ಬಸವೇಶ್ವರನಗರ
ವಿಕಿಪೀಡಿಯ ಇಂದ
ಬಸವೇಶ್ವರನಗರ ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಬಡಾವಣೆ. ಇಲ್ಲಿ ಸುಮಾರು ೨ ಲಕ್ಷ ಜನರು ವಾಸಿಸುತ್ತಿದ್ದಾರೆ. ಈ ಬಡಾವಣೆಯ ಹೆಸರನ್ನು ೧೨ನೆಯ ಶತಮಾನದ ಲಿಂಗಾಯತ ಮತದ ಪ್ರಚಾರಕರಾಗಿದ್ದ ಬಸವೇಶ್ವರ ಅವರ ಹೆಸರ ಮೇಲೆ ಇಡಲಾಗಿದೆ. ಬಸವೇಶ್ವರನಗರದ ಪ್ರಮುಖ ಪ್ರದೇಶಗಳು ಕಮಲಾನಗರ, ಶಾರದ ಕಾಲೋನಿ, ಕೆ.ಎಚ್.ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಕುರುಬರಹಳ್ಳಿ, ಸಾಣೆಗುರುವನಹಳ್ಳಿ ಮತ್ತು ಮಂಜುನಾಥನಗರ. ಇದು ಕೆಂಪೇಗೌಡ ಬಸ್ ನಿಲ್ದಾಣದಿಂದ ಸುಮಾರು ೫ ಕಿಮಿ ದೂರದಲ್ಲಿದೆ.
ಬಸವೇಶ್ವರನಗರದ ಪ್ರಮುಖ ರಸ್ತೆ ಮತ್ತು ಕಟ್ಟಡಗಳು [ಬದಲಾಯಿಸಿ]
ರಸ್ತೆ ಮತ್ತು ವೃತ್ತಗಳು [ಬದಲಾಯಿಸಿ]
- ಹಾವನೂರ ವೃತ್ತ