ಶ್ರೀಧರ ಸ್ವಾಮಿಗಳು
| This article is an orphan, as few or no other articles link to it. Please introduce links to this page from related articles; suggestions may be available. (March 2010) |
| ಈ ಲೇಖನದಲ್ಲಿ ಹೆಚ್ಚುವರಿ ಆಧಾರ ಅಥವಾ ಮೂಲಗಳ ಅಗತ್ಯವಿದೆ. ನಂಬಲರ್ಹವಾದ ಆಧಾರಗಳನ್ನು. ಇಲ್ಲಿ ಸೇರಿಸಿರುವ ಲೇಖನದ ಸುಧಾರಣೆಯಲ್ಲಿ ಸಹಾಯ ಮಾಡಿ. ಆಧಾರವಿಲ್ಲದ ವಿಷಯಗಳನ್ನು ಪರಿಶೀಲಿಸಿ ಆಕ್ಷೇಪಣೆ ಸೇರಿಸುವ ಮೂಲಕ ತೆಗೆದುಹಾಕಬಹುದು. (December 2009) |
| {{{ಹೆಸರು}}} | |
|---|---|
| ಚಿತ್ರ:Shreedhar Swami.jpg | |
| ಗೌರವಗಳು/honours | Sant in Marathi, meaning "Saint" |
| ಗುರು | Samarth Ramdas |
| Philosophy | Sanātana Dharma |
| Literary works | Swatm Nirupam (स्वातं निरुपम), Moksha Sandesh (मोक्ष) |
ಶ್ರೀಧರ ಸ್ವಾಮಿಗಳು (ದೇವನಾಗರಿ: श्रीधर स्वामी,) (೧೯೦೮–೧೯೭೩) ಒಬ್ಬ ಪ್ರಮುಖ ಮರಾಠಿ-ಕನ್ನಡ ಸಂತರು ಮತ್ತು ಹಿಂದೂ ಧರ್ಮದ ಪ್ರವರ್ತಕರು. ಶ್ರೀಧರ ಸ್ವಾಮಿಗಳು ಹಿಂದೂ ದೇವತೆ ರಾಮನ ಭಕ್ತರು ಮತ್ತು ಸಮರ್ಥ ರಾಮದಾಸರ ಶಿಷ್ಯರೂ ಆಗಿದ್ದರು.
ಪರಿವಿಡಿ |
ಆರಂಭಿಕ ಜೀವನ [ಬದಲಾಯಿಸಿ]
ಶ್ರೀಧರ ಸ್ವಾಮಿಗಳು ನಾರಾಯಣ ರಾವ್ ಮತ್ತು ಕಮಲಾಬಾಯಿ ದೇಗಲೂಕರ್ ಎಂಬ ಬ್ರಾಹ್ಮಣ ಕುಟುಂಬದಲ್ಲಿ ಡಿಸೆಂಬರ್ ೫, ೧೯೦೮ರಲ್ಲಿ ಕರ್ನಾಟಕದ ಲಾಡ್ ಚಿಂಚೊಳ್ಳಿ ಗ್ರಾಮದಲ್ಲಿ ಜನಿಸಿದರು. ಅವರು ರಾಮನ ಭಕ್ತರೂ ಸಮರ್ಥ ರಾಮದಾಸರ ಶಿಷ್ಯರೂ ಆಗಿದ್ದರು. ಶ್ರೀಧರ ಸ್ವಾಮಿಗಳು ೩ ವರ್ಷದವರಾಗಿದ್ದಾಗಲೇ ತಮ್ಮ ತಂದೆಯವರನ್ನು ಕಳೆದುಕೊಂಡರು. ನಂತರ ಅವರ ತಾಯಿ ಮತ್ತು ಸಹೋದರ ತ್ರ್ಯಂಬಕ ಕುಟುಂಬದ ಜವಾಬ್ದಾರಿ ವಹಿಸಿಕೊಂಡರು. ಶ್ರೀಧರರನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಹೈದರಾಬಾದಿನ ಶಾಲೆಯೊಂದಕ್ಕೆ ಸೇರಿಸಲಾಯಿತು. ಬಾಲ್ಯದಿಂದಲೇ ಅವರು ಅಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದರು. ಅವರ ಬಾಲ್ಯದ ಘಟನೆಯೊಂದು ಹೀಗಿದೆ: ಅವರು ಒಮ್ಮೆ ಅನಾರೋಗ್ಯಕ್ಕೊಳಗಾಗಿದ್ದರು ಮತ್ತು ಬಹಳ ದಿನ ಶಾಲೆಯನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಬಹುದೆಂದು ಹೆದರಿದ್ದರು. ಆಗ ಅವರ ತಾಯಿ ಅವರಿಗೆ ಸತತವಾಗಿ ರಾಮ ನಾಮ ಜಪಿಸಬೇಕೆಂದೂ ರಾಮ ಅವರ ಪರೀಕ್ಷೆಗನ್ನು ಸುಗಮಗೊಳಿಸುವನೆಂದೂ ಹೇಳಿದರು. ಅವರು ಶ್ರದ್ಧೆಯಿಂದ ಅದನ್ನು ಮಾಡಲಾರಂಭಿಸಿದರು; ಎಷ್ಟರ ಮಟ್ಟಿಗೆ ಎಂದರೆ ಅವರು ಸದಾ ಕಾಲ ರಾಮನಾಮವನ್ನೇ ಜಪಿಸುತ್ತಾ ಓದಲೇ ಇಲ್ಲ. ಪರೀಕ್ಷೆಯ ದಿನ ಅವರು ಏನನ್ನೂ ಓದದೆ ಹೋದರು, ಮತ್ತು ಎಲ್ಲರಿಗೂ ಆಶ್ಚರ್ಯವಾಗುವಂತೆ ಎಲ್ಲ ಪ್ರಶ್ನೆಗಳಿಗೂ ಚೆನ್ನಾಗಿ ಉತ್ತರ ಬರೆದು ಮೊದಲಿಗರಾಗಿ ಉತ್ತೀರ್ಣರಾದರು. ಶ್ರೀಧರರು ಕೇವಲ ೧೦ ವರ್ಷದವರಿದ್ದಾಗ ಅವರ ಅಣ್ಣ ತೀರಿಕೊಂಡರು. ಅವರ ತಾಯಿ ಕೂಡ ಈ ಆಘಾತ ಮತ್ತು ದೀರ್ಘ ಕಾಯಿಲೆಯಿಂದ ಬಳಲಿ, ಕೆಲವೇ ಸಮಯದಲ್ಲಿ ತೀರಿಕೊಂಡರು. ಆಕೆಯ ಸಾವಿನ ನಂತರ ಶ್ರೀಧರರು ಗುಲ್ಬರ್ಗಾಕ್ಕೆ ಹೋಗಿ ಅವರ ಚಿಕ್ಕಮ್ಮನ ಜೊತೆ ಉಳಿದುಕೊಂಡು ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಗುಲ್ಬರ್ಗಾದಲ್ಲಿ ಕೆಲವು ವರ್ಷಗಳನ್ನು ಕಳೆದ ನಂತರ, ಅವರು ಪುಣೆಗೆ ಹೋಗಿ ಕೆಲವು ಸಮಯಗಳ ಕಾಲ ಒಂದು ಅನಾಥಾಶ್ರಮದಲ್ಲಿ ಉಳಿದುಕೊಂಡರು. ಇಲ್ಲಿ ಅವರ ಆಧ್ಯಾತ್ಮಿಕ ಜ್ಞಾನ ಸಂಪಾದನೆಯ ಆಸಕ್ತಿ ಬೆಳೆಯಿತು ಮತ್ತು ಶ್ರೀ ಪಳ್ನಿತ್‌ಕರ್ ಅವರ ಸಲಹೆಯ ಮೇರೆಗೆ ಅಧ್ಯಾತ್ಮ ಜ್ಞಾನ ಸಂಪಾದನೆಗಾಗಿ ಶ್ರೀ ಸಮರ್ಥ ರಾಮದಾಸರು ಸುಮಾರು ಮುನ್ನೂರು ವರ್ಷಗಳ ಹಿಂದೆ ವಾಸವಾಗಿದ್ದ ಸಜ್ಜನಗಡ ಎಂಬ ಸ್ಥಳಕ್ಕೆ ಹೊರಟರು.
ಆಧ್ಯಾತ್ಮಿಕ ಬೆಳವಣಿಗೆ [ಬದಲಾಯಿಸಿ]
ಮುಂದಿನ ಮೂರು ವರ್ಷಗಳ ಕಾಲ, ಶ್ರೀಧರ ಸ್ವಾಮಿಗಳು ತಮ್ಮನ್ನು ತಾವು ಕಠಿಣ ಧ್ಯಾನ ಮತ್ತು ಸಜ್ಜನಗಡದಲ್ಲಿನ ಸಮರ್ಥ ರಾಮದಾಸರ ಮಠವನ್ನು ಬೆಳೆಸುವಲ್ಲಿ ತೊಡಗಿಸಿಕೊಂಡರು. ಸಜ್ಜನಗಡಕ್ಕೆ ಬಂದ ಒಂದೂವರೆ ವರ್ಷಗಳ ನಂತರ ಸಮರ್ಥ ರಾಮದಾಸರು ಸ್ವತಃ ಶ್ರೀಧರ ಸ್ವಾಮಿಗಳನ್ನು ಆಶೀರ್ವದಿಸಿದರು. ನಂತರ, ಅವರು ಅವರನ್ನು ದಕ್ಷಿಣದ ಕಡೆ ಕರ್ನಾಟಕಕ್ಕೆ ಹೋಗಿ ಸನಾತನ ವೈದಿಕ ಧರ್ಮದ ನಿಜವಾದ ಸಂದೇಶಗಳನ್ನು ಹರಡಲು ನಿರ್ದೇಶಿಸಿದರು.
ಧಾರ್ಮಿಕ ಔನ್ನತ್ಯಕ್ಕಾಗಿ ಭಾರತ ಪ್ರವಾಸ [ಬದಲಾಯಿಸಿ]
ಮುಂದಿನ ಹನ್ನೆರಡು ವರ್ಷಗಳ ಕಾಲ ಶ್ರೀಧರ ಸ್ವಾಮಿಗಳು ದಕ್ಷಿಣ ಭಾರತದ ಹೆಚ್ಚಿನ ಭಾಗಗಳನ್ನು ಬರಿಗಾಲಿನಲ್ಲಿ ಸಂಚರಿಸಿದರು. ಅವರು ದೇವಸ್ಥಾನಗಳು ಮತ್ತು ಮಠಗಳಲ್ಲಿ ಉಳಿದುಕೊಂಡು ಸನಾತನ ವೈದಿಕ ಧರ್ಮ ಮತ್ತು ಧಾರ್ಮಿಕ ಔನ್ನತ್ಯಕ್ಕಾಗಿ ಪ್ರವಚನಗಳನ್ನು ನೀಡಲಾರಂಭಿಸಿದರು. ಪ್ರವಾಸದ ವೇಳೆಗಳಲ್ಲಿ ಅವರು ಹಲವು ಹಿಂದೂ ಧರ್ಮದ ಮುಖಂಡರು ಮತ್ತು ಸಂತರ ಪರಿಚಯ ಪಡೆದುಕೊಂಡರು. ಇವುಗಳಲ್ಲಿ ಪ್ರಮುಖವಾದುದು ಶೀಗೇಹಳ್ಳಿಯ ಶಿವಾನಂದ ಸ್ವಾಮಿಗಳ ಜೊತೆಗಿನ ಪರಿಚಯ. ಅವರು ವಿವೇಕಾನಂದ ಬಂಡೆಯನ್ನೂ ಭೇಟಿ ಮಾಡಿ ಅಲ್ಲಿ ಧ್ಯಾನ ಮಾಡಿದರು. ೧೯೪೨ರಲ್ಲಿ ಶ್ರೀಧರ ಸ್ವಾಮಿಗಳು ಸನ್ಯಾಸ ಸ್ವೀಕರಿಸಿದರು ಮತ್ತು ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಶ್ರೀಧರ ಸ್ವಾಮಿಗಳು ಎಂಬ ಹೆಸರು ಪಡೆದರು. ಇದರ ನಂತರ ೧೯೬೭ರವರೆಗೆ ಅವರು ವ್ಯಾಪಕವಾಗಿ ಭಾರತದಾದ್ಯಂತ ಸಂಚರಿಸಿದರು ಮತ್ತು ತಮ್ಮ ಪ್ರವಚನಗಳು, ಬರಹಗಳು ಮತ್ತು ಆಧ್ಯಾತ್ಮಿಕ ಪ್ರವರ್ತನಳ ಮೂಲಕ ವೇದಗಳ ತಿರುಳಿನ ಸಂದೇಶಗಳನ್ನು ಸಾಮಾನ್ಯ ಜನರಿಗೆ ಹರಡಿದರು. ೧೯೬೭ರಲ್ಲಿ ಅವರು ದಕ್ಷಿಣದ ವರದಪುರಕ್ಕೆ ಬಂದು ಆಶ್ರಮ ಸ್ಥಾಪಿಸಿದರು. ತದನಂತರ ೧೯ ಏಪ್ರಿಲ್ ೧೯೭೩ರಲ್ಲಿ ಮಹಾಸಮಾಧಿ ಹೊಂದುವವರೆಗೆ ಅವರು ಹೆಚ್ಚಿನ ಭಾಗ ಒಂಟಿಯಾಗಿದ್ದುಕೊಂಡು ಧ್ಯಾನಸ್ಥರಾಗಿದ್ದರು.
ಬರಹಗಳು - ವೇದಗಳ ಸಂದೇಶಗಳ ಹರಡುವಿಕೆ [ಬದಲಾಯಿಸಿ]
ಶ್ರೀಧರ ಸ್ವಾಮಿಗಳು ಮರಾಠಿ, ಸಂಸ್ಕೃತ, ಕನ್ನಡ, ಹಿಂದೀ ಮತ್ತು ಆಂಗ್ಲದಲ್ಲಿ ಪ್ರತಿಭಾನ್ವಿತ ಬರಹಗಾರರಾಗಿದ್ದರು. ತಮ್ಮ ವ್ಯಾಪಕ ಪ್ರವಾಸದುದ್ದಕ್ಕೂ ಅವರು ಸ್ವಲ್ಪ ಸಮಯವನ್ನು ಧಾರ್ಮಿಕ ಬರಹಗಳಿಗಾಗಿ ವಿನಿಯೋಗಿಸಿದರು. ಸಂಕೀರ್ಣವಾದ ವೇದಗಳ ಸೂಕ್ಷ್ಮ ತತ್ವಬೋಧಗಳನ್ನು ಸಾಮಾನ್ಯ ಜನರಿಗೆ ಮನನವಾಗುವ ರೀತಿಯಲ್ಲಿ ಸರಳಗೊಳಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅವರು ಮರಾಠಿ, ಕನ್ನಡ ಮತ್ತು ಆಂಗ್ಲದಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದರು.