ಶರದ್ ಪವಾರ್
ಶರದ್‌ಚಂದ್ರ ಗೋವಿಂದರಾವ್ ಪವಾರ್ | |
---|---|
ಮತಕ್ಷೇತ್ರ | Madha |
6th ಮುಖ್ಯ ಮಂತ್ರಿ ಮಹಾರಾಷ್ಟ್ರ State ಭಾರತ
| |
ಅಧಿಕಾರ ಅವಧಿ 18 July 1978 – 17 February 1980 | |
ಪೂರ್ವಾಧಿಕಾರಿ | ವಸಂತ್ದದ ಪಾಟೀಲ್ |
ಉತ್ತರಾಧಿಕಾರಿ | President's Rule |
12th ಮುಖ್ಯ ಮಂತ್ರಿ ಮಹಾರಾಷ್ಟ್ರ State ಭಾರತ
| |
ಅಧಿಕಾರ ಅವಧಿ 26 June 1988 – 25 June 1991 | |
ಪೂರ್ವಾಧಿಕಾರಿ | Shankarrao Chavan |
ಉತ್ತರಾಧಿಕಾರಿ | Sudhakarrao Naik |
14th ಮುಖ್ಯ ಮಂತ್ರಿ ಮಹಾರಾಷ್ಟ್ರ State ಭಾರತ
| |
ಅಧಿಕಾರ ಅವಧಿ 6 March 1993 – 14 March 1995 | |
ಪೂರ್ವಾಧಿಕಾರಿ | Sudhakarrao Naik |
ಉತ್ತರಾಧಿಕಾರಿ | Manohar Joshi |
ಅಧಿಕಾರ ಅವಧಿ 2001 – 2004 | |
ಪೂರ್ವಾಧಿಕಾರಿ | ರಾಮೇಶ್ವರ್ ಥಾಕೂರ್ |
ಉತ್ತರಾಧಿಕಾರಿ | ರಾಮೇಶ್ವರ್ ಥಾಕೂರ್ |
ಅಧಿಕಾರ ಅವಧಿ 2004 – Present | |
ಪೂರ್ವಾಧಿಕಾರಿ | ರಾಜನಾಥ್ ಸಿಂಗ್ |
ಉತ್ತರಾಧಿಕಾರಿ | Incumbent |
ಅಧಿಕಾರ ಅವಧಿ 2004 – 2011 | |
ಪೂರ್ವಾಧಿಕಾರಿ | ಶರದ್ ಯಾದವ್ |
ಉತ್ತರಾಧಿಕಾರಿ | ಕೆ.ವಿ. ಥೋಮಸ್ |
ಅಧಿಕಾರ ಅವಧಿ 2010 – Present | |
ಪೂರ್ವಾಧಿಕಾರಿ | ಡವಿದ್ ಮೋರ್ಗನ್ |
ಉತ್ತರಾಧಿಕಾರಿ | Incumbent |
ವೈಯಕ್ತಿಕ ಮಾಹಿತಿ | |
ಜನನ | ಪುಣೆ, ಮಹಾರಾಷ್ಟ್ರ | ೧೨ ಡಿಸೆಂಬರ್ ೧೯೪೦
ರಾಜಕೀಯ ಪಕ್ಷ | NCP |
ಸಂಗಾತಿ(ಗಳು) | ಪ್ರತಿಭಾ ಪವಾರ್ |
ಮಕ್ಕಳು | 1 daughter - ಸುಪ್ರಿಯ ಸುಲೇ |
ವಾಸಸ್ಥಾನ | ಬರಮತಿ, ಪುಣೆ |
ಧರ್ಮ | ಹಿಂದೂ |
As of October 29, 2010 ಮೂಲ: [೧] |
ಶರದ್‌ಚಂದ್ರ ಗೋವಿಂದರಾವ್ ಪವಾರ್ (ಮರಾಠಿ:शरदचंद्र गोविंदराव पवार) (ಜನನ ಡಿಸೆಂಬರ್ ೧೨, ೧೯೪೦) ಅವರು ಜನಪ್ರಿಯವಾಗಿ ಶರದ್ ಪವಾರ್ ಎಂದು ಹೆಸರಾಗಿದ್ದಾರೆ. ಪವಾರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ೧೯೯೯ ರಲ್ಲಿ ಪ್ರತ್ಯೇಕಗೊಂಡು ರೂಪಿತವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ಈ ಹಿಂದೆ ರಕ್ಷಣಾ ಮಂತ್ರಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದ್ದರು ಮತ್ತು ಪ್ರಸ್ತುತ ಭಾರತ ಸರ್ಕಾರದ ಕೃಷಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪವಾರ್ ಅವರು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಪಟ್ಟಣದವರಾಗಿದ್ದಾರೆ. ಪವಾರ್ ಅವರು ಮಹಾರಾಷ್ಟ್ರದ ಮಾಧಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಲೋಕಸಭೆಯಲ್ಲಿ ಎನ್‌ಸಿಪಿ ಪಕ್ಷದ ಮುಖಂಡರಾಗಿದ್ದಾರೆ. ಪವಾರ್ ಅವರು ಭಾರತದ ರಾಷ್ಟ್ರೀಯ ರಾಜಕಾರಣದ ಜೊತೆಗೆ ಮಹಾರಾಷ್ಟ್ರದ ಪ್ರಾಂತೀಯ ರಾಜಕಾರಣದಲ್ಲಿ ಪ್ರಮುಖ ಭಾಗವಾಗಿದ್ದಾರೆ.
ಹಾಗೆಯೇ ಪವಾರ್ ಅವರು ೨೦೦೫ ರಿಂದ ೨೦೦೮ ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೦ ರಲ್ಲಿ, ಶರದ್ ಪವಾರ್ ಅವರು ಇಂಗ್ಲೆಂಡಿನ ಡೇವಿಡ್ ಮೋರ್ಗನ್ ಅವರ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರು.[೧]
ವೃತ್ತಿಜೀವನ
[ಬದಲಾಯಿಸಿ]೧೯೯೦ ರ ವರೆಗೆ
[ಬದಲಾಯಿಸಿ]ಶರದ್ ಪವಾರ್ ಅವರು ಮೊದಲ ಬಾರಿಗೆ ೧೯೬೭ ರಲ್ಲಿ ಬಾರಾಮತಿಯಿಂದ ಅವಿಭಜಿತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. ೧೯೭೮ ರಲ್ಲಿ, ಯಶವಂತರಾವ್ ಚವ್ಹಾಣ್ ಅವರು ಶರದ್ ಪವಾರ್ ಅವರ ರಾಜಕೀಯ ಗುರುವಾಗಿದ್ದರು.[೨]
ಪವಾರ್ ಅವರು ಕಾಂಗ್ರೆಸ್‌ನಿಂದ ಪ್ರತ್ಯೇಕಿತಗೊಂಡು ವಿರೋಧಿ ಜನತಾ ಪಕ್ಷದೊಂದಿಗೆ ೧೯೭೮ರಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದರು ಮತ್ತು ಇಂದಿರಾ ಗಾಂಧಿಯವರು ೧೯೭೫ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಜನಪ್ರಿಯತೆಯನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರಾದರು. ಇಂದಿರಾಗಾಂಧಿಯವರು ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬಂದ ನಂತರ ಫೆಬ್ರವರಿ ೧೯೮೦ರಲ್ಲಿ ಈ ಪ್ರಗತಿಶೀಲ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರವನ್ನು ವಜಾಮಾಡಲಾಯಿತು.
ಆನಂತರ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಪಡೆಯಿತು ಮತ್ತು ಎ.ಆರ್. ಅಂತುಲೆಯವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ೧೯೮೧ರಲ್ಲಿ ಪವಾರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಮೊದಲ ಬಾರಿಗೆ, ಪವಾರ್ ಅವರು ೧೯೮೪ರಲ್ಲಿ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಹಾಗೆಯೇ ಅವರು ಮಾರ್ಚ್ ೧೯೮೫ ರಲ್ಲಿ ಬಾರಾಮತಿಯಿಂದ ರಾಜ್ಯ ವಿಧಾನಸಭೆಗೂ ಆಯ್ಕೆಯಾದರು ಮತ್ತು ಲೋಕಸಭೆಗೆ ರಾಜನಾಮೆ ನೀಡಿ ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಸಮಯ ಮುಂದುವರಿಯಲು ಇಚ್ಛಿಸಿದರು. ಇವರ ಭಾರತೀಯ ಕಾಂಗ್ರೆಸ್ (ಸೋಷಿಯಲಿಸ್ಟ್) ಪಕ್ಷವು ರಾಜ್ಯ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ೫೪ ಸ್ಥಾನಗಳಲ್ಲಿ ಜಯ ಸಾಧಿಸಿತು ಮತ್ತು ಪವಾರ್ ಅವರು ವಿರೋಧ ಪಕ್ಷದ ನಾಯಕರಾದರು.
ಪವಾರ್ ಅವರು ಕಾಂಗ್ರೆಸ್‌ಗೆ ಮರಳಿ ಬಂದಿದ್ದು, ಆ ಸಮಯದಲ್ಲಿ ಶಿವಸೇನೆಯು ಪ್ರವರ್ಧಮಾನಕ್ಕೆ ಬರಲು ಕಾರಣವಾಯಿತು ಎಂದು ಹೇಳಲಾಯಿತು. ಜೂನ್ ೧೯೮೮ರಲ್ಲಿ ಭಾರತದ ಪ್ರಧಾನ ಮಂತ್ರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿಯವರು ಆಗಿನ ಮಹಾರಾಷ್ಟ ಮುಖ್ಯಮಂತ್ರಿಯವರಾಗಿದ್ದ ಶಂಕರರಾವ್ ಚವಾಣ್ ಅವರನ್ನು ಹಣಕಾಸು ಮಂತ್ರಿಗಳಾಗಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು ಮತ್ತು ಅವರ ಸ್ಥಾನದಲ್ಲಿ ಶರದ್ ಪವಾರ್ ಅವರನ್ನು ಮುಖ್ಯಮಂತ್ರಿಯವರಾಗಿ ಆಯ್ಕೆಮಾಡಲಾಯಿತು. ಪ್ರವರ್ಧಮಾನಕ್ಕೆ ಬರುತ್ತಿದ್ದ ಶಿವಸೇನೆ ಪ್ರಾಬಲ್ಯವನ್ನು ಹತೋಟಿಯಲ್ಲಿಡುವುದು ಶರದ್ ಪವಾರ್ ಅವರ ಕಾರ್ಯವಾಗಿತ್ತು, ಮತ್ತು ಇದು ರಾಜ್ಯದಲ್ಲಿ ಕಾಂಗ್ರೆಸ್ ಪ್ರಬಲವಾಗಲು ಸಂಭಾವ್ಯ ಸವಾಲಾಗಿತ್ತು[ಸೂಕ್ತ ಉಲ್ಲೇಖನ ಬೇಕು]. ೧೯೮೯ ರ ಲೋಕಸಭೆಯ ಚುನಾವಣೆಗಳಲ್ಲಿ, ಮಹಾರಾಷ್ಟ್ರದ ೪೮ ಸ್ಥಾನಗಳ ಪೈಕಿ ಕಾಂಗ್ರೆಸ್ ೨೮ ಸ್ಥಾನಗಳಲ್ಲಿ ಜಯಗಳಿಸಿತು. ೧೯೯೦ ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಶಿವಸೇನಾ ಮತ್ತು ಭಾರತೀಯ ಜನತಾ ಪಾರ್ಟಿ ಒಕ್ಕೂಟವು ಕಾಂಗ್ರೆಸ್‌ಗೆ ಭಾರಿ ಪ್ರತಿರೋಧವನ್ನು ನೀಡಿತು. ಒಟ್ಟಾರೆ ೨೮೮ ಸ್ಥಾನಗಳಲ್ಲಿ ೧೪೧ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆಯಲು ವಿಫಲವಾಯಿತು. ೧೨ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ೧೯೯೦ ರ ಮಾರ್ಚ್ ೪ ರಂದು ಶರದ್ ಪವಾರ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
೧೯೯೦ ರ ದಶಕದ ಪ್ರಾರಂಭದ ದಿನಗಳು
[ಬದಲಾಯಿಸಿ]ಚುನಾವಣಾ ಪ್ರಚಾರದ ವೇಳೆಯಲ್ಲಿ ಮಾಜಿ ಪ್ರಧಾನ ಮಂತ್ರಿಯವರಾದ ರಾಜೀವ ಗಾಂಧಿಯವರನ್ನು ಹತ್ಯೆ ಮಾಡಲಾಯಿತು. ಶರದ್ ಪವಾರ್ ಅವರ ಹೆಸರನ್ನು ಪಿ.ವಿ. ನರಸಿಂಹ ರಾವ್ ಮತ್ತು ಎನ್.ಡಿ. ತಿವಾರಿ ಅವರ ಹೆಸರುಗಳ ಜೊತೆಯಲ್ಲಿಯೇ ಪ್ರಧಾನ ಮಂತ್ರಿಯವರ ಹುದ್ದೆಗೆ ಪರಿಗಣಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.[೩][೪][೫] ಆದರೆ ಕಾಂಗ್ರೆಸ್ ಶಾಸಕಾಂಗ ಸಭೆಯು ಪಿ.ವಿ. ನರಸಿಂಹರಾವ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿತು ಮತ್ತು ಅವರು ೧೯೯೧ ರ ಜೂನ್ ೨೧ ರಂದು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾವ್ ಅವರು ಪವಾರ್ ಅವರನ್ನು ರಕ್ಷಣಾ ಮಂತ್ರಿಯಾಗಿ ಸೇರಿಸಿಕೊಳ್ಳಲು ನಿರ್ಧರಿಸಿದರು. ೧೯೯೧ ರ ಜೂನ್ ೨೬ ರಂದು ಪವಾರ್ ಅವರು ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡರು ಮತ್ತು ಅವರು ೧೯೯೩ ರ ಮಾರ್ಚ್‌ವರೆಗೆ ಕರ್ತವ್ಯವನ್ನು ನಿಭಾಯಿಸಿದರು. ಮಹಾರಾಷ್ಟ್ರದಲ್ಲಿ ಪವಾರ್ ಅವರ ಉತ್ತರಾಧಿಕಾರಿಯ ಬಳಿಕ, ಸುಧಾಕರರಾವ್ ನಾಯ್ಕ್ ಅವರು ಅಧಿಕಾರದಿಂದ ಕೆಳಗಿಳಿದರು ಮತ್ತು ರಾವ್ ಅವರು ಪವಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮರಳಿ ಕಳುಹಿಸಿದರು.
ಪವಾರ್ ಅವರು ೧೯೯೩ ರ ಮಾರ್ಚ್ ೬ ರಂದು ನಾಲ್ಕನೇ ಬಾರಿಗೆ ಮತ್ತು ಅತೀ ವಿವಾದಾಸ್ಪದವೆಂದು ಹೇಳಲಾದ ಅವಧಿಗೆ[ಸೂಕ್ತ ಉಲ್ಲೇಖನ ಬೇಕು] ಮುಖ್ಯಮಂತ್ರಿಯವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಹುಪಾಲು ತಕ್ಷಣವೇ, ಭಾರತದ ಆರ್ಥಿಕ ರಾಜಧಾನಿಯಾದ ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ ೧೯೯೩ ರ ಮಾರ್ಚ್ ೧೨ ರಂದು ಸರಣಿ ಬಾಂಬ್ ಸ್ಫೋಟ ಸಂಭವಿಸಿತು.ಶರದ್ ಪವಾರ್ ೧೯೯೦ ರವರೆಗೆ ಲೇಖನದಲ್ಲಿ ಹೇಳಲಾದಂತೆ ೧೯೭೯ ರ ಬದಲಿಗೆ ೧೯೭೮ ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
೧೯೯೦ ರ ದಶಕದ ಮಧ್ಯ ಭಾಗಗಳು
[ಬದಲಾಯಿಸಿ]ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ನ ಉಪ ಆಯುಕ್ತರಾದ, ಜಿ ಆರ್ ಖೈರ್ನಾರ್ ಅವರು ಪವಾರ್ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಮತ್ತು ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆಂದು ಹಲವು ಆರೋಪಗಳನ್ನು ಮಾಡಿದರು.[೬][೭] ಖೈರ್ನಾರ್ ಅವರು ತಮ್ಮ ಆರೋಪಗಳಿಗೆ ಬೆಂಬಲವಾಗಿ ಯಾವುದೇ ಸಾಕ್ಷಗಳನ್ನು ಒದಗಿಸದಿದ್ದರೂ, ಇದು ಪವಾರ್ ಅವರ ಜನಪ್ರಿಯತೆಗೆ ಪರಿಣಾಮವನ್ನುಂಟುಮಾಡಿತು. ಹೆಸರಾಂತ ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆಯವರು ಭ್ರಷ್ಟಾಚಾರದಲ್ಲಿ ಆರೋಪಕ್ಕೊಳಗಾದ ಮಹಾರಾಷ್ಟ್ರ ಸರ್ಕಾರದ ಅರಣ್ಯ ಇಲಾಖೆಯ ೧೨ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಪ್ರಾರಂಭಿಸಿದರು. ಪವಾರ್ ಅವರ ಸರ್ಕಾರವು ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದವು. ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಾಗಪುರದಲ್ಲಿ ೧೯೯೪ ಗೌರಿ ನೂಕುನುಗ್ಗಲು ಸಂಭವಿಸಿತು ಮತ್ತು ಇದರಲ್ಲಿ ೧೧೪ ಜನ ಸಾವಿಗೀಡಾದರು. ಸುಮಾರು ೫೦೦೦೦ ಗೌರಿ ಪ್ರತಿಭಟನಾಕಾರರನ್ನು ಚದುರಿಸಲು ನಾಗಪುರ ಪೊಲೀಸರು ಲಾಠಿ ಪ್ರಹಾರದ ಬಳಕೆ ಮಾಡುತ್ತಿದ್ದರು ಮತ್ತು ಇದು ಜನರಲ್ಲಿ ಭಯವನ್ನು ಉಂಟುಮಾಡಿತು ಮತ್ತು ಪ್ರತಿಭಟನಾಕಾರರಲ್ಲಿ ನೂಕುನುಗ್ಗಲಿಗೆ ಕಾರಣವಾಯಿತು.[೮] ಸೂಕ್ತಸಮಯದಲ್ಲಿ ವಂಜಾರಾ ಜನರ ನಿಯೋಗವನ್ನು ಸಮಾಜಕಲ್ಯಾಣ ಸಚಿವರಾದ ಮಧುಕರರಾವ್ ಪಿಚಡ್ ಅವರು ಭೇಟಿ ಮಾಡದ ಕಾರಣದಿಂದ ದುರಂತವು ಸಂಭವಿಸಿತು ಎಂದು ಆರೋಪಗಳನ್ನು ಮಾಡಲಾಯಿತು. ದುರಂತಕ್ಕೆ ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ಪಿಚಡ್ ಅವರು ಅಧಿಕಾರದಿಂದ ಕೆಳಗಿಳಿದರು ಮತ್ತು ಈ ಘಟನೆಯು ಶರದ್ ಪವಾರ್ ಅವರ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯನ್ನುಂಟು ಮಾಡಿತು.
೧೯೯೫ ರಲ್ಲಿ ವಿಧಾನಸಭೆಗೆ ಚುನಾವಣೆಯು ನಡೆಯುವುದರಲ್ಲಿತ್ತು. ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಒಕ್ಕೂಟವು ಕಾಂಗ್ರೆಸ್‌ಗಿಂತ ಮುನ್ನಡೆ ಸಾಧಿಸಿತ್ತು ಮತ್ತು ಕಾಂಗ್ರೆಸ್ ಪಕ್ಷದೊಳಗೆ ವ್ಯಾಪಕವಾದ ಬಂಡಾಯವಿತ್ತು. ಶಿವಸೇನೆ-ಬಿಜೆಪಿ ಒಕ್ಕೂಟವು ರಾಜ್ಯ ವಿಧಾನಸಭೆಯಲ್ಲಿ ೧೩೮ ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ ಪಕ್ಷವು ಕೇವಲ ೮೦ ಸ್ಥಾನಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಶರದ್ ಪವಾರ್ ಅವರು ಅಧಿಕಾರದಿಂದ ಕೆಳಗಿಳಿದರು ಮತ್ತು ೧೯೯೫ ರ ಮಾರ್ಚ್ ೧೪ ರಂದು ಶಿವಸೇನೆಯ ನಾಯಕರಾದ ಮನೋಹರ್ ಜೋಶಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
೧೯೯೬ ರ ಲೋಕಸಭೆಯ ಚುನಾವಣೆಗಳವರೆಗೆ, ಪವಾರ್ ಅವರು ರಾಜ್ಯ ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ೧೯೯೬ ರ ಸಾರ್ವತ್ರಿಕ ಚುನಾವಣೆಯಲ್ಲಿ ಪವಾರ್ ಅವರು ಬಾರಾಮತಿ ಕ್ಷೇತ್ರದಲ್ಲಿ ಜಯಗಳಿಸಿದರು ಮತ್ತು ಅಂದಿನಿಂದ ಅವರು ರಾಜ್ಯ ವಿಧಾನಸಭೆಗೆ ಹಿಂತಿರುಗಲಿಲ್ಲ.
೧೯೯೭ ರಿಂದ ಇಲ್ಲಿಯವರೆಗೆ
[ಬದಲಾಯಿಸಿ]೧೯೯೭ ರ ಜೂನ್‌ನಲ್ಲಿ, ಪವಾರ್ ಅವರು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸೀತಾರಾಂ ಕೇಸರಿ ಅವರನ್ನು ಎದುರಿಸಿದರು ಆದರೆ ಇದರಲ್ಲಿ ಅವರು ಯಶಸ್ವಿಯಾಗಲಿಲ್ಲ. ೧೯೯೮ ರ ಮಧ್ಯಾವಧಿಯ ಲೋಕಸಭಾ ಚುನಾವಣೆಯಲ್ಲಿ, ಶರದ್ ಪವಾರ್ ತಮ್ಮ ಕ್ಷೇತ್ರವಾದ ಬಾರಾಮತಿಯಿಂದ ಜಯಗಳಿಸಿದ್ದಲ್ಲದೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಜಯದ ನೇತೃತ್ವವನ್ನೂ ವಹಿಸಿದರು. ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಥಾವಳೆ) ಮತ್ತು ಸಮಾಜವಾದಿ ಪಾರ್ಟಿಯೊಂದಿಗೆ ಚುನಾವಣೆಯಲ್ಲಿ ಒಗ್ಗೂಡಿ ಹೋರಾಡುವ ಇವರ ನಿರ್ಧಾರವು ಫಲವನ್ನು ನೀಡಿತು ಮತ್ತು ಕಾಂಗ್ರೆಸ್ ಹಾಗೂ ಒಕ್ಕೂಟದ ಪಕ್ಷಗಳು ೪೮ ಸ್ಥಾನಗಳ ಪೈಕಿ ೩೭ ರಲ್ಲಿ ಜಯಗಳಿಸಿದವು. ೧೨ ನೇ ಲೋಕಸಭೆಯಲ್ಲಿ ಶರದ್ ಪವಾರ್ ಅವರು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು.
೧೨ ನೇ ಲೋಕಸಭೆಯನ್ನು ವಿಸರ್ಜಿಸಿದ ನಂತರ ಮತ್ತು ೧೩ ನೇ ಲೋಕಸಭಾ ಚುನಾವಣೆಯು ನಡೆಯಲಿದ್ದಾಗ, ಪವಾರ್, ಪಿ.ಎ. ಸಂಗ್ಮಾ ಮತ್ತು ತಾರೀಕ್ ಅನ್ವರ್ ಅವರುಗಳು ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಜನಿಸಿದ ವ್ಯಕ್ತಿಯನ್ನೇ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಪ್ರತಿಬಿಂಬಿಸಬೇಕೇ ಹೊರತು ಇಟಲಿಯಲ್ಲಿ ಜನಿಸಿದ ಮತ್ತು ಆಗ ತಾನೇ ರಾಜಕೀಯಕ್ಕೆ ಪ್ರವೇಶಿಸಿ ಕೇಸರಿಯವರ ಬಳಿಕ ಕಾಂಗ್ರೆಸ್ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ ಸೋನಿಯಾ ಗಾಂಧಿ ಅವರನ್ನಲ್ಲ ಎಂದು ಒತ್ತಾಯಿಸಿದರು.
೧೯೯೯ ರ ಜೂನ್‌ನಲ್ಲಿ, ಪವಾರ್ ಮತ್ತು ಸಂಗ್ಮಾ ಅವರುಗಳು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದರು. ೧೯೯೯ ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತವನ್ನು ಗಳಿಸದ ಕಾರಣದಿಂದ ಇವರ ಪಕ್ಷವು ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಬೇಕಾಯಿತು. ಆದರೆ ಪವಾರ್ ಅವರು ರಾಜ್ಯ ರಾಜಕಾರಣಕ್ಕೆ ಮರಳಲಿಲ್ಲ ಮತ್ತು ಕಾಂಗ್ರೆಸ್‌ನ ವಿಲಾಸ್‌ರಾವ್ ದೇಶಮುಖ್ ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಪವಾರ್ ಅವರ ಎನ್‌ಸಿಪಿ ಪಕ್ಷವನ್ನು ಪ್ರತಿನಿಧಿಸುವ ಚಗಲ್ ಭುಜಬಲ್ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆಮಾಡಲಾಯಿತು. ಒಕ್ಕೂಟವು ಇಲ್ಲಿಯವರೆಗೆ ರಾಷ್ಟ್ರೀಯ ಮತ್ತು ರಾಜ್ಯ ಹಂತದಲ್ಲಿ ಬಾಳಿಕೊಂಡು ಬಂದಿದೆ.
೨೦೦೪ ರ ಲೋಕಸಭೆಯ ಚುನಾವಣೆಗಳ ನಂತರ, ಪವಾರ್ ಅವರು ಮನಮೋಹನ್ ಸಿಂಗ್ ಅವರ ನೇತೃತ್ವದ ರಾಷ್ಟ್ರೀಯ ಪ್ರಗತಿಪರ ಒಕ್ಕೂಟ ಸರ್ಕಾರವನ್ನು ಸೇರಿದರು ಮತ್ತು ಕೃಷಿ ಸಚಿವರಾದರು.
೨೦೦೫ ರ ನವೆಂಬರ್ ೨೯ ರಂದು, ಪವಾರ್ ಅವರು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಆಯ್ಕೆಯಾದರು.
೨೦೦೯ ರ ಮೇ ೨೮ ರಂದು ಇವರನ್ನು ಕೇಂದ್ರದ ಕೃಷಿ ಮತ್ತು ನಾಗರಿಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಸಚಿವರನ್ನಾಗಿ ನೇಮಕ ಮಾಡಲಾಯಿತು
ಅಪರಾಧಿ-ರಾಜಕಾರಣಿಗಳ ಸಂಬಂಧ
[ಬದಲಾಯಿಸಿ]೨೦೦೨-೦೩ ರಲ್ಲಿ, ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿಗಳಾಗಿದ್ದ ಸುಧಾಕರ ರಾವ್ ಅವರು ಹೇಳಿಕೆಯೊಂದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಪಕ್ಷದಲ್ಲಿನ ರಾಜ್ಯದ ನಾಯಕರು ಮತ್ತು ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಶರದ್ ಪವಾರ್ ಅವರು ಹೆಸರಾಂತ ಕ್ರಿಮಿನಲ್ ಹಾಗೂ ಪ್ರಸ್ತುತ ರಾಜಕಾರಣಿಯಾಗಿರುವ "ಪಪ್ಪು ಕಲನಿ ಅವರ ಪರವಾಗಿ ಮೃದು ಧೋರಣೆ" ತಾಳುವಂತೆ ಅವರಿಗೆ ಹೇಳಿದ್ದರು ಎಂಬುದನ್ನು ತಿಳಿಸಿದರು.[೯] ಶಿವಸೇನೆಯ ಮುಖ್ಯಸ್ಥರಾದ ಬಾಳ್ ಠಾಕ್ರೆಯವರು ನಂತರ ಈ ಆರೋಪಗಳನ್ನು ಅನುಮೋದಿಸಿದರು.[೧೦] ಹೆಚ್ಚಿನದಾಗಿ, ಕಲನಿ ಹಾಗೂ ಮತ್ತೊಬ್ಬ ಕ್ರಿಮಿನಲ್ ಹಾಗೂ ರಾಜಕಾರಣಿಯಾಗಿರುವ ವಿರಾರ್ನ ಹಿತೇಂದ್ರ ಠಾಕೂರ್ ಅವರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಶರದ್ ಪವಾರ್ ಅವರ ಅಣತಿಯಂತೆ ಟಿಕೆಟ್ ನೀಡಲಾಗಿದೆ ಮತ್ತು ಮುಂಬಯಿಯಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆಯ ನಂತರ ಅದಕ್ಕೆ ಸಂಬಂಧಿಸಿದ ಪಾತ್ರಕ್ಕಾಗಿ ಬಂಧಿಸಲ್ಪಟ್ಟ ನಾಯ್ಕ್ ಅವರ ಕುರಿತಾಗಿ ಪೊಲೀಸರಿಗೆ ಮೃದು ಧೋರಣೆ ತಾಳಲು ಪವಾರ್ ಅವರು ಹೇಳಿದ್ದಾರೆ ಎಂಬುದಾಗಿಯೂ ಸುಧಾಕರರಾವ್ ಆರೋಪಿಸಿದರು.[೧೧]
ಭ್ರಷ್ಟಾಚಾರದ ಆರೋಪಗಳು
[ಬದಲಾಯಿಸಿ]ವಿವಿಧ ಸುದ್ದಿ ಚಾನೆಲ್‌ಗಳು ಚಿತ್ರೀಕರಿಸಿರುವ ೬೦೦ ಬಿಲಿಯನ್ ರೂಪಾಯಿ ಮೊತ್ತದ ಸ್ಟ್ಯಾಂಪ್ ಪೇಪರ್ ಹಗರಣದ ಆರೋಪಿ ಅಬ್ದುಲ್ ಕರೀಮ್ ತೇಲಗಿಯ ನ್ಯಾಕ್ರೋ ಅನಾಲಿಸಿಸ್ನಲ್ಲಿಯೂ ಸಹ ಅವನು ಪವಾರ್ ಹಾಗೂ ಚಗಲ್ ಭುಜಬಲ್ ಅವರ ಹೆಸರನ್ನೂ ಕೂಡ ಪ್ರಸ್ತಾಪಿಸಿದ್ದನು.[೧೨]
ಶರದ್ ಪವಾರ್ ಅವರು ಬಂಟ ಲಖನ್ ಸಿಂಗ್ ಮೂಲಕ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನ ಜೊತೆಗೆ ಮತ್ತು ಶಹೀದ್ ಬಲ್ವಾನ ಜೊತೆಗೂ ನಿಕಟವಾದ ಸಂಪರ್ಕವವನ್ನು ಹೊಂದಿದ್ದಾರೆ.ಪುಣೆಯ ಯೆರವಾಡಾದಲ್ಲಿನ ವಿವಾದಾಸ್ಪದ ಡಿಬಿ ರಿಯಾಲ್ಟಿಯ ಬೃಹತ್-ವಾಣಿಜ್ಯಿಕಯೋಜನೆಯನ್ನು ಪವಾರ್ ಅವರ ಮಿತ್ರರಾದ ಅತುಲ್ ಚೋರ್ಡಿಯಾ ಅವರು ನಿರ್ಮಿಸಿದ ಪಂಚಶಾಲಿ ಟೆಕ್ ಪಾರ್ಕ್‌ನ ಸರ್ವೇ ಸಂಖ್ಯೆ (೧೯೧A) ನಲ್ಲೇ ನಿರ್ಮಾಣ ಮಾಡುತ್ತಿರುವ ಕುರಿತಂತೆಯೂ ಮತ್ತೊಂದು ವಿಷಯ ಬಯಲಾಗಿತ್ತು. ಬಲ್ವಾ ಅವರೇ ಎರಡು ಯೋಜನೆಗಳಿಗೆ ಪರಿಸರ ಇಲಾಖೆಯ ಅನುಮತಿಗೆ ಅರ್ಜಿ ಸಲ್ಲಿಸಿದ್ದರು ಎಂದು ಖಾಡ್ಸೆ ಅವರು ಆರೋಪಿಸಿದರು ಮತ್ತು ಇದನ್ನು ಚೋರ್ಡಿಯಾ ಅವರು ನಿರಾಕರಿಸಿದರು. ತಾಳೆ ಹೊಂದುವಂತೆ, ಚೋರ್ಡಿಯಾ ಅವರ ಪಂಚಶೀಲ ಪ್ರೈವೇಟ್ ಲಿಮಿಡೆಟ್ ಕಂಪನಿಯು ಪವಾರ್ ಅವರ ಪುತ್ರಿ ಸುಪ್ರಿಯಾ ಸೂಳೆ ಮತ್ತು ಅವರ ಗಂಡ ಸದಾನಂದ ಅವರನ್ನು ಹೂಡಿಕೆದಾರರಾಗಿ ಒಳಗೊಂಡಿತ್ತು.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿರುವ ರಾಜ್ಯದ ಗೃಹ ಇಲಾಖೆಯು ಯರವಾಡಾದಲ್ಲಿನ ಪೊಲೀಸ್ ಸ್ಟೇಶನ್‌ನ "ಮರು-ನಿರ್ಮಾಣ"ಕ್ಕಾಗಿ ೩ ಎಕರೆ ಭೂಮಿಯನ್ನು ಹಸ್ತಾಂತರಿಸುವ ಬಗ್ಗೆ ಡಿಜಿ ರಿಯಾಲ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡ ಕಾರಣಕ್ಕಾಗಿಯೂ ಬಲ್ವಾ ಅವರ ಯೆರವಾಡಾ ನಿರ್ಮಾಣವು ಗಮನ ಸೆಳೆದಿತ್ತು. ಇದನ್ನು ಪುಣೆ ಪೊಲೀಸ್ ಇಲಾಖೆಯ ವಿರೋಧದ ನಡುವೆಯೂ ಮಾಡಲಾಗಿತ್ತು. ಬಾಲ್ವಾ ಅವರ ಬಂಧನದ ನಂತರವೇ ಅವಮಾನಕ್ಕೊಳಗಾದ ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು ನಿರ್ಧಾರವನ್ನು ಪುನರ್ ಪರಿಶೀಲಿಸಲು ಒಪ್ಪಿಕೊಂಡಿತು.
ಪವಾರ್ ಕುಟುಂಬವು ಪುಣೆ-ಮುಂಬಯಿ ವಲಯದಲ್ಲಿನ ಲಾಭದಾಯಕ ರಿಯಲ್ ಎಸ್ಟೇಟ್ ಯೋಜನೆಗಳೊಂದಿಗೆ ಗೀಳನ್ನು ಅಂಟಿಸಿಕೊಂಡಿತ್ತೇ?
ಲಾವಾಸಾ ವಿಷಯವು ಚಿರಪರಿಚಿತವಾಗಿದೆ. ಡಿಎನ್‌ಎಯೊಂದಿಗಿನ ಸಂದರ್ಶನದಲ್ಲಿ ಪವಾರ್ ಅವರು ಬಹಿರಂಗಪಡಿಸಿದಂತೆ, ಅವರೇ ಪುಣೆ ಜಿಲ್ಲೆಯಲ್ಲಿನ ಲಾವಾಸಾ ಲೇಕ್ ಪಾರ್ಕ್ ಸಿಟಿಗೆ ಜಾಗವನ್ನು ಆಯ್ಕೆ ಮಾಡಿದ್ದರು. ಆನಂತರ ಪವಾರ್ ಅವರ ಚಿರಪರಿಚಿತ ಸಹಯೋಗಿ ಮತ್ತು ಬಿಲ್ಡರ್ ಆದ ಅನಿರುದ್ಧ ದೇಶಪಾಂಡೆ ಅವರು ಯೋಜನೆಯನ್ನು ಮುಂದುವರಿಸಲು ಪರ್ಲಿ ಬ್ಲೂ ಲೇಕ್ ರೆಸಾರ್ಟ್ಸ್ ಪ್ರ್ರೈವೇಟ್ ಲಿಮಿಟೆಡ್ ಅನ್ನು ಹುಟ್ಟು ಹಾಕಿದರು. ದೇಶಪಾಂಡೆ ಸಿಟಿ ಕಾರ್ಪೊರೇಶನ್ ಲಿಮಿಟೆಡ್‌ನಲ್ಲಿ ಪವಾರ್ ಕುಟುಂಬದವರು ಷೇರುಗಳನ್ನು ಹೊಂದಿದ್ದಂತೆಯೇ ಅದೇ ಕಂಪನಿಯು ವಿವಾದಾತ್ಮಕ ಐಪಿಎಲ್ ಬಿಡ್ ಅನ್ನು ಮಾಡಿತು - ದೇಶಪಾಂಡೆಯವರಿಂದ ಯೋಜನೆಯನ್ನು ಪಡೆದುಕೊಂಡ ಅಜಿತ್ ಗುಲಾಬ್‌ಚಂದ್ ಅವರ ಲಾವಾಸಾ ಕಾರ್ಪೊರೇಶನ್‌ನಲ್ಲಿ ಪವಾರ್ ಅವರ ಮಗಳು ಮತ್ತು ಅಳಿಯ ಮುಖ್ಯ ಷೇರುದಾರರಾಗಿದ್ದರು.
ಚೋರ್ಡಿಯಾ ಅವರ ಪಂಚಶೀಲ ರಿಯಾಲ್ಟಿ, ದೇಶಪಾಂಡೆಯವರ ಸಿಟಿ ಕಾರ್ಪೊರೇಶನ್ ಮತ್ತು ಗುಲಾಬ್‌ಚಂದ್ ಅವರ ಲಾವಾಸಾ ಕಾರ್ಪೊರೇಶನ್ ಕಂಪನಿಗಳು ಬೃಹತ್ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದವು ಮತ್ತು ಇಲ್ಲಿಯೇ ಪವಾರ್ ಕುಟುಂಬದ ಸಂಬಂಧಗಳು ಬಹಿರಂಗಗೊಂಡವು. ಭವಿಷ್ಯದಲ್ಲಿ ಇನ್ನಷ್ಟು ಆಶ್ಚರ್ಯಕಾರಿ ಸುದ್ದಿಗಳು ಹೊರಬರುವವೇ?
ಗೋಧಿ ಆಮದು ಒಳಗೊಂಡಿರುವ ಬಹು-ಕೋಟಿ ಹಗರಣದಲ್ಲಿ ಪವಾರ್ ಅವರು ಒಳಗೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪಕ್ಷವು ಅವರ ರಾಜೀನಾಮೆಗೆ ಒತ್ತಾಯಿಸಿತು. ೨೦೦೭ ರ ಮೇ ತಿಂಗಳಿನಲ್ಲಿ ಗೋಧಿಯನ್ನು ಪಡೆಯಲು ಭಾರತೀಯ ಆಹಾರ ನಿಗಮವು ಟೆಂಡರ್ ಕರೆದಿದ್ದ ಸಂದರ್ಭದಲ್ಲಿ ೨೬೩ USD/ಟನ್‌ನಷ್ಟು ಅತ್ಯಂತ ಕಡಿಮೆ ಬಿಡ್ ಸ್ವೀಕರಿಸಿದಾಗ ರದ್ದುಗೊಳಿಸಲಾಯಿತು. ಆನಂತರ ಸರ್ಕಾರವು ರೈತರಿಂದ ಖಾಸಗಿ ವ್ಯಾಪಾರಿಗಳು ನೇರವಾಗಿ ಖರೀದಿಸಲು ಅನುಮತಿಸಿತು ಮತ್ತು ಇದರ ಪರಿಣಾಮವಾಗಿ ಆ ವರ್ಷ ಎಫ್‌ಸಿಐ ಗೋದಾಮುಗಳಲ್ಲಿ ಗೋಧಿಯನ್ನು ಶೇಖರಿಸಲು ಕೊರತೆ ಉಂಟಾಯಿತು. ೨೦೦೭ ರ ಜುಲೈ ತಿಂಗಳ ಒಳಗೆ ಎಫ್‌ಸಿಐನಲ್ಲಿನ ಕೊರತೆಯು ಎಷ್ಟು ತೀವ್ರವಾಯಿತೆಂದರೆ ೩೨೦-೩೬೦ USD/ಟನ್ ಹೆಚ್ಚಿನ ದರದಲ್ಲಿ ಗೋಧಿಯವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಯಿತು. ದೇಶೀಯವಾಗಿ ಈ ಮೊದಲು ಪ್ರತಿ ಟನ್‌ಗೆ ರೂ ೯೦೦ ಲೆಕ್ಕದಲ್ಲಿ ಗೋಧಿಯನ್ನು ಖರೀದಿಸಿದ ವ್ಯಾಪಾರಿಗಳು ಇದರ ಲಾಭವನ್ನು ಪಡೆದು ಇದೀಗ ಅದನ್ನು ಎಫ್‌ಸಿಐಗೆ ಪ್ರತಿ ಟನ್‌ಗೆ ರೂ ೧೩೦೦ ರಂತೆ ಮಾರಾಟ ಮಾಡುತ್ತಿದ್ದಾರೆ.[೧೩][೧೪]
೨೦೦೭ ರ ಅಕ್ಟೋಬರ್ ೨೭ ರಂದು, ಶರದ್ ಪವಾರ್, ಅಜಿತ್ ಪವಾರ್ ಮತ್ತು ಸದಾನಂದ ಸೂಳೆ (ಶರದ್ ಪವಾರ್ ಅವರ ಅಳಿಯ) ಅವರ ನೇತೃತ್ವದ ಸಂಸ್ಥೆಗಳಿಗೆ ಜೊತೆಗೆ ಅದೇ ರೀತಿಯ ನೋಟೀಸ್ ಅನ್ನು ಮಹಾರಾಷ್ಟ್ರ ಕೃಷ್ಣ ವ್ಯಾಲಿ ಡೆವಲೆಪ್‌ಮೆಂಟ್ ಕಾರ್ಪೊರೇಶನ್ (ಎಮ್‌ಕೆವಿಡಿಸಿ) ಗೆ ಜಾರಿ ಮಾಡಿದ ಬಾಂಬೆ ಹೈಕೋರ್ಟ್, ಪವಾರ್ ಮತ್ತು ಅವರ ಕುಟುಂಬಕ್ಕೆ ವಿಶೇಷ ಸವಲತ್ತುಗಳನ್ನು ಕೊಟ್ಟಿದ್ದು ಏಕೆ ಎಂದು ಕೇಳಿತು. ೨೦೦೨ ರಲ್ಲಿ ಪುಣೆಯಲ್ಲಿ ಮಾಡಿದ ಭೂ ಹಂಚಿಕೆಗಳು ಕಾನೂನುಬಾಹಿರವೆಂದು ಶಾಮ್‌ಸುಂದರ್ ಪೋತರೆ ಅವರು ಸಲ್ಲಿಸಿದ್ದ ೨೦೦೬ ರ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಂಖ್ಯೆ ೧೪೮ ರ ಕುರಿತಂತೆ ಪರಿಗಣಿಸಿ ಈ ನೋಟೀಸ್ ಅನ್ನು ಜಾರಿ ಮಾಡಲಾಗಿತ್ತು. ನಮೂದಿಸಿದ ಸಂಸ್ಥೆಗಳು ಮತ್ತು ಆಸ್ತಿಗಳಲ್ಲಿ ಇವುಗಳು ಒಳಗೊಂಡಿದ್ದವು:
- ಶರದ್ ಪವಾರ್ ಅವರು ಮುಖ್ಯಸ್ಥರಾಗಿರುವ ಶೈಕ್ಷಣಿಕ ಸಂಸ್ಥೆ ವಿದ್ಯಾ ಪ್ರತಿಷ್ಠಾನಕ್ಕೆ ಹಂಚಿಕೆ ಮಾಡಲಾಗಿದ್ದ ಎರಡು 141.15-acre (0.5712 km2) ಜಮೀನುಗಳು
- ಮಹಾರಾಷ್ಟ್ರ ರಾಜ್ಯದ ನೀರಾವರಿ ಸಚಿವ ಮತ್ತು ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಮುಖ್ಯಸ್ಥರಾಗಿರುವ ಅನಂತ ಸ್ಮೃತಿ ಪ್ರತಿಷ್ಠಾನಕ್ಕೆ ಹಂಚಿಕೆ ಮಾಡಲಾಗಿದ್ದ 2-acre (8,100 m2) ಜಮೀನು
- ಆ ಸಮಯದಲ್ಲಿ ಶರದ್ ಪವಾರ್ ಅವರ ಅಳಿಯ ಸದಾನಂದ ಸೂಳೆಯವರ ಮಾಲೀಕತ್ವದ ಲಾವಾಸಾ ಕಾರ್ಪೊರೇಶನ್‌ಗೆ ಹಂಚಿಕೆ ಮಾಡಲಾಗಿದ್ದ ೧೩೦,೦೦೦ ಚದರ ಮೀಟರ್ (೩೨.೧೨ ಎಕರೆ) ಜಮೀನು. ಈ ಹಕ್ಕನ್ನು ೨೦೦೬ ರಲ್ಲಿ ಅವರು ಹಸ್ತಾಂತರಿಸಿದರು.
- ಶಿವಾಜಿನಗರ ಕೃಷಿ ಕಾಲೇಜಿಗೆ ಹಂಚಿಕೆ ಮಾಡಲಾಗಿದ್ದ 1-acre (4,000 m2) ಜಮೀನು
- ಶರದ್‌ಚಂದ್ರಜೀ ಸ್ಕೌಟ್ ಮತ್ತು ಗೈಡ್ ತರಬೇತಿ ಸಂಸ್ಥೆಗೆ ಹಂಚಿಕೆ ಮಾಡಲಾಗಿದ್ದ 3-acre (12,000 m2) ಜಮೀನು
ಈ ಹಂಚಿಕೆಗಳನ್ನು ಆ ಸಮಯದಲ್ಲಿ ಎಮ್‌ಕೆವಿಡಿಸಿ ಮುಖ್ಯಸ್ಥರಾಗಿದ್ದ ಎನ್‌ಸಿಪಿ ನಾಯಕ ಮತ್ತು ಮಂತ್ರಿ ರಾಮರ್ಜಿ ನಾಯ್ಕ್ ನಿಂಬಾಳ್ಕರ್ ಅವರ ಅಡಿಯಲ್ಲಿ ಮಾಡಲಾಗಿದ್ದಿತು.[೧೫][೧೬] ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಸಂದರ್ಭದಲ್ಲಿ ವಿಷಯವು ವಿಚಾರಣಾಧೀನ ವಾಗಿದ್ದರೂ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಕ್ಕಾಗಿ ಸಂಬಂಧಿಸಿದಂತೆ ೨೦೦೮ ರ ಮೇ ೧ ರಂದು ಶರದ್ ಪವಾರ್ ಅವರಿಗೆ ನ್ಯಾಯಾಲಯದ ಉಲ್ಲಂಘನೆಯ ನೋಟೀಸ್ ಅನ್ನು ಜಾರಿ ಮಾಡಲಾಯಿತು, ಆದರೆ ನಂತರ ಇದನ್ನು ನ್ಯಾಯಾಲಯವು ತಿರಸ್ಕರಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ, ವಿವಾದದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿ ಆಸಕ್ತಿಗಳನ್ನು ಸೃಷ್ಟಿಸದಂತೆ ಮತ್ತು ಸ್ವಂತ ಖಾತ್ರಿಯಲ್ಲಿ ಯಾವುದೇ ನಿರ್ಮಾಣವನ್ನು ಕೈಗೆತ್ತಿಕೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಲಾಯಿತು.[೧೭][೧೮]
ಪವಾರ್ ಅವರು ತಮ್ಮ ಆಸ್ತಿಯು ೩.೬ ಕೋಟಿ ರೂಪಾಯಿಗಳೆಂದು ಘೋಷಿಸಿದ್ದರೂ, ಇತ್ತೀಚಿನ ಐಪಿಎಲ್ ಪುಣೆ ತಂಡದ ಬಿಡ್ಡಿಂಗ್‌ನಲ್ಲಿ ಅವರು ಸಿಟಿ ಫೈನಾನ್ಸ್‌ನಲ್ಲಿ ೧೬% ಹಕ್ಕು ಹೊಂದಿರುವುದು ಬಹಿರಂಗಗೊಂಡಿತು. ಐಪಿಎಲ್ ಪುಣೆ ತಂಡವು ಎಣಿಕೆಯ ಪ್ರಕಾರ ೧೨೦೦ ಕೋಟಿ ರೂಪಾಯಿಗಳಷ್ಟು ಮೌಲ್ಯ ಹೊಂದಿದೆ. ಆ ಪ್ರಕಾರವಾಗಿ, ರಾಯಲ್ ಚಾಲೆಂಚರ್ಸ್ ಬೆಂಗಳೂರು ತಂಡದಲ್ಲಿ ಅವರ ೦.೦೫% ಹಕ್ಕಿನ ಮೌಲ್ಯವು ೬ ಕೋಟಿಗಳಾಗಿದೆ. ಪವಾರ್ ಅವರು ನಿರಂತರವಾಗಿ ಯಾವುದೇ ಐಪಿಎಲ್ ಹಕ್ಕನ್ನು ನಿರಾಕರಿಸಿದರು, ಆದರೆ ಇದೀಗ ಅದನ್ನು ಸಾರ್ವಜನಿಕವಾಗಿ ಘೋಷಿಸಬೇಕಾಗಿದೆ.
ಪವಾರ್ ಅವರು ಧಾರ್ಮಿಕ ಸಂಸ್ಥೆಗಳ ಕಾಯಿದೆ ೧೯೮೮ (ದುರ್ಬಳಕೆಯ ತಪ್ಪಿಸುವಿಕೆ)ಯ ದೋಷಾರೋಪಣೆಗೆ ಒಳಗಾಗಿರುವ ಅಪರಾಧಿ ಎಂದು ನೋ ಕ್ರಿಮಿನಲ್ಸ್ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲ್ಪಟ್ಟಿದ್ದಾರೆ.[೧೯]
ಪವಾರ್ ಅವರನ್ನು ಕೃಷಿ ಇಲಾಖೆಯ ಕ್ಯಾಬಿನೆಟ್ ಮಂತ್ರಿಯಾಗಿ ನೇಮಕ ಮಾಡಿದಾಗಿನಿಂದ, ಅವರು ಕೃಷಿ ಉತ್ಪನ್ನಗಳ ಭಾರಿ ಏರಿಕೆಯನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂದು ನಿರಂತರವಾಗಿ ಆರೋಪಗಳು ಕೇಳಿಬಂದಿವೆ.
- ೨೦೦೭ ರಲ್ಲಿ ಗೋಧಿ ಆಮದು - ದೋಷಯುಕ್ತ ಕೆಂಪು ಗೋಧಿಯನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಪ್ರಶ್ನಿಸಿ ಮತ್ತು ವಿವಿಧ ರಾಜ್ಯಗಳಿಂದ ಬೆಳೆಯನ್ನು ಪಡೆದ ವಿವರಗಳನ್ನು ಮತ್ತು ಅದನ್ನು ಆಮದು ಮಾಡಿಕೊಳ್ಳುವ ನಿಖರವಾದ ಪ್ರಕ್ರಿಯೆ ವಿವರಗಳನ್ನು ಸಲ್ಲಿಸುವಂತೆ ಕೇಂದ್ರೀಯ ಕೃಷಿ ಮಂತ್ರಿಯವರಾದ ಶರದ್ ಪವಾರ್ ಅವರಿಗೆ ಬಾಂಬೆ ಹೈಕೋರ್ಟ್ ನೋಟೀಸುಗಳನ್ನು ಜಾರಿ ಮಾಡಿತು.[೨೦]
- ೨೦೦೯ ರಲ್ಲಿ ಸಕ್ಕರೆ ದರಗಳು - ಮಾರಾಟಗಾರರು ಮತ್ತು ಆಮದುದಾರರಿಗೆ ಲಾಭವನ್ನು ತರುವುದಕ್ಕೋಸ್ಕರ ಸಕ್ಕರೆಯ ದರಗಳಲ್ಲಿ ತೀರಾ ಹೆಚ್ಚಳವನ್ನು ಮಾಡಲಾಗಿದೆ ಎಂದು ಶರದ್ ಪವಾರ್ ಅವರ ವಿರುದ್ಧ ಬಿಜೆಪಿ ಮತ್ತು ಸಿಪಿಐ(ಎಂ) ಒಳಗೊಂಡು ವಿರೋಧ ಪಕ್ಷಗಳು ಆರೋಪ ಮಾಡಿದವು.[೨೧]
- ೨೦೧೦-೧೧ ರಲ್ಲಿ ಈರುಳ್ಳಿಯ ಬೆಲೆಗಳು - ಈ ಸಮಸ್ಯೆಯ ಕುರಿತಂತೆ ಶರದ್ ಪವಾರ್ ಅವರೇ ಜವಾಬ್ದಾರರೆಂದು ವಿರೋಧ ಪಕ್ಷಗಳು ಆರೋಪ ಮಾಡಿದವು.[೨೨]
[http://www.downtoearth.org.in/node/33283 ಬಹು ಕೋಟಿ ಲಾವಾಸಾ ಭೂಮಿ ಹಗರಣದಲ್ಲಿ ಶರದ್ ಪವಾರ್, ಅಜಿತ್ ಪವಾರ್ ಮತ್ತು ಸುಪ್ರಿಯಾ ಸೂಳೆಯವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ.[೨೩]
ಎಂಡೋಸಲ್ಫಾನ್
[ಬದಲಾಯಿಸಿ]ವಿಶ್ವದಾದ್ಯಂತ ಬಹುತೇಕ ಎಂಡೋಸಲ್ಫಾನ್ ಅನ್ನು ನಿಷೇಧಿಸಿದ್ದರೂ ಕೂಡ, ಭಾರತ ದೇಶವು ಮಾತ್ರ ಎಂಡೋಸಲ್ಫಾನ್‌ನ ಜಾಗತಿಕ ನಿಷೇಧದ ವಿರುದ್ಧವಿದೆ. ಎಂಡೋಸಲ್ಫಾನ್ ಇನ್ನೂ ಕೂಡ ಅಪಾಯಕಾರಿ ಎಂದು ಸಾಬೀತಾಗಿಲ್ಲ ಎಂದು ಇತ್ತೀಚೆಗೆ ಶರದ್ ಪವಾರ್ ಅವರು ಹೇಳಿಕೆ ನೀಡಿದರು. ಮೇಲಿನ ಹೇಳಿಕೆಯು ವಂದನಾ ಶಿವರಂತಹ ಕಾರ್ಯಕರ್ತರು ಶರದ್ ಪವಾರ್ ಅವರನ್ನು ಭ್ರಷ್ಟ ಸಚಿವರೆದಂ ಕರೆಯಲು ಕಾರಣವಾಯಿತು
ಕ್ರೀಡಾ ಆಡಳಿತ
[ಬದಲಾಯಿಸಿ]ಪವಾರ್ ಅವರು ಕಬಡ್ಡಿ, ಖೋ ಖೋ, ಕುಸ್ತಿ ಮತ್ತು ಕ್ರಿಕೆಟ್‌ನಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಪವಾರ್ ಅವರು ಈ ಕೆಳಗಿನ ಸಂಸ್ಥೆಗಳನ್ನು ಒಳಗೊಂಡು ವಿವಿಧ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ
- ಮುಂಬಯಿ ಕ್ರಿಕೆಟ್ ಅಸೋಸಿಯೇಷನ್
- ಮಹಾರಾಷ್ಟ್ರ ಕುಸ್ತಿ ಅಸೋಸಿಯೇಶನ್
- ಮಹಾರಾಷ್ಟ್ರ ಕಬಡ್ಡಿ ಅಸೋಸಿಯೇಶನ್
- ಮಹಾರಾಷ್ಟ್ರ ಖೋ ಖೋ ಅಸೋಸಿಯೇಶನ್
- ಮಹಾರಾಷ್ಟ್ರ ಒಲಿಂಪಿಕ್ ಅಸೋಸಿಯೇಶನ್
- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರು ೨೦೦೫ - ೨೦೦೮
- ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಉಪಾಧ್ಯಕ್ಷರು [೨೪]
- ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರು [೨೫]
ಪವಾರ್ ಅವರು ಕಳೆದ ೨೨ ವರ್ಷಗಳಿಂದ ಪುಣೆ ಅಂತರಾಷ್ಟ್ರೀಯ ಮ್ಯಾರಥಾನ್ ಅನ್ನು ಸಂಘಟಿಸುತ್ತಿರುವ ಪುಣೆ ಅಂತರಾಷ್ಟ್ರೀಯ ಮ್ಯಾರಥಾನ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ]ಇವರಿಗೆ ೨೦೧೭ರ ಸಾಲಿನ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.[೨೬]
ಉಲ್ಲೇಖಗಳು
[ಬದಲಾಯಿಸಿ]- ↑ http://www.encyclopedia.com/doc/೧P೩-೧೨೯೬೨೩೯೭೦೧.html
- ↑ "ಶರದ್ ಪವಾರ್ - ಎಮ್ಎಎಸ್‌ನಿಂದ ಕಿರು ಜೀವನ ಚರಿತ್ರೆ". Archived from the original on 2011-07-27. Retrieved 2021-08-10.
- ↑ Hazarika, Sanjoy (May 22, 1991). "ASSASSINATION IN INDIA; Indians Express Anger, Revulsion and Disbelief". New York Times. Retrieved 2009-04-05.
- ↑ "Gandhi". The Deseret News. May 22, 1991. Retrieved 2009-04-05.
- ↑ Crossette, Barbara (May 24, 1991). "Assassination in India: Replacing a Dynasty; Congress Party Is Scrambling to Deal With Its Dependence on One Family". New York Times. Retrieved 2009-04-05.
- ↑ "G R Khairnar". ಟೈಮ್ಸ್ ಆಫ್ ಇಂಡಿಯ. Retrieved February 5, 2011.
- ↑ Mhasawade, Shashank. "HC reinstates Khairnar with full benefits". Indian Express. Archived from the original on ಅಕ್ಟೋಬರ್ 24, 2010. Retrieved Feb 5, 2011.
- ↑ "Dani exonerates Pawar; Govt rejects report". Archived from the original on 2008-05-11. Retrieved 1998-12-31.
{{cite web}}
: Check date values in:|accessdate=
(help) - ↑ Gouri Shah (October 11, 2004). "The F-factor: Kalani certain of clean sweep". The Economic Times. Archived from the original on 2004-10-25. Retrieved 2007-05-24.
- ↑ PTI (November 18, 1998). "Thackeray blames Pawar for rise in crime". The Indian Express. Retrieved 2009-02-22.
- ↑ Prafulla Marpakwar (May 7, 1997). "Pawar men rattled by Naik's outburst". The Indian Express. Retrieved 2009-02-22.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Telgi names Sharad Pawar in scam". Sep 07, 2006. Archived from the original on ಜೂನ್ 10, 2011. Retrieved Feb 2, 2011.
Politicians are the backbone of this business
{{cite news}}
: Check date values in:|date=
(help); Unknown parameter|source=
ignored (help) - ↑ ಪವಾರ್ ಅವರ ರಾಜೀನಾಮೆ ಕೇಳಿದ ಬಿಜೆಪಿ ದಿ ಪಯೋನೀರ್ - ಜುಲೈ ೧೩, ೨೦೦೭
- ↑ ಗೋಧಿ ಆಮದು ನಾಚಿಕೆಗೇಡು: ಬಿಜೆಪಿ Archived 2007-07-16 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದೂ - ಜುಲೈ ೧೩, ೨೦೦೭
- ↑ Shiv Kumar (October 27, 2007). "Pawar in trouble over land allotment". Tribune India. Archived from the original on 2009-03-31. Retrieved 2009-02-22.
- ↑ Shloka Nath (October 27, 2007). "HC notices to Sharad Pawar, family". NDTV. Archived from the original on 2007-12-30. Retrieved 2009-02-22.
- ↑ Judge Bilal Nazki and Judge S. A. Bobde (March 12, 2008). "CIVIL APPLICATION NO.101/2007 In PIL NO.148/2006" (PDF). Bombay High Court. Archived from the original (PDF) on 2013-10-18. Retrieved 2009-02-22.
- ↑ ಟೈಮ್ಸ್ ಆಫ್ ಇಂಡಿಯ (May 1, 2008). "Notice to Sharad Pawar for contempt". ಟೈಮ್ಸ್ ಆಫ್ ಇಂಡಿಯ. Retrieved 2009-02-22.
- ↑ "Candidate Profile: Pawar Sharadchandra Govindrao". No Criminals. NoCriminals.com. Archived from the original on 2016-03-05. Retrieved 2009-03-12.
- ↑ "Wheat scam notice to Pawar". The Telegraph. November 29 , 2007. Archived from the original on ಜುಲೈ 16, 2011. Retrieved Feb 2, 2011.
{{cite news}}
: Check date values in:|date=
(help) - ↑ Joshi, Sandeep. "Sugar scam brewing, says Brinda Karat". The Hindu. Archived from the original on ಆಗಸ್ಟ್ 10, 2009. Retrieved Feb 2, 2011.
- ↑ 'ಹಗರಣಗಳ' ಬಗ್ಗೆ ಶರದ್ ಪವಾರ್ ಅವರ ರಾಜೀನಾಮೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿದ ಬಿಜೆಪಿ
- ↑ "Medha Patkar slams Pawar over alleged involvement in Lavasa project". Aurangabad: Indian Express. Dec 22 2010.
{{cite news}}
:|access-date=
requires|url=
(help); Check date values in:|date=
(help); Unknown parameter|source=
ignored (help) - ↑ https://icc-cricket.yahoo.com/about-icc/executive.html
- ↑ "Pawar takes over as ICC president". BBC News. July 1, 2010.
- ↑ "Padma Awards 2017 announced".
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಶರದ್ ಪವಾರ್ ಬಗ್ಗೆ Rediff.com ಲೇಖನ (ಏಪ್ರಿಲ್ 2004 ರಲ್ಲಿ)
- ಶರದ್ ಪವಾರ್ ಅವರ ಫೋಟೋಗಳು
- ಅಧಿಕೃತ ಎನ್‌ಸಿಪಿ ವೆಬ್‌ಸೈಟ್‌ನಲ್ಲಿ ಶರದ್ ಪವಾರ್ ಅವರ ಜೀವನ ಚರಿತ್ರೆ
- http://www.bsgindia.org/
- ಪಾರ್ಲಿಮೆಂಟ್ ಆಫ್ ಇಂಡಿಯಾ ವೆಬ್ಸೈಟ್ನ ಅಧಿಕೃತ ಜೀವನ ಚರಿತ್ರೆಯ ಸ್ಥೂಲ ಚಿತ್ರ
- ಸ್ಟ್ಯಾಂಪ್ ಕಾಗದದ ಹಗರಣದಲ್ಲಿ ಶರದ್ ಪವಾರ್ ಅವರನ್ನು ಫಲಾನುಭವಿ ಎಂದು ತೇಲಗಿ ಹೆಸರಿಸಿದ್ದಾರೆ
ಇವನ್ನೂ ಗಮನಿಸಿ
[ಬದಲಾಯಿಸಿ]- ಅಜಿತ್ ಪವಾರ್{ಎಂಎಲ್‌ಎ}], ಇವರ ಸೋದರಳಿಯ
- ಸುಪ್ರಿಯಾ ಸುಳೆ, ಇವರ ಮಗಳು, ಎಂಪಿ ಲೋಕಸಭೆ
- ಪ್ರತಾಪ್‌ರಾವ್ ಪವಾರ್ ತಮ್ಮ, ಕಾರ್ಯನಿರ್ವಾಹಕ ಅಧಿಕಾರಿ-ಸಂಪಾದಕ, ಸಕಾಲ್
- ರಾಜೇಂದ್ರ ಪವಾರ್ ಪ್ರತಾಪ್‌ರಾವ್ ಪವಾರ್ ಅವರ ಪುತ್ರ
ಇನ್ನಷ್ಟು ಓದು/ಮೂಲಗಳು
[ಬದಲಾಯಿಸಿ]- ಪಿ.ಕೆ. ರವೀಂದ್ರನಾಥ್ (ಫೆಬ್ರವರಿ ೧, ೧೯೯೨) ಶರದ್ ಪವಾರ್- ದಿ ಮೇಕಿಂಗ್ ಆಫ್ ಎ ಮಾಡರ್ನ್ ಮಾರಾಠಾ ಸೌತ್ ಏಷ್ಯಾ ಬುಕ್ಸ್. ISBN ೮೧-೮೫೬೭೪-೪೬-೯
- ಟೈಮ್ಸ್ ಆಫ್ ಇಂಡಿಯಾದ ಪುಟ ೨೩, ನವದೆಹಲಿ, ಮಂಗಳವಾರ, ಡಿಸೆಂಬರ್ ೧೨, ೨೦೦೬.
Political offices | ||
---|---|---|
ಪೂರ್ವಾಧಿಕಾರಿ unknown |
Minister of Agriculture ?-present |
Incumbent |
ಪೂರ್ವಾಧಿಕಾರಿ unknown |
Minister of Consumer Affairs, Food and Public Distribution ?-present |
Incumbent |
ಪೂರ್ವಾಧಿಕಾರಿ Vasantdada Patil |
Chief Minister of Maharashtra 18 July 1978 – 17 February 1980 |
ಉತ್ತರಾಧಿಕಾರಿ A R Antule |
ಪೂರ್ವಾಧಿಕಾರಿ Shankarrao Chavan |
Chief Minister of Maharashtra 26 June 1988 – 25 June 1991 |
ಉತ್ತರಾಧಿಕಾರಿ Sudhakarrao Naik |
ಪೂರ್ವಾಧಿಕಾರಿ Shankarrao Chavan |
Chief Minister of Maharashtra 6 March 1993 – 14 March 1995 |
ಉತ್ತರಾಧಿಕಾರಿ Manohar Joshi |
ಪೂರ್ವಾಧಿಕಾರಿ Rameshwar Thakur |
Presidents of the Bharat Scouts and Guides 2001–2004 |
ಉತ್ತರಾಧಿಕಾರಿ Rameshwar Thakur |
- CS1 errors: dates
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: unsupported parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: access-date without URL
- Articles with unsourced statements from February 2009
- Articles with invalid date parameter in template
- Persondata templates without short description parameter
- 1940ರಲ್ಲಿ ಜನಿಸಿದವರು
- ಬದುಕಿರುವ ಜನರು
- ಭಾರತೀಯ ರಾಜಕಾರಣಿಗಳು
- ಮಹಾರಾಷ್ಟ್ರದ ಮುಖ್ಯಮಂತ್ರಿಗಳು
- ಮಹಾರಾಷ್ಟ್ರದ ರಾಜಕಾರಣಿಗಳು
- ಕ್ರಿಕೆಟ್ ಆಡಳಿತಾಧಿಕಾರಿಗಳು
- ಪುಣೆಯ ಜನರು
- ಭಾರತದ ಸಚಿವ ಸಂಪುಟದ ಸದಸ್ಯರು
- ಮಹಾರಾಷ್ಟ್ರದ ಜನರು
- 15ನೆಯ ಲೋಕಸಭೆಯ ಸದಸ್ಯರು
- 14ನೇ ಲೋಕಸಭೆಯ ಸದಸ್ಯರು
- ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು
- ಮಹಾರಾಷ್ಟ್ರದಿಂದ ಚುನಾಯಿತರಾದ ಸಂಸತ್ತಿನ ಸದಸ್ಯರು
- ಭಾರತದಲ್ಲಿ ಸ್ಕೌಟ್ ಮತ್ತು ಗೈಡ್
- ದೈಹಿಕ ಅಸಾಮರ್ಥ್ಯವುಳ್ಳ ರಾಜಕಾರಣಿಗಳು
- ಮರಾಠಿ ರಾಜಕಾರಣಿಗಳು
- ಮರಾಠಿ ಜನರು
- ಮಹಾರಾಷ್ಟ್ರದ ಕೇಂದ್ರ ಸಚಿವರು
- ಭಾರತೀಯ ಕ್ರೀಡಾ ಆಡಳಿತಾಧಿಕಾರಿಗಳು
- ಭಾರತದಲ್ಲಿ ರಾಜಕೀಯ ಪಕ್ಷಗಳ ಮುಖಂಡರು
- ದೈಹಿಕ ಅಸಾಮರ್ಥ್ಯವುಳ್ಳ ಭಾರತೀಯರು
- ರಾಜಕಾರಣಿಗಳು