ಸೆಲೆನಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆಲೆನಿಯಮ್ ಒಂದು ಅಲೋಹ ಮೂಲಧಾತು. ರಾಸಯನಿಕವಾಗಿ ಸಲ್ಫರ್ ಮತ್ತು ಟೆಲ್ಲುರಿಯಮ್ಗಳಿಗೆ ಸಂಬಂಧ ಹೊಂದಿರುವ ಈ ಧಾತು, ಹೆಚ್ಚಿನ ಪ್ರಮಾಣಗಳಲ್ಲಿ ವಿಷಕಾರಿ. ಆದರೆ ಅತಿ ಕಡಿಮೆ ಪ್ರಮಾಣಗಳಲ್ಲಿ ಜೀವಿಗಳಿಗೆ ಅಗತ್ಯ. ಸೆಲೆನಿಯಮ್ ವಿದ್ಯುತ್ ಅರೆಸಂವಾಹಕವಾಗಿದ್ದು, ಬೆಳಕಿನಲ್ಲಿ ಕತ್ತಲಿನಲ್ಲಿಗಿಂತ ಹೆಚ್ಚು ಸಂವಾಹನಾ ಶಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ ಇದನ್ನು ಬೆಳಕನ್ನು ಪತ್ತೆಹಚ್ಚುವ ಉಪಕರಣಗಳಲ್ಲಿ ಉಪಯೋಗಿಸಲಾಗುತ್ತದೆ. ಗಾಜು, ರಾಸಾಯನಿಕಗಳು ಹಾಗು ಬಣ್ಣಗಳ ತಯಾರಿಕೆ ಇದರ ಇತರ ಉಪಯೋಗಗಳು.

ಈ ಧಾತುವನ್ನು ೧೮೧೭ರಲ್ಲಿ ಜೋನ್ಸ್ ಬೆರ್ಜೆಲಿಯಸ್(ಜೋನ್ಸ್ ಜಕೊಬ್ ಬೆರ್ಜೆಲಿಯಸ್) ಎಂಬ ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ ಪತ್ತೆಹಚ್ಚಿ ಗ್ರೀಕ್ ಭಾಷೆಯಲ್ಲಿ ಚಂದ್ರನ ಹೆಸರಾದ "ಸೆಲೆನ್" ಇಂದ ಹೆಸರಿಟ್ಟ.