ಸದಸ್ಯ:Pallavi570

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:ಕ್ರೈಸ್ಟ್ ಯೂನಿವರ್ಸಿಟಿಗೆ.jpg
ಕ್ರೈಸ್ಟ್ ಯುನಿವರ್ಸಿಟಿ
ಕಾರ್ಮಲ್ ಶಾಲೆ

೨೦ನೆಯ ಶತಮಾನದ ಕೊನೆಯ ವರ್ಷ ಆದ ೧೯೯೯ ರಲ್ಲಿ ಪಾತಕೋಟ ಎಂಬ ಊರಿನಲ್ಲಿ ನಾನು ಜನಿಸಿದೆ. ನನ್ನ ತಂದೆಯವರ ಹೆಸರು ನಾಗರಾಜು ಹಾಗು ತಾಯಿ ಉಮ. ನನ್ನ ಜನನವು ಜೂನ್ ೨೨, ೧೯೯೯. ದೊಡ್ಡ ಕುಟುಂಬದಲ್ಲಿ ಜನಿಸಿದ ನನಗೆ ಅಪ್ಪ ಅಮ್ಮನ ಜೊತೆಗೆ ಅಜ್ಜಿ ,ತಾತ, ದೊಡಪ್ಪ, ದೊಡಮ್ಮ, ಚಿಕಪ್ಪ, ಚಿಕಮ್ಮ, ಅತ್ತೆ, ಮಾವ, ಅಕ್ಕಂದಿರು, ಅಣ್ಣಂದಿರು ಎಲ್ಲರ ಪ್ರೀತಿಯು ದೊರಕಿತು. ನನ್ನನ್ನು ನೆಲಕ್ಕೆ ಬೀಳದೆ ಕಾಪಡಲು ಅವರು ನನ್ನ ಹಿಂದೆಯೆ ನಿಲ್ಲುತಿದ್ದರು. ಆದರೆ ನನ್ನ ತಂದೆಯವರು ನನ್ನ ವಿದ್ಯಾಬ್ಯಾಸಕ್ಕೆಂದು ಊರನ್ನು ಬಿಟ್ಟು ನನ್ನನ್ನು ಬೆಂಗಳೂರಿಗೆ ಕರೆತಂದರು. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನನ್ನ ಶಾಲೆಯು ಪ್ರಾರಂಭವಾಯಿತು. ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗು ನಾನು ಬಸವೇಶ್ವರ ನಗರದ ಕಾರ್ಮಲ್ ಶಾಲೆಯಲ್ಲಿ ಓದಿದೆ.ಅಲ್ಲಿಯ ನನ್ನ ಸ್ನೇಹಿತರು ನನಗೆ ಇಂದಿಗೂ ಪರಿಚಯವಿದ್ದಾರೆ. ಶಾಲೆಯಲ್ಲಿ ನನಗೆ ಬಹಳ ಇಷ್ಟವಾದ ವಿಷಯವು ಗಣಿತ. ನನ್ನ ಗೆಳೆಯರಿಗೆ ನಾನು ಗಣಿತದಲ್ಲಿ ಮತ್ತೊಂದು ಗುರುವಾಗಿದ್ದೆ ಎಂದರೆ ಒಪ್ಪಬೇಕು. ಶಾಲೆಯ ದಿನಗಳು ಎಂದಿಗೂ ಮರೆಯಲು ಸಾದ್ಯವಿಲ್ಲ. ಕೊನೆಗು ನನ್ನ ೧೦ನೆಯ ತರಗತಿಯ ಪರೀಕ್ಶೆ ಬಂದಿತು. ಎಲ್ಲರಹಾಗೆ ಹಗಲು ರಾತ್ರಿ ಓದದಿದ್ದರು ಸುಮಾರಾಗಿ ೯೧ರಷ್ಟು ಅಂಕಗಲನ್ನು ಪದೆದು ಪಿಯು ಗೆ ಕಾಲಿಟ್ಟೆನು. ಅದು ನನ್ನ ಜೀವನದಲ್ಲಿ ನಾನೌ ಮರೆಯಲಾಗದ ಎರಡು ವರ್ಷಗಳು. ಏಕೆಂದರೆ ನನ್ನ ಜೀವನಕ್ಕೆ ಬೇಕಾದ ಒಂದು ಪ್ರಾಣ ಗೆಳತಿಯನ್ನು ನನಗೆ ನೀಡಿತು. ಇಬ್ಬರು ಕೊನೆಯವರೆಗು ಒಂದೇ ಕಾಲೇಜಿನಲ್ಲಿ ಓದಬೇಕು ಎಂದು ನಾವು ನಿರ್ಧರಿಸಿದರು ಕೆಲವು ಅನಾನುಕೂಲಗಳಿಂದ ಬೇರೆಯಾಗಬೇಕಾಯಿತು. ಪ್ರಸ್ತುತ ನಾನು ಕ್ರೈಸ್ತ ಯೂನಿವರ್ಸಿಟಿಯಲ್ಲಿ ಬಿ.ಎಸ್ಸಿ ಮಾಡುತಿದ್ದೇನೆ.

ನನಗೆ ಬಹಳ ಇಷ್ಟವಾದ ಕೆಲಸ ಏನೆಂದರೆ ಪುಸ್ತಕ ಓದುವುದು. ಚೇತನ್ ಭಗತ್ ರವರ ಪುಸ್ತಕವೆಂದರೆ ನನಗೆ ಬಹಳ ಆಸೆ. ಅವರು ಬರೆದಿರುವ ಎಲ್ಲಾ ಪುಸ್ತಕಗಳನ್ನು ನಾನು ಓದಿದ್ದೇನೆ. ನನಗೆ ಮಂಕುತಿಮ್ಮನ ಕಗ್ಗ ಎಂದರು ಬಹಳ ಇಷ್ಟ. ನಾನು ಆ ವಾಕ್ಯಗಳನ್ನು ಪಾಲಿಸುವುದೆ ಅಲ್ಲದೆ ನನ್ನ ಬಳಿ ಬರುವ ಸ್ನೇಹಿತರಿಗು ಹೇಳುತ್ತೇನೆ. ನನಗೆ ಬಹಳ ಇಷ್ಟವಾದ ಜಾಗ ಕೊಡಗು. ಅಲ್ಲಿಯ ವಾತವರಣ ನನಗೆ ಆನಂದವನ್ನು ನೀಡುತ್ತದೆ. ಚಳಿಯ ಕಾಲದಲ್ಲಿ ನನಗೆ ಹೋಗಲು ಆಸೆಯಾಗುವ ಜಾಗವಿದು. ಪುಣ್ಯ ಕ್ಷೇತ್ರಗಳಲ್ಲಿ ತಿರುಪತಿ ಎಂದರೆ ನನಗೆ ಇಷ್ಟ. ತಿಂಗಳಿಗೊಮ್ಮೆ ಆದರೂ ನಾನು ತಿರುಪತಿಗೆ ಹೋಗಬೇಕು.ನನಗೆ ಹೊಸ ಜಾಗಗಳಿಗೆ ಭೇಟಿ ನೀಡಿ ಅಲ್ಲಿಯ ಸಂಪ್ರದಾಯಗಳನ್ನು ಹಾಗು ಅವರ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಆಸೆ. ಉತ್ತರ ಕನ್ನಡ ಜಿಲ್ಲೆಯ ಆಚಾರಗಳು ನನಗೆ ಬಹಳ ಹುಮಸ್ಸು ಮೂಡಿಸಿತು. ಇದರ ಜೊತೆಗೆ ನನಗೆ ಜಲಾಶಯಗಳೆಂದರೆ ಇಷ್ಟ. ಜೋಗ್ ಜಲಪಾತವು ನನ್ನ ಮನಸನ್ನು ಕುಣಿಯುವಂತೆ ಮಾಡುತ್ತದೆ. ನಾನು ಒಂದು ದೊಡ್ಡ ಅಧಿಕಾರಿಯಾಗಿ ಬಡವರಿಗೆ ಸೇವೆ ಸಲ್ಲಿಸ ಬೇಕು ಎಂಬುದು ನ್ಸನ್ನ ತಂದೆಯವರ ಆಸೆ. ಅದರಂತೆಯೇ ನಾನು ಐ.ಎ.ಎಸ್ ಅಧಿಕಾರಿಯಾಗ ಬೇಕೆಂಧು ನಿರ್ಣಯಿಸಿದ್ದೇನೆ.