ವಿಷಯಕ್ಕೆ ಹೋಗು

ವಾರ್ತಾ ಭಾರತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಾತಾ೯ ಭಾರತಿ ಇಂದ ಪುನರ್ನಿರ್ದೇಶಿತ)
ವಾರ್ತಾ ಭಾರತಿ
ವಿಧದೈನಂದಿನ ಪತ್ರಿಕೆ
ಸ್ವರೂಪಬ್ರಾಡ್‌ಶೀಟ್
ಯಜಮಾನಸಮುದಾಯ ಮಾಧ್ಯಮ ಟ್ರಸ್ಟ್
ಸ್ಥಾಪಕಅಬ್ದುಸ್ಸಲಾಂ ಪುತ್ತಿಗೆ
ಪ್ರಕಾಶಕಅಬ್ದುಸ್ಸಲಾಂ ಪುತ್ತಿಗೆ
ಸಂಪಾದಕಅಬ್ದುಸ್ಸಲಾಂ ಪುತ್ತಿಗೆ
ಸುದ್ದಿ ಸಂಪಾದಕಬಿ.ಎಂ. ಬಶೀರ್
ಸ್ಥಾಪನೆ೨೯ ಆಗಸ್ಟ್ ೨೦೦೩
ಭಾಷೆಕನ್ನಡ
ಪ್ರಧಾನ ಕಚೇರಿಮಂಗಳೂರು, ಕರ್ನಾಟಕ, ಭಾರತ.
ಅಧಿಕೃತ ಜಾಲತಾಣwww.varthabharati.in
ಸಂವಾದಾತ್ಮಕ ನಿರ್ದೇಶಕepaper.varthabharati.in

ವಾರ್ತಾ ಭಾರತಿ ಇದು ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗದಿಂದ ಏಕಕಾಲದಲ್ಲಿ ಪ್ರಕಟವಾಗುವ ಕನ್ನಡ ದಿನಪತ್ರಿಕೆಯಾಗಿದೆ.[೧] ಇದನ್ನು ಆಗಸ್ಟ್ ೨೦೦೩ ರಲ್ಲಿ, ಪ್ರಾರಂಭಿಸಲಾಯಿತು. ಇದು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಕರ್ನಾಟಕದ ಒಂಬತ್ತು ರಾಜ್ಯ ಮಟ್ಟದ ಕನ್ನಡ ದಿನಪತ್ರಿಕೆಗಳಲ್ಲಿ ಒಂದಾಗಿದೆ.[೨]

ವಂಚಿತ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಧ್ವನಿ ಮತ್ತು ಸೂಕ್ತ ಪ್ರಾತಿನಿಧ್ಯವನ್ನು ಒದಗಿಸುವುದು ಇದರ ಮುಖ್ಯ ಗಮನವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಯು.ಆರ್.ಅನಂತಮೂರ್ತಿ ಅವರು ಈ ಪತ್ರಿಕೆಗೆ ನಿಯಮಿತವಾಗಿ ಕೊಡುಗೆ ನೀಡುತ್ತಿದ್ದರು. ಸಾರ್ವಜನಿಕ ಸಭೆಯಲ್ಲಿ ಅವರು ವಾರ್ತಾ ಭಾರತಿಯನ್ನು "ಕರ್ನಾಟಕದ ಕಾವಲುಗಾರ" ಎಂದು ಕರೆದರು. ವಾರ್ತಾ ಭಾರತಿಯು ಇಡೀ ರಾಷ್ಟ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದೆ.[೩] ಅಬ್ದುಸ್ಸಲಾಂ ಪುತ್ತಿಗೆಯವರು ಮತ್ತು ವಾರ್ತಾಭಾರತಿಯ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತರಾದ ವಡ್ಡರ್ಸೆ ರಘುರಾಮ ಶೆಟ್ಟಿಯವರು ೧೯೮೪ ರಲ್ಲಿ, ಮುಂಗಾರು ಕನ್ನಡ ದಿನಪತ್ರಿಕೆಯನ್ನು ಪ್ರಾರಂಭಿಸಿದರು.[೪] ಸಮಾಜದ ಎಲ್ಲಾ ಜಾತಿಗಳು, ಸಮುದಾಯಗಳು ಮತ್ತು ವರ್ಗಗಳಿಗೆ ನ್ಯಾಯಯುತ ಪ್ರಾತಿನಿಧ್ಯವನ್ನು ಒದಗಿಸುವ ಉದಾರ ನೀತಿಗೆ ಮುಂಗಾರು ಕನ್ನಡ ದಿನಪತ್ರಿಕೆಯು ಹೆಸರುವಾಸಿಯಾಗಿತ್ತು. ಇದು ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಹಿಂದುಳಿದ ಸಮುದಾಯಗಳ ಹಲವಾರು ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಮೂಲಕ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮಹತ್ವದ ಹುರುಪು ಮೂಡಿಸಿದೆ.[೫]

ಯು.ಆರ್.ಅನಂತಮೂರ್ತಿ, ಯು.ಬಿ.ಬಣಕಾರ್, ಡಾ.ನಿರಂಜನ ಆರಾಧ್ಯ ಸೇರಿದಂತೆ ಹಲವಾರು ಪ್ರಸಿದ್ಧ ಕನ್ನಡ ಎಡಪಂಥೀಯ, ಸಾಮಾಜಿಕ ಕಾರ್ಯಕರ್ತರು ಮತ್ತು ದಲಿತ ಸಿದ್ಧಾಂತಿಗಳು ಪತ್ರಿಕೆಗೆ ನಿಯಮಿತವಾಗಿ ಬರೆಯುತ್ತಾರೆ.[೬] ೨೦೧೭ ರಲ್ಲಿ, ವಾರ್ತಾ ಭಾರತಿ ಪತ್ರಕರ್ತನನ್ನು ದಕ್ಷಿಣ ಕನ್ನಡ ಪೊಲೀಸರು ವಶಕ್ಕೆ ತೆಗೆದುಕೊಂಡು ಕಾರಣ ಪತ್ರವನ್ನು ನೀಡಿದರು. ನಂತರ, ಈ ಪತ್ರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.[೭] ೨೦೧೭ ರಲ್ಲಿ, ವಾರ್ತಾ ಭಾರತಿಯ ಸಾಮಾಜಿಕ ಮಾಧ್ಯಮ ಪುಟವನ್ನು ಫೇಸ್‌ಬುಕ್‌ ನಿರ್ಬಂಧಿಸಿತು. ನಂತರ, ಅದನ್ನು ಮರುಸ್ಥಾಪಿಸಲಾಗಿತ್ತಾದರೂ, ಅದು ಏಕೆ ಸಂಭವಿಸಿತು ಎಂಬುದಕ್ಕೆ ಸ್ಪಷ್ಟ ವಿವರಣೆ ಇರಲಿಲ್ಲ.[೮]

ವಿಶೇಷ ಸಂಚಿಕೆಗಳು[ಬದಲಾಯಿಸಿ]

ವಾರ್ತಾ ಭಾರತಿಯ ಪ್ರತಿಗಳು.
"ಮಂಗಳೂರಿನ ಬೈಕಂಪಾಡಿಯಲ್ಲಿರುವ ಪ್ರಧಾನ ಕಚೇರಿ ಕಟ್ಟಡ".
  • ಅಕ್ಟೋಬರ್ ೫, ೨೦೧೫ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಚೇರಿಯಲ್ಲಿ ವಾರ್ತಾ ಭಾರತಿಯ ೧೩ ನೇ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು.
  • ಅಕ್ಟೋಬರ್ ೧೨, ೨೦೧೪ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಚೇರಿಯಲ್ಲಿ ವಾರ್ತಾ ಭಾರತಿಯ ೧೨ ನೇ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು.[೧೦]

ಪ್ರಶಸ್ತಿಗಳು ಮತ್ತು ಪ್ರಶಂಸೆಗಳು[ಬದಲಾಯಿಸಿ]

  • ದಿ ಹಿಂದೂ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕರಾದ ಎನ್. ರಾಮ್ ಆವರು, ದಶಕಕ್ಕೂ ಹೆಚ್ಚು ಕಾಲ ಸಮಾಜದ ದುರ್ಬಲ ವರ್ಗದವರ ದನಿಯಾಗುತ್ತಿರುವ ದಿನಪತ್ರಿಕೆಯನ್ನು ಅಭಿನಂದಿಸಿದರು.[೧೩]
  • ವಾರ್ತಾ ಭಾರತಿಯು ಮುಸ್ಲಿಂ ಆಡಳಿತ ಮಂಡಳಿ ಪತ್ರಿಕೆಯಾಗಿದ್ದರೂ ಸಮಾಜದ ಎಲ್ಲಾ ವರ್ಗಗಳ ಪರವಾಗಿ ಪ್ರಚಾರ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
  • ಮಹೇಶ್ ಭಟ್ ಅವರು "ಭಾರತದಲ್ಲಿ ಜಾತ್ಯತೀತತೆ ಇನ್ನೂ ಜೀವಂತವಾಗಿದೆ ಮತ್ತು ವಾರ್ತಾ ಭಾರತಿ ಮಾಡುತ್ತಿರುವಂತೆ ನಾವು ಜಾತ್ಯತೀತ ವಿರೋಧಿಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಪ್ರತಿ ಭಾರತೀಯರು ಮಾಡಬೇಕಾದ ಕೆಲಸವನ್ನು ವಾರ್ತಾ ಭಾರತಿ ಮಾಡುತ್ತಿದೆ" ಎಂದು ಹೇಳುವ ಮೂಲಕ ವಾರ್ತಾ ಭಾರತಿಯನ್ನು ಶ್ಲಾಘಿಸಿದರು.[೧೪][೧೫]

ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು[ಬದಲಾಯಿಸಿ]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "jdyellowpages.com".
  2. "Home - Department of Information and Public Relations". dipr.karnataka.gov.in. Retrieved 2022-07-15.
  3. Staff Correspondent (2 September 2012). "People should respect all religions, says Heggade". The Hindu.
  4. "Noted journalist Vaddarse is dead | Bengaluru News - Times of India".
  5. "Vaddarse Raghurama Shetty : Remembering a Fearless Journo". daijiworld.com.
  6. "The Muslim Kannadiga". twocircles.net. 16 August 2008.
  7. Ameerudheen, T. A. "In coastal Karnataka, arrest of journalist for 'false report' leads to claims of police vendetta". Scroll.in (in ಅಮೆರಿಕನ್ ಇಂಗ್ಲಿಷ್). Retrieved 2021-09-13.
  8. Ameerudheen, T. A. "No clear explanation: Why Facebook blocked a Kannada newspaper twice in the last 30 days". Scroll.in (in ಅಮೆರಿಕನ್ ಇಂಗ್ಲಿಷ್). Retrieved 2021-09-13.
  9. "Stand up before it is too late: URA". Deccan Herald. 15 September 2012.
  10. Naeem Siddeeq. "Media must support moderate voices: Mahesh Bhatt at 'Vartha Bharati' decennial celebration". Coastaldigest.com.
  11. "Film maker and human rights activist Mahesh Bhat will inaugurate the readers' convention of 'Vartha Bharathi' Kannada daily at Town Hall here on September 14. Central University of Karnataka chancellor UR Ananthamurthy will release the 10th annual commemorative issue of the daily". The Times of India.
  12. Staff Reporter (28 September 2013). "Too few Dalits in media: Ram". The Hindu.
  13. Naeem Siddeeq. "Vartha Bharathi celebrates 11th anniversary". Coastaldigest.com.
  14. "Mangalore: Mahesh Bhatt Lauds Vartha Bharathi on Completing a Decade". daijiworld.com.
  15. Naeem Siddeeq. "Mahesh Bhatt to inaugurate 'Vartha Bharati' readers' convention". Coastaldigest.com.
  16. "Vartha Bharathi awarded by Transparency International". twocircles.net. 26 March 2009.

ಬಾಹ್ಯ ಕೊಂಡಿಗಳು[ಬದಲಾಯಿಸಿ]