ಹೈಫ
ವಿಕಿಪೀಡಿಯ ಇಂದ
ಹೈಫ (ಹೀಬ್ರೂ: חֵיפָה, Hebrew pronunciation: [χeiˈfä], Ḥefa; ಅರೇಬಿಕ್: حيفا Ḥayfā) ಇಸ್ರೇಲ್ ದೇಶದ ಉತ್ತರ ಭಾಗದಲ್ಲಿರುವ ಅತಿ ದೊಡ್ಡ ನಗರ. ಒಟ್ಟು ೨,೬೫,೦೦೦ ಜನಸಂಖ್ಯೆ ಇರುವ ಈ ನಗರ ಇಸ್ರೇಲ್ ದೇಶದ ಮೂರನೆಯ ಅತಿ ದೊಡ್ಡ ನಗರ. ಸುಮಾರು ೩,೦೦,೦೦೦ ಜನ ಕ್ರಾಯೋತ್ ಮೊದಲಾಗಿ ತಿರಾತ್ ಕಾರ್ಮೆಲ್, ದಾಲಿಯತ್ ಅಲ್-ಕಾರ್ಮೆಲ್ ಹಾಗು ನೆಶರ್ ಎಂಬ ಅಕ್ಕಪಕ್ಕದಲ್ಲಿರುವ ನಗರಗಳಲ್ಲಿ ವಾಸವಾಗಿದ್ದಾರೆ. ಇವುಗಳು ಒಟ್ಟಾಗಿ ಹೈಫ ಮೆಟ್ರೋಪಾಲಿಟನ್ ಪ್ರದೇಶ ಎಂದು ಹೆಸರು. ಈ ಪ್ರದೇಶದಲ್ಲಿ ಸುಮಾರು ೬,೦೦,೦೦೦ ಜನ ವಾಸ ಮಾಡುತ್ತಿದ್ದಾರೆ. [೧][೨] ಈ ನಗರದಲ್ಲಿ ಸುಮಾರು ೯೦% ಯಹೂದಿಗಳು. ಅದರಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಜನ ಸೋವಿಯ ಯೂನಿಯನ್ (ರಶಿಯಾ)ದಿಂದ ವಲಸೆ ಬಂದವರು. ಇವರುಗಳು ಮಾತನಾಡುವ ಭಾಷೆ ಸ್ಲಾವ್. ಸುಮಾರು ೧೦% ಜನ ಅರಬ್ಬರು, ಹೆಚ್ಚಾಗಿ ಅರಬ್ ಕ್ರೈಸ್ತರು. [೩] ಹೈಫ ನಗರ ಬಹಾಯ್ ವಿಶ್ವ ಕೇಂದ್ರದ ಮನೆ ಕೂಡ. ಬಹಾಯ್ ವಿಶ್ವ ಕೇಂದ್ರ ಯುನೆಸ್ಕೋ ವಿಶ್ವ ಸಂಪ್ರದಾಯ ತಾಣವೆಂದು ಗುರುತಿಸಲ್ಪಟ್ಟಿದೆ. [೪][೫]
ಉಲ್ಲೇಖಗಳು[ಬದಲಾಯಿಸಿ]
- ↑ Table 3 - Population of Localities Numbering Above 2,000 Residents and Other Rural Population. ಇಸ್ರೇಲಿನ ಸೆಂಟ್ರಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ (2010-06-30). ಮರುಕಳಿಸಿದ ದಿನಾಂಕ 2010-10-30.
- ↑ Haifa. Jewish Agency. Archived from the original on 26 September 2007. ಮರುಕಳಿಸಿದ ದಿನಾಂಕ 2007-05-05.
- ↑ Haifa, The Jewish Agency for Israel. Retrieved 20 June 2009.
- ↑ UNESCO World Heritage Centre (2008-07-08). Three new sites inscribed on UNESCO’s World Heritage List. ಮರುಕಳಿಸಿದ ದಿನಾಂಕ 2008-07-08.
- ↑ History of Haifa. ಮರುಕಳಿಸಿದ ದಿನಾಂಕ 2008-04-11.
ಗ್ರಂಥಸೂಚಿ[ಬದಲಾಯಿಸಿ]
- Carmel, Alex (2002). The History of Haifa Under Turkish Rule, 4th, Haifa: Pardes.
- Shiller, Eli & Ben-Artzi, Yossi (1985). Haifa and its sites. Jerusalem: Ariel.
ಹೊರಗಿನ ಸಂಪರ್ಕಗಳು[ಬದಲಾಯಿಸಿ]
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
| Wikisource has the text of the 1911 Encyclopædia Britannica article ಹೈಫ. |
- (English) City of Haifa
- (English) Haifa Travel Guide
- Bahá'í World Centre, Haifa
- (English) Places To Visit in Haifa
- More photos of the Bahá'í Gardens
- Photos – The Baha'i Gardens in Haifa: the Shrine of the Bab Terraces & Gardens
- Our Lady of Mount Carmel Monastery, Haifa, Israel
- The Carmelit subway and map of Haifa
- Haifa city – the complete guide to haifa
- Low cost tourist accommodation in Haifa