ಸಕಲೇಶಪುರ
ವಿಕಿಪೀಡಿಯ ಇಂದ
ಸಕಲೇಶಪುರ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬೆಂಗಳೂರಿನಿಂದ ೨೩೦ ಕಿ.ಮೀ. ದೂರದಲ್ಲಿದೆ. ಮಲೆನಾಡು - ಇದು ಪಶ್ಚಿಮ ಘಟ್ಟಗಳ ಎತ್ತರದ ಶಿಖರಗಳಲ್ಲಿ ಕೆಲವನ್ನು ಒಳಗೊಂಡಿದೆ;ದಕ್ಷಿಣದ ಕಡೆಗೆ ಸ್ವಲ್ಪ ಇಳಿಜಾರಿನಲ್ಲಿರುವ ಪ್ರದೇಶ.ಇಲ್ಲಿನ ಮುಖ್ಯ ನದಿ ಹೇಮಾವತಿ, ಮುಂದೆ ಇದು ಕಾವೇರಿ ನದಿಯನ್ನು ಸೇರುತ್ತದೆ. ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದಲ್ಲಿ ದಟ್ಟವಾದ ಕಾಡುಗಳು ಹಾಗೂ ವನ್ಯಜೀವ ಯಥೇಚ್ಛವಾಗಿದೆ.ಇಲ್ಲಿ ಅನೇಕ ಕಾಫಿ ತೋಟಗಳಿದ್ದು, ಮೊದಲ ಕಾಫಿ ತೋಟವನ್ನು ೧೮೪೩ ರಲ್ಲಿ ಸ್ಥಾಪಿಸಲಾಗಿತ್ತು. ಇಲ್ಲಿನ ಮುಖ್ಯ ಬೆಳೆ ಕಾಫಿ,ಎಲಕ್ಕಿ , ಮೆಣಸು ಮತ್ತು ಶುಂಠಿ.ಹಾಗೂ ಸುಂದರ ಪ್ರವಾಸಿ ತಾಣ...
[ಬದಲಾಯಿಸಿ] ಬಾಹ್ಯಾಪುಟಗಳು
೧. ಹಾಸನ ಇತಿಹಾಸ ೨. ಹೊಯ್ಸಳ ಟೂರಿಸಮ್
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |