನಸಿಕವಾಗಿ ಘಾಸಿಯುಂಟಾಗಿತ್ತು ಎಂದು ಹೇಳಿದ್ದಾರೆ. ಆರು ವರ್ಷದ ವಯಸ್ಸಿನಲ್ಲಿ ಕಾಣಿಸಿಕೊಂಡ ಈ ನ್ಯೂನತೆ ಇಂದೂ ಕೂಡ ಅವರಿಗೆ ಉಪದ್ರವವನ್ನುಂಟುಮಾಡುತ್ತಿದೆ. "ಶಾಲೆಯಲ್ಲಿ ಮೌಖಿಕ ಪರೀಕ್ಷೆ ಇದ್ದರೆ, ಅಂದು ನಾನು ಶಾಲೆಗೆ ಹೋಗುತ್ತಿರಲಿಲ್ಲ, ಉದ್ದೇಶಪೂರ್ವಕವಾಗಿಯೇ ಹುಷಾರ್ ತಪ್ಪುತ್ತಿದ್ದೆ, ನನ್ನ ಕೈ ಅನ್ನು ಮುರಿದುಕೊಳ್ಳುತ್ತಿದ್ದೆ, ಉಳುಕಿಸಿಕೊಳ್ಳುತ್ತಿದೆ" ಎಂದು ನಟ ಹೃತಿಕ್ ಹೇಳಿಕೊಂಡಿದ್ದಾರೆ. ಪ್ರತಿ ದಿನ ವಾಕ್ ಚಿಕಿತ್ಸೆಗಳನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ ನಂತರ ಕ್ರಮೇಣ ಎಲ್ಲವೂ ಸರಿಯಾದವು, ಎಂದು ಅವರು ಹೇಳಿದರು.
  • ರೋಷನ್‌ ಸುಸೇನ್ ರೋಷನ್ ರನ್ನು ಮದುವೆಯಾಗಿದ್ದು, ಇವರು ಸುಸೇನ್ ರೋಷನ್‌'ಸ್ ಹೌಸ್ ಆಫ್ ಡಿಸೈನ್ ನ ಒಡತಿ ಮತ್ತು ನಟ ಸಂಜಯ್ ಖಾನ್ ರ ಪುತ್ರಿಯಾಗಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದು, ಅವರಲ್ಲಿ ರೆಹಾನ್ 2006 ರಲ್ಲಿ ಮತ್ತು ರಿಧಾನ್ 2008ರಲ್ಲಿ ಜನಿಸಿದರು .ರೋಷನ್‌ ಅವರ ಬಲಗೈಯಲ್ಲಿ ಎರಡು ಹೆಬ್ಬೆರೆಳುಗಳಿವೆ. ಸಾಮಾನ್ಯವಾಗಿ ಅದನ್ನು ಅವರ ಸಿನಿಮಾಗಳಲ್ಲಿ ತೋರದಂತೆ ನೋಡಿಕೊಂಡರೂ ಕೂಡ ಇದು ಕೋಯಿ ಮಿಲ್ ಗಯಾ ಚಿತ್ರದಲ್ಲಿ ಕಾಣಿಸಿಕೊಂಡಿತು. ಅಲ್ಲದೇ ಹೊರಗ್ರಹದಿಂದ ಬಂದ ಪ್ರಾಣಿಗೂ ಎರಡು ಹೆಬ್ಬೆರೆಳುಗಳನ್ನು ಸೃಷ್ಟಿಸುವ ಮೂಲಕ ಇದನ್ನು ದೃಶ್ಯದ ಚಿಕ್ಕ ವಸ್ತುವಾಗಿ ಬಳಸಲಾಯಿತು.

ಸಿನಿಮಾ ಜೀವನ

[ಬದಲಾಯಿಸಿ]
  • ೧೯೮೦ ರ ಹೊತ್ತಿನ 'ಆಶಾ' ಚಲನಚಿತ್ರದಲ್ಲಿ ಆರು ವರ್ಷದ ಬಾಲಕನ ಪಾತ್ರವು ರೋಷನ್‌ ಅಭಿನಯಿಸಿದ ಮೊದಲ ಚಲನಚಿತ್ರದ ಪಾತ್ರವಾಗಿದೆ. ಈ ಚಲನಚಿತ್ರದ ನೃತ್ಯದ ಸಂದರ್ಭದಲ್ಲಿ ಅವರು ಗೌರವ ನೃತ್ಯಗಾರನಾಗಿ ಕಾಣಿಸಿಕೊಂಡಿದ್ದಾರೆ.
  • ಅನಂತರ ರೋಷನ್‌, 'ಆಪ್ ಕೆ ದಿವಾನೆ' (೧೯೮೦) ಮತ್ತು 'ಭಗವಾನ್ ದಾದಾ' (೧೯೮೬) ದಂತಹ ಚಿತ್ರಗಳಲ್ಲಿ ಸಣ್ಣ, ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರು. ಇವೆರಡಲ್ಲೂ ಇವರ ತಂದೆ ರಾಕೇಶ್ ರೋಷನ್‌ ನಾಯಕ ನಟರಾಗಿ ಅಭಿನಯಿಸಿದ್ದಾರೆ.
  • ತರುವಾಯ ಅವರ ತಂದೆಯ 'ಕರಣ್ ಅರ್ಜುನ್' (೧೯೯೫) ಮತ್ತು 'ಕೋಯ್ಲಾ' (೧೯೯೭) ಚಿತ್ರಗಳ ನಿರ್ಮಾಣದಲ್ಲಿ ನೆರವಾಗುವ ಮೂಲಕ ಸಹಾಯಕ ನಿರ್ದೇಶಕರಾದರು.
  • ೨೦೦೦ ನೆಯ ಇಸವಿಯಲ್ಲಿ ರೋಷನ್‌ ಮೊಟ್ಟ ಮೊದಲ ಬಾರಿಗೆ ಕಹೋ ನಾ ಪ್ಯಾರ್ ಹೈ ಚಲನಚಿತ್ರದಲ್ಲಿ, ಮತ್ತೋರ್ವ ಆರಂಭಿಕ ನಟಿ ಅಮೀಶಾ ಪಟೇಲ್ ಎದುರು ನಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಲನಚಿತ್ರವನ್ನು ಅವರ ತಂದೆಯೇ ನಿರ್ದೇಶಿಸಿದ್ದು, ಇದರಲ್ಲಿ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಗುವ ಮೂಲಕ ೨೦೦೦ ಇಸವಿಯ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರವೆನಿಸಿತು. ಅಲ್ಲದೇ ಫಿಲ್ಮ್ ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿ ಕೊಟ್ಟಿತು. ರೋಷನ್‌ ರ ಅಭಿನಯವನ್ನು ಹೆಚ್ಚಾಗಿ ಮೆಚ್ಚಿದರಲ್ಲದೇ, ಈ ಚಲನಚಿತ್ರ ರಾತ್ರೋರಾತ್ರಿ ಅವರನ್ನು ಜನಪ್ರಿಯ ತಾರೆಯನ್ನಾಗಿಸಿತು. ಅಂತಿಮವಾಗಿ ಈ ಪಾತ್ರದ ಅಭಿನಯಕ್ಕಾಗಿ ಅವರು ಫಿಲ್ಮ್ ಫೇರ್ ಅತ್ಯುತ್ತಮ ಆರಂಭಿಕ ನಟ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಎರಡನ್ನೂ ಪಡೆದುಕೊಂಡರು. ಇದು ಅತ್ಯಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಬಾಲಿವುಡ್ ಚಲನಚಿತ್ರವಾಗುವ- ೧೦೨ ಪ್ರಶಸ್ತಿಗಳ ಮೂಲಕ, ಇದರ ಹೆಸರು 2003 ರಲ್ಲಿ ಲಿಮ್ಕಾ ದಾಖಲೆಗಳ ಪುಸ್ತಕವನ್ನು ಸೇರಿತು.
  • ಆ ವರ್ಷದ ನಂತರ ರೋಷನ್‌ ಖಾಲೀದ್ ಮೊಹಮದ್ ರವರ ಫಿಜಾ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ ಕೂಡ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. ಅಲ್ಲದೇ ಇದು ಫಿಲ್ಮ್ ಫೇರ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ನಿಗಾಗಿರುವ ಮತ್ತೊಂದು ನಾಮನಿರ್ದೇಶನವನ್ನು ಗಳಿಸಿಕೊಟ್ಟಿತು.
  • ಇಂಡಿಯಾFM ನಿಂದ ತರಣ್ ಆದರ್ಶ್, ರೋಷನ್ ರ ಅಭಿನಯದ ಬಗ್ಗೆ ಹೀಗೆ ಬರೆಯುತ್ತಾರೆ: "ನಿಸ್ಸಂದೇಹವಾಗಿ ಹೃತಿಕ್‌ ರೋಷನ್‌ ಈ ಚಲನಚಿತ್ರದ ಮೂಲಾಧಾರವಾಗಿದ್ದಾರೆ. ಅವರ ಆಂಗಿಕ ನಿಲುವು, ಮಾತಿನ ಶೈಲಿ, ಅಭಿವ್ಯಕ್ತಪಡಿಸುವ ರೀತಿ, ಒಟ್ಟಾಗಿ ಅವರ ಪಾತ್ರವು ಸಂಪೂರ್ಣ ಮೆಚ್ಚುಗೆಗೆ ಅರ್ಹವಾಗಿದೆ. ಈ ಚಿತ್ರದೊಂದಿಗೆ ಹೃತಿಕ್, ತಾವು ಕೇವಲ ಆಧುನಿಕ ಉತ್ಸಾಹದ, ರಭಸದ ಮತ್ತು ಬೇಡಿಕೆಯ ಲವರ್ ಬಾಯ್ ಮಾತ್ರವಲ್ಲದೇ, ಅದಕ್ಕಿಂತ ಹೆಚ್ಚಿನ ಪ್ರತಿಭೆಯನ್ನೂ ಹೊಂದಿರುವುದಾಗಿ ಸಾಬೀತುಪಡಿಸಿದ್ದಾರೆ. ಇವರ ಪ್ರತಿಭೆ ಅನೇಕ ದೃಶ್ಯಗಳಲ್ಲಿ ಹೊರ ಬಂದಿದೆ, ಅದರಲ್ಲೂ ವಿಶೇಷವಾಗಿ ಕರಿಶ್ಮಾರೊಂದಿಗಿನ ದೃಶ್ಯಗಳಲ್ಲಿ ಕಾಣಬಹುದಾಗಿದೆ. ಫಿಜಾ ಸಂಪೂರ್ಣವಾಗಿ ಹೃತಿಕ್ ರವರಿಗೆ ಸೇರಿದ್ದು. ಅವರು ಇದನ್ನು ಬಹುಮಟ್ಟಿಗೆ ಯಶಸ್ಸಿಯ ಪ್ರಮಾಣಕ್ಕನುಗುಣವಾಗಿ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಸ್ಸಂದೇಹವಾಗಿ ಇದೊಂದು ಅದ್ಭುತ, ಪ್ರತಿಭಾಪೂರ್ಣ ಅಭಿನಯ!" ಎಂದು ಉದ್ಘರಿಸಿದ್ದಾರೆ.
  • ೨೦೦೩ ರಲ್ಲಿ ಅವರು ವೈಜ್ಞಾನಿಕ ಕಾದಂಬರಿಯಾಧಾರಿತ ಕೋಯಿ ಮಿಲ್ ಗಯಾ' ಎಂಬ ಚಲನಚಿತ್ರದೊಂದಿಗೆ ಮರಳಿದರು. ಈ ಸಿನಿಮಾದಲ್ಲಿ ಮಾನಸಿಕ ಅಸ್ವಸ್ಥ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೂಡ ವರ್ಷದ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರವಾಯಿತು. ಅಲ್ಲದೇ ಅವರ ಎರಡನೆಯ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಮೊದಲ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿತು.
  • [೧೫] ತರಣ್ ಆದರ್ಶ್ ರೋಷನ್ ರ ಅಭಿನಯ ಕುರಿತು ಹೀಗೆ ಬರೆಯುತ್ತಾರೆ: "ಹೃತಿಕ್‌ ರೋಷನ್‌ ಚಿತ್ರದ ಮೇಲೆ ತಮ್ಮ ಗಾಢ ಪ್ರಭಾವ ಬೀರಿದ್ದಾರೆ, ಅಲ್ಲದೇ ಶಕ್ತಿಯುತವಾದ ಅಭಿನಯದೊಂದಿಗೆ ಚಿತ್ರವನ್ನು ಹಿಡಿದಿಟ್ಟಿದ್ದಾರೆ. ಮಾನಸಿಕ ವಿಕಲತೆ ಇರುವ ಪಾತ್ರವನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಆದರೆ ಈ ನಟ, ಮೀನು ನೀರಿಗೆ ಧುಮುಕುವಂತೆ ಇದನ್ನು ತೆಗೆದುಕೊಂಡಿದ್ದಾರೆ. ಅವರು ಜಿರೋದಿಂದ ಹಿರೋ ಆಗಿ ಗೆಲ್ಲುವ ಪಾತ್ರವನ್ನು ಚೆನ್ನಾಗಿ, ಅಪವಾದವೆಂಬಂತೆ ಅಪರೂಪವಾಗಿ ನಿಭಾಯಿಸಿದ್ದಾರೆ. ಒಬ್ಬ ನಟನಾಗಿ ಹುರುಳಿರದ ಈ ಪಾತ್ರದಲ್ಲಿಯೂ ಅವರ ಈ ಅದ್ಭುತ ಅಭಿನಯದಿಂದ ಅಚ್ಚರಿಗೊಳಿಸಿದ್ದಾರೆ."