ಮ್ಯಾಕ್‌ಡೊನಾಲ್ಡ್ಸ್‌ (ಪಾಸ್ಟ್‌ಫುಡ್ ರೆಸ್ಟೋರಂಟ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
McDonald's
ಸಂಸ್ಥೆಯ ಪ್ರಕಾರPublic
ಸ್ಥಾಪನೆMay 15, 1940 in San Bernardino, ಕ್ಯಾಲಿಫೊರ್ನಿಯ;
McDonald's Corporation, April 15, 1955 in Des Plaines, Illinois
ಸಂಸ್ಥಾಪಕ(ರು)Richard and Maurice McDonald; Ray Kroc (Corporation).
ಮುಖ್ಯ ಕಾರ್ಯಾಲಯOak Brook, Illinois, U.S.
ಕಾರ್ಯಸ್ಥಳಗಳ ಸಂಖ್ಯೆ35,000+ worldwide[೧]
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Andrew J. McKenna
(Chairman)
Don Thompson
(President and CEO)
ಉದ್ಯಮRestaurants
ಉತ್ಪನ್ನFast food
(hamburgers • chicken • french fries • soft drinks • coffee • milkshakes • salads • desserts • breakfast)
ಆದಾಯ
  • Increase US$ 28.1057 billion (2013) [೨]
  • Increase US$ 27.567 billion (2012) [೨]
ಆದಾಯ(ಕರ/ತೆರಿಗೆಗೆ ಮುನ್ನ)
  • Increase US$ 8.7643 billion (2013) [೨]
  • Increase US$ 8.6046 billion (2012) [೨]
ನಿವ್ವಳ ಆದಾಯ
  • Increase US$ 5.5859 billion (2013) [೨]
  • Decrease US$ 5.4648 billion (2012) [೨]
ಒಟ್ಟು ಆಸ್ತಿ
  • Increase US$ 36.6263 billion (2013) [೩]
  • Increase US$ 35.3865 billion (2012) [೨]
ಒಟ್ಟು ಪಾಲು ಬಂಡವಾಳ
  • Increase US$ 16.0097 billion (2013) [೩]
  • Increase US$ 15.2936 billion (2012) [೨]
ಉದ್ಯೋಗಿಗಳು440,000 (2013) [೪]
ಜಾಲತಾಣGlobal Corporate Website

ಮ್ಯಾಕ್‌ಡೊನಾಲ್ಡ್ಸ್‌ ಕಾರ್ಪೋರೇಶನ್ NYSEMCD ಇದು, ಪ್ರತಿದಿನ ೫೮ ಮಿಲಿಯನ್ ಗಿರಾಕಿಗಳಿಗೆ ಸೇವೆ ಸಲ್ಲಿಸುತ್ತಿರುವ ಜಗತ್ತಿನ ಹ್ಯಾಂಬರ್ಗರ್ ಪಾಸ್ಟ್‌ಫುಡ್ ರೆಸ್ಟೋರಂಟ್‌ಗಳ ದೊಡ್ಡ ಸಮೂಹವಾಗಿದೆ.[೫] ಇದರ ಸಿಗ್ನೇಚರ್ ರೆಸ್ಟೊರೆಂಟ್ ಸಮೂಹಕ್ಕೆ ಹೆಚ್ಚುವರಿಯಾಗಿ ಮ್ಯಾಕ್‌ಡೊನಾಲ್ಡ್ಸ್‌ ಕಾರ್ಪೋರೇಶನ್, ೨೦೦೮ ರ ವರೆಗೆ ಪ್ರೆಟ್ ಎ ಮ್ಯಾಂಗರ್‌ನಲ್ಲಿ ಅಲ್ಪ ಪಾಲುದಾರಿಕೆ ಹೊಂದಿತ್ತು ಮತ್ತು ೨೦೦೬[೬] ರ ವರೆಗೆ ಚಿಪೋಟ್ಲ್ ಮೆಕ್ಸಿಕನ್ ಗ್ರಿಲ್‌ನ ಪ್ರಧಾನ ಹೂಡಿಕೆದಾರರಾಗಿತ್ತು. ಮತ್ತು ೨೦೦೭ ರ ಹೊತ್ತಿಗೆ ಬೋಸ್ಟನ್ ಮಾರುಕಟ್ಟೆಯಲ್ಲಿನ ರೆಸ್ಟೋರಂಟ್ ಸಮೂಹಗಳ ಒಡೆತನ ಹೊಂದಿತು.[೭]

ಮ್ಯಾಕ್‌ಡೊನಾಲ್ಡ್ಸ್‌ ರವರ ರೆಸ್ಟೋರೆಂಟ್, ತಮ್ಮದೇ ಪ್ರತಿನಿಧಿ ಸಂಸ್ಥೆ ಅಥವಾ ಅಂಗ ಸಂಸ್ಥೆಯ ಮೂಲಕ ಅಥವಾ ಖುದ್ದಾಗಿ ಕಾರ್ಯಾಚರಿಸುತ್ತದೆ. ಕಾರ್ಪೋರೇಶನ್‌ನ ಆದಾಯವು ತಮ್ಮ ಪ್ರತಿನಿಧಿ ಸಂಸ್ಥೆಗಳು(ಫ್ರಾಂಚೈಸೀ) ಸಲ್ಲಿಸುವ ಬಾಡಿಗೆ,ಗೌರವಧನ ಮತ್ತು ಶುಲ್ಕಗಳಿಂದ ಸಂಗ್ರಹವಾಗುತ್ತದೆ. ಹಾಗೆಯೇ ಕಂಪನಿಯು ನಡೆಸುತ್ತಿರುವ ರೆಸ್ಟೋರೆಂಟ್‌ಗಳಲ್ಲಿ ಆಗುವ ಮಾರಾಟಗಳಿಂದಲೂ ಆದಾಯ ಗಳಿಕೆಯಾಗುವುದು. ಮ್ಯಾಕ್‌ಡೊನಾಲ್ಡ್ಸ್‌ ರವರ ಆದಾಯವು ಮೂರು ವರ್ಷಗಳ ಅಂತ್ಯದಲ್ಲಿ, ಅಂದರೆ ೨೦೦೭ ರಲ್ಲಿ ೨೭% ವೃದ್ದಿಯಾಗಿ ೨೨.೮ ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿತು. ಮತ್ತು ವಹಿವಾಟಿನ ಆದಾಯವು ೯% ರಷ್ಟು ಅಭಿವೃದ್ದಿಯಾಗಿ ೩.೯ ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಾಯಿತು.[೮]

ಮ್ಯಾಕ್‌ಡೊನಾಲ್ಡ್ಸ್‌ ಸಂಸ್ಥೆಯು ಪ್ರಮುಖವಾಗಿ ಹ್ಯಾಮ್‌ಬರ್ಗರ್‌, ಚೀಸ್‌ಬರ್ಗರ್‌, ಚಿಕನ್ ಉತ್ಪನ್ನಗಳು, ಫ್ರೆಂಚ್ ಫ್ರೈ, ಮುಂಜಾನೆಯ ತಿಂಡಿ ತಿನಿಸುಗಳು, ತಂಪು ಪಾನೀಯಗಳು, ವಿವಿಧ ಶೇಕ್‌ಗಳು ಮತ್ತು ಸಿಹಿತಿಂಡಿ ಉತ್ಪನ್ನಗಳನ್ನು ಮಾರಾಟಮಾಡುತ್ತದೆ. ಪಾಶ್ಚಿಮಾತ್ಯರಲ್ಲಿ ಹೆಚ್ಚಿದ ಸ್ಥೂಲಕಾಯದ ಸಮಸ್ಯೆ ಮತ್ತು ಆರೋಗ್ಯದ ಕುರಿತು ಉದ್ಭವಿಸಿದ ಟೀಕೆಗಳಿಂದಾಗಿ ಕಂಪನಿಯು ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಮಾಡಿ ಆರೋಗ್ಯಕ್ಕೆ ಉತ್ತಮವಾದ ಸಲಾಡ್‌, ಸುರುಳಿ ತಿಂಡಿಗಳು ಹಣ್ಣು ತರಕಾರಿಗಳ ಉತ್ಪನ್ನಗಳನ್ನು ಅಳವಡಿಸಿಕೊಂಡಿತು.

ಇತಿಹಾಸ[ಬದಲಾಯಿಸಿ]

ಮ್ಯಾಕ್‌ಡೊನಾಲ್ಡ್ಸ್‌‌ ಲೊಗೊ- 1968ರಿಂದ 2003ರವರೆಗೆ ಉಪಯೋಗಿಸಲಾಗಿದ್ದು.ಇದು ಈಗಲೂ ಕೂಡ ಕೆಲವು ರೆಸ್ಟೊರೆಂಟ್‌ಗಳಲ್ಲಿ ಬಳಕೆಯಲ್ಲಿದೆ.
ಚಿತ್ರ:SpeedeeGentilly.JPG
"ಸ್ಪಿಡಿ", ರೊನಾಲ್ಡ್‌ ಮ್ಯಾಕ್‍ಡೊನಾಲ್ಡ್‌ನಿಂದ ಬದಲಾವಣೆಗೊಳ್ಳುವ ಮೊದಲು ಮ್ಯಾಕ್‌ಡೊನಾಲ್ಡ್‌ನ ಅದೃಷ್ಟದ ಸಂಕೇತವಾಗಿತ್ತು.
ರೊನಾಲ್ಡ್ ಮ್ಯಾಕ್‌ಡೊನಾಲ್ಡ್‌ನ ಪರಿಕಲ್ಪನೆ

೧೯೪೦ ರಲ್ಲಿ ರಿಚಾರ್ಡ್ ಮತ್ತು ಮುರೈಸ್ ಮ್ಯಾಕ್‌ಡೊನಾಲ್ಡ್‌ ಸಹೋದರರು ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ರೆಸ್ಟೋರೆಂಟ್ ತೆರೆಯುವುದರ ಮೂಲಕ ವ್ಯವಹಾರ ಆರಂಭಿಸಿದರು. ೧೯೪೮ ರಲ್ಲಿ ಅವರು ಪರಿಚಯಪಡಿಸಿದ "ಸ್ಪೀಡೀ ಸೇವಾ ವ್ಯವಸ್ಥೆ"ಯು ಆಧುನಿಕ ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳ ತತ್ವಗಳನ್ನು ಸ್ಥಾಪಿಸಿತು. ಮ್ಯಾಕ್‌ಡೊನಾಲ್ಡ್ಸ್‌ ಗೆ ನಿಜವಾಗಿ ಅದೃಷ್ಟ ತಂದುಕೊಟ್ಟ ಸಂಗತಿಯೆಂದರೆ, ಬಾಣಸಿಗರ ಟೊಪ್ಪಿಯ ಮೇಲೆ ಹ್ಯಾಂಬರ್ಗರ್‌ನ ಆಕಾರದ ತಲೆಯ ಚಿತ್ರ ಧರಿಸಿದ "ಸ್ಪೀಡೀ" ಎಂಬ ಹೆಸರಿನ ವ್ಯಕ್ತಿಯ ಜಾಹೀರಾತಾಗಿತ್ತು. ಏದುತ್ತಾ ಮಾತನಾಡುವ ಮತ್ತು ಕಾಲುಗಳನ್ನು ವಿಶೇಷ ವೇಷಭೂಷಣಗೊಳಿಸಿಕೊಂಡು ಕೋಡಂಗಿ ಆಕಾರದಲ್ಲಿರುವ ಮನುಷ್ಯನ ಆಕೃತಿಗೆ ಯಾವಾಗ ಕಂಪನಿಯು ಮೊದಲು ಯು ಎಸ್ ಟ್ರೇಡ್‌ಮಾರ್ಕ್‌‌ಗಾಗಿ ಅರ್ಜಿ ಸಲ್ಲಿಸಿತೋ, ಆಗ ಸ್ಪೀಡೀ ಅವರು ರೊನಾಲ್ಡ್ ಮ್ಯಾಕ್‌ಡೊನಾಲ್ಡ್‌ ಅವರಿಂದ ಬದಲಾಯಿಸಲ್ಪಟ್ಟರು.

ಹೆಸರಿನ ಮೇಲೆ ಮ್ಯಾಕ್‌ಡೊನಾಲ್ಡ್ಸ್‌ ಅವರು ಸಲ್ಲಿಸಿದ ಮೊದಲ ಯು ಎಸ್ ಟ್ರೇಡ್‌ಮಾರ್ಕ್ ಮೇ ೪, ೧೯೬೧ ರಲ್ಲಿ ಮ್ಯಾಕ್‌ಡೊನಾಲ್ಡ್ಸ್‌ ರವರ "ಕುಳಿತಲ್ಲಿಗೇ ರೆಸ್ಟೋರೆಂಟ್ ಸೇವೆ" ಎಂಬ ಮಾದರಿಯ ಸೇವೆಯು ಆರಂಭವಾಗಿ ೨೦೦೯ ರ ಡಿಸೆಂಬರ್‌ ಅಂತ್ಯಕ್ಕೆ ನವೀಕರಣಗೊಳ್ಳುತ್ತ ಮುಂದುವರೆಯಿತು. ಇದೇ ವರ್ಷದಲ್ಲಿ ಸೆಪ್ಟೆಂಬರ್‌ ೨೦೦೯ ರಂದು ಕಂಪನಿಯು ಮುಚ್ಚಿರುವಂತಹ, ಎರಡು ಕಡೆ ಬಿಲ್ಲಿನಂತೆ ಬಾಗಿದಂತಿರುವ "M" ಸಂಕೇತದ ಲೊಗೋ ಟ್ರೇಡ್‌ಮಾರ್ಕ್ ಗಾಗಿ ಅರ್ಜಿ ಸಲ್ಲಿಸಿತು. ಮ್ಯಾಕ್‌ಡೊನಾಲ್ಡ್ಸ್‌ ರ ಹಲವು ರೆಸ್ಟೋರೆಂಟ್‌ಗಳಲ್ಲಿ ಈ ಹಿಂದಿನ ವರ್ಷಗಳಲ್ಲಿ ಬಳಸುತ್ತಿದ್ದ ಒಂದೇ ರೇಖೆಯ ಲೋಗೋಕ್ಕಾಗಿ ಯಾವಾಗ ಅರ್ಜಿ ಸಲ್ಲಿಸಲಾಯಿತೋ, ಆಗ ಈ "M" ಸಂಕೇತದ ಲೋಗೋವನ್ನು ತಾತ್ಕಾಲಿಕವಾಗಿ ಸೆಪ್ಟೆಂಬರ್‌ ೬, ೧೯೬೨ ರಂದು ಹಿಂಪಡೆಯಲಾಯಿತು. ಇದೀಗ ಚಾಲ್ತಿಯಲ್ಲಿರುವ ಪ್ರಸಿದ್ದ ಎರಡು ಬಿಲ್ಲಿನಾಕೃತಿಯ ರೇಖೆಯ "M" ಸಂಕೇತದ ಲೋಗೋ ನವೆಂಬರ್‌ ೧೮, ೧೯೬೮ ರಲ್ಲಿ ಕಂಪನಿಯು ಯು ಎಸ್ ಟ್ರೇಡ್‌ಮಾರ್ಕ್‌ ಪಡೆಯುವವರೆಗೆ ಕಾಣಸಿಗುತ್ತಿರಲಿಲ್ಲ.

ಪ್ರಾರಂಭದ ಮ್ಯಾಕ್‌ಡೊನಾಲ್ಡ್ಸ್‌ ಅವರ ರೆಸ್ಟೋರೆಂಟ್‌ಗಳು ಮೊದಲು ಅಮೆರಿಕಾ ಸಂಯುಕ್ತ ಸಂಸ್ಥಾನ, ಕೆನಡಾ, ಕೋಸ್ಟಾರಿಕಾ, ಪನಾಮಾ, ಜಪಾನ್, ನೆದರ್‌ಲ್ಯಾಂಡ್, ಜರ್ಮನಿ, ಆಸ್ಟ್ರೇಲಿಯಾ, ಫ್ರಾನ್ಸ್, ಎಲ್ ಸಾಲ್ವೇಡರ್‌ ಮತ್ತು ಸ್ವೀಡನ್ ದೇಶಗಳಲ್ಲಿ ಅನುಕ್ರಮವಾಗಿ ಪ್ರಾರಂಭವಾಯಿತು.

ಪ್ರಸಕ್ತ ಸಂಸ್ಥೆಯ ದಾಖಲೆಯ ಪ್ರಕಾರ ಸಂಸ್ಥೆಯ ಪ್ರತಿನಿಧಿ ರೆಸ್ಟೋರೆಂಟ್(ಫ್ರಾಂಚೈಸೀ), ರೇ ಕ್ರೋಕ್ ಅವರಿಂದ ಏಪ್ರಿಲ್ ೧೫, ೧೯೫೫ ರಂದು ಡಿಸ್ ಪ್ಲೇನಸ್, ಇಲಿನೋಯಿಸ್ ಗಳಲ್ಲಿ ಒಂಬತ್ತನೆಯ ಮ್ಯಾಕ್‌ಡೊನಾಲ್ಡ್ಸ್‌ ರೆಸ್ಟೊರೆಂಟ್ ಆಗಿ ಆರಂಭಿಸಲ್ಪಟ್ಟಿತು.[೯] ಕ್ರೋಕ್ ಅವರು ನಂತರ ಕಂಪನಿಯಲ್ಲಿನ ಮ್ಯಾಕ್‌ಡೊನಾಲ್ಡ್ಸ್‌ ಸಹೋದರರ ಪಾಲುದಾರಿಕೆಯನ್ನು ಖರೀದಿಸಿದರು ಮತ್ತು ವಿಶ್ವದಾದ್ಯಂತ ವಿಸ್ತರಿಸಲು ಕಾರಣರಾದರು. ನಂತರ ಕಂಪನಿಯು ೧೯೬೫ ರಲ್ಲಿ ಸಾರ್ವಜನಿಕ ಶೇರು ಮಾರುಕಟ್ಟೆಯಲ್ಲಿ ನೋಂದಣಿಯಾಯಿತು.[೧೦] ಮ್ಯಾಕ್‌ಡೊನಾಲ್ಡ್ಸ್‌ ಸಹೋದರರನ್ನು ಫಾಸ್ಟ್‌ ಫುಡ್ ಉದ್ಯಮವನ್ನು ತೊರೆಯುವಂತೆ ಒತ್ತಾಯಿಸುವುದರ ಮೂಲಕ ಕ್ರೋಕ್ ಅವರು ಕೂಡಾ ಸಾಹಸವಂತ ಪ್ರಭಾವಿ ವ್ಯಾಪಾರ ತಂತ್ರಗಾರರು ಎನಿಸಿಕೊಳ್ಳುತ್ತಾರೆ. ಮ್ಯಾಕ್‌ಡೊನಾಲ್ಡ್ಸ್‌ ಸಹೋದರರು ಮತ್ತು ಕ್ರೋಕ್ ಅವರು ವ್ಯಾಪಾರ ವ್ಯವಹಾರಗಳ ಹಿಡಿತಕ್ಕಾಗಿ ಕಲಹಕ್ಕಿಳಿದಿದ್ದು ಇವರಿಬ್ಬರ ಆತ್ಮಚರಿತ್ರೆಗಳಲ್ಲೂ ದಾಖಲಿತವಾಗಿದೆ. ಮ್ಯಾಕ್‌ಡೊನಾಲ್ಡ್ಸ್‌ ಸಹೋದರರ ಮೂಲ ರೆಸ್ಟೋರೆಂಟ್ ಸ್ಥಳವು ಈಗ ಒಂದು ಸ್ಮಾರಕವಾಗಿದೆ.[೧೧]

ಅನೇಕ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮ್ಯಾಕ್‌ಡೊನಾಲ್ಡ್ಸ್‌ ಸಂಸ್ಥೆಯು ವಿಸ್ತರಣೆಯಾದ್ದರಿಂದ, ಈ ಕಂಪನಿಯು ಜಾಗತೀಕರಣದ ಸಂಕೇತವಾಯಿತು ಮತ್ತು ಅಮೇರಿಕಾ ಜೀವನ ಮಾದರಿಯನ್ನು ವಿವಿಧ ದೇಶಗಳಿಗೆ ಪಸರಿಸಿತು. ಈ ಕಂಪನಿಯ ಪ್ರಾಧಾನ್ಯತೆಯು, ಪ್ರಮುಖ ಸಾರ್ವಜನಿಕ ವಿಷಯಗಳಾದ ಸ್ಥೂಲಕಾಯ, ವ್ಯವಹಾರದಲ್ಲಿನ ನೈತಿಕತೆ, ಗ್ರಾಹಕರ ಜವಾಬ್ದಾರಿ ಮುಂತಾದವುಗಳ ಮೇಲೆ ಸಾರ್ವಜನಿಕ ಚರ್ಚೆ ಆಯೋಜಿಸುವುದದು ಕೂಡಾ ಆಗಿದೆ.

ಸಂಸ್ಥೆಯ ಪಕ್ಷಿನೋಟ[ಬದಲಾಯಿಸಿ]

ಅಂಕಿ-ಅಂಶಗಳು[ಬದಲಾಯಿಸಿ]

ಮ್ಯಾಕ್‌ಡೊನಾಲ್ಡ್ಸ್‌‌ ಅದರ ಸೇವೆಯನ್ನು "99 ಬಿಲಿಯನ್ ಗ್ರಾಹಕರಿಗೆ ತಲುಪಿಸಿದೆ."

ಮೆಕ್‌ಡೊನಾಲ್ಡ್ಸ್‌ ರೆಸ್ಟಾರೆಂಟುಗಳು ಜಗತ್ತಿನ ೧೧೯ದೇಶಗಳಲ್ಲಿ[೧೨] ಕಂಡುಬರುತ್ತವೆ ಮತ್ತು ಜಗತ್ತಿನಾದ್ಯಂತ ತಮ್ಮ ವ್ಯಾಪ್ತಿಯನ್ನು ಹೊಂದಿದೆ ಮತ್ತು ದಿನವೊಂದಕ್ಕೆ ೫೮ ದಶಲಕ್ಷ ಗ್ರಾಹಕರಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ.[೫] ಜಗತ್ತಿನಾದ್ಯಂತ ಸುಮಾರು ೩೧,೦೦೦ಕ್ಕಿಂತಲೂ ಹೆಚ್ಚು ರೆಸ್ಟಾರೆಂಟುಗಳನ್ನು ಹೊಂದಿದ್ದು ೧.೫ ಮಿಲಿಯನ್‌ಗಿಂತಲೂ ಹೆಚ್ಚು ಜನ ನೌಕರರನ್ನು ಹೊಂದಿದೆ.[೧೨] ಈ ಕಂಪನಿಯು ಪೈಲ್ಸ್‌ ಕೆಫೆ ಮುಂತಾದ ಇತರ ಬ್ರಾಂಡ್‌ನಲ್ಲಿಯೂ ರೆಸ್ಟಾರೆಂಟುಗಳನ್ನು ನಡೆಸುತ್ತಿವೆ.

೧೯೯೦ರ ದಶಕದಲ್ಲಿ ಪಡೆದುಕೊಂಡ ತನ್ನ ಚಿನ್ಹೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೆಕ್‌ಡೊನಾಲ್ಡ್ಸ್‌ ಕಂಪನಿಯು ಇತರ ಕೊಂಡಿಗಳನ್ನು ಕಳಚಿಕೊಳ್ಳುತ್ತಾ ಸಾಗಿತು. ಅಕ್ಟೋಬರ್‌ ೨೦೦೬ರಲ್ಲಿ ಸ್ಟಾಕ್‌ ಎಕ್ಸ್‌ಚೆಂಜ್‌ನಲ್ಲಿ ಚಿಪೊಟಲ್‌ನಿಂದ ಸಂಪೂರ್ಣವಾಗಿ ಕಳಚಿಕೊಳ್ಳುವ ಪೂರ್ವದಲ್ಲಿ ಚಿಪೋಟಲ್‌ ಮೆಕ್‌ಡೊನಾಲ್ಡ್ಸ್‌ ಕಂಪನಿಯ ಬಹುತೇಕ ಶೇರುಗಳನ್ನು ಹೊಂದಿತ್ತು.[೧೩][೧೪] ಡಿಸೆಂಬರ್‌ ೨೦೦೩ರವರೆಗೆ ಈ ಕಂಪನಿಯು ಡೊನಾಟೊಸ್‌ ಪಿಜ್ಜಾ ಎಂಬ ಕಂಪನಿಯನ್ನೂ ಕೂಡ ನಡೆಸುತ್ತಿತ್ತು. ಅಗಸ್ಟ್‌ ೨೭, ೨೦೦೭ ರಂದು ಕಂಪನಿಯು ಬೊಸ್ಟನ್‌ ಮಾರ್ಕೆಟ್‌ ಕಂಪನಿಯನ್ನು ಸನ್‌ ಕ್ಯಾಪಿಟಲ್‌ ಪಾರ್ಟನರ್ಸ್‌‌ಗೆ ಮಾರಿತು.[೧೫]

ರೆಸ್ಟಾರೆಂಟ್‌ನ ವಿಧಗಳು[ಬದಲಾಯಿಸಿ]

ಹೆಚ್ಚಾಗಿ ಎಲ್ಲ ಮೆಕ್‌ಡೊನಾಲ್ಡ್ಸ್‌ ರೆಸ್ಟಾರೆಂಟ್‌ಗಳು ಕುಳಿತಲ್ಲಿಯೂ ಮತ್ತು ವಾಹನಗಳಿಗೂ ತಮ್ಮ ಸೇವೆಯನ್ನು ನೀಡುತ್ತವೆ ಮತ್ತು ರೆಸ್ಟಾರೆಂಟ್‌ಗಳ ಒಳಗೂ ಕೆಲವು ಬಾರಿ ಹೊರಗಡೆಯೂ ತಮ್ಮ ಸೇವೆಯನ್ನು ನೀಡುತ್ತವೆ. ಡ್ರೈವ್‌ ಥ್ರೂ, ಆಟೋ-ಮ್ಯಾಕ್‌, ಪೆ ಎಂಡ್‌ ಡ್ರೈವ್‌, ಅಥವಾ ಮೆಕ್‌ ಡ್ರೈವ್‌ ಎಂದು ಬಹಳಷ್ಟು ದೇಶಗಳಲ್ಲಿ ಪರಿಚಿತವಾಗಿದೆ. ಇವು ಕುಳಿತು ಕೊಳ್ಳಲು, ಹಣ ಪಾವತಿಸಲು ಮತ್ತು ಆರ್ಡರ್‌ಗಳನ್ನು ತೆಗೆದುಕೊಳ್ಳಲು ಬೇರೆ ಬೇರೆ ಸ್ಥಳಗಳನ್ನು ಹೊಂದಿರುತ್ತವೆ. ಈ ಪದ್ದತಿಯು ಇತರ ಪಾಸ್ಟ್‌ ಪುಡ್‌ ಪದ್ದತಿಗಳನ್ನು ಮೀರಿಸಿ ಮೊದಲ ಬಾರಿಗೆ ಅರಿಜೋನಾದಲ್ಲಿ ೧೯೭೫ರಲ್ಲಿ ಪರಿಚಯಿಸಲ್ಪಟ್ಟಿತು. ಬ್ರಿಟನ್‌ನಲ್ಲಿ ಅಂತಹ ರೆಸ್ಟಾರೆಂಟ್‌ ಮೊದಲ ಬಾರಿಗೆ ೧೯೮೬ ಗ್ರೆಟರ್‌ ಮಾಂಚೆಸ್ಟರ್‌ನ ಪಾಲೊಫಿಲ್ಡ್‌ನಲ್ಲಿ ಪ್ರಾರಂಭವಾಯಿತು.[೧೬]

ಕೆಲವು ದೇಶಗಳಲ್ಲಿ ಹೆದ್ದಾರಿಗಳ ಪಕ್ಕದಲ್ಲಿರುವ "ಮೆಕ್‌ಡ್ರೈವ್‌" ಪ್ರದೇಶಗಳಲ್ಲಿ ಕೌಂಟರ್‌ ಸೇವೆಗಳನ್ನಾಗಲಿ ಅಥವಾ ಕುಳಿತುಕೊಂಡಲ್ಲಿ ಸೇವೆ ಸಲ್ಲಿಸುವುದಾಗಲಿ ಮಾಡುವುದಿಲ್ಲ. ಅದಕ್ಕೆ ವಿರುದ್ದವಾಗಿ ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ವಾಹನದಲ್ಲಿಯೇ ಕುಳಿತು ಖರೀದಿಸುವ ವಿಧಾನವನ್ನು ಆಗಾಗ ವಿರೋಧಿಸುತ್ತಾರೆ. ಇನ್ನು ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಡೌನ್‌ಟೌನ್‌ ಜಿಲ್ಲೆಯ ಪ್ರದೇಶಗಳಲ್ಲಿ ವಾಹನದಲ್ಲಿ ಕುಳಿತು ಕರೀದಿಸುವ ಬದಲಾಗಿ ನಡೆದಾಡುತ್ತಾ ಖರೀದಿಸುವ ಪದ್ದತಿಯನ್ನು ಹೊಂದಿವೆ.

ವಿಶೇಷವಾಗಿ ’ಸಾಲಿಡ್‌ ಗೊಲ್ಡ್‌ ಮೆಕ್‌ಡೊನಾಲ್ಡ್ಸ್‌’, ೧೯೫೦ರ ದಶಕದ ರಾಕ್‌ ಎಂಡ್‌ ರೋಲ್‌ ಥಿಮ್ಡ್‌ ರೆಸ್ಟಾರೆಂಟ್‌ಗಳಂತಹ ಪ್ರಧಾನ ರೆಸ್ಟಾರೆಂಟ್‌ಗಳು ಕೂಡ ಇವೆ.[೧೭] ಬ್ರಿಟಿಷ್‌ ಕೊಂಲಂಬಿಯಾದ ವಿಕ್ಟೋರಿಯಾದಲ್ಲಿ ೨೪-ಕ್ಯಾರೆಟ್‌ ಚಿನ್ನದಿಂದ ಮಾಡಿದ ಮೊಂಬತ್ತಿಯಾಕಾರದ ಮತ್ತು ಅದರಂತೆಯೇ ಇರುವ ಬೆಳಕಿನ ವ್ಯವಸ್ಥೆಯನ್ನು ಹೊಂದಿರುವ ಮೆಕ್‌ಡೊನಾಲ್ಡ್ಸ್‌ಗಳಿವೆ.

ಈಗಿನ ಕಾಲದ ಕಾಫಿಯ ಮತ್ತು ಕಾಫಿಶಾಪ್‌ನ ಜನಪ್ರೀಯತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮೆಕ್‌ಡೊನಾಲ್ಡ್ಡ್‌ ಮೆಕ್‌ಕೆಫೆ ಗಳನ್ನು ಪ್ರಾರಂಭಿಸಿತು. ಕೆಫೆಯ ವಿಧಾನದ ಜೊತೆಯಲ್ಲಿಯೇ ಮೆಕ್‌ಡೊನಾಲ್ಡ್ಸ್‌ ಕೂಡ ಸ್ಟಾರ್‌ಬಕ್ಸ್‌ನ ಮಾದರಿಯಲ್ಲಿಯೇ ಇದೆ. ಮೆಕ್‌ಕೆಫೆಯು ಕಲ್ಪನೆಯು ಮೆಕ್‌ಡೊನಾಲ್ಡ್ಸ್‌ ಆಸ್ಟ್ರೇಲಿಯಾದಲ್ಲಿ ಮೆಲ್ಬೋರ್ನ್‌‌ನಲ್ಲಿ ೧೯೯೩ ಪ್ರಾರಂಭವಾಗುವುದರೊಂದಿಗೆ ಶುರುವಾಯಿತು. ಇದು ಬಹುತೇಕ ಆಸ್ಟ್ರೇಲಿಯಾದಲ್ಲಿನ ಬಹುತೇಕ ಮೆಕ್‌ಡೊನಾಲ್ಡ್ಸ್‌ ರೆಸ್ಟಾರೆಂಟ್‌ಗಳು ಮೆಕ್‌ಕೆಫೆಗಳನ್ನು ತನ್ನ ರೆಸ್ಟಾರೆಂಟ್‌ ಸ್ಥಳಗಳಲ್ಲೇ ಹೊಂದಿವೆ. ತಾಸ್ಮೇನಿಯಾದಲ್ಲಿ ಪ್ರತಿಯೊಂದು ಮಳಿಗೆಗಳು ಮೆಕ್‌ಕೆಫೆಗಳನ್ನು ಹೊಂದಿವೆ. ಇತರ ರಾಜ್ಯಗಳು ಇದನ್ನು ಬಹುಬೇಗನೇ ಅನುಸರಿಸುತ್ತಿವೆ. ಕೆಲವು ಆಸ್ಟ್ರೇಲಿಯಾದ ಮಳಿಗೆಗಳು ಗಮನಿಸಿದಂತೆ ಮೆಕ್‌ಕೆಫೆಗಳನ್ನು ಅಳವಡಿಸಿದ ನಂತರ ೬೦% ಮಾರಾಟದಲ್ಲಿ ಹೆಚ್ಚಳವನ್ನು ಗುರುತಿಸಿವೆ. ೨೦೦೩ ಅಂತ್ಯದ ವೇಳೆಗೆ ಜಗತ್ತಿನಾದ್ಯಂತ ೬೦೦ ಮೆಕ್‌ಕೆಫೆಗಳು ಇದ್ದವು.

ಕೆಲವು ಪ್ರದೇಶಗಳು ಅನಿಲ ನೆಲೆಗಳ/ಮೂಲ ಸೌಕರ್ಯಗಳ ತಾಣಗಳಿಗೆ[೧೮] ಸಂಬಂದಿಸಿರುತ್ತವೆ. ಮತ್ತು ಉಳಿದವುಗಳನ್ನು ಮ್ಯಾಕ್‌ಎಕ್ಸ್‌ಪ್ರೆಸ್‌ ಗಳೆಂದು ಕರೆಯುತ್ತಾರೆ ಮತ್ತು ಅವು ನಿಯಮಿತ ಜನರು ಕೂರಬಹುದಾದ ಜಾಗಗಳನ್ನು ಹೊಂದಿದ್ದು ಅವು ಶಾಪಿಂಗ್‌ ಮಾಲ್‌ಗಳಲ್ಲಿರುತ್ತವೆ. ಇತರ ಮೆಕ್‌ಡೊನಾಲ್ಡ್ಸ್‌ಗಳು ವಾಲ್‌ ಮಾರ್ಟ ಮಳಿಗೆಗಳಲ್ಲಿರುತ್ತವೆ. ಮ್ಯಾಕ್‌ಸ್ಟಾಪ್‌ ಇವು ದೊಡ್ಡಗಾತ್ರದ ವಾಹನಗಳ ಖರೀದಿ ತಾಣವಾಗಿದ್ದು ಟ್ರಕ್‌ಗಳು ನಿಲ್ಲುವ ಸ್ಥಳಗಳಲ್ಲಿರುತ್ತವೆ.[೧೯]

ಆಟದ ಮೈದಾನಗಳು[ಬದಲಾಯಿಸಿ]

ಪನೊರಮಾ ಸಿಟಿ ಕ್ಯಾಲಿಫೋರ್ನಿಯಾದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌‌ ರೆಸ್ಟೊರಂಟ್‌

ಕೆಲವು ಉಪನಗರ ಪ್ರದೇಶಗಳಲ್ಲಿನ ಮೆಕ್‌ಡೊನಾಲ್ಡ್ಸ್‌ಗಳು ಬಹುದೊಡ್ಡ ಒಳ ಮತ್ತು ಹೊರ ಕ್ರಿಡಾಂಗಣಗಳನ್ನು ಹೊಂದಿರುತ್ತವೆ. ಮೊದಲ ಆಪ್ತವಾದ ಈಜು ಕೊಳವೆಯ ಮಾದರಿಯ ಹೊಂಡ ಮತ್ತು ಎತ್ತರಗಳನ್ನು ಹೊಂದಿರುವ ಮಾದರಿಯ ಆಟದ ಮೈದಾನಗಳು ಬಹಳಷ್ಟು ಪರಿವರ್ತನೆಗಳನ್ನು ಹೊಂದಿ ೧೯೮೭ರಲ್ಲಿ ಅಮೇರಿಕಾದಲ್ಲಿ ಪ್ರಾರಂಭವಾಯಿತು. ಕೆಲವು ಆಟದ ಪ್ರದೇಶಗಳು ಹೊಸದಾಗಿ ನವೀಕರಿಸಲ್ಪಟ್ಟು "ಆರ್‌ ಜಿಮ್‌" ಪ್ರದೇಶಗಳಲ್ಲಿ ಪ್ರಾರಂಭವಾದವು.

ಮರುವಿನ್ಯಾಸ[ಬದಲಾಯಿಸಿ]

ಬರ್ಮಿಂಗ್‌ಹ್ಯಾಮ್‌ನ ಸಮೀಪದ ಡ್ಯೂಡ್ಲಿ ಟೌನ್‌, ಮ್ಯಾಕ್‌ ಡೊನಾಲ್ಡ್‌ ರೆಸ್ಟೊರೆಂಟ್‌, 2002ರಲ್ಲಿಅದು ಹಳೆಯ ಕೆಂಪು, ಬಂಗಾರದ ಬಣ್ಣ ಮತ್ತು ಬೂದು ಬಣ್ಣದಲ್ಲಿತ್ತು.
ಡಾರ್ಲಿಂಗ್‌ಟನ್‌ ಯುಕೆಯಲ್ಲಿಯ ಮ್ಯಾಕ್‌ಡೊನಾಲ್ಡ್ಸ್‌‌. ಇದು ಯುರೋಪ್‌ನಲ್ಲಿ ಮ್ಯಾಕ್‌ ಡೊನಾಲ್ಡ್‌ನ ಹೊಸ ರೂಪ.

೨೦೦೬ರಲ್ಲಿ ಮೆಕ್‌ಡೊನಾಲ್ಡ್ಸ್‌ "ಯಾವತ್ತಿಗೂ ಚಿರಯೌವ್ವನದಿಂದ ಕೂಡಿರುವ" ಚಿನ್ಹೆಯನ್ನು ತನ್ನ ಎಲ್ಲ ರೆಸ್ಟಾರೆಂಟ್‌ಗಳಲ್ಲಿ ಅಳವಡಿಸಿತು ಇದು ೧೯೭೦ರ ದಶಕದಿಂದಿಚೆಗೆ ಆದ ಬಹುದೊಡ್ಡ ಮುರುತಿದ್ದುಪಡಿಯಾಗಿತ್ತು.[೨೦][೨೧]

ಬ್ಯಾನ್‌ಬರಿ ಬ್ರಿಡ್ಜ್‌ ಸ್ಟ್ರೀಟ್‌ನಲ್ಲಿಯ ಮ್ಯಾಕ್‌ಡೊನಾಲ್ಡ್ಸ್‌-2010.ಇದು 2002ರಿಂದ ಇಲ್ಲಿಯವರೆಗೂ ಹೊರಗಡೆ ಬಿಳಿ ಬಣ್ಣದಲ್ಲಿತ್ತು ಮತ್ತು ನೀಲಿ/ಬೂದು/ಕಂದುಬಣ್ಣದಲ್ಲಿದೆ.

ಈ ವಿನ್ಯಾಸವು ತನ್ನ ಹಳೆಯ ಚಿನ್ಹೆಯ ಹಳದಿ ಮತ್ತು ಕೆಂಪು ಬಣ್ಣಗಳನ್ನು ಒಳಗೊಂಡಿತ್ತು ಆದರೆ ಕೆಂಪು ಬಣ್ಣವನ್ನು ಭೂಮಿಯ ಕೆಂಪುಬಣ್ಣದಲ್ಲಿ ಹುದುಗಿಹೋಗುವಂತೆ ಬಣ್ಣದಂತೆ ಮಾಡಲಾಗಿತ್ತು. ಮತ್ತು ಹಳದಿಯನ್ನು ಸೂರ್ಯನ ಬಣ್ಣಕ್ಕೆ ಬರುವ ಸಲುವಾಗಿ ಸ್ವಲ್ಪ ಚಿನ್ನದ ಬಣ್ಣಕ್ಕೆ ತಿರುಗಿಸಲಾಯಿತು ಅದರೊಂದಿಗೆ ಆಲಿವ್‌ ಬಣ್ಣ ಮತ್ತು ಮಸುಕು ಹಸಿರುಬಣ್ಣವನ್ನು ಕೂಡಿಸಲಾಗಿತ್ತು. ಅವುಗಳ ಸೌಂದರ್ಯವರ್ದನೆಗಾಗಿ ರೆಸ್ಟಾರೆಂಟುಗಳಲ್ಲಿ ಪ್ಲಾಸ್ಟಿಕ್‌ಗಳನ್ನು ಕಡಿಮೆ ಪ್ರಮಾಣದಲ್ಲಿಯೂ ಇಟ್ಟಿಗೆಗಳನ್ನು ಮತ್ತು ಮರಗಳನ್ನೂ ಹೆಚ್ಚಿಗೆ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಮತ್ತು ಆಹ್ಲಾದಕರ ಬೆಳಕನ್ನು ನೀಡುವ ಸಲುವಾಗಿ ತೂಗಾಡುವ ವಿದ್ಯುದ್ದಿಪಗಳನ್ನು ಅಳವಡಿಸಲಾಯಿತು. ಸಮಕಾಲಿನ ಕಲಾಕೃತಿಗಳನ್ನು ಮತ್ತು ಚಿತ್ರಗಳನ್ನು ಗೊಡೆಯ ಮೇಲೆ ತೂಗು ಹಾಕಲಾಯಿತು.

ವ್ಯವಹಾರ ಮಾದರಿ[ಬದಲಾಯಿಸಿ]

ಮೆಕ್‌ಡೊನಾಲ್ಡ್ಸ್‌ ಕಾರ್ಪೊರೇಶನ್‌ ತನ್ನ ಆಧಾಯವನ್ನು ಅಸ್ತಿಗಳಲ್ಲಿ ಹೂಡುವಿಕೆಯ, ವಿಶೇಷ ಹಕ್ಕುಗಳ ಮೂಲಕ, ಮತ್ತು ಸ್ವತಃ ರೆಸ್ಟಾರೆಂಟ್‌ಗಳನ್ನು ನಡೆಸುವ ಮೂಲಕ ಸಂಪಾದಿಸುತ್ತಿದೆ. ಅಂದಾಜು ಶೇ.೧೫ ರಷ್ಟು ಮೆಕ್‌ಡೊನಾಲ್ಡ್ಸ್‌ ರೆಸ್ಟಾರೆಂಟುಗಳು ಮೆಕ್‌ಡೊನಾಲ್ಡ್ಸ್‌ ಕಾರ್ಪೊರೆಶನ್‌ನ ನೇರವಾದ ಆಳ್ವಿಕೆಯಲ್ಲಿವೆ. ಉಳಿದವುಗಳು ವಿಶೇಷ ಹಕ್ಕುಗಳ ಮೂಲಕವೂ ಮತ್ತು ಜಂಟಿ ಆಯೋಜಕತ್ವದಲ್ಲಿಯೂ ನಡೆಸಲ್ಪಡುತ್ತಿವೆ. ಮೆಕ್‌ಡೊನಾಲ್ಡ್ಸ್‌ ಕಾರ್ಪೊರೇಶನ್‌ನ ವ್ಯಾವಹಾರಿಕ ನೀತಿಯು ಉಳಿದ ಪಾಸ್ಟ್‌ಫುಡ್‌ ವ್ಯಾಪಾರಿ ಸಂಸ್ಥೆಗಳಿಗಿಂತ ಸ್ವಲ್ಪ ಬಿನ್ನವಾಗಿದೆ. ಉಳಿದ ವಿಶೇಷ ಹಕ್ಕು ಸ್ವಾಮ್ಯತ್ವದಂತೆಯೆ ಶುಲ್ಕವನ್ನು ವಿಧಿಸುವುದರೊಂದಿಗೆ ಮ್ಯಾಕ್‌ಡೊನಾಲ್ಡ್ಸ್‌ ಮಾರಾಟದ ಶೇಕಡಾವಾರು ಲೆಕ್ಕದ ಮೇಲೆಯೂ ತನ್ನ ಶುಲ್ಕವನ್ನು ವಿಧಿಸುತ್ತದೆ. ಮೆಕ್‌ಡೊನಾಲ್ಡ್ಸ್‌ ಬಾಡಿಗೆಯನ್ನು ತೆಗೆದುಕೊಳ್ಳುತ್ತಿದ್ದು ಅದೂ ಕೂಡ ಮಾರಾಟದ ಶೇಕಡಾವಾರು ಪ್ರಮಾಣವನ್ನು ಅವಲಂಬಿಸಿದೆ. ಹಕ್ಕು ಸ್ವಾಮ್ಯತ್ವದ ಒಡಂಬಡಿಕೆಯು ಪ್ರದೇಶಗಳು,ದೇಶಗಳು, ಮತ್ತು ಎಷ್ಟು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.ಮುಂತಾದವುಗಳನ್ನು ಅವಲಂಬಿಸಿರುತ್ತದೆ. ಮೆಕ್‌ಡೊನಾಲ್ಡ್ಸ್‌ ಕಾರ್ಪೊರೇಶನ್‌ ತಾನು ಒಪ್ಪಂದ ಮಾಡಿಕೊಂಡ ಸ್ಥಳವನ್ನು ಖರೀದಿಸಲೂ ಬಹುದಾಗಿದೆ ಮತ್ತು ಲೀಸ್‌ ಮೂಲಕವು ತೆಗೆದುಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಹಕ್ಕು ಸ್ವಾಮ್ಯತ್ವವನ್ನು ಹೊಂದಿರುವವರು ಸ್ಥಳದ ಅಧಿಕಾರವನ್ನು ಹೊಂದಿರುವುದಿಲ್ಲ.

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿನ ವ್ಯಾಪಾರಿ ನೀತಿಯು ಬಿನ್ನವಾಗಿದೆ. ಇಲ್ಲಿ ಶೇ.೩೦ಕ್ಕಿಂತಲೂ ಕಡಿಮೆ ಪ್ರಮಾಣದ ರೆಸ್ಟಾರಂಟುಗಳು ಹಕ್ಕು ಸ್ವಾಮಿತ್ವಕ್ಕೆ ಒಳಪಟ್ಟಿವೆ ಮತ್ತು ಉಳಿದ ಹೆಚ್ಚಿನ ಪ್ರಮಾಣದ ರೆಸ್ಟಾರಂಟುಗಳು ಕಂಪನಿಯ ಸ್ವಂತ ಆಡಳಿತಕ್ಕೆ ಒಳಪಡುತ್ತವೆ. ಮೆಕ್‌ಡೊನಾಲ್ಡ್ಸ್‌ ತನ್ನ ಫ್ರಾಂಚಿಸಿಗಳನ್ನು ಮತ್ತು ಇತರರನ್ನು ಇಲ್ಲಿನೋಯ್ಸ್‌ನ ಓಕ್‌ ಬ್ರೂಕ್‌ನಲ್ಲಿರುವ ಹ್ಯಾಮ್‌ಬರ್ಗರ್‌ ವಿಶ್ವವಿದ್ಯಾನಿಲಯದಲ್ಲಿ ತರಬೇತಿಯನ್ನು ನೀಡುತ್ತದೆ.

ಇತರ ದೇಶಗಳಲ್ಲಿ ಮೆಕ್‌ಡೊನಾಲ್ಡ್ಸ್‌ ರೆಸ್ಟಾರೆಂಟುಗಳು ಜಂಟಿ ಒಪ್ಪಂದ(ಮೆಕ್‌ಡೊನಾಲ್ಡ್ಸ್‌ ಕಾರ್ಪೊರೇಶನ್‌ ಮತ್ತು ಸ್ಥಳಿಯ ಸಂಸ್ಥೆಗಳು ಅಥವಾ ಅಲ್ಲಿನ ಸರ್ಕಾರಗಳ)ದಡಿಯಲ್ಲಿ ನಡೆಸಲ್ಪಡುತ್ತಿವೆ.

ಕಂಪನಿಯ ವ್ಯಾಪಾರಿ ನೀತಿಯಂತೆ ಅವು ತಮ್ಮ ತಮ್ಮ ಹಕ್ಕು ಸ್ವಾಮ್ಯತ್ವದಡಿಯಲ್ಲಿರುವ ಸಂಸ್ಥೆಗಳಿಗೆ ಆಹಾರ ಸಾಮಗ್ರಿಗಳನ್ನು ನೇರವಾಗಿ ಮಾರಾಟ ಮಾಡುವುದಿಲ್ಲ ಬದಲಾಗಿ ಮೂರನೇ ಸಾಂವಿಧಾನಿಕವಾದ ಮೂರನೇ ಸಾಮಗ್ರಿ ಸರಬರಾಜು ಸಂಸ್ಥೆಗಳಿಂದ ಸರಬರಾಜು ಆಗುವಂತೆ ವ್ಯವಸ್ಥೆ ಮಾಡುತ್ತದೆ.

ಫಾಸ್ಟ್‌ ಫುಡ್‌ ನೇಷನ್‌ ನ ಎರಿಕ್‌ ಕ್ಲೊಸರ್‌ (೨೦೦೧)ರ ಪ್ರಕಾರ ಅಮೇರಿಕಾದಲ್ಲಿನ ಪ್ರತಿ ಎಂಟು ಜನ ಕಾರ್ಮಿಕರಲ್ಲಿ ಒಬ್ಬ ಕಾರ್ಮಿಕನು ಕನಿಷ್ಟಪಕ್ಷ ಸ್ವಲ್ಪ ದಿನದ ಮಟ್ಟಿಗಾದರೂ ಮೆಕ್‌ಡೊನಾಲ್ಡ್ಸ್‌ನ ನೌಕರನಾಗಿದ್ದಾನೆ. (ಒಂದು ಸುದ್ದಿಯ ತುಣುಕಿನ ಪ್ರಕಾರ ಇದು ಹತ್ತು ಸುಳ್ಳು ಸುದ್ದಿಗಳಲ್ಲಿ ಒಂದು ಎಂಬ ವದಂತಿ ಇದೆ.) ಆ ಪುಸ್ತಕದ ಪ್ರಕಾರ ಮೆಕ್‌ಡೊನಾಲ್ಡ್ಸ್‌ ಅಮೇರಿಕಾದಲ್ಲಿಯೇ ಅತ್ಯಂತ ದೊಡ್ಡ ಆಟದ ಮೈದಾನಗಳನ್ನು ಹೊಂದಿರುವ ಮತ್ತು ಎಕೈಕ ದನದ ಮಾಂಸದ, ಹಂದಿಯ ಮಾಂಸದ, ಆಲೂಗಡ್ಡೆಯ ಮತ್ತು ಸೇಬು ಹಣ್ಣಿನ ಖರೀದಿಯ ಅತ್ಯಂತ ದೊಡ್ಡ ಕಂಪನಿಯಾಗಿದೆ. ಮೆಕ್‌ಡೊನಾಲ್ಡ್ಸ್‌ ಮಾಂಸದ ಆಯ್ಕೆಯನ್ನು ಅದು ಸ್ಥಾಪನೆಯಾಗಿರುವ ದೇಶವನ್ನು ಅವಲಂಬಿಸಿ ಬದಲಾಯಿಸುತ್ತದೆ.

ಶೇರು ದಾರರಿಗೆ ನೀಡುವ ಡಿವಿಡೆಂಡ್‌ ಪಾವತಿ[ಬದಲಾಯಿಸಿ]

ಮೆಕ್‌ಡೊನಾಲ್ಡ್ಸ್‌ ಡಿವಿಡೆಂಡ್‌ಗಳನ್ನು ನೀಡುವ ಅವಧಿಯನ್ನು ೨೫ ವರ್ಷಗಳ ನಗದೀಕರಿಸಬಹುದಾದ ಅವಧಿ[೨೨] ಯನ್ನು ನೀಡಿದೆ. ಶೇರುದಾರರನ್ನು ಅತ್ಯಂತ ಕುಲೀನ S&P ೫೦೦ ಡಿವಿಡೆಂಡ್‌ ಪಡೆಯುವವರ ಸಾಲಿಗೆ ಸೇರಿಸಿದೆ.[೨೩][೨೪]

ವಿವಾದಗಳು[ಬದಲಾಯಿಸಿ]

ಅತಿ ವೇಗವಾಗಿ ಬೆಳೆಯುತ್ತಿರುವ ಅಮೆರಿಕಾ ಫಾಸ್ಟ್ ಫುಡ್ ಉದ್ಯಮಕ್ಕೆ ಉತ್ತಮವಾದ ಉದಾಹರಣೆಯಾದ ಮೆಕ್ ಡೊನಾಲ್ಡ್ ತನ್ನ ಆಹಾರ ವಿವರಗಳಿಂದ (ಮೆನು), ಉದ್ಯಮ ವಿಸ್ತರಣೆ ಮತ್ತು ಉದ್ಯಮ ಪದ್ಧತಿಗಳಿಂದಾಗಿ ಸಾಕಷ್ಟು ಟೀಕೆಗೊಳಗಾಯಿತು.

ಈ ಟೀಕೆಗಳಿಗೆ ಮ್ಯಾಕ್‌ಡೊನಾಲ್ಡ್ಸ್‌‌ ರೆಸ್ಟೋರೆಂಟ್ಸ್ ವಿ ಮಾರಿಸ್ & ಸ್ಟೀಲ್ ಎಂದೂ ಕರೆಯಲ್ಪಡುವ ದ ಮ್ಯಾಕ್‌ಲಿಬೆಲ್ ಟ್ರಯಲ್‌‍ ಇದು ಒಂದು ಉದಾಹರಣೆಯಾಗಿದೆ. ೧೯೯೦ರಲ್ಲಿ ತೀವ್ರವಾದಿಗಳ ಸಣ್ಣ ತಂಡವು ಲಂಡನ್‌‍ನ ಗ್ರೀನ್ ಪೀಸ್ (ಗ್ರೀನ್ ಪೀಸ್‌ನ ಅಂತಾರಾಷ್ಟ್ರೀಯ ತಂಡಕ್ಕೆ ಯಾವುದೇ ಸಂಪರ್ಕ ಇಲ್ಲ) ನಲ್ಲಿ ಗುರುತಿಸಿಕೊಂಡು ವಾಟ್ಸ್‌ ರಾಂಗ್‌ ವಿಥ್‌ ಮ್ಯಾಕ್‌ಡೊನಾಲ್ಡ್ಸ್‌‌? ಎಂಬ ಶೀರ್ಷಿಕೆಯಡಿ ಹಸ್ತಪ್ರತಿಯನ್ನು ವಿತರಿಸಿತು. ಇದರಲ್ಲಿ ಪಾರಿಸರಿಕವಾಗಿ, ಆರೋಗ್ಯ ಮತ್ತು ಕಾರ್ಮಿಕರ ವಿವರಗಳನ್ನು ಟೀಕಿಸಿತ್ತು. ಇದರಿಂದ ಕಾರ್ಪೋರೇಷನ್ ಈ ತಂಡಕ್ಕೆ ಇಂತಹ ಬರಗಳನ್ನು ಮುದ್ರಿಸದಿರುವಂತೆ (ಬರೆಯದಿರುವಂತೆ) ಮತ್ತು ಕ್ಷಮೆಯಾಚಿಸುವಂತೆ ತಾಕೀತು ಮಾಡಿತು. ಜತೆಗೆ ಈ ನಿರ್ಧಾರವನ್ನು ನಿರಾಕರಿಸಿದ ಇಬ್ಬರು ತೀವ್ರವಾದಿಗಳನ್ನು ಹಿಡಿದು ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಬ್ರಿಟಿಷ್ ಸಿವಿಲ್ ಕಾನೂನು ಪ್ರಕಾರ ಹೂಡಲಾಯಿತು. ಮ್ಯಾಕ್‌ ಲಿಬೆಲ್ ಟ್ರಯಲ್ ಎಂಬ ಡಾಕ್ಯುಮೆಂಟರಿ ಸಿನಿಮಾವನ್ನು ಹಲವಾರು ದೇಶಗಳಲ್ಲಿ ಪ್ರದರ್ಶಿಸಲಾಯಿತು.

ಮೆಕ್ ಡೊನಾಲ್ಡ್ ಮೇಲೆ ವಿರೋಧಗಳು ಇದ್ದಾಗ್ಯೂ, ‘ಮ್ಯಾಕ್ ಜಾಬ್’ ("McJob") ಎಂಬ ಪದವನ್ನು ೨೦೦೩ರಲ್ಲಿ ಮೆರ್ರಿಯಮ್-ವೆಬ್ ಸ್ಟರ್ಸ್ ಕೊಲಿಗೈಟ್ ಡಿಕ್ಷನರಿ (Merriam-Webster's Collegiate Dictionary) ಯಲ್ಲಿ ಸೇರಿಸಲಾಯಿತು.[೨೫] ಇದನ್ನು ಕಡಿಮೆ ಸಂಬಳ ನೀಡುವ ಉದ್ಯೋಗ ಮತ್ತು ಇದಕ್ಕೆ ಅಲ್ಪ ಮಟ್ಟದ ಸೃಜನಶೀಲತೆ ಇದ್ದರೆ ಸಾಕು ಹಾಗೂ ಅಭಿವೃದ್ಧಿ ಹೊಂದಲು ಸಣ್ಣ ಸದಾವಕಾಶ ಎಂದು ವಿಷದೀಕರಿಸಲಾಗಿದೆ.[೨೬] ಮೆರ್ರಿಯಂ-ವೆಬ್ ಸ್ಟರ್ ಗೆ ಮೆಕ್ ಡೊನಾಲ್ಡ್ ನ ಮಾಜಿ ಸಿಇಓ ಜಿಮ್ ಕೆಂಟಾಲುಪೊ ಎಂಬುವರು ಬಹಿರಂಗ ಪತ್ರವನ್ನು ಬರೆದು ("slap in the face" to all restaurant employees) ಎಲ್ಲ ಉದ್ಯೋಗಿಗಳ ಕಪಾಳಕ್ಕೆ ಹೊಡೆಯಲಾಗುತ್ತಿದೆ ಎಂಬ ಪದವನ್ನು ಉಪಯೋಗಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಮತ್ತು ಮೆಕ್ ಜಾಬ್ ಎಂಬ ಪದಕ್ಕೆ ಹೆಚ್ಚು ಸರಿಹೊಂದುವ ವ್ಯಾಖ್ಯಾನವಾಗಿ ಶಿಕ್ಷಕರ ಜವಾಬ್ದಾರಿ ('teaches responsibility.'" ) ಎಂಬ ಪದವನ್ನು ಬಳಸುವಂತೆ ಸೂಚಿಸಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಮೆರ್ರಿಯಮ್- ವೆಬ್ ಸ್ಟರ್, ನಾವು ನಿಖರವಾದ ಮತ್ತು ಔಚಿತ್ಯಪೂರ್ಣವಾದ ವ್ಯಾಖ್ಯಾನವನ್ನು ನೀಡಿದ್ದಾಗಿ ತಿಳಿಸಿತು.[೨೭]

೧೯೯೯ರಲ್ಲಿ ಫ್ರೆಂಚ್ ನ ಜಾಗತೀಕರಣ ವಿರುದ್ಧದ ತೀವ್ರಗಾಮಿ ಜೋಸ್ ಬೋವ್ ಎಂಬಾತ ಈ ಭಾಗಗಳಲ್ಲಿ ಶೀಘ್ರ ಆಹಾರ ಪದ್ಧತಿಯನ್ನು ಪರಿಚಯಿಸುವುದರ ವಿರುದ್ಧವಾಗಿ ಪ್ರತಿಭಟಿಸಿ ಅರ್ಧ ಕಟ್ಟಲಾಗಿದ್ದ ಮೆಕ್ ಡೊನಾಲ್ಡ್ ಕಟ್ಟಡವನ್ನು ನಾಶಪಡಿಸಿದನು.[೨೮]

೨೦೦೧ರಲ್ಲಿ ಎರಿಕ್ ಕ್ಲೊಸ್ಸರ್‌ನ ಪುಸ್ತಕ ಫಾಸ್ಟ್ ಫುಡ್ ನೇಷನ್‌‍ ನಲ್ಲಿ ಮೆಕ್ ಡೊನಾಲ್ಡ್ ನ ಉದ್ಯಮ ಅಭಿವೃದ್ಧಿಯನ್ನು ಟೀಕಿಸಲಾಗಿದೆ. ಇದರಲ್ಲಿರುವ ಆರೋಪಗಳೆಂದರೆ ಮೆಕ್ ಡೊನಾಲ್ಡ್ ಸಂಸ್ಥೆಗಳು (ಉಳಿದ ಶೀಘ್ರ ಆಹಾರ ಸಂಸ್ಥೆಗಳಿಗೆ ಹೋಲಿಸಿದಾಗ) ತನ್ನ ರಾಜಕೀಯ ಪ್ರಾಬಲ್ಯದಿಂದ ಇದರ ಲಾಭವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಜನರ ಆರೋಗ್ಯದ ಮೇಲೆ ಮತ್ತು ಕಾರ್ಮಿಕರ ಸಾಮಾಜಿಕ ಸ್ಥಿತಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ಪುಸ್ತಕದಲ್ಲಿ ಮೆಕ್ ಡೊನಾಲ್ಡ್ ನ ಜಾಹೀರಾತು ತಂತ್ರಗಾರಿಕೆಯನ್ನು ಪ್ರಶ್ನಿಸಲಾಗಿದ್ದು, ಇದರಲ್ಲಿ ಮುಖ್ಯವಾಗಿ ಮಕ್ಕಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ಉಳಿದ ಶೀಘ್ರ ಆಹಾರ (ಫಾಸ್ಟ್ ಫುಡ್) ಸಂಸ್ಥೆಗಳ ಬಗ್ಗೆ ಬರೆದಿದ್ದರೂ ಸಹ ಪ್ರಾಥಮಿಕವಾಗಿ ಮೆಕ್ ಡೊನಾಲ್ಡ್ ಬಗ್ಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿದೆ.

ಮೆಕ್ ಡೊನಾಲ್ಡ್ ವು ಟಾಯ್ಸ್ ನ ವಿಶ್ವದ ಅತಿದೊಡ್ಡ ವಿತರಕ ಸಂಸ್ಥೆಯಾಗಿದೆ. ಇದರಲ್ಲಿ ಮಕ್ಕಳ ಊಟವೂ ಸಹ ಸೇರಿದೆ.[೨೯] ಮಕ್ಕಳು ಹೆಚ್ಚಿಗೆ ಮೆಕ್ ಡೊನಾಲ್ಡ್ ಆಹಾರವನ್ನು ಸೇವಿಸುವಂತೆ ಪ್ರೋತ್ಸಾಹಿಸುವ ಕೆಲಸವನ್ನು ಟಾಯ್ಸ್ ಮಾಡುತ್ತಿದೆ ಎಂಬುದು ಇದರ ಮೇಲಿರುವ ಆಪಾದನೆಯಾಗಿದೆ. ಇದರ ಪರಿಣಾಮ ಅನೇಕ ಮಕ್ಕಳಿಗೆ ಆಹಾರದ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಲ್ಲಿ ಸ್ಥೂಲಕಾಯತೆ ಸಹ ಸೇರಿದೆ.[೩೦]

೨೦೦೨ರಲ್ಲಿ ಸಸ್ಯಾಹಾರ ತಂಡಗಳು, ಹೆಚ್ಚಾಗಿ ಹಿಂದುಗಳು ಮತ್ತು ಬೌದ್ಧೀಯರು ಮೆಕ್ ಡೊನಾಲ್ಡ್ ನವರು ಅವರ ಫ್ರೆಂಚ್ ಫ್ರೈಯನ್ನು ಸಸ್ಯಾಹಾರ ಎಂದು ತಪ್ಪು ತಿಳಿವಳಿಕೆ ನೀಡಿ ಇದರಲ್ಲಿ ದನದ ಮಾಂಸವನ್ನು ಸೇರಿಸಿ ಮಾರಾಟ ಮಾಡಿದ್ದರ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೂಡಿ ಯಶಸ್ವಿಯಾದರು.[೩೧]

ಪೆಟಾ ಹೋರಾಟಗಾರರು ಕೋಳಿಗಳ ರೀತಿಯಲ್ಲಿ ಬಟ್ಟೆ ತೊಟ್ಟು ಟೈಮ್ಸ್‌ ಸ್ಕ್ವೇರ್‌ನ ಮ್ಯಾಕ್‌ಡೊನಾಲ್ಡ್ಸ್‌ ಮಳಿಗೆಯ ಎದುರು ಕಂಪೆನಿಯ ಪ್ರಾಣಿ ಕಲ್ಯಾಣ ಗುಣಮಟ್ಟದ ಕುರಿತು ವಾಗ್ವಾದ ಮಾಡುತ್ತಿರುವುದು.

ಪೀಪಲ್‌ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್ಸ್‌ (PETA) ಪೇಟಾ ವು ಮೆಕ್ ಡೊನಾಲ್ಡ್ ತನ್ನ ಪ್ರಾಣಿ ಕ್ಷೇಮಾಭಿವೃದ್ಧಿ ನಿಲುವನ್ನು ಬದಲಾಯಿಸಿಕೊಳ್ಳಬೇಕು. ಮುಖ್ಯವಾಗಿ ಇದರ ವಿತರಕು ಕೋಳಿಗಳನ್ನು ಕೊಲ್ಲುವ ವಿಧಾನವನ್ನು ಬದಲಾಯಿಸಿಕೊಳ್ಳಬೇಕು ಎಂದು ಸಾಕಷ್ಟು ಒತ್ತಡವನ್ನು ತಂದಿತು.[೩೨] ಅಮೆರಿಕಾದಲ್ಲಿನ ಹೆಚ್ಚಿನ ಸಂಸ್ಕರಣಾಕಾರರು ಹಕ್ಕಿಗಳ ಕೊರಳಿಗೆ ಸಂಕೋಲೆಗಳನ್ನು ಬಿಗಿದು ಅವುಗಳನ್ನು ತಲೆಕೆಳಗೆ ಮಾಡುವುದು ಮತ್ತು ಅವುಗಳ ಕುತ್ತಿಗೆಯನ್ನು ಉದ್ದಗೆ ಕತ್ತರಿಸುವ ಮೊದಲು ನೀರಿನ ಟಬ್ ಒಳಗೆ ವಿದ್ಯುತ್ ಚಾಲನೆ ನೀಡಲಾಗುವುದು.[೩೩] ಪೇಟಾವು ಪಕ್ಷಿಗಳನ್ನು ಈ ರೀತಿಯಾಗಿ ಸಾಯಿಸುವುದರ ಬದಲು ಗ್ಯಾಸ್ ಅನ್ನು ಬಳಸಿ ಸಾಯಿಸಬಹುದು ಎಂದು ವಾದಿಸಿತು. (ಈ ಮಾದರಿಯನ್ನು ಕಂಟ್ರೋಲ್ಡ್‌ ಅಟ್ಮಾಸ್ಪಿಯರ್‌ ಕಿಲ್ಲಿಂಗ್‌ or CAK) ಎಂದು ಕರೆಯಲಾಗುತ್ತದೆ). ಇದು ಸ್ವಲ್ಪ ಕಡಿಮೆ ಕ್ರೌರ್ಯವನ್ನು ಹೊಂದಿರುತ್ತದೆ ಎಂದು ವಾದಿಸಿತು.[೩೪] ಸಿಎಕೆ ಮತ್ತು ಸಿಎಎಸ್ (controlled atmosphere stunning”) ಅನ್ನು ಸಾಮಾನ್ಯವಾಗಿ ಯುರೋಪ್ ನಲ್ಲಿ ಬಳಸಲಾಗುತ್ತದೆ.[೩೫]

ಮೋರ್ಗ್ಯಾನ್ ಸ್ಪರ್ಲೋಕ್ಸ್‌‍ನ ೨೦೦೪ರ ಡಾಕ್ಯುಮೆಂಟರಿ ಸಿನಿಮಾ ’ಸುಪರ್ ಸೈಜ್ ಮಿ’ ಹೇಳುವಂತೆ, ಮೆಕ್ ಡೊನಾಲ್ಡ್ ಆಹಾರವು ಸಮಾಜಕ್ಕೆ ಸ್ಥೂಲಕಾಯತೆಯ ಸಾಂಕ್ರಾಮಿಕ ರೋಗವನ್ನು ಕೊಡುಗೆಯಾಗಿ ನೀಡಿದೆ. ಮತ್ತು ಈ ಕಂಪನಿಯು ತನ್ನ ಆಹಾರದ ಪೌಷ್ಠಿಕಾಂಶದ ಮಾಹಿತಿಯನ್ನು ಗ್ರಾಹಕರಿಗೆ ನೀಡುವಲ್ಲಿ ವಿಫಲವಾಗಿದೆ. ಆರು ವಾರಗಳ ನಂತರ ಸಿನಿಮಾ ಪ್ರಥಮ ಪ್ರದರ್ಶನ ಕಂಡಾಗ, ಉತ್ತಮ ಗಾತ್ರ ಆಯ್ಕೆ ಮತ್ತು ವಯಸ್ಕರ ಸಂತೋಷ ಊಟ ಪದ್ಧತಿಯನ್ನು ನಿಯೋಜಿಸಿರುವುದಾಗಿ ಮ್ಯಾಕ್‌ ಡೊನಾಲ್ಡ್ ಘೋಷಿಸಿತು.

ಮೆಕ್ ಡೊನಾಲ್ಡ್ ಕೋಳಿಗಳಿಗೆ ಬೇಕಾಗುವ ಆಹಾರವಾದ ಸೋಯಾ ಅವರೆಯನ್ನು ಕೃಷಿಗೆ ಸಂಬಂಧಿಸಿ ಬಹುದೊಡ್ಡ ಸಂಸ್ಥೆಯಾದ ಕಾರ್ಗಿಲ್ ವು ವಿತರಣೆ ಮಾಡುತ್ತಿತ್ತು. ಇದನ್ನು ಬ್ರೆಸಿಲ್ ನಿಂದಲೇ ನೇರವಾಗಿ ರವಾನಿಸಲಾಗುತ್ತಿತ್ತು. ಈ ಕ್ರಮವನ್ನು ವಿರೋಧಿಸಿದ ಗ್ರೀನ್ ಪೀಸ್ ತೀವ್ರವಾದಿಗಳು ಈ ಸೋಯಾವು ಕೇವಲ ಬ್ರೆಜಿಲ್‌ನಲ್ಲಿರುವ ಅಮೆಜಾನ್‌ ನ ಮಳೆಕಾಡು ಪ್ರದೇಶಗಳನ್ನು ನಾಶಪಡಿಸುವುದಲ್ಲದೇ, ಸೋಯಾವನ್ನು ಬೆಳೆಯುವ ಸ್ಥಳೀಯ ರೈತರನ್ನು ಹೆದರಿಸಿ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಈ ಆರೋಪವು ಮ್ಯಾಕ್‌ಡೊನಾಲ್ಡ್ ನ ಗಿರಾಕಿಯಾದ ಕಾರ್ಗಿಲ್ ಸಂಸ್ಥೆಯು ಈ ಚಟುವಟಿಕೆಗಳ ಕುರಿತಾಗಿ ಆದುದಾಗಿದೆ.[೩೬]

ರಕ್ಷಣಾತ್ಮಕ ವಾದಗಳು[ಬದಲಾಯಿಸಿ]

ಸಾರ್ವಜನಿಕರಿಂದ ತೀವ್ರ ವಿರೋಧ ಹಾಗೂ ಒತ್ತಡಗಳು ಬಂದ ಹಿನ್ನೆಲೆಯಲ್ಲಿ ಮ್ಯಾಕ್‌ ಡೊನಾಲ್ಡ್ ವು ತನ್ನ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಆರೋಗ್ಯಯುತ ಆಯ್ಕೆಯನ್ನು ತನ್ನ ಆಹಾರಪಟ್ಟಿಯಲ್ಲಿ ಸೇರಿಸಿತು. ಮತ್ತು ಇದರ ಜತೆ ಇದಕ್ಕೆ ಹೊಸಬರನ್ನು ಸೇರಿಸಿಕೊಳ್ಳಲು ನಾಟ್‌ ಬ್ಯಾಡ್‌ ಫಾರ್‌ ಮ್ಯಾಕ್‌ಜಾಬ್‌ ಹೊಸ ಘೋಷ ವಾಕ್ಯವನ್ನು ಬಳಸಿತು.[೩೭] ಮ್ಯಾಕ್‍ ಜಾಬ್ ಎಂಬ ಶಬ್ಧವನ್ನು ೧೯೮೦ರ[೩೮] ಮಧ್ಯದಲ್ಲಿ ಮೊದಲ ಬಾರಿಗೆ ಪ್ರಯೋಗಿಸಲಾಯಿತು). ಮತ್ತು ನಂತರ ಪ್ರಖ್ಯಾತಿಗಳಿಸಿದ್ದು ಕೆನಡಾದ ಕಾದಂಬರಿಗಾರ ಡೌಗ್ಲಾಸ್ ಕೋಪ್ಲಾಂಡ್‌ನು ತನ್ನ ಪುಸ್ತಕ ಜನರೇಶನ್ ಎಕ್ಸ್‌‍ನಲ್ಲಿ Tales for an Accelerated Culture ತಂಗಳು ಶಬ್ಧವನ್ನು ಕಡಿಮೆ ಹಣ ಪಾವತಿಗೆ, ಸೃಜನಶೀಲವಲ್ಲದ ಕೆಲಸದ ಜತೆ ಸ್ವಲ್ಪ ಲಾಭ ಮತ್ತು ಸಣ್ಣ ರಕ್ಷಣೆ ಎಂದು ಉಲ್ಲೇಖಿಸಿದ್ದಾನೆ. ಮೆಕ್ ಡೊನಾಲ್ಡ್ ತನ್ನ ಉಪಾಯದಿಂದ ವಿವಾದಕ್ಕೆ ಅಥವಾ ಚರ್ಚೆಗೆ ಈಡಾಯಿತು. ೨೦೦೭ರಲ್ಲಿ ಕಂಪನಿಯು ಜಾಹೀರಾತನ್ನು "Would you like a career with that?" (ನೀವು ಇದರ ಮೂಲಕ ನಿಮ್ಮ ವೃತ್ತಿ ಜೀವನವನ್ನು ಇಷ್ಟಪಡುತ್ತೀರಾ?) ಎಂಬ ಘೋಷವಾಕ್ಯದೊಂದಿಗೆ ಅನಾವರಣಗೊಳಿಸಿತು. ಈ ಜಾಹೀರಾತು ಐರಿಷ್ ಟಿವಿಯಲ್ಲಿ ಪ್ರಸಾರಗೊಂಡಿತು. ಇದರಲ್ಲಿ ಇವುಗಳ ಕೆಲಸವನ್ನು ವಿವಿಧ ಮಾದರಿಯಲ್ಲಿ ಬಿತ್ತರಗೊಳಿಸಲಾಯಿತು.

ಗ್ರಾಹಕರ ಆಸಕ್ತಿಗೆ ಅನುಗುಣವಾಗಿ ಆಹಾರಕ್ಕೆ ಪ್ರಾಧಾನ್ಯತೆ ಕೊಟ್ಟು ಅವರನ್ನು ತಮ್ಮತ್ತ ಸೆಳೆಯಲು, ಶೀಘ್ರ ಆಹಾರ ಕೊಂಡಿಯನ್ನು ಪ್ರಾರಂಭಿಸಲಾಗಿ[when?], ಕಾಫಿ ಬೀನ್ಸ್ ಮತ್ತು ಹಾಲನ್ನು ವಿತರಣೆ ಮಾಡಲು ಪ್ರಾರಂಭಿಸಿತು. ಇಂಗ್ಲೆಂಡ್ ನ ಮುಖ್ಯ ಕಾರ್ಯನಿರ್ವಾಹಕ ಸ್ಟೀವ್ ಈಸ್ಟರ್ ಬ್ರೂಕ್ ಹೇಳುವಂತೆ, ಬ್ರಿಟಿಷ್ ಗ್ರಾಹಕರು ತಾವು ಕೊಳ್ಳುವ ಆಹಾರ ಮತ್ತು ಪಾನೀಯಗಳು ತಮ್ಮ ಆಸಕ್ತಿಯ ಗುಣಮಟ್ಟ, ಮೂಲ ಮತ್ತು ನೀತಿಯನ್ನು ಉಳ್ಳದ್ದೇ ಎಂದು ನೋಡುತ್ತಾರೆ. ಮೆಕ್ ಡೊನಾಲ್ಡ್ ಕಾಫಿಯನ್ನು ಮಳೆ ಅರಣ್ಯದಲ್ಲಿ ಸಮಾನವಂಶಗಳಿಂದ ಬೆಳೆಯುವ ಬೆಳಗಾರರ ಗುಂಪಿನಿಂದ ಪ್ರಮಾಣಿಕೃತಗೊಂಡ ಬೀನ್ಸ್ ಗಳಿಂದ ತಯಾರಿಸಲಾಗುತ್ತಿದೆ. ಇದರಂತೆ, ಇಲ್ಲಿ ಬಿಸಿ ಪಾನಿಯ ಮತ್ತು ತಂಪು ಪಾನೀಯ ಹಾಗೂ ಮಿಲ್ಕ್ ಶೇಕ್‌ಗಳಿಗೆ ಅಗತ್ಯವಿರುವ ಹಾಲಿಗಾಗಿ ನೈಸರ್ಗಿಕ ಮೂಲಗಳನ್ನೇ ಅವಲಂಬಿಸಿರಲಾಗುತ್ತಿತ್ತು.[೩೯]

೨೦೦೮, ಮೇ ೨೨ರಂದು ಮೆಕ್ ಡೊನಾಲ್ಡ್ ಘೋಷಣೆಯೊಂದನ್ನು ಅಮೆರಿಕಾ ಮತ್ತು ಕೆನಡಾದಲ್ಲಿ ಮಾಡಿತು. ಇದು ಫ್ರೆಂಚ್ ಫ್ರೈ ಅಡುಗೆಗೆ ಬಳಸುವ ಎಣ್ಣೆಯಲ್ಲಿ ಕೊಬ್ಬಿನಂಶವಿರುವುದಿಲ್ಲ ಮತ್ತು ಸಾಸಿವೆ ಎಣ್ಣೆಯನ್ನು ಧಾನ್ಯಗಳ ಜತೆ ಹಾಗೂ ಸೋಯಾ ಎಣ್ಣೆಯನ್ನು ಬಳಸಲಾಗುತ್ತದೆ. ಹಾಗೂ ವರ್ಷದ ಕೊನೆಯಲ್ಲಿ ಸೋಯಾ ಎಣ್ಣೆಯನ್ನು ಇದರ ಖರಿದ ಪದಾರ್ಥಗಳಾದ ಪೀಸ್ ಮತ್ತು ಕುಕೀಸ್‌ಗಳಿಗಾಗಿ ಬಳಸಲಾಯಿತು.[೪೦][೪೧]

ಸಿಎಕೆ ಅಥವಾ ಸಿಎಎಸ್ ವಿಧಾನದಿಂದ ಕೊಲ್ಲುವ ವಿತರಕರಿಂದ ಕೋಳಿಗಳನ್ನು ಖರೀದಿಸಲಾಗುತ್ತಿದೆ. ಮೆಕ್ ಡೊನಾಲ್ಡ್ ಹೇಳುವಂತೆ, ಪ್ರಸ್ತುತ ಬಳಲಾಗುತ್ತಿರುವ ಸಿಎಎಸ್ ಪದ್ಧತಿಯಿಂದ ಪ್ರಾಣಿಗಳ ರಕ್ಷಣೆಯನ್ನು ಮಾಡುವ ಉದ್ದೇಶದಿಂದ ಹೆಚ್ಚಿನ ಸಂಶೋಧನೆಯನ್ನು ಮಾಡಬೇಕು.[೪೨]

ಪರಿಸರಕ್ಕೆ ಸಂಬಂಧಿಸಿದ ದಾಖಲೆ/ಮಾಹಿತಿಗಳು[ಬದಲಾಯಿಸಿ]

ಎಪ್ರಿಲ್‌ ೨೦೦೮ರಲ್ಲಿ ಮೆಕ್‌ಡೊನಾಲ್ಡ್ಸ್‌ ತನ್ನ ೧೧ ಮಾರ್ಪಾಡು ಹೊಂದಿದ ರೆಸ್ಟಾರೆಂಟುಗಳಲ್ಲಿ ಜೈವಿಕ ಅನಿಲವನ್ನು ಪ್ರಯೋಗಾತ್ಮಕವಾಗಿ ಬಳಸಲಾಗುತ್ತಿದೆ ಇದರಿಂದಾಗಿ ಪ್ರದೇಶದಲ್ಲಿನ ಇಂಗಾಲ ಡೈ ಆಕ್ಸೈಡ್‌ ಪ್ರಮಾಣವನ್ನು ಮತ್ತು ತ್ಯಾಜ್ಯದ ಹಾನಿಯನ್ನು ತಪ್ಪಿಸುತ್ತದೆ ಎಂದು ಪ್ರಕಟಣೆ ಹೊರಡಿಸಿತು. ಈ ಪ್ರಯೋಗದಲ್ಲಿ ರೆಸ್ಟಾರೆಂಟಿನ ತ್ಯಾಜ್ಯವನ್ನು ವಿಯೋಲಾ ಎನ್ವಿರಾನ್‌ಮೆಂಟ್ ಸರ್ವಿಸ್‌ನವರು ತೆಗೆದುಕೊಂಡು ಹೋಗಿ ಶಕ್ತಿ ಉತ್ಪಾದಕ ಸ್ಥಾವರಗಳಲ್ಲಿ ಅದನ್ನು ಶಕ್ತಿ ಉತ್ಪಾದನೆಗಾಗಿ ಬಳಸಿಕೊಳ್ಳಲಾಗುತ್ತದೆ. ಮೆಕ್‌ಡೊನಾಲ್ಡ್ಸ್‌ ಈ ಯೋಜನೆಯನ್ನು ವಿಸ್ತರಿಸುವ ವಿಚಾರದಲ್ಲಿದ್ದರೂ ಸಹ ಅಮೇರಿಕಾದಲ್ಲಿನ ಜೈವಿಕ ಶಕ್ತಿ ಉತ್ಪಾದನಾ ಗಟಕಗಳು ಸಾಕಷ್ಟಿಲ್ಲದೇ ಇರುವುದರಿಂದ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯುವಲ್ಲಿ ವಿಫಲವಾಗಿದೆ.[೪೩] ಇದರೊಂದಿಗೆ ಯುರೋಪ್‌ನಲ್ಲಿ ಮೆಕ್‌ಡೊನಾಲ್ಡ್ಸ್‌ ತನ್ನ ರೆಸ್ಟಾರೆಂಟ್‌ನ ಸಸ್ಯ ತ್ಯಾಜ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಡಿಸೇಲ್‌ ಟ್ರಕ್‌ಗಳ ಇಂದವನ್ನು ತಯಾರಿಸಿಕೊಳ್ಳುತ್ತಿದೆ.[೪೪]

ಮುಂದುವರೆದು ಮೆಕ್‌ಡೊನಾಲ್ಡ್ಸ್‌ ನವರು ತಮ್ಮ ಕೆಲವು ಪದಾರ್ಥಗಳನ್ನು ಹಾಕಿಡಲು ಪಾತ್ರೆಗಳಿಗಾಗಿ ತೆನೆಗಳನ್ನು ಬಳಸಿ ತಯಾರಿಸಿದ ಜೈವಿಕ ಪ್ರಾಸ್ಟಿಕ್‌ ಪಾತ್ರೆಗಳನ್ನು ತಯಾರಿಸಿಕೊಳ್ಳುತ್ತವೆ. ಒಂದು ವರದಿಯ ಪ್ರಕಾರ ಈ ವಸ್ತುಗಳನ್ನು ಬಳಸುವುದರಿಂದ ೩೦% ರಿಂದ ೮೦% ರಷ್ಟು ಇಂಗಾಲದ ಪ್ರಮಾಣದಲ್ಲಿ ಉಳಿತಾಯವಾಗುವುದು ಎಂದು ಗಾರ್ಡಿಯನ್‌ ವರದಿಯು ಹೇಳುತ್ತದೆ. ಈ ತರಹದ ಪ್ಲಾಸ್ಟಿಕ್‌ಗಳು ಉಳಿದವುಗಳಿಗಿಂತ ಗಟ್ಟಿಮುಟ್ಟಾಗಿದ್ದು ಉಪಯೋಗಕ್ಕೂ ಹೆಚ್ಚು ಸೂಕ್ತವಾಗಿದೆ ಮತ್ತು ಭೂಮಿಯೊಳಗೆ ಕರಗಿ ಹೋಗುವ ಗುಣವನ್ನೂ ಹೊಂದಿವೆ. ಈ ತರಹದ ಪ್ಲಾಸ್ಟಿಕ್‌ಗಳ ಮುರುಬಳಕೆಗೆ ಬರುವಂತೆ ಮಾಡುವಾಗ ಉಪಯೋಗಿಸುವ ಶಕ್ತಿಯಿಂದಾಗಿ ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುತ್ತದೆ. ಮತ್ತು ಈ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಕೊಳಕಾಗಿಸುತ್ತವೆ ಮತ್ತು ಮರು ಸಿದ್ದಪಡಿಸಿದ ಪ್ಲಾಸ್ಟಿಕ್‌ಗಳನ್ನು ಮಾರಾಟಮಾಡುವುದು ಅಸಾಧ್ಯವಾಗಿದೆ.[೪೫]

ಅಮೇರಿಕಾದ ಪರಿಸರ ರಕ್ಷಣಾ ಇಲಾಖೆಯು ಮೆಕ್‌ಡೊನಾಲ್ಡ್ಸ್‌ ಇವರು ಪದಾರ್ಥಗಳನ್ನು ಕಟ್ಟುವ ವಿನ್ಯಾಸದಲ್ಲಿ ಬದಲಾವಣೆ ಮಾಡಿ ಗಟ್ಟಿ ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ಮಾಡುತ್ತಿರುವುದನ್ನು ಮತ್ತು ಮರು ಬಳಕೆಯಾದ ವಸ್ತುಗಳನ್ನು ಬಳಸುತ್ತಿರುವುದನ್ನು ಗಮನಿಸಿದೆ.[೪೬] ವಿದ್ಯುತ್‌ ಮಿತ ಬಳಕೆ, ನೈಸರ್ಗಿಕ ವಸ್ತುಗಳ ಸದ್ಬಳಕೆ, ವಸ್ತುಗಳ ಪುಸರ್ಬಳಕೆ, ಮತ್ತು ನೀರಿನ ಉಪಯೋಗದಲ್ಲಿನ ಹಿಡಿತ ಮುಂತಾದವುಗಳಿಂದ ಪರಿಸರ ರಕ್ಷಣೆಯಲ್ಲಿ ಮೆಕ್‌ಡೊನಾಲ್ಡ್ಸ್‌ ತನ್ನ ಪಾತ್ರ ವಹಿಸುತ್ತಿದೆ ಎಂದು ವರದಿ ಮಾಡಿದೆ.[೪೭]

ರೆಸ್ಟಾರೆಂಟುಗಳಲ್ಲಿ ಆಗುವ ಶಕ್ತಿಯ ವ್ಯಯದಲ್ಲಿ ಶೇ.೨೫ರಷ್ಟನ್ನು ಕಡಿಮೆ ಮಾಡುವ ಸಲುವಾಗಿ ಮೆಕ್‌ಡೊನಾಲ್ಡ್ಸ್‌ ಇವರು ೨೦೦೯ರಲ್ಲಿ ಚಿಕಾಗೊದಲ್ಲಿ ಒಂದು ಮಾದರಿಯ ರೆಸ್ಟಾರೆಂಟ್‌ ತೆರೆದಿದ್ದು ಜಗತ್ತಿನಾದ್ಯಂತ ಮಾದರಿಯಾಗುವ ಉದ್ದೇಶವನ್ನು ಹೊಂದಿದೆ. ಸ್ವಿಡನ್‌ನಲ್ಲಿ ೨೦೦೦ದಲ್ಲಿ ಒಂದು ರೆಸ್ಟಾರೆಂಟನ್ನು ಹಸಿರು ರಕ್ಷಣೆಯ ಉದ್ದೇಶದಿಂದಲೇ ಪ್ರಾರಂಭಿಸಲಾಗಿದೆ.ಮೆಕ್‌ಡೊನಾಲ್ಡ್ಸ್‌ ಚಿಕಾಗೊದಲ್ಲಿನ ವಿನ್ಯಾಸವನ್ನು ಶಕ್ತಿ ಉಳಿತಾಯದ ಉದ್ದೇಶದಿಂದ ಪ್ರಾರಂಭಿಸಿದ್ದು ತನ್ನ ಹಳೆಯ ಯೋಜನೆಗಳನ್ನೆಲ್ಲ ಬಳಸಿಕೊಂಡು ಈ ಯೋಜನೆಯನ್ನು ರೂಪಿಸಿ ಮಳೆ ನೀರು ಸಂಗ್ರಹಣೆ, ಆಕಾಶದ ಬೆಳಕನ್ನು ನೈಸರ್ಗಿಕ ಬೆಳಕಾಗಿ ಉಪಯೋಗಿಸುವುದು ಮತ್ತು ಟೆಬಲ್‌ ಮೇಲಿನ ಪಟ್ಟಿಗಳನ್ನು ಮರು ಉತ್ಪಾದಿಸಲ್ಪಟ್ಟ ವಸ್ತುಗಳಿಂದ ತಯಾರಿಸುವುದು ಮುಂತಾದ ಕ್ರಮಗಳನ್ನು ಕೈಗೊಂಡಿದೆ.[೪೮]

ಮೆಕ್‌ಡೊನಾಲ್ಡ್ಸ್‌ ೧೯೭೦ ದಶಕದಲ್ಲಿ ಅದರ ಪ್ರಯತ್ನವಾದ ಪರಿಸರ ರಕ್ಷಣೆಯ ಯೋಜನೆಗಳ ಬಗ್ಗೆ ವಿರೋಧಗಳು ಕೇಳಿಬಂದಾಗ ತನ್ನ ಯೋಜನೆಗಳಲ್ಲಿ ಬದಲಾವಣೆ ತಂದುಕೊಂಡಿತು.[೪೯] ಉದಾಹರಣೆಗೆ ೧೯೭೦ರಲ್ಲಿ ಒಂದು ಬಿಗ್‌ಮ್ಯಾಕ್‌, ಫ್ರೈಗಳು ಮತ್ತು ಮಧ್ಯಗಳನ್ನು ಕಟ್ಟಲು ನಲವತ್ತಾರು ಗ್ರಾಂಗಳ ವಸ್ತುಗಳನ್ನು ಬಳಸಿದರೆ ಇವತ್ತಿಗೆ ಅದರ ತೂಕ ಶೇ.೪೬ಉಳಿತಾಯದೊಂದಿಗೆ ೨೫ಗ್ರಾಂಗಳಷ್ಟಾಗಿವೆ.[೫೦] ಕೊಲಾಗಳನ್ನು ಸಂಗ್ರಗಣೆಗಾಗಿ ಬೇರೆ ವಸ್ತುಗಳಲ್ಲಿ ಹಾಕಿಟ್ಟು ಸಂಗ್ರಹಿಸುವ ಬದಲಾಗಿ ಮೆಕ್‌ಡೊನಾಲ್ಡ್ಸ್‌ ಕೋಲಾ ತುಂಬಿದ ಟ್ರಕ್‌ಗಳಿಂದ ನೇರವಾಗಿ ತನ್ನ ಸಂಗ್ರಹಣಾ ಘಟಕಕ್ಕೆ ಅವುಗಳನ್ನು ಹಾಕಿಸಿಕೊಂಡು ಲಕ್ಷಗಟ್ಟಲೆ ಪ್ಯಾಕಿಂಗ್‌ಗಳನ್ನು ವರ್ಷವೊಂದಕ್ಕೆ ಕಡಿಮೆ ಮಾಡುತ್ತಿವೆ.[೫೧] ಒಟ್ಟಾರೆಯಾಗಿ ಕಟ್ಟುವ ಸಾಮಗ್ರಿಗಳ ಮತ್ತು ಗಾತ್ರಗಳಲ್ಲಿ ಕಡಿಮೆ ಮಾಡುವ ಮೂಲಕ ಮತ್ತು ಭಾರಿ ಪ್ರಮಾಣದಲ್ಲಿ ಕಟ್ಟುವ ಸಾಮಗ್ರಿಗಳನ್ನು ಬಳಸುವುದರ ಮೂಲಕ ೨೪ ಮಿಲಿಯನ್‌ ಪೌಂಡ್‌ಗಳಷ್ಟು ಉಳಿತಾಯವು ವರ್ಷವೊಂದಕ್ಕೆ ಉಳಿತಾಯವಾಗುತ್ತಿದೆ.[೫೨]

ಶಾಸನಬದ್ಧ ಕೇಸು[ಬದಲಾಯಿಸಿ]

ಮ್ಯಾಕ್ ಡೊನಾಲ್ಡ್ಸ್ ಹಲವಾರು ಮೊಕದ್ದಮೆಗಳಲ್ಲಿ ಮತ್ತು ಇನ್ನಿತರ ಕಾನೂನುಬದ್ಧ ವಿಚಾರಗಳಲ್ಲಿ ಶಾಮೀಲಾಗಿದ್ದು ಇವುಗಳಲ್ಲಿ ಹೆಚ್ಚಿನವುಗಳು ಟ್ರೇಡ್‌ ಮಾರ್ಕ್‌ ಮೇಲಿನ ಭಿನ್ನಾಭಿಪ್ರಾಯಗಳು. ತಮ್ಮ ವ್ಯಾಪಾರ ಮುದ್ರೆಯ ಹೆಸರಿನಿಂದ ಎಮ್‌ಸಿ ಅಥವಾ ಎಂಎಸಿ (ಮ್ಯಾಕ್) ಎಂಬ ಭಾಗವನ್ನು ಬಿಡುವಲ್ಲಿಯವರೆಗೆ ಹಲವಾರು ಆಹಾರ ವ್ಯವಹಾರಗಳನ್ನು ಕಾನೂನುಬದ್ಧವಾಗಿಯೇ ಬೆದರಿಸಿದೆ. ಇನ್ನೊಂದು ಗಮನಾರ್ಹ ಘಟನೆಯಲ್ಲಿ, ಮ್ಯಾಕ್ ಡೊನಾಲ್ಡ್ಸ್, ಸುಮಾರು ಶತಮಾನದ ಹಿಂದಿನ ಚರಿತ್ರೆಯನ್ನು ಹೊಂದಿರುವ (೧೯೫೨, ನವಂಬರ್ ೨೧, ಶೆರಿಫ್ ಕೋರ್ಟ್ ಗ್ಲಾಸ್ಗೋ ಮತ್ತು ಸ್ಟ್ರಾತ್ಕೆಲ್ವಿನ್) ಸ್ಕಾಟಿಷ್ ಉಪಾಹಾರಗೃಹದ ಮಾಲೀಕನಾದ ಮ್ಯಾಕ್ ಡೊನಾಲ್ಡ್‌ನಿಂದ ಪರಿಹಾರವನ್ನು ಕೇಳಿಕೊಂಡಿದೆ. ಸೆಪ್ಟೆಂಬರ್ ೮, ೨೦೦೯ ರಂದು ಮ್ಯಾಕ್ ಡೊನಾಲ್ಡ್ಸ್‌ನ ಮಲೇಶಿಯಾದ ಕಾರ್ಯಚಟುವಟಿಕೆಗಳು ಮ್ಯಾಕ್ ಕರ್ರಿ ಎಂದು ತನ್ನಿಂದಲೇ ಕರೆಯಲ್ಪಡುತ್ತಿದ್ದ ಇನ್ನೊಂದು ಫಲಾಹಾರಮಂದಿರದ ವಿರುದ್ಧ ಮೊಕದ್ದಮೆಯನ್ನು ಕಳೆದುಕೊಂಡವು. ಮ್ಯಾಕ್‌ಡೊನಾಲ್ಡ್ಸ್‌‌ ಇದು ಮಲೇಷ್ಯಾದ ಉನ್ನತ ನ್ಯಾಯಾಲಯವಾದ ಫೆಡರಲ್‌ ಕೋರ್ಟ್‌ನಲ್ಲಿ ಮೊಕದ್ದಮೆಯನ್ನು ಸೋತಿತು.[೫೩]

ಇದು ಹಲವಾರು ಮಾನನಷ್ಟ ಮೊಕದ್ದಮೆಗಳನ್ನೂ ಕೂಡಾ ದಾಖಲಿಸಿಕೊಂಡಿವೆ. ಉದಾಹರಣೆಗೆ, ಮ್ಯಾಕ್ ಲಿಬೆಲ್ ವಿಚಾರದಲ್ಲಿ, ಮ್ಯಾಕ್ ಡೊನಾಲ್ಡ್ ಪರಿಸರವಾದಿ, ಕಾರ್ಮಿಕರ ಮತ್ತು ಆರೋಗ್ಯ ದಾಖಲೆಗಳನ್ನು ಆಕ್ರಮಣ ಮಾಡಬಲ್ಲಂತಹ ಹಸ್ತಪತ್ರಿಕೆಗಳನ್ನು ಹಂಚಿರುವ ಕಾರಣಕ್ಕೆ ಎರಡು ಕ್ರಾಂತಿವಾದಿಗಳ ಮೇಲೆ ವ್ಯಾಜ್ಯ ಹೂಡಿವೆ. ಯುಕೆಯ ಕಾನೂನು ಇತಿಹಾಸದಲ್ಲೇ ಸುದೀರ್ಘವಾದ ಪರೀಕ್ಷೆಯಲ್ಲಿ ಹಸ್ತಪತ್ರಿಕೆಯಲ್ಲಿರುವ ಕೆಲವು ಸಮರ್ಥನೆಗಳು/ಘೋಷಣೆಗಳು ನಿಜವಲ್ಲ ಮತ್ತು ಆದುದರಿಂದ, ಮಾನನಷ್ಟಕರವಾದುದು ಎಂದು ನ್ಯಾಯಾಧೀಶರೊಬ್ಬರು ಕಂಡುಹಿಡಿದರು. ಆದರೂ, ಕಂಪನಿಯು ಕಿರುಹೊತ್ತಗೆಗಳಲ್ಲಿರುವ ಎಲ್ಲಾ ಸಮರ್ಥನೆಗಳು ನಿಜವಲ್ಲ, ಸಾರ್ವಜನಿಕವಾಗಿಯೇ ಪ್ರತಿಯೊಂದನ್ನೂ ಕಿತ್ತುಹಾಕಬೇಕೆಂದು ಪ್ರತಿಪಾದಿಸಿ ಅಗತ್ಯವಾಗಿ ನ್ಯಾಯಾಧೀಶರ ಅನುಗ್ರಹವನ್ನೂ ಬಯಸಿತು. ಕಂಪನಿಗೆ ಮುಜುಗರವಾಗುವಂತೆ, ನಿರ್ಧಿಷ್ಟ ಅಪಾದನೆಗಳಲ್ಲಿ ಹಲವು ಅಪಾದನೆಗಳು ಬೆಂಬಲಿಸಲ್ಪಟ್ಟವು.[೫೪]

ಕಾರ್ಮಿಕರ ಹಕ್ಕುಗಳ ಸಹಿತ ಹಲವಾರು ವಿಚಾರಗಳಲ್ಲಿ ಮ್ಯಾಕ್ ಡೊನಾಲ್ಡ್ಸ್ ತನ್ನನ್ನು ತಾನೇ ಸಮರ್ಥಿಸಿಕೊಂಡಿದೆ. ಲಂಡನ್‌ನಲ್ಲಿದ್ದ ತನ್ನ ಉಪಾಹಾರಗೃಹಗಳಲ್ಲೊಂದರಲ್ಲಿ ಬಾಲಕಾರ್ಮಿಕರನ್ನು ಕಾನೂನುಬಾಹಿರವಾಗಿ ನೇಮಕ ಮಾಡಿಕೊಂಡಿರುವುದು ಮತ್ತು ಅವರನ್ನು ಅತಿಯಾಗಿ ದುಡಿಸಿಕೊಂಡಿರುವ ಕಾರಣಕ್ಕೆ ಕಂಪನಿಯು ೨೦೦೧ರಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟರಿಂದ £೧೨,೪೦೦ಗಳಷ್ಟು ದಂಡವನ್ನು ಕಂಪನಿಗೆ ವಿಧಿಸಲ್ಪಟ್ಟಿತ್ತು. ಬಾಲಕಾರ್ಮಿಕರ ಕೆಲಸದ ಸ್ಥಿತಿಗಳಿಗೆ ಸಂಬಂಧಿಸಿದಂತೆ ಕಾನೂನನ್ನು ಮುರಿದ ಕಾರಣಕ್ಕೆ ವಿಧಿಸಲ್ಪಟ್ಟ ದಂಡವು ಕಂಪನಿಗೆ ವಿಧಿಸಿದ ಅತೀ ದೊಡ್ಡ ಮೊತ್ತದ ದಂಡಗಳಲ್ಲಿ ಒಂದಾಗಿದೆ ಎಂದು ತಿಳಿಯಲಾಗಿದೆ. (ಆರ್ ವಿ ೨೦೦೨ ಇಡಬ್ಲ್ಯೂಸಿಎ ಕ್ರಿಮ್ ೧೦೯೪). ಪಶ್ಚಿಮ ಆಸ್ಟ್ರೇಲಿಯಾದ ಪರ್ಥ್‌ನಲ್ಲಿ ೨೦೦೭ರ ಎಪ್ರಿಲ್‌ನಲ್ಲಿ ಮ್ಯಾಕ್ ಡೊನಾಲ್ಡ್ಸ್ ತನ್ನ ಅಂಗಡಿಗಳಲ್ಲೊಂದರಲ್ಲಿ ೧೫ ವರ್ಷಕ್ಕಿಂತ ಕೆಳಗಿನ ಬಾಲಕರನ್ನು ದುಡಿಸಿಕೊಂಡಿದುದರ ವಿರುದ್ಧ ತನಗೆ ವಿಧಿಸಿಲಾದ ಐದು ಆಪಾದನೆಗಳ ಪರವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿತು ಮತ್ತು ೮,೦೦೦ ಆಸ್ಟ್ರೇಲಿಯನ್ ಡಾಲರುಗಳಷ್ಟು ದಂಡ ತೆತ್ತಿತು.[೫೫]

ಮ್ಯಾಕ್ ಡೊನಾಲ್ಡ್ಸ್‌ನ್ನು ಒಳಗೊಂಡ ಅತ್ಯಂತ ಹಿರಿದಾದ ಅಪಕೀರ್ತಿ ಹೊತ್ತಿರುವ ಕಾನೂನುಬದ್ಧ ವಿಚಾರವು "ದ ಮ್ಯಾಕ್ ಡೊನಾಲ್ಡ್ಸ್ ಕಾಫೀ" ವಿಚಾರದಲ್ಲಿ, ಸ್ಟೆಲ್ಲಾ ಲೀಬೆಕ್ ಮ್ಯಾಕ್ ಡೊನಾಲ್ಡ್ಸ್‌ನ ತಾಜಾ ಕಾಫೀಯನ್ನು ತನ್ನ ಮೈಮೇಲೆ ತಾನೇ ಚೆಲ್ಲಿಕೊಂಡುದುದರಿಂದ ತೀವ್ರತರವಾದ ಮೂರನೇ ಹಂತದ ಸುಟ್ಟ ಗಾಯಗಳನ್ನು ಹೊಂದಿದುದು.

ಮ್ಯಾಕ್ ಡೊನಾಲ್ಡ್ಶ್‌ನ ಅಮೇರಿಕನ್‌ ಐಡಲ್‌ ಅಭಿವೃದ್ಧಿಯಲ್ಲಿ, ಈ ಸಣ್ಣ ಪ್ರತಿಮೆಯು ಪ್ರತಿನಿಧಿಸುವ "ನ್ಯೂ ವೇವ್ ನಿಗೆಲ್" ಡೇವೊಸ್‌ ಎನರ್ಜಿ ಡೋಮ್‌ ಅನ್ನು ಅತ್ಯಂತ ಸೂಕ್ಷ್ಮವಾಗಿ ಹೋಲುತ್ತಿದ್ದು, ನಂತರದಲ್ಲಿ ಬಾಂಡ್‌ನ ಆಲ್ಬಮ್ ಹೊದಿಕೆಯಾದ "ಫ್ರೀಡಂ ಆಫ್ ಚಾಯ್ಸ್" ಮೂಡಿಬಂದಿದೆ. ಈ ಪ್ರತಿಮೆಯ ಚಿತ್ರದ ಜೊತೆಗೆ, ಇದು ಡೇವೋನ ಪದ್ಯ "ಡಾಕ್ಟರ್ ಡೆಟ್ರಾಯಿಟ್" ನ ಬದಲಾಯಿಸಿದ ಆವೃತ್ತಿಯ ರಾಗದಂತೇ ಇರುವ ನಾದವನ್ನು ನುಡಿಸುತ್ತದೆ. ಡೇವೋ "ಎನರ್ಜಿ ಡೋಮ್‌" ನ ಗ್ರಂಥಸ್ವಾಮ್ಯ ಹಕ್ಕನ್ನು ಪಡೆದನು ಹಾಗೂ, ಇದನ್ನೇ ತನ್ನ ವ್ಯವಹಾರ ಮುದ್ರೆಯನ್ನಾಗಿಯೂ ಬಳಸಿದನು. ಹಾಗೆಯೇ, ಮ್ಯಾಕ್ ಡೊನಾಲ್ಡ್ಸ್ ವಿರುದ್ಧ ಕಾನೂನು ಕ್ರಮ ಕೈಗೊಂಡನು.[೫೬]

ಉತ್ಪನ್ನಗಳು[ಬದಲಾಯಿಸಿ]

ಮ್ಯಾಕ್‌ಡೊನಾಲ್ಡ್ಸ್‌ ಬಿಗ್ ಮ್ಯಾಕ್ ಕೊಂಬೊ ಊಟ, ಫ್ರೆಂಚ್‌ ಫ್ರೈ ಮತ್ತು ಕೊಕಾ ಕೋಲಾದ ಜೊತೆಗೆ ವಿತರಿಸಲಾಗುತ್ತದೆ.

ಮ್ಯಾಕ್ ಡೊನಾಲ್ಡ್ಸ್ ಹ್ಯಾಂಬರ್ಗರ್ಸ್, ಚಿಕನ್ ಸ್ಯಾಂಡ್‌ವಿಚ್‌ನ ಹಲವು ವಿಧಗಳು ಮತ್ತು ಉತ್ಪನ್ನಗಳು, ಕರಿದ ತಾಜಾ ಮಾಂಸ, ತಂಪು ಪಾನೀಯಗಳು, ಉಪಾಹಾರ ತಿನಿಸುಗಳು ಮತ್ತು ಸಿಹಿ ತಿಂಡಿಗಳನ್ನು ವಿಫುಲವಾಗಿಯೇ ಮಾರಾಟ ಮಾಡುತ್ತದೆ. ಹೆಚ್ಚಿನ ಮಾರುಕಟ್ಟೆಗಳಲ್ಲಿ ಮ್ಯಾಕ್ ಡೊನಾಲ್ಡ್ಸ್ ಸಲಾಡ್ ಮತ್ತು ತರಕಾರಿ ವಸ್ತುಗಳನ್ನು, ಮುಚ್ಚಿದ ಸ್ಥಳೀಯ ತಿಂಡಿತಿನಿಸುಗಳನ್ನು ಕೂಡಾ ಮಾರುತ್ತವೆ. ಸಾರನ್ನು (ಸಾಂಬಾರು) ಒದಗಿಸುವ ಒಂದೇ ಒಂಡು ಮ್ಯಾಕ್ ಡೊನಾಲ್ಡ್ಸ್ ರೆಸ್ಟಾರೆಂಟ್‌ ಅಂದರೆ, ಪೋರ್ಚುಗಲ್ ದೇಶದ್ದಾಗಿದೆ. ಮಾದರಿ ಪಟ್ಟಿಯಿಂದ ಬೇರೆಯಾಗಿ ಸ್ಥಳೀಯ ಬದಲಾವಣೆಗಳನ್ನು ಹೊಂದಿದ ಪಟ್ಟಿಯು ತನ್ನ ವಿಶೇಷತೆಗಳಿಗೆ ಹೆಸರಾಗಿದ್ದು ಇದು ಪ್ರಾದೇಶಿಕ ಆಹಾರಾಭ್ಯಾಸಗಳ ನಿಬಂಧನೆಗೊ ಒಳಗಾಗಿರುವ ( ದನದ ಮಾಂಸವು ಧಾರ್ಮಿಕ ನಿರ್ಬಂಧ ಹೊಂದಿರುವ ಭಾರತದಂತಹ) ಅಥವಾ, ಪ್ರಾದೇಶಿಕ ಮಾರುಕಟ್ಟೆಯು ಬಹಳಷ್ಟು ಬಳಕೆಯಲ್ಲಿರುವ ಪ್ರದೇಶಗಳಲ್ಲಿ ಅಂತಹ ಆಹಾರವನ್ನು ಒದಗಿಸುವಂತೆ (ಇಂಡೋನೇಶಿಯಾದಲ್ಲಿ ಮ್ಯಾಕ್ ರೈಸ್‌ನ್ನು ಮಾರುವಂತಹ) ವ್ಯವಸ್ಥೆಗೊಳಿಸಲಾಗಿದೆ.

ಕೇಂದ್ರ ಕಾರ್ಯಾಲಯ[ಬದಲಾಯಿಸಿ]

ಮ್ಯಾಕ್‌ಡೊನಾಲ್ಡ್ಸ್‌‌ ಪ್ಲಾಜಾ- ಮ್ಯಾಕ್‌ಡೊನಾಲ್ಡ್ಸ್‌‌‌ನ ಮುಖ್ಯ ಸ್ಥಳ

ಮ್ಯಾಕ್ ಡೊನಾಲ್ಡ್ಸ್‌ನ ಪ್ರಧಾನ ಕಚೇರಿ ಸಂಕೀರ್ಣವಾದ ಮ್ಯಾಕ್ ಡೊನಾಲ್ಡ್ಸ್ ಪ್ಲಾಝಾವು ಇಲಿನಾಯಿಸ್‌ನ ಓಕ್ ಬ್ರೋಕ್‌ನಲ್ಲಿದೆ. ಇದು ಹಿಂದಿನ ಪ್ರಧಾನ ಕಚೇರಿಯ ಸ್ಥಳದಲ್ಲೇ ಇದ್ದು ಓಕ್ ಬ್ರೋಕ್‌ನ ಸಂಸ್ಥಾಪಕ ಪೌಲ್ ಬಟ್ಲರ್‌ನ ಪ್ರದೇಶವನ್ನು ದೃಢವಾಗಿಸಿದೆ.[೫೭] ೧೯೭೧ರಲ್ಲಿ ಚಿಕಾಗೋ ಲೂಪ್‌ನಲ್ಲಿನ ತನ್ನ ಕಚೇರಿಯನ್ನು ಮ್ಯಾಕ್ ಡೊನಾಲ್ಡ್ಸ್ ಓಕ್ ಬ್ರೂಕ್ ವ್ಯವಸ್ಥೆಗೆ ಸ್ಥಳಾಂತರಿಸಿತು.[೫೮]

ಜಾಹೀರಾತು[ಬದಲಾಯಿಸಿ]

ಮ್ಯಾಕ್ ಡೊನಾಲ್ಡ್ಸ್ ದಶಕಗಳಿಂದಲೂ ವ್ಯಾಪಕವಾದ ಜಾಹೀರಾತು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಸಾಮಾನ್ಯ ಮಾದ್ಯಮಗಳ ಜೊತೆಗೆ (ದೂರದರ್ಶನ, ರೇಡಿಯೋ ಮತ್ತು ವಾರ್ತಾಪತ್ರಿಕೆಗಳು), ಕಂಪನಿಯು ಜಾಹೀರಾತು ಹಲಗೆಗಳು ಮತ್ತು ಸಹಿಗಳು, ಪುಟ್ಟ ಲೀಗ್ ಪಂದ್ಯಗಳಿಂದ ಹಿಡಿದು ಓಲಂಪಿಕ್ ಆಟಗಳವರೆಗಿನ ಎಲ್ಲಾ ಕಾರ್ಯಕ್ರಮಗಳ ಪ್ರಾಯೋಜಕರು ಮತ್ತು ಸ್ಥಳೀಯ ಎಲ್ಲಾ ವಿಧದ ಆಟಗಳಿಗೆ ಲಾಂಛನವಾಗಬಲ್ಲ ಕಿತ್ತಳೆಹಣ್ಣಿನ ಪಾನೀಯಗಳನ್ನು ತಂಪುಗೊಳಿಸುವ ತಂಪುಕಾರಕಗಳ ಸದುಪಯೋಗವನ್ನು ಕೂಡಾ ಕಂಪನಿಯು ಕೂಡಾ ಬಳಸುತ್ತವೆ. ಆದಾಗ್ಯೂ, ದೂರದರ್ಶನ ಮಾದ್ಯಮವು ಕಂಪನಿಯ ಜಾಹೀರಾತು ತಂತ್ರಗಳಲ್ಲಿ ಅತೀ ಪ್ರಧಾನ ಪಾತ್ರವಹಿಸುತ್ತದೆ.

ಇಂದಿನವರೆಗೆ, ಯುನೈಟೆಡ್ ಸ್ಟೇಟ್ಸ್ ಜಾಹೀರಾಗಿನಲ್ಲಿ ಮ್ಯಾಕ್ ಡೊನಾಲ್ಡ್ಸ್ ೨೩ ವೈವಿಧ್ಯಮಯ ಘೋಷಣಾ ವಾಕ್ಯಗಳನ್ನು (ಆಕರ್ಷಕ ನುಡಿಗಳು) ಬಳಸಿದೆ ಹಾಗೂ, ರಾಷ್ಟ್ರ ಮತ್ತು ಪ್ರದೇಶಗಳ ಆಯ್ಕೆಗೆ ಕೆಲವು ಇತರ ಘೋಷಣಾ ವಾಕ್ಯಗಳನ್ನು ಕೂಡಾ ಬಳಸಿದೆ. ಕೆಲವು ಸಂದರ್ಭಗಳಲ್ಲಿ, ಇದು ತನ್ನ ಕಾರ್ಯಾಚರಣೆಗಳ ಜೊತೆಗೆ ಸಮಸ್ಯೆಗಳನ್ನೂ ಸಹ ಎದುರಿಸಬೇಕಾಗಿತ್ತು.

ಮಕ್ಕಳ ಜಾಹೀರಾತು[ಬದಲಾಯಿಸಿ]

ಕ್ರೀಡಾ ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ನೋಡಿ ವರ್ಗ:McDonald's High School All-Americans

ಜಾಗತಿಕ ಕಾರ್ಯಚಟುವಟಿಕೆಗಳು[ಬದಲಾಯಿಸಿ]

ಮ್ಯಾಕ್‌ಡೊನಾಲ್ಡ್ಸ್‌‌ ಮಳಿಗೆಗಳಿರುವ ದೇಶಗಳು

ಮ್ಯಾಕ್ ಡೊನಾಲ್ಡ್ಸ್ ಜಾಗತೀಕರಣದ ಸಾಂಕೇತಿಕ ಲಾಂಛನವಾಗಿದೆ. ಕೆಲವೊಮ್ಮೆ, ಸಮಾಜದ "ಮ್ಯಾಕ್ ಡೊಲಾಲ್ಡೈಸೇಶನ್" ಎಂದೂ ಕರೆಯಲ್ಪಟ್ಟಿದೆ. "ದ ಇಕನಾಮಿಕ್ಸ್" ವಾರ್ತಾಪತ್ರಿಕೆಯು "ಬಿಗ್ ಮ್ಯಾಕ್ ಇಂಡೆಕ್ಸ್‌" ಅನ್ನು ಬಳಸಿದ್ದು, ಇದು ಬಿಗ್‌ ಮ್ಯಾಕ್‌ನ ಬೆಲೆಯನ್ನು ಜಗತ್ತಿನ ಇತರ ಎಲ್ಲಾ ಕರೆನ್ಸಿಗಳೊಂದಿಗೆ ಹೋಲಿಕೆಯಾಗಿದೆ. ಮತ್ತು, ಇದು ಅಸಾಮಾನ್ಯ ರೀತಿಯಲ್ಲಿ, ಈ ಕರೆನ್ಸಿಗಳ " ಕೊಂಡುಕೊಳ್ಳುವ ಶಕ್ತಿಯ ಮೌಲ್ಯ"ವಾಗಿದೆ ಎಂಬುದನ್ನೂ ಸಾಧಿಸಿದೆ. ಅಧಿಕ ವೆಚ್ಚದಾಯಕವಾದ ಐದು ಬಿಗ್ ಮ್ಯಾಕ್‌ಗಳಲ್ಲಿ ನಾಲ್ಕು ಬಿಗ್ ಮ್ಯಾಕ್‌ಗಳೊಂದಿಗೆ ಸ್ಕಾಂಡಿನೇವಿಯಾ ರಾಷ್ಟ್ರಗಳು ಬಿಗ್ ಮ್ಯಾಕ್‌ಗಳನ್ನು ಬಳಸುವುದರಲ್ಲಿ ಮುಂಚೂಣಿಯಲ್ಲಿವೆ. ಜುಲೈ ೨೦೦೮ರ ವೇಳೆಗೆ ನಾರ್ವೆಯು ಜಗತ್ತಿನಲ್ಲೇ ಅತ್ಯಂತ ವೆಚ್ಚದಾಯಕವಾದ ಬಿಗ್ ಮ್ಯಾಕ್ ಅನ್ನು ಹೊಂದಿದ ಪ್ರದೇಶವಾದರೆ, ಅತ್ಯಂತ ಕಡಿಮೆ ಮಟ್ಟದ ಖರ್ಚು ಹೊಂದಿರುವ ಬಿಗ್ ಮ್ಯಾಕ್ ಅಂದರೆ, ಮಲೇಷಿಯ.[ಸೂಕ್ತ ಉಲ್ಲೇಖನ ಬೇಕು]

ಮ್ಯಾಕ್ ಡೊನಾಲ್ಡ್ಸ್‌ ಹೊಂದಿರುವ ಯಾವುದೇ ರಾಷ್ಟ್ರವು ಇನ್ನೊಂದರೊಡನೆ ಯುದ್ಧಕ್ಕೆಡೆಮಾಡಿಕೊಳ್ಳುವುದಿಲ್ಲ ಎಂದು ಥಾಮಸ್‌ ಫ್ರಿಡ್‌ಮನ್‌ ಹೇಳಿಕೆ ನೀಡಿದರು.[೫೯][full citation needed] ಆದರೂ, "ಗೋಲ್ಡನ್ ಆರ್ಚ್ಸ್ ಥಿಯರಿ ಆಫ್ ಕಾನ್ಫ್ಲಿಕ್ಟ್ ಪ್ರೆವೆನ್‌ಶನ್" ಎಂಬುದು ಶಿಸ್ತುಬದ್ಧವಾಗಿ ನಿಜವಾಗಿರುವುದಿಲ್ಲ. ಇದಕ್ಕೆ ಅಪವಾದ ಎಂದರೆ, ೧೯೮೯ರಲ್ಲಿ ಯುನೈಟೆಡ್ ಸ್ಟೇಟ್ಸ್ ಇನ್ವೇಶನ್ ಆಫ್ ಪನಾಮ, ೧೯೯೯ರಲ್ಲಿ ನ್ಯಾಟೊದ ಬಾಂಬಿಂಗ್ ಸರ್ಬಿಯಾ, ೨೦೦೬ರ ಲೆಬನಾನ್ ಯುದ್ಧ ಮತ್ತು ೨೦೦೮ರ ದಕ್ಷಿಣ ಒಸ್ಸೆಶಿಯ ಯುದ್ಧ.

ಕಂಪನಿಯು ತಾನು ಇಳಿದ ಮಾರುಕಟ್ಟೆಯಲ್ಲಿ ಮುಂದುವರೆದ ಹಾಗೂ ಗುಣಮಟ್ಟದ ಸೇವೆಗಳನ್ನು ನೀಡುತ್ತಿರುವ ಕಂಪನಿಗೆ ಪ್ರಶಸ್ತಿ ನೀಡಬೇಕೆಂದು ಕೆಲವು ವೀಕ್ಷಕರು ಅಭಿಪ್ರಾಯಪಟ್ಟರು. ಮಾನವಶಾಸ್ತ್ರ ಅಧ್ಯಯನಗಾರತ ತಂಡವಾದ "ಗೋಲ್ಡನ್ ಆರ್ಕ್ಸ್ ಈಸ್ಟ್" [೬೦] ಪೂರ್ವ ಏಷಿಯಾದ ಮೇಲೆ ಮ್ಯಾಕ್ ಡೊನಾಲ್ಡ್ಸ್‌ಹೊಂದಿರುವ ಪ್ರಭಾವವನ್ನು ಗಮನಿಸಿದೆ ಅಲ್ಲದೆ, ವಿಶೇಷವಾಗಿ ಹಾಂಗ್ ಕಾಂಗ್ ಪ್ರದೇಶದಲ್ಲಿ. ೧೯೭೫ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಹೊಸದಾಗಿ ತೆರೆಯಲ್ಪಟ್ಟಾಗ ಮ್ಯಾಕ್ ಡೊನಾಲ್ಡ್ಸ್ ಪ್ರಪ್ರಥಮ ಉಪಾಹಾರಗೃಹವಾಗಿದ್ದು, ಸ್ವಚ್ಛವಾದ ವಿಶ್ರಾಂತಿ ಕೊಠಡಿ, ಮತ್ತು, ಇತರ ರೆಸ್ಟಾರೆಂಟ್ ಮತ್ತು ಸಂಸ್ಥೆಗಳಲ್ಲಿರುವ ವ್ಯವಸ್ಥೆಗಳಂತೆ, ಗಿರಾಕಿಗಳು ತಮ್ಮ ಆಸಕ್ತಿ, ನಿರೀಕ್ಷೆ ಮತ್ತು ಆದೇಶಗಳನ್ನು ನೀಡುವಂತಹ ಸುಗಮವಾದ ಸೇವೆಗಳನ್ನು ಒದಗಿಸಿತು. ಇತ್ತೀಚೆಗೆ ಮ್ಯಾಕ್ ಡೊನಾಲ್ಡ್ಸ್‌ ಸಿನೋಪೆಕ್‌ನೊಂದಿಗೆ ಪಾಲುದಾರಿಕೆಯನ್ನು ಪಡೆದಿದ್ದು,[when?] ರಾಷ್ಟ್ರದ ಮುಂದುವರೆದ ವೈಯಕ್ತಿಕ ವಾಹನದ ಅಗತ್ಯತೆಯನ್ನು ಸದುಪಯೋಗಪಡಿಸಿಕೊಂಡು ಹಲವಾರು ಡ್ರೈವ್ ಥ್ರೂ ಹೊಟೇಲುಗಳನ್ನು ತೆರೆದಿದ್ದು, ಚೀನಾದ ಪ್ರಜಾಪ್ರಭುತ್ವ ಹೊಂದಿದ ಜನತೆ ಹೊಂದಿರುವಎರಡನೇ ಅತೀ ದೊಡ್ಡ ಆಯಿಲ್ ಕಂಪನಿಯಾಗಿದೆ.[೬೧] ಫ್ರೆಂಚ್ ಲಲಿತಕಲಾ ಸಂಗ್ರಹಾಲಯವಾದ ಲಾವ್ರೆಯೊಂದಿಗೆ ಸಹಭಾಗಿತ್ವ ಹೊಂದಿದ ಒಪ್ಪಂದದೊಡನೆ ಮ್ಯಾಕ್ ಡೊನಾಲ್ಡ್ ತನ್ನ ರೆಸ್ಟಾರೆಂಟ್ ಮತ್ತು ಮ್ಯಾಕ್ ಕೇಫೇಯನ್ನು ೨೦೦೯ರಲ್ಲಿನ ತನ್ನ ನೆಲದಡಿಯ ಪ್ರವೇಶದ್ವಾರದೊಡನೆ ಸಂಗ್ರಹಾಲಯದ ಆವರಣದಲ್ಲಿ ತೆರೆಯಲು ಅವಕಾಶ ನೀಡಿತು.[೬೨]

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal box

  • ಮ್ಯಾಕ್‌ ಡೊನಾಲ್ಡ್ , ಉತ್ತರ ಇರಾಕ್‌ನಲ್ಲಿ ನಡೆಯುತ್ತಿರುವ ಒಂದು ರೆಸ್ಟೊರೆಂಟ್‌.
  • ಮ್ಯಾಕ್ಸಿಮ್‌, ಮ್ಯಾಕ್‌ಡಫ್ ಮತ್ತು ಮ್ಯಾಕ್‌ ಡು, ಇದು ಮಾಂಟ್ರಿಯಲ್, ಕ್ಯೂಬೆಕ್, ಕೆನಡಾದಲ್ಲಿ ಮ್ಯಾಕ್‌ ಡೊನಾಲ್ಡ್‌ ಅನ್ನು ಒಗ್ಗೂಡಿಸುವ ಕುರಿತಾಗಿ ಇರುವ ಒಂದು ಡಾಕ್ಯೂಮೆಂಟರಿ.
  • ಮ್ಯಾಕ್‌ ಹ್ಯಾಪಿ ಡೆ

ಪ್ರತಿಸ್ಪರ್ಧಿಗಳು[ಬದಲಾಯಿಸಿ]

  • ಬರ್ಗರ್‌ ಕಿಂಗ್‌ – ಎರಡನೇ ಅತಿದೊಡ್ಡ ಬರ್ಗರ್‌ ಚೈನ್‌
  • ಸಬ್‌ವೇ (ರೆಸ್ಟೊರೆಂಟ್‌) –ಅತಿದೊಡ್ಡ ಸಿಂಗಲ್‌-ಬ್ರಾಂಡ್‌ ರೆಸ್ಟೊರೆಂಟ್‌ ಸರಣಿ
  • ಯಮ್‌! – ಅತಿದೊಡ್ಡ ಮಲ್ಟಿಬ್ರಾಂಡ್‌ ರೆಸ್ಟೊರೆಂಟ್‌ ಚೈನ್‌

ಉಲ್ಲೇಖಗಳು[ಬದಲಾಯಿಸಿ]

  1. McDonald's publication. "Corporate FAQ". McDonald's Corporation. Retrieved 2012-11-27.
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ "MCDONALDS CORP 2013 Annual Report Form (10-K)" (XBRL). United States Securities and Exchange Commission. February 24, 2014.
  3. ೩.೦ ೩.೧ "MCDONALDS CORP 2014 Q1 Quarterly Report Form (10-Q)" (XBRL). United States Securities and Exchange Commission. May 6, 2014.
  4. McDonald Corporation. "McDONALD'S CORPORATION 10-K SEC Filing".
  5. ೫.೦ ೫.೧ "McDonald's posts sizzling 80% profit rise in 2008". Breitbart.com. 2009-01-26. Archived from the original on 2009-03-01. Retrieved 2010-08-27.
  6. "Chipotle, McDonald's Complete Separation".[ಶಾಶ್ವತವಾಗಿ ಮಡಿದ ಕೊಂಡಿ]
  7. "MCD 10-K 2007, Item 1, pg. 1". Archived from the original on 2010-05-26. Retrieved 2011-03-24.
  8. "MCD 10-K 2007, Item 6, pg. 9". Archived from the original on 2010-05-26. Retrieved 2011-03-24.
  9. "McDonald's history 1954–1955". www.mcdonalds.com. Archived from the original on 2008-05-18. Retrieved 2008-06-22.
  10. "McDonald's history 1965–1973". www.mcdonalds.com. Archived from the original on 2012-03-22. Retrieved 2008-06-22.
  11. ಮ್ಯಾಕ್‌ ಡೊನಾಲ್ದ್‌ ಇತಿಹಾಸ- ರೂಟ್ -೬೬.com Archived 2009-02-20 ವೇಬ್ಯಾಕ್ ಮೆಷಿನ್ ನಲ್ಲಿ.
  12. ೧೨.೦ ೧೨.೧ http://www.mcdonalds.ca/en/aboutus/faq.aspx Archived 2008-09-11 ವೇಬ್ಯಾಕ್ ಮೆಷಿನ್ ನಲ್ಲಿ., retrieved May ೮, ೨೦೦೮
  13. ಬ್ರಾಂಡ್‍, ರಾಚೆಲ್‌ (೨೦೦೬-೧೨-೨೩) " ಚಿಪೊಟಲ್‌ ಫೌಂಡರ್ ಹ್ಯಾಡ್‌ ಬಿಗ್ ಡ್ರೀಮ್ಸ್" Archived 2009-06-28 ವೇಬ್ಯಾಕ್ ಮೆಷಿನ್ ನಲ್ಲಿ. ರಾಕಿ ಮೌಂಟೇನ್ ನ್ಯೂಸ್. ಸಂಪಾದನೆ- ೨೦೦೯-೧೦-೦೭.
  14. "McDonald's sets October deadline to sell Chipotle stock". Denver Business Journal. BizJournals.com. July 25, 2006. Retrieved 2009-08-10.
  15. "McDonald's Wraps Up Boston Market Sale". Dow Jones & Company, Inc. News Services. 2007-08-27. Archived from the original on 2007-09-28. Retrieved 2007-08-28.
  16. "ಕ್ಯಾಟರ್‌ಸರ್ಚ್‌ – ಮ್ಯಾಕ್‌ಡೊನಾಲ್ಡ್ಸ್‌‌ ರೆಸ್ಟೊರೆಂಟ್ಸ್‌". Archived from the original on 2011-07-16. Retrieved 2011-03-24.
  17. "solidgoldmcdonalds.com". solidgoldmcdonalds.com. Archived from the original on 2011-05-14. Retrieved 2010-08-27.
  18. "McDonald's and BP test combined operations. (McDonald's Restaurants; BP Oil Co.)". Archived from the original on 2013-01-03. Retrieved 2011-03-24.
  19. "MCDONALD'S SERVES UP 'MCSTOP' – ITS RESTAURANT FOR BIG CROWDS".
  20. "McDonald's wants a digital-age makeover". Archived from the original on 2006-09-23. Retrieved 2011-03-24.
  21. "Mickey D's McMakeover".
  22. Baertlein, Lisa (September 24, 2009). "''McDonald's raises cash dividend by 10%'' Reuters.com, retrieved 9/28/2009". Reuters.com. Retrieved 2010-08-27.
  23. "Definition of S&P 500 Aristocrat at Investopedia". Investopedia.com. Retrieved 2010-08-27.
  24. "List of 2009 Dividend Aristocrats via Seeking Alpha, retrieved 10/1/2009". Seekingalpha.com. 2008-12-23. Retrieved 2010-08-27.
  25. "CNN.com – Merriam-Webster: 'McJob' is here to stay – Nov. 11, 2003". Archived from the original on 2003-11-18.[ಮಡಿದ ಕೊಂಡಿ]
  26. "McJob". Merriam-Webster's Online Dictionary. 1986. Retrieved 2009-11-29.
  27. AFP (November 12, 2003). "McDonald's upset over McJob title". Retrieved October 18, 2009.
  28. "José Bové". BBC. Retrieved 2008-05-29. In 1999, Bove spent another three weeks in jail after he led activists in the destruction of – guess what – a branch of McDonald's. For Bove, the golden arches represent the industrialization of all food production, the worst of "malbouffe – bad food". For the anti-global movement, his imprisonment made him one of its first martyrs.
  29. Smith, Andrew F. (2007). The Oxford companion to American food and drink. Oxford University Press US. p. 371. ISBN 9780195307962.
  30. Katz, Neil (2010-06-23). "McDonald's and Toy Lawsuit: Are "Happy Meals" Tricking Kids?". CBS News. Archived from the original on 2012-07-22. Retrieved 2010-09-14.
  31. "Letter from McDonald's headquarters claiming fries are vegetarian". Archived from the original on 2011-07-11. Retrieved 2011-03-24.
  32. ಡೇವಿಡ್ ಸ್ಟೆರೆಟ್‌, “ಮ್ಯಾಕ್‌ ಡೊನಾಲ್ಡ್‌ ಬಿಯಿಂಗ್ ಆಂಬುಷ್ಡ್ ಬೈ ಪೆಟಾ,” ChicagoBusiness.com, ೧೧ ಫೆಬ್ರುವರಿ. ೨೦೧೦.
  33. ಕ್ಯಾಥರಿನ್ ಗ್ಲೋವರ್‌, “ಪೆಟಾ vs.ಮ್ಯಾಕ್‌ಡೊನಾಲ್ಡ್ಸ್:ನೈಸೆಸ್ಟ್‌ ವೇ ಟು ಕಿಲ್ ಎ ಚಿಕನ್‌,” ಬಿಎನ್‍ಇಟಿ ೨೦ ಫೆಬ್ರುವರಿ. ೨೦೦೯.
  34. PETA, "ಮ್ಯಾಕ್‌ ಕ್ರೂಯಾಲ್ಟಿ, ಐ ಆಮ್ ಹೇಟಿಂಗ್‌ ಇಟ್," McCruelty.com Archived 2011-06-23 ವೇಬ್ಯಾಕ್ ಮೆಷಿನ್ ನಲ್ಲಿ., ಕೊನೆಯಯದಾಗಿ ನೋಡಿದ್ದು ೧೪ ನವಂಬರ್ ೨೦೧೦
  35. ಗ್ಲೋವರ್‌
  36. Greenpeace International (April 2006). "We're trashin'it, How McDonald's is eating up the Amazon". Archived from the original (PDF) on 2011-03-27. Retrieved 2008-12-15.
  37. Sweney, Mark (2006-04-20). "Not bad for a McJob?". London: The Guardian. Retrieved 2009-03-30.
  38. "ಮೆರಿಯನ್‌-ವೆಬ್‌ಸ್ಟರ್: 'ಮ್ಯಾಕ್‌ಜಾಬ್‌' ಈಸ್‌ ಹಿಯರ್ ಟು ಸ್ಟೇ". ದಿ ಅಸೋಸಿಯೇಟೆಡ್‌ ಪ್ರೆಸ್‌ . ನವೆಂಬರ್ ೧೧, ೨೦೦೩.
  39. Ian Ashbridge (2007-07-03). "McDonald's milk goes organic – 03/07/2007 – FarmersWeekly". Fwi.co.uk. Archived from the original on 2009-09-24. Retrieved 2010-08-27.
  40. "ibtimes.com, McDonald's Holds down Dollar Meal, Making Menu Healthier". Archived from the original on 2011-09-29. Retrieved 2011-03-24.
  41. "McDonald's says all US French fries cooked in zero-trans-fat oil". www.gmanews.
  42. ಮ್ಯಾಕ್‌ ಡೊನಾಲ್ಡ್ಸ್‌‍, “ರಿಪೋರ್ಟ್‌ ಆಫ್‌ ದಿ ಕಾರ್ಪೊರೇಟ್ ರಿಸ್ಪಾನ್ಸಿಬಿಲಿಟಿ ಕಮೀಟಿ ಆಫ್ ದಿ ಬೋರ್ಡ್‌ ಆಫ್‌ ಡೈರೆಕಟರ್ಸ್ ಆಫ್‌ ಮ್ಯಾಕ್‌ಡೊನಾಲ್ಡ್ಸ್‌ ಕಾರ್ಪೊರೇಷನ್,” 19 ನವೆಂಬರ್. 2009 Archived 2011-07-17 ವೇಬ್ಯಾಕ್ ಮೆಷಿನ್ ನಲ್ಲಿ..
  43. "ಮ್ಯಾಕ್‌ಡೊನಾಲ್ಡ್ಸ್‌‌ ಹೇಲ್ಸ್ ಸಕ್ಸೆಸ್ ಆಫ್ ವೇಸ್ಟ್‌-ಟು-ಎನರ್ಜಿ ಟ್ರಯಲ್" ಬ್ಯುಸಿನೆಸ್‌ಗ್ರೀನ್.ಕಾಮ್ ಏಪ್ರಿಲ್ ೧೪, ೨೦೦೮. ಪಡೆದದ್ದು: ಏಪ್ರಿಲ್ ೩, ೨೦೦೮.
  44. "ಲೋಕಲ್ ವುಮೆನ್ ಕ್ರಿಯೇಟ್ಸ್ ಎನ್ವಿರಾನ್‌ಮೆಂಟಲ್-ಫ್ರೆಂಡ್ಲಿ ವೆಬ್‌ಸೈಟ್‌" herald-dispatch.com . ಏಪ್ರಿಲ್ ೧೯, ೨೦೦೮. ಪಡೆದದ್ದು: ಏಪ್ರಿಲ್ ೩, ೨೦೦೮.
  45. "'ಸಸ್ಟೇನೆಬಲ್ ಬಯೋ-ಪ್ಲಾಸ್ಟಿಕ್ ಕ್ಯಾನ್ ಡ್ಯಾಮೇಜ್ ದಿ ಎನ್ವಿರಾನ್‌ಮೆಂಟ್‌" guardian.co.uk . ಏಪ್ರಿಲ್ ೨೬, ೨೦೦೮. ೨೦೦೮ ಮೇ ೨೨ರಂದು ಪ್ರಾರಂಭವಾಯಿತು
  46. "U.S. Environmental Protection Agency". Retrieved April 17, 2008.
  47. "McDonald's Corporation website". Archived from the original on ಮೇ 31, 2016. Retrieved April 17, 2008.
  48. Goodman, Matthew (April 5, 2009). "Big Mac, hold the CO2". The Sunday Times. {{cite journal}}: Cite journal requires |journal= (help)
  49. "National Pollution Prevention Center for Higher Education" (PDF).
  50. [Environmental "Defense Fund. Task Force Report. p. 42"]. {{cite web}}: Check |url= value (help)
  51. [Environmental "Defense Fund and McDonald's Corporation. Waste Reduction Task Force Final Report. Oak Brook, IL: McDonald's, 1991. p. 22"]. {{cite web}}: Check |url= value (help)
  52. [McDonald’s "Corporation. McDonald's Packaging — The Facts. Oak Brook, IL: McDonald's, 1990. p. 7"]. {{cite web}}: Check |url= value (help)
  53. ಬಿಬಿಸಿ ಆನ್‌ಲೈನ್ ನ್ಯೂಸ್ ಆರ್ಟಿಕಲ್, ಸೆಪ್ಟೆಂಬರ್ ೮, ೨೦೦೯ – http://news.bbc.co.uk/2/hi/8243270.stm
  54. ದಿ ಗಾರ್ಡಿಯನ್ https://www.theguardian.com/news/೨೦೦೫/feb/೧೫/food.foodanddrink[ಶಾಶ್ವತವಾಗಿ ಮಡಿದ ಕೊಂಡಿ]
  55. "McDonald's fined for employing underage workers". ABC News Online. 2007-04-12. Archived from the original on 2007-04-18. Retrieved 2007-04-12.
  56. Caro, Mark (2008-06-26). "Devo looks to whip McDonald's good". Chicago Tribune. Archived from the original on 2011-06-24. Retrieved 2008-06-27.
  57. ಸ್ಟೀಲೆ, ಜೆಫ್ರಿ. "ಓಕ್ ಬ್ರೂಕ್ ಹಿಸ್ಟರಿ ಇನ್ ಕೇರಿಂಗ್ ಹ್ಯಾಂಡ್ಸ್‌ ಸೊಸೈಟಿ ಪ್ರೆಸಿಡೆಂಟ್ ಈಸ್ ಪಾರ್ಟ್ ಆಫ್ ವಿಲೇಜಸ್ ಚೆಂಜಿಂಗ್ ಹೆರಿಟೇಜ್ Archived 2013-05-25 ವೇಬ್ಯಾಕ್ ಮೆಷಿನ್ ನಲ್ಲಿ.." ಷಿಕಾಗೋ ಟ್ರಿಬ್ಯುನ್‌. ಜುಲೈ ೨೦, ೨೦೦೬. ಪುಟ ೧೭) ೨೦೦೯ರ ಸಪ್ಟೆಂಬರ್ ೩೦ರಂದು ಮರುಸಂಪಾದಿಸಲಾಗಿದೆ.
  58. Cross, Robert. "ಇನ್‌ಸೈಡ್‌ ಹ್ಯಾಮ್‌ಬರ್ಗರ್ ಸೆಂಟ್ರಲ್ Archived 2013-05-24 ವೇಬ್ಯಾಕ್ ಮೆಷಿನ್ ನಲ್ಲಿ.." ಷಿಕಾಗೋ ಟ್ರಿಬ್ಯುನ್‌. ಜನವರಿ ೯, ೧೯೭೨. G೧೮. ೨೦೦೯ರ ಸಪ್ಟೆಂಬರ್ ೩೦ರಂದು ಮರುಸಂಪಾದಿಸಲಾಗಿದೆ.
  59. "ದಿ ಲೆಕ್ಸಸ್ ಆಂಡ್ ದಿ ಆಲಿವ್ ಟ್ರೀ" Archived 2005-05-11 ವೇಬ್ಯಾಕ್ ಮೆಷಿನ್ ನಲ್ಲಿ.. thomaslfriedman.com. ೪ ಜೂನ್‌ ೨೦೦೮ರಂದು ಮರುಸಂಪಾದಿಸಲಾಯಿತು.
  60. ಸ್ಟ್ಯಾಂಡ್‌ಫೋರ್ಡ್ ಯುನಿವರ್ಸಿಟಿ ಪ್ರೆಸ್‌, ೧೯೯೮,-ಜೇಮ್ಸ್ ಎಲ್‌ ವ್ಯಾಟ್ಸನ್‍ ಅವರಿಂದ ಸಂಪಾದಿಸಲಾಗಿದೆ
  61. "McDonald's deal with oil company marries China's new love of fast food, cars". Archived from the original on 2007-03-25. Retrieved 2011-03-24.
  62. Samuel, Henry (October 4, 2009). "McDonald's restaurants to open at the Louvre". Telegraph.co.uk. London.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
ಸುದ್ದಿ
  • ಸಿಬಿಸಿ ಆರ್ಕೈವ್ಸ್‌‍ ಸಿಬಿಸಿ ಟೆಲಿವಿಷನ್ ವರದಿ ಮಾಡಿರುವ ಮ್ಯಾಕ್‌ಡೊನಾಲ್ಡ್ (೧೯೯೦) ಮಳಿಗೆಯನ್ನು ಮಾಸ್ಕೊದಲ್ಲಿ ಪ್ರಾರಂಭಿಸುತ್ತಿರುವುದು.


  1. REDIRECT Template:Fast-food chains of the United States