ಮಾಧವಿ ಭಂಡಾರಿ
ಮಾಧವಿ ಭಂಡಾರಿಯವರು ಜನಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದಲ್ಲಿ. ಇವರ ತಂದೆ ರಾಮಗಣಪ ಭಂಡಾರಿ ಮತ್ತು ತಾಯಿ ಮಂಕಾಳಿ.
ಶಿಕ್ಷಣ
[ಬದಲಾಯಿಸಿ]ಪ್ರಾಥಮಿಕ ಶಿಕ್ಷಣವನ್ನು ಧಾರೇಶ್ವರದಲ್ಲಿ ಮುಗಿಸಿದರು. ನಂತರ ಇವರ ಗುರು ಗೌರಿ ಅಡಿಗರ ಮಾರ್ಗದರ್ಶನದಂತೆ, ಬೊಂಬಾಯಿಯಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ಗಿಲ್ಡರ್ ಲೇನ್ ಮುನ್ಸಿಫಲ್ ಸ್ಕೂಲಿನಲ್ಲಿ ೮ ರಿಂದ ೧೧ನೇ ತರಗತಿವರೆಗೆ ಕಲಿತರು , ಮುಂದಿನ ಒಂದು ವರ್ಷ ಪರೇಲ್ ನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು.[೧] ಡಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಮುಗಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಹಿಂದಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ವೃತ್ತಿ ಜೀವನ
[ಬದಲಾಯಿಸಿ]ಮಾಧವಿಯವರ ವೃತ್ತಿ ಬದುಕು ಆರಂಬಗೊಂಡದ್ದು, ಉಡುಪಿಯ ಪೂರ್ಣಪ್ರಜ್ಣಾ ಕಾಲೇಜಿನಲ್ಲಿ. ೧೯೭೯ರಿಂದ ೨೦೧೫ವರೆಗೆ ಕರ್ತವ್ಯವನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿಯೂ ಸೇವೆಸಲ್ಲಿಸಿದ್ದಾರೆ.[೨]
ರಂಗಭೂಮಿ
[ಬದಲಾಯಿಸಿ]ಇವರು ರಂಗಭೂಮಿ ಕಲಾವಿದರಾಗಿದ್ದಾರೆ. 'ಸ್ನಾನ' ನಾಟಕದಲ್ಲಿ ಸರಸ್ವತಿ ಪಾತ್ರ, 'ಸಂಧ್ಯಾ-ಛಾಯಾ' ನಾಟಕದಲ್ಲಿ ನಾನಿ ಪಾತ್ರ, 'ನಾಗಮಂಡಲ' ನಾಟಕದಲ್ಲಿ ಕುರುಡವ್ವನ ಪಾತ್ರಗಳನ್ನು ಮಾಡಿದ್ದಾರೆ. ಇದರೊಂದಿಗೆ ಗುಡ್ದದ ಭೂತ Archived 2019-07-30 ವೇಬ್ಯಾಕ್ ಮೆಷಿನ್ ನಲ್ಲಿ., ಓ ನನ್ನ ಬೆಳಕೆ ಮತ್ತು ಅಬೋಲಿನಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ಪ್ರಕಟಿತ ಕೃತಿಗಳು
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]- ಉತ್ಸವದಿಂದ ಉತ್ಸಾಕ್ಕೆ.
- ಕಟ್ಟುವುದು ಬಲು ಕಷ್ಟ.
- ಕನ್ನಡಿಯೊಳಗಿನ ಪ್ರತಿಬಿಂಬ.
ಕಥಾ ಸಂಕಲನ
[ಬದಲಾಯಿಸಿ]- ಗಾಯ.
ವೈಚಾರಿಕ ಬರಹ
[ಬದಲಾಯಿಸಿ]- ಮಹಿಳೆ ಮತ್ತು ಕೋಮುವಾದ.
ಸಂಶೋಧನಾ ಪ್ರಬಂಧ
[ಬದಲಾಯಿಸಿ]- ರಾಜೇಂದ್ರಯಾದವ ಕಥಾ ಸಾಹಿತ್ಯದ ವಿವಿಧ ಆಯಾಮಗಳು.
ಅನುವಾದ
[ಬದಲಾಯಿಸಿ]- ಅಂತ್ಯಜ ( ವೈದೇಹಿಯವರ 'ಅಸ್ಪೃಶ್ಯರು' ಕಾದಂಬರಿಯ ಹಿಂದಿ ಅನುವಾದ ).
- ಡಾ. ನಾರಾಯಣ ರಾಯರ 'ವಿಶಿಷ್ಟ ದಾಂಪತ್ಯ ವಿಚಿತ್ರ ಕಾಯಿಲೆಯ' ಅನುವಾದ.
- ಭಗವಂತನ ಕಂದಮ್ಮಗಳು Archived 2019-07-30 ವೇಬ್ಯಾಕ್ ಮೆಷಿನ್ ನಲ್ಲಿ. ( ಹಿಂದಿ ದೇವಶಿಶು ಕಾದಂಬರಿಯ ಅನುವಾದ ).
- ಕಮಲಾದೇವಿ ಯಾದೊಂಕ ಸಿಲ್ಸಿಲಾ (ವೈದೇಹಿಯವರ ಕಮಲಾಬಾಯಿ ಏಕವ್ಯಕ್ತಿ ಪ್ರದರ್ಶನದ ಅನುವಾದ ).
- ರಾಮದಾಸರ 'ದಾಸ ಭಾರತ'ವನ್ನು ಹಿಂದಿಗೆ ಅನುವಾದಿಸಿದ್ದಾರೆ.
- ನನಗೆ ನಾನೆ ಶಿಲ್ಪಿ.
ಪ್ರಶಸ್ತಿಗಳು
[ಬದಲಾಯಿಸಿ]- ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
- ಇವರ 'ಗಾಯ' ಕೃತಿಗೆ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ಪ್ರಶಸ್ತಿ.
- ಉಡುಪಿ ತಾಲೂಕು ಸಮ್ಮೀಳನದ ಸರ್ವಾಧ್ಯಕ್ಷತೆಯ ಗೌರವವನ್ನು ೨೦೧೭ರಲ್ಲಿ ಪಡೆದಿದ್ದಾರೆ.[೩]
- 'ನನಗೆ ನಾನೇ ಶಿಲ್ಪಿ ' ಕೃತಿಗೆ 'ಗೋಪಿರಾಮ್ ಗೋಯೆಂಕಾ ಪ್ರಶಸ್ತಿ' ದೊರೆತಿದೆ.
- ಸಿಂಡಿಕೇಟ್ ಬ್ಯಾಂಕ್ ನಿಂದ ಭಾಷಾ ಪ್ರಚಾರಕ ಸನ್ಮಾನ.
- ಉತ್ತರ ಪ್ರದೇಶದ ಹಿಂದಿ ಸಂಸ್ಥಾನ ಕನ್ನಡ - ಹಿಂದಿ ಸೌಹಾರ್ದ ಸನ್ಮಾನವನ್ನು ಸ್ವೀಕರಿಸಿದ್ದಾರೆ.
- ಸಾಹಿತ್ಯ ಸಾಧನೆಗಾಗಿ ಲಯನ್ಸ್ ಕ್ಲಬ್, ದಕ್ಷಿಣ ವಲಯ ಇವರನ್ನು ಸನ್ಮಾನಿಸಿದೆ.
- ರಂಗ ಭೂಮಿಯ ಸ್ಪರ್ಧೆಗಳಲ್ಲಿ ಮೂರು ಬಾರಿ ಶ್ರೇಷ್ಟ ನಟಿ ಪ್ರಶಸ್ತಿ ಲಭಿಸಿದೆ.
ಉಲ್ಲೇಖ
[ಬದಲಾಯಿಸಿ]- ↑ ಮೊದಲ ಹೆಜ್ಜೆ, ಶ್ರೀಮತಿ ಸೌಮ್ಯಲತಾ ಪಿ, ಕನ್ನಡ ವಿಭಾಗ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೆಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ ಪ್ರಕಾಶನ,ಮೊದಲನೇ ಮುದ್ರಣ ೨೦೧೮, ಪುಟ ಸಂಖ್ಯೆ ೨೨
- ↑ https://timesofindia.indiatimes.com/Madhavi-Bhandary-head-of-the-department-of-Hindi-at-Poornaprajna-Collegehas-taken-over-as-principal-of-the-Poornaprajna-Evening-College-Udupi-/articleshow/13841453.cms
- ↑ https://www.daijiworld.com/news/newsDisplay.aspx?newsID=431366