ವಿಜಯ ವಿಠಲ ದೇವಸ್ಥಾನ, ಹಂಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ ವಿಠಲ ದೇವಸ್ಥಾನ, ಹಂಪಿ
ವಿಜಯ ವಿಠಲ ದೇವಸ್ಥಾನ, ಹಂಪಿ

ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಾಲಯವು ಪ್ರಾಚೀನ ರಚನೆಯಾಗಿದೆ. ಈ ದೇವಾಲಯವು ವಾಸ್ತುಶಿಲ್ಪ ಮತ್ತು ಕರಕುಶಲತೆಗೆ ಹೆಸರುವಾಸಿಯಾಗಿದೆ. ಈ ಸ್ಮಾರಕವು ಹಂಪಿಯ ಸ್ಮಾರಕಗಳ ಗುಂಪಿನಲ್ಲಿನ ಅತಿದೊಡ್ಡ ಮತ್ತು ಪ್ರಸಿದ್ಧ ರಚನೆಗಳಲ್ಲಿ ಒಂದಾಗಿದೆ. ಈ ದೇವಾಲಯವು ಹಂಪಿಯ ಈಶಾನ್ಯ ಭಾಗದಲ್ಲಿ ತುಂಗಭದ್ರಾ ನದಿಯ ದಡದ ಬಳಿ ಇದೆ.[೧] ಈ ದೇವಾಲಯವು ಕಲ್ಲಿನ ರಥ, ಸಂಗೀತ ಸ್ತಂಭಗಳು ಮುಂತಾದ ಕೆಲವು ಕಲ್ಲಿನ ರಚನೆಗಳನ್ನು ಹೊಂದಿದೆ ಹಾಗೂ ಇದು ಪ್ರವಾಸಿಗರ ಆಕರ್ಷಣೆಯೂ ಆಗಿದೆ.[೨][೩]

ದೇವಸ್ಥಾನದ ಇತಿಹಾಸ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯ

ಈ ರಚನೆಯನ್ನು ವಿಜಯನಗರ ಸಾಮ್ರಾಜ್ಯದ ಆಡಳಿತಗಾರರಲ್ಲಿ ಒಬ್ಬನಾದ ಎರಡನೇ ದೇವರಾಯನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.[೪] ಈ ರಚನೆಯನ್ನು ೧೫ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.[೫] ವಿಜಯನಗರ ಸಾಮ್ರಾಜ್ಯದ ಆಡಳಿತಗಾರನಾದ ಕೃಷ್ಣದೇವರಾಯನು ದೇವಾಲಯದ ಅನೇಕ ಭಾಗಗಳನ್ನು ವಿಸ್ತರಿಸಿದನು ಮತ್ತು ಹೆಚ್ಚಿಸಿದನು. ಸ್ಮಾರಕಕ್ಕೆ ಅದರ ಪ್ರಸ್ತುತ ನೋಟವನ್ನು ನೀಡುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ವಿಠಲ ದೇವಾಲಯವನ್ನು ಶ್ರೀ ವಿಜಯ ವಿಠಲ ದೇವಾಲಯ ಎಂದೂ ಕರೆಯುತ್ತಾರೆ. ಇದನ್ನು ವಿಷ್ಣುವಿನ ಅವತಾರವಾದ ವಿಠಲನಿಗೆ ಅರ್ಪಿಸಲಾಗಿದೆ.[೬] ದಂತಕಥೆಗಳ ಪ್ರಕಾರ, ಈ ದೇವಾಲಯವನ್ನು ವಿಷ್ಣುವಿನ ವಿಠ್ಠಲ ರೂಪದಲ್ಲಿ ವಾಸಸ್ಥಾನವಾಗಿ ನಿರ್ಮಿಸಲಾಯಿತು, ಆದರೆ ಈ ದೇವಾಲಯವು ತನಗೆ ಬಹಳ ಭವ್ಯವಾಗಿದೆ ಎಂದು ವಿಷ್ಣುವು ಕಂಡುಕೊಂಡನು. ಆದ್ದರಿಂದ ಅವನು ಪಂಢರಪುರದ ತನ್ನ ಸ್ವಂತ ವಿನಮ್ರ ಮನೆಯಲ್ಲಿ ವಾಸಿಸಲು ಹಿಂದಿರುಗಿದನು ಎಂದು ಹೇಳಲಾಗುತ್ತದೆ.[೭]

ವಾಸ್ತುಶಿಲ್ಪ[ಬದಲಾಯಿಸಿ]

ಹಂಪಿಯಲ್ಲಿರುವ ಎಲ್ಲಾ ದೇವಾಲಯಗಳು ಮತ್ತು ಸ್ಮಾರಕಗಳಲ್ಲಿ ವಿಠ್ಠಲ ದೇವಾಲಯವು ಅತ್ಯಂತ ಭವ್ಯವಾಗಿದೆ ಎಂದು ಭಾವಿಸಲಾಗಿದೆ. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಶಿಲ್ಪಿಗಳು ಮತ್ತು ಕುಶಲಕರ್ಮಿಗಳು ಹೊಂದಿದ್ದ ಸೃಜನಶೀಲತೆ ಮತ್ತು ವಾಸ್ತುಶಿಲ್ಪದ ಪರಿಣತಿಯನ್ನು ಪ್ರದರ್ಶಿಸುತ್ತದೆ. ಈ ದೇವಾಲಯವನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ.[೮] ಇದು ದಕ್ಷಿಣ ಭಾರತದ ದೇವಾಲಯದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದ್ಯ್ದು, ದೇವಾಲಯವು ವಿಸ್ತಾರವಾದ ಮತ್ತು ಕಲಾತ್ಮಕ ಕೆತ್ತನೆಗಳಿವೆ. ಮುಖ್ಯ ದೇವಾಲಯವು ಮೂಲತಃ ಆವೃತ ಮಂಟಪವನ್ನು ಹೊಂದಿತ್ತು ಮತ್ತು ಕ್ರಿ.ಶ ೧೫೫೪ ರಲ್ಲಿ ತೆರೆದ ಮಂಟಪ ಅಥವಾ ಸಭಾಂಗಣವನ್ನು ರಚನೆಗೆ ಸೇರಿಸಲಾಯಿತು. ಈ ದೇವಾಲಯವು ಎತ್ತರದ ಕಾಂಪೌಂಡ್ ಗೋಡೆಗಳು ಮತ್ತು ಮೂರು ಎತ್ತರದ ಗೋಪುರಗಳನ್ನು ಹೊಂದಿರುವ ದೊಡ್ಡ ಪ್ರದೇಶದಲ್ಲಿ ಹರಡಿದೆ. ಈ ಸಂಕೀರ್ಣವು ಅದರ ಸುತ್ತಳತೆಯಲ್ಲಿ ಅನೇಕ ಸಭಾಂಗಣಗಳು, ದೇವಾಲಯಗಳು ಮತ್ತು ಮಂಟಪಗಳನ್ನು ಹೊಂದಿದೆ. ಈ ರಚನೆಗಳಲ್ಲಿ ಗಮನಾರ್ಹವಾದುದು ದೇವಿಯ ದೇಗುಲ, ಮಹಾ ಮಂಟಪ ಅಥವಾ ಮುಖ್ಯ ಸಭಾಂಗಣ(ಸಭಾ ಮಂಟಪ ಎಂದೂ ಕರೆಯುತ್ತಾರೆ), ರಂಗ ಮಂಟಪ, ಕಲ್ಯಾಣ ಮಂಟಪ, ಉತ್ಸವ ಮಂಟಪ ಮತ್ತು ಕಲ್ಲಿನ ರಥ.[೯]

ದೇವಾಲಯದ ಅಂಗಳದಲ್ಲಿ ಎತ್ತರವಾಗಿ ನಿಂತಿರುವ ಕಲ್ಲಿನ ರಥವು ವಾಸ್ತುಶಿಲ್ಪದ ಅದ್ಭುತಗಳಲ್ಲೊಂದಾಗಿದ್ದು, ದೇಶದ ಮೂರು ಪ್ರಸಿದ್ಧ ಕಲ್ಲಿನ ರಥಗಳಲ್ಲಿ ಒಂದಾಗಿದೆ. ಇತರ ಎರಡು ರಥಗಳು ಕೊನಾರ್ಕ್ ಮತ್ತು ಮಹಾಬಲಿಪುರಂನಲ್ಲಿವೆ.[೧೦] ಹಂಪಿಯ ಕಲ್ಲಿನ ರಥವು ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾದ ದೇವಾಲಯವಾಗಿದೆ. ಈ ರಥ ದೇವಾಲಯವು ವಿಷ್ಣುವಿನ ವಾಹಕವಾದ ಗರುಡನಿಗೆ ಸಮರ್ಪಿತವಾಗಿದೆ ಮತ್ತು ಅದರ ಗರ್ಭಗುಡಿಯಲ್ಲಿ ಗರುಡನ ಚಿತ್ರವನ್ನು ಕಾಣಬಹುದು.[೧೧] ಈ ದೇವಾಲಯವು ಹಲವಾರು ಆಕರ್ಷಣೆಗಳನ್ನು ಹೊಂದಿದೆ. ವಾಸ್ತವವಾಗಿ ಇದು ಹಂಪಿಯಲ್ಲಿ ಹೆಚ್ಚು ಭೇಟಿ ನೀಡಿದ ಸ್ಮಾರಕ ಹಾಗೂ ಹೆಚ್ಚು ಚಿತ್ರ ತೆಗೆದಿರುವ ಸ್ಮಾರಕವು ಹೌದು.

ದೇವಸ್ಥಾನದ ಪ್ರಮುಖ ಆಕರ್ಷಣೆಗಳು[ಬದಲಾಯಿಸಿ]

ಮಹಾ ಮಂಟಪ

ಮಹಾ ಮಂಟಪ[ಬದಲಾಯಿಸಿ]

ವಿಠಲ ದೇವಸ್ಥಾನದ ಮಹಾ ಮಂಟಪ ಅಥವಾ ಮುಖ್ಯ ಸಭಾಂಗಣವು ದೇವಸ್ಥಾನದ ಸಂಕೀರ್ಣದ ಒಳಪ್ರಾಂಗಣದಲ್ಲಿದೆ. ಇದರ ತಳವನ್ನು ಯೋಧರು, ಕುದುರೆಗಳು, ಹಂಸಗಳು ಮತ್ತು ಹಲವಾರು ಇತರ ಅಲಂಕಾರಿಕ ವಿನ್ಯಾಸಗಳಿಂದ ಕೆತ್ತಲಾಗಿದೆ. ಮಹಾ ಮಂಟಪದಲ್ಲಿ ನಾಲ್ಕು ಸಣ್ಣ ಸಭಾಂಗಣಗಳಿವೆ. ಮಹಾ ಮಂಟಪದ ಪೂರ್ವ ದಿಕ್ಕಿನಲ್ಲಿರುವ ಮೆಟ್ಟಿಲುಗಳನ್ನು ಆನೆ ಬಾಲಸ್ಟ್ರೇಡ್ನಿಂದ ಅಲಂಕರಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ನಲವತ್ತು ಸ್ತಂಭಗಳಿವೆ. ಈ ಪ್ರತಿಯೊಂದು  ಸ್ತಂಭವು ೧೦ ಅಡಿ ಎತ್ತರವನ್ನು ಹೊಂದಿವೆ. ಮಹಾ ಮಂಟಪದ ಮಧ್ಯ ಭಾಗವು ಹದಿನಾರು ಅಲಂಕೃತ ಸ್ತಂಭಗಳನ್ನು ಹೊಂದಿದ್ದು ನರಸಿಂಹ ಮತ್ತು ಯಾಲಿಯ ಶಿಲ್ಪಗಳಿವೆ. ಈ ಹದಿನಾರು ಸ್ತಂಭಗಳು ಒಂದು ಆಯತ ಆಕಾರವನ್ನು ಹೊಂದಿದೆ. ಮಹಾ ಮಂಟಪದ ಒಳಮಾಳಿಗೆಯನ್ನು ಸಮೃದ್ಧವಾಗಿ ವಿನ್ಯಾಸಗೊಳಸಲಾಗಿದೆ.

ಕಲ್ಲಿನ ರಥ

ಕಲ್ಲಿನ ರಥ[ಬದಲಾಯಿಸಿ]

ವಿಠಲ ದೇವಾಲವು ಕಲ್ಲಿನ ರಥವನ್ನು ಹೊಂದಿದೆ. ಇದನ್ನು ವಿಜಯನಗರ ಸಾಮ್ರಾಜ್ಯದ ಅದ್ಭುತ ವಾಸ್ತುಶಿಲ್ಪವೆಂದು ಪರಿಗಣಿಸಲಾಗಿದೆ. ಈ ಕಲ್ಲಿನ ರಥ ದೇವಾಲಯದ ಅಂಗಳದಲ್ಲಿ ನಿಂತಿದೆ. ಇದು ಭಾರತದ ಮೂರು ಪ್ರಸಿದ್ಧ ಕಲ್ಲಿನ ರಥಗಳಲ್ಲಿ ಒಂದಾಗಿದೆ. ಇತರ ಎರಡು ರಥಗಳು ಕೋನಾರ್ಕ್(ಒಡಿಸ್ಸಾ) ಮತ್ತು ಮಹಾಬಲಿಪುರಂ(ತಮಿಳುನಾಡು)ನಲ್ಲಿವೆ. ಈ ಕಲ್ಲಿನ ರಥವು ವಾಸ್ತವವಾಗಿ ಒಂದು ಅಲಂಕಾರಿಕ ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾದ ದೇವಾಲಯವಾಗಿದೆ. ಈ ದೇವಾಲಯವು ವಿಷ್ಣುವಿಷ್ಣುವಿನ ವಾಹನವಾದ ಗರುಡನಿಗೆ ಸಮರ್ಪಿತವಾಗಿದೆ ಮತ್ತು ಗರುಡನ ಚಿತ್ರವನ್ನು ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿದೆ.

ರಂಗ ಮಂಟಪದ ಸಂಗೀತ ಸ್ತಂಭಗಳು[ಬದಲಾಯಿಸಿ]

ಸಂಗೀತ ಸ್ತಂಭಗಳು

ರಂಗ ಮಂಟಪವು ವಿಠಲ ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೊಡ್ಡ ಮಂಟಪ ಅದರ ೫೬ ಸಂಗೀತ ಸ್ತಂಭಗಳಿಗೆ ಹೆಸರುವಾಸಿಯಾಗಿದೆ.[೧೨][೧೩] ಈ ಸಂಗೀತ ಸ್ತಂಭಗಳನ್ನು ಸರಿಗಮ ಸ್ತಂಭಗಳು ಎಂದೂ ಕರೆಯುತ್ತಾರೆ.[೧೪] ಈ ಸ್ತಂಭಗಳನ್ನು ನಿಧಾನವಾಗಿ ತಟ್ಟಿದಾಗ ಸಂಗೀತ ಶಬ್ಧಗಳು ಕೇಳಿಸುತ್ತದೆ.[೧೫] ಮಂಟಪದೊಳಗೆ ಮುಖ್ಯ ಸ್ತಂಭಗಳು ಮತ್ತು ಹಲವಾರು ಸಣ್ಣ ಸ್ತಂಭಗಳಿವೆ. ಪ್ರತಿಯೊಂದು ಮುಖ್ಯ ಸ್ತಂಭವು ರಂಗ ಮಂಟಪದ ಮೇಲ್ಚಾವಣಿಗೆ ಬೆಂಬಲವನ್ನು ನೀಡುತ್ತದೆ. ಮುಖ್ಯ ಸ್ತಂಭಗಳನ್ನು ಸಂಗೀತ ವಾದ್ಯಗಳಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದು ಮುಖ್ಯ ಸ್ತಂಭದ ಸುತ್ತ ೭ ಸಣ್ಣ ಸ್ತಂಭಗಳಿವೆ. ಈ ೭ ಸ್ತಂಭಗಳಲ್ಲಿ ಪ್ರತಿ ಸ್ತಂಭವು ವಿಭಿನ್ನ ಸಂಗೀತ ಶಬ್ಧವನ್ನು ಮಾಡುತ್ತದೆ.

ಈ ಎಲ್ಲಾ ಸ್ತಂಭಗಳನ್ನು ಒಂದು ದೊಡ್ಡ ಪ್ರತಿಧ್ವನಿಸುವ ಕಲ್ಲಿನ ತುಂಡಿನಿಂದ ಕೆತ್ತಲಾಗಿದೆ. ಕಲ್ಲಿನ ಸ್ತಂಭಗಳಿಂದ ಬರುವ ಸಂಗೀತದ ಶಬ್ಧವು ರಹಸ್ಯವಾಗಿದ್ದು ಅದು ಶತಮಾನಗಳಿಂದಲೂ ಅನೇಕ ಜನರನ್ನು ಆಕರ್ಷಿಸಿದೆ. ಭಾರತದ ಬ್ರಿಟಿಷ್ ಆಡಳಿತಗಾರರು ಸಹ ಇದರಿಂದ ಆಶ್ಚರ್ಯಚಿಕಿತರಾದರು ಮತ್ತು ಸಂಗೀತ ಸ್ತಂಭಗಳ ಹಿಂದಿನ ರಹಸ್ಯವನ್ನು ಬಿಚ್ಚಿಡಲು ಅವರು ವಿಠಲ ದೇವಾಲಯದ ಎರಡು ಸಂಗೀತ ಸ್ತಂಭಗಳನ್ನು ಕತ್ತರಿಸಿ, ಸಂಗೀತ ಶಬ್ಧ ಬರುವ ಕಲ್ಲಿನ ಕಂಬಗಳ ಒಳಗೆ ಏನಾದರೂ ಇದೆಯೇ ಎಂದು ಪರಿಶೀಲಿಸಿದರು. ಆದರೆ ಅವರಿಗೆ ಕಂಬಗಳ ಒಳಗೆ ಏನೂ ಕಂಡುಬಂದಿಲ್ಲ. ಬ್ರಿಟಿಷ್ ಆಡಳಿತಗಾರರು ಕತ್ತರಿಸಿದ ಎರಡು ಸ್ತಂಭಗಳು ದೇವಾಲಯದ ಸಂಕೀರ್ಣದೊಳಗೆ ಇಂದಿಗೂ ಅಸ್ತಿತ್ವದಲ್ಲಿವೆ ಮತ್ತು ಇಂದಿಗೂ ಪ್ರವಾಸಿಗರು ಇದನ್ನು ನೋಡಬಹುದಾಗಿದೆ.

ದೇವಸ್ಥಾನದ ಪ್ರಸ್ತುತ ಸ್ಥಿತಿ[ಬದಲಾಯಿಸಿ]

ವಿಠಲ ದೇವಸ್ಥಾನ ಇಂದು ಭಾಗಶಹ ಹಾಳಾಗಿದೆ. ದೇವಾಲಯದ ಗರ್ಭಗೃಹವು ಒಮ್ಮೆ ವಿಠಲ ಭಗವಂತನ ವಿಗ್ರಹವನ್ನು ಹೊಂದಿತ್ತು. ಆದರೆ ಈಗ ಗರ್ಭಗೃಹದಲ್ಲಿ ಯಾವುದೇ ವಿಗ್ರಹ ದೊರಕಿಲ್ಲ. ಕ್ರಿ.ಶ. ೧೫೬೫ ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಮೊಘಲರ ದಾಳಿಯ ಸಮಯದಲ್ಲಿ ದೇವಾಲಯದ ಮಧ್ಯ ಪಶ್ಚಿಮ ಸಭಾಂಗಣವು ಬಹಳ ಹಿಂದೆಯೇ ಹಾಳಾಗಿತ್ತು. ರಥದ ಚಕ್ರಗಳು ಒಂದು ಕಾಲದಲ್ಲಿ ಕ್ರಿಯಾತ್ಮಕವಾಗಿತ್ತು ಮತ್ತು ಅದನ್ನು ಜನರು ತಿರುಗಿಸಬಹುದಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಸರ್ಕಾರವು ಚಕ್ರಗಳಿಗೆ ಯಾವುದೇ ಹಾನಿಯಾಗದಂತೆ ತಡೆಯಲು ಅದಕ್ಕೆ ಸಿಮೆಂಟ್ ಹಾಕಲಾಯಿತು. ಸಂಗೀತ ಸ್ತಂಭಗಳನ್ನು ಮುಟ್ಟುವುದು ಸಹ ನಿಷೇಧಿಸಲಾಗಿದೆ. ಏಕೆಂದರೆ ವರ್ಷಗಳಿಂದ ಅವನ್ನು ಮುಟ್ಟಿ ಅವು ಸ್ವಲ್ಪ ಹಾನಿಯಾಗಿವೆ. ದೇವಾಲಯಕ್ಕೆ ಹೋಗುವ ರಸ್ತೆ ಕೂಡ ಸಂಪೂರ್ಣವಾಗಿ ಹಾಳಾದ ಸ್ಥಿತಿಯಲ್ಲಿದೆ. ಈ ರಸ್ತೆ ಒಂದು ಕಾಲದಲ್ಲಿ ಮಾರುಕಟ್ಟೆಯ ಸ್ಥಳವಾಗಿತ್ತು. ಮಾರುಕಟ್ಟೆಯನ್ನು ವಿಠಲ ಬಜಾರ್ ಎಂದು ಕರೆಯಲಾಗುತ್ತಿತ್ತು ಮತ್ತು ಇದು ಕುದುರೆ ವ್ಯಾಪಾರಕ್ಕೆ ಪ್ರಸಿದ್ಧವಾಗಿತ್ತು. ಮಾರುಕಟ್ಟೆಯ ಅವಶೇಷಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ಕಾಣಬಹುದು.[೧೬] ದೇವಾಲಯದ ಒಳಗೆ ಕೆತ್ತನೆಗಳಿವೆ. ಅದು ವಿದೇಶೀಯರು ಕುದುರೆಗಳನ್ನು ವ್ಯಪಾರ ಮಾಡುವ ಚಿತ್ರಗಳನ್ನು ತೋರಿಸುತ್ತದೆ.

ಇಂದು ದೇವಾಲಯದ ಒಳಗೆ ಫ್ಲೂಡಿಲೈಟ್‌ಗಳನ್ನು ಅಳವಡಿಸಲಾಗಿದೆ. ಈ ದೀಪಗಳು ರಾತ್ರಿಯಲ್ಲಿ ವಿಠಲ ದೇವಾಲಯವನ್ನು ಬೆಳೆಗಿಸುತ್ತವೆ. ದೇವಾಲಯದಲ್ಲಿ ವಾರ್ಷಿಕ ಪುರಂದರದಾಸ ಉತ್ಸವ ನಡೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. https://www.nativeplanet.com/travel-guide/musical-pillars-of-the-vijaya-vittala-temple-003625.html
  2. https://www.storiesbysoumya.com/vijaya-vittala-temple-and-the-musical-pillars-of-hampi/
  3. https://www.nativeplanet.com/travel-guide/musical-pillars-of-the-vijaya-vittala-temple-003625.html
  4. https://www.nativeplanet.com/travel-guide/musical-pillars-of-the-vijaya-vittala-temple-003625.html
  5. https://hampi.in/vittala-temple
  6. https://hampi.in/vittala-temple
  7. https://www.nativeplanet.com/travel-guide/musical-pillars-of-the-vijaya-vittala-temple-003625.html
  8. https://www.storiesbysoumya.com/vijaya-vittala-temple-and-the-musical-pillars-of-hampi/
  9. https://www.nativeplanet.com/travel-guide/musical-pillars-of-the-vijaya-vittala-temple-003625.html
  10. https://www.nativeplanet.com/travel-guide/musical-pillars-of-the-vijaya-vittala-temple-003625.html
  11. https://www.storiesbysoumya.com/vijaya-vittala-temple-and-the-musical-pillars-of-hampi/
  12. https://www.nativeplanet.com/travel-guide/musical-pillars-of-the-vijaya-vittala-temple-003625.html
  13. https://www.storiesbysoumya.com/vijaya-vittala-temple-and-the-musical-pillars-of-hampi/
  14. https://www.storiesbysoumya.com/vijaya-vittala-temple-and-the-musical-pillars-of-hampi/
  15. https://hampi.in/vittala-temple
  16. https://www.storiesbysoumya.com/vijaya-vittala-temple-and-the-musical-pillars-of-hampi/