ಹೊಳೇನರಸೀಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹೊಳೆನರಸೀಪುರ
India-locator-map-blank.svg
Red pog.svg
ಹೊಳೆನರಸೀಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಹಾಸನ
ನಿರ್ದೇಶಾಂಕಗಳು 12.783° N 76.243° E
ವಿಸ್ತಾರ
 - ಎತ್ತರ
೨.೫೦ km²
 - ೮೪೯ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೨೭,೦೧೮
 - ೧೦೮೦೭.೨/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೩೨೧೧
 - +೦೮೧೭೫
 - ಕೆಎ-೧೩

ಹೊಳೆನರಸೀಪುರ ಹಾಸನ ಜಿಲ್ಲೆಯ ಒಂದು ತಾಲ್ಲುಕು ಕೇಂದ್ರ.ಈ ಊರನ್ನು ನರಸೀಪುರ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಹೇಮಾವತಿ ನದಿ ಹರಿಯುವುದರಿಂದ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.ಪುರಸಭೆ ಇಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ.ಇಡೀ ಊರನ್ನು ಕೋಟೆ ಮತ್ತು ಪೇಟೆ ವಿಭಜಿಸಲಾಗಿದೆ. ಈ ತಾಲ್ಲೂಕಿನ ಮೂರು ಹೋಬಳಿಗಳು: ಹಳೇಕೋಟೆ, ಹಳ್ಳಿಮೈಸೂರು ಮತ್ತು ಕಸಬಾ. ಹೊಳೆನರಸೀಪುರ ಪಟ್ಟಣವು ರಾಜ್ಯ ಹೆದ್ದಾರಿ ಸಂಖ್ಯೆ 57ರಲ್ಲಿ ನೆಲೆಯಲ್ಲಿದೆ ಹಾಗು ಹಾಸನ ಮತ್ತು ಮೈಸೂರು ರೈಲ್ವೆ ದಾರಿಯ ಪೂರ್ವವಲಯದಲ್ಲಿದೆ. ಹೊಳೆನರಸೀಪುರವು ದಕ್ಷಿಣಾಭಿಮುಖವಾಗಿ ಅಭಿವೃದ್ಧಿ ಹೊಂದಿದೆ. ಈ ಪಟ್ಟಣವು ಮೂರು ನಗರ ವಲಯಗಳನ್ನು ಹೊಂದಿದೆ, ಕೋಟೆ ಪ್ರದೇಶ ಜತೆಗೆ ದೇವಾಲಯ ಕೇಂದ್ರಬಿಂದುವಾಗಿದೆ.ಉತ್ತರದ ಕೋಟೆಯು ಮತ್ತು ರೈಲ್ವೆದಾರಿಯ ಮಧ್ಯೆ ಅಭಿವೃದ್ದಿಯಾಗಿದೆ. .ಶ್ರೀರಾಮದೇವರಕಟ್ಟೆಯ ನೀರಾವರಿ ಕೆಲಸಗಳಿಗೆ ಅನುಕೂಲಕರವಾಗಿದೆ. ಹೊಳೆನರಸೀಪುರದ ಈಗಿನ ಜನಸಂಖ್ಯೆ 27,024 ಇದ್ದು, ಇದು 2011ರ ವೇಳೆಗೆ 65000 ಮುಟ್ಟುವ ಸಾಧ್ಯತೆಯಿದೆ. ಭಾರತದ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರು ಹರದನಹಳ್ಳಿಯು ಹಳೇಕೋಟೆ ಹೋಬಳಿಯಲ್ಲಿದೆ. ಹಳೇಕೋಟೆಯ ಪಕ್ಕದಲ್ಲಿಯೇ ಇರುವ ಮಾವಿನಕೆರೆಯು ಪುಣ್ಯಕ್ಷೇತ್ರವಾಗಿದ್ದು, ಮಾವಿನಕೆರೆ ರಂಗನಾಥನಬೆಟ್ಟಕ್ಕೆ ಇತ್ತೀಚೆಗೆ ರಸ್ತೆ ಮಾಡಲಾಗಿದೆ. ಹರಿಹರಪುರವು ಇದೇ ಹೋಬಳಿಗೆ ಸೇರಿದ ಪ್ರಮುಖ ಪಂಚಾಯಿತಿ ಕೇಂದ್ರವಾಗಿದ್ದು, ಹರಿಹರಪುರದ ಗ್ರಾಮದೇವತೆ ಉಡುಸಲಮ್ಮ-ದುರ್ಗಾಪರಮೇಶ್ವರಿ ದೇವತೆಗಳಿಗೆ ಹೊರರಾಜ್ಯದಲ್ಲೂ ಭಕ್ತರಿದ್ದಾರೆ.

ಇತಿಹಾಸ[ಬದಲಾಯಿಸಿ]

ಈ ಊರನ್ನು ಹಿಂದೆ ನರಸಿಂಹ ನಾಯಕ ಎಂಬ ರಾಜನು ಆಳ್ವಿಕೆ ನಡೆಸಿದ್ದನು. ಗ್ರಾಮ ದೇವತೆ ನರಸಿಂಹ ಸ್ವಾಮಿ ಆಗಿರುವುದರಿಂದ ಮತ್ತು ಹೊಳೆಯ ದಂಡೆಯಲ್ಲಿ ಈ ಪಟ್ಟಣ ಇರುವುದರಿಂದ ಈ ಪಟ್ಟಣಕ್ಕೆ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ತಾಲೂಕಿನ ಅತಿ ದೊಡ್ಡ ಗ್ರಾಮ ತಾತನಹಳ್ಳಿ.. ಇದು ಹೊಳೆನರಸೀಪುರದಿ೦ದ ಸುಮಾರು ೮ ಕಿಮಿ ದೂರ ಇದೆ. ಇಲ್ಲಿಯ ಮುಖ್ಯ ದೇವಾಲಯ ಶ್ರಿ ಲಕ್ಷ್ಮಿ ತಾತೇಶ್ವರ ದೇವಾಲಯ. ಇಲ್ಲಿ ಪ್ರತಿ ವರುಶ ಯುಗಾದಿ ಕಳೆದ ೯ ನೆಯ ದಿನ ದೇವಿಯ ವೈಭವದ ಜಾತ್ರೆ ನಡೆಯುತ್ತದೆ.

ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಪುರಾತನ ಶ್ರೀ ನರಸಿಂಹ ಸ್ವಾಮಿ ದೇವಾಲಯ ಇಲ್ಲಿನ ಆಕರ್ಷಣೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಮಾವಿನಕೆರೆ ಗ್ರಾಮದಲ್ಲಿ ರಂಗನಾಥ ಸ್ವಾಮಿ ಜಾತ್ರ ಮಹೋತ್ಸವ ಜರುತಗುತ್ತದೆ.

ಜನಜೀವನ[ಬದಲಾಯಿಸಿ]

ಕೃಷಿ ಇಲ್ಲಿನ ಪ್ರಮುಖ ಕಸುಬು. ಭತ್ತ,ಕಬ್ಬು ಇತ್ಯಾದಿಗಳನ್ನು ಬೆಳೆಯಲಾಗುತ್ತದೆ. ಇದು ಒಂದು ವ್ಯವಸಾಯ ಪ್ರಧಾನವಾದ ಪಟ್ಟಣ.ಹೇಮಾವತಿ ಹೊಳೆಯು ಪಟ್ಟಣದ ಪಕ್ಕದಲ್ಲಿ ಹರಿಯುತ್ತಿದ್ದು ಇದರಿಂದ ನೀರಾವರಿ ಸೌಲಭ್ಯ ಹೆಚ್ಚಾಗಿ ಕಂಡುಬರುತ್ತದೆ. ಹೊಳೆನರಸೀಪುರ ಸುತ್ತಮುತ್ತಲು ಹೂಲಗದ್ದೆಗಳಿಗೆ ಅನುಕೂಲಕರವಾಗಿದೆ. ಇದರಿಂದ ವ್ಯಾಪಾರ ಕೇಂದ್ರ ಮತ್ತು ವ್ಯವಸಾಯ ಪ್ರಧಾನ ಕೈಗಾರಿಕೆಗಳಿಗೆ ಪ್ರಾಮುಖ್ಯತೆ ಪಡೆದಿದೆ. ಹೇಮಾವತಿ ಹೊಳೆಯಿಂದ ನೀರಾವರಿ ಚಟುವಟಿಕೆಗಳು ಹಲುವು ಕಡೆ ವಿಸ್ತಾರವಾಗಿದೆ. ಹೊಳೆನರಸೀಪುರವು ಒಂದು ಆಕರ್ಷಣಿಯವಾದ ವಸತಿ ಕೇಂದ್ರವಾಗಿದೆ.

ಪ್ರಮುಖ ಕೈಗಾರಿಕೆಗಳು[ಬದಲಾಯಿಸಿ]

ಹೊಳೇನರಸೀಪುರ ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾದ ಬತ್ತಕ್ಕೆ ಪೂರಕವಾದ ಹಲವಾರು ಅಕ್ಕಿಗಿರಣಿಗಳು ತಾಲ್ಲೂಕಿನಾದ್ಯಂತ ಹರಡಿದೆ.

ಶಿಕ್ಷಣ[ಬದಲಾಯಿಸಿ]

ಹೊಳೆನರಸೀಪುರದಲ್ಲಿ ಕಲೆ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿರುವ ಕಾಲೇಜುಗಳಿವೆ. ಮಹಿಳೆಯರಿಗಾಗಿ ಪ್ರತ್ಯೇಕ ಪ್ರಥಮದರ್ಜೆ ಕಾಲೇಜಿದೆ. ಇವಲ್ಲದೇ ಹಲವು ಖಾಸಗಿ ಶಿಕ್ಷಣಸಂಸ್ಥೆಗಳು ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳು ಕೆಲಸಮಾಡುತ್ತಿವೆ.

ಬಾಹ್ಯಾಪುಟಗಳು[ಬದಲಾಯಿಸಿ]

೧.ಹೊಳೆನರಸೀಪುರ ೨.ಹಾಸನ ಇತಿಹಾಸ ೩.ಹೊಯ್ಸಳ ಟೂರಿಸಮ್