ಮದ್ರಾಸ್ ವಿಶ್ವವಿದ್ಯಾನಿಲಯ
ಮದ್ರಾಸ್ ವಿಶ್ವವಿದ್ಯಾನಿಲಯದ | |
---|---|
சென்னைப் பல்கலைக்கழகம் | |
ಧ್ಯೇಯ | '-' |
ಸ್ಥಾಪನೆ | ೧೮೫೭ |
ಪ್ರಕಾರ | ಸಾರ್ವಜನಿಕ |
ಧನ ಸಹಾಯ | US$೫೦ ಮಿಲಿಯನ್ |
ಕುಲಪತಿಗಳು | 'ರಾಜ್ಯಪಾಲರು- ಕುಲಪತಿಗಳು ಸುರಜಿತ್ ಸಿಂಗ್ ಬರ್ನಾಲಾ' |
ಉಪಕುಲಪತಿಗಳು | 'ಪ್ರೊ. ಎಸ್.ರಾಮಚಂದ್ರನ್' |
ಸಿಬ್ಬಂದಿ | '೩೦೦' |
ವಿದ್ಯಾರ್ಥಿಗಳ ಸಂಖ್ಯೆ | '-' |
ಪದವಿ ಶಿಕ್ಷಣ | '೩೦೦೦' |
ಸ್ನಾತಕೋತ್ತರ ಶಿಕ್ಷಣ | '೫೦೦೦' |
ಡಾಕ್ಟರೇಟ್ ಪದವಿ | '-' |
ಇತರೆ | '-' |
ಆವರಣ | ಗ್ರಾಮಾಂತರ |
'-' |
ಮದ್ರಾಸ್ ವಿಶ್ವವಿದ್ಯಾನಿಲಯವು (ತಮಿಳು:சென்னைப் பல்கலைக்கழகம்) ಭಾರತದ ಅತ್ಯಂತ ಹಳೆಯ ಮೂರು ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ (ಯೂನಿವರ್ಸಿಟಿ ಆಫ್ ಕಲ್ಕತ್ತಾ ಮತ್ತು ಮುಂಬಯಿ ವಿಶ್ವವಿದ್ಯಾನಿಲಯ). ಮದ್ರಾಸ್ ವಿಶ್ವವಿದ್ಯಾನಿಲಯವನ್ನು ಲಂಡನ್ ವಿಶ್ವವಿದ್ಯಾನಿಲಯದ ಮಾದರಿಯನ್ನು ಅನುಸರಿಸಿ 5 ಸೆಪ್ಟೆಂಬರ್ 1857ರಲ್ಲಿ ಭಾರತದ ಶಾಸಕಾಂಗ ಸಭೆಯ ಕಾಯಿದೆಯಡಿ ಸ್ಥಾಪಿಸಲಾಯಿತು. ಭಾರತ ಸಂವಿಧಾನದಲ್ಲಿರುವ ಪಟ್ಟಿಯಲ್ಲಿ ’ಶಿಕ್ಷಣ’ವು ಇರುವಾಗಿನಿಂದ ವಿಶ್ವವಿದ್ಯಾನಿಲಯವು ಭಾರತ ಕೇಂದ್ರ ಸರ್ಕಾರದ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ವಿಶ್ವವಿದ್ಯಾನಿಲಯವು ಚೆನ್ನೈ (ಮೊದಲಿಗೆ ಮದ್ರಾಸ್ ಎಂದು ಕರೆಯಲ್ಪಡುತ್ತಿತ್ತು) ನಗರದ ದಕ್ಷಿಣ ಭಾಗದಲ್ಲಿ ಸ್ಥಿತವಾಗಿದೆ. ಇದು ನಗರದಲ್ಲಿ ಆರು ಕ್ಯಾಂಪಸ್‌ಗಳನ್ನು ಹೊಂದಿದೆ - ಚೆಪಾಕ್, ಥೊಂಡೆಯ್ಮಾನ್ ವಾಝಗಂ, ಮರೀನಾ, ಗಿಂಡಿ, ತಾರಾಮಣಿ, ಮಧುರಾವಯಲ್ ಮತ್ತು ಛೆತ್ಪೇಟ್. ವಿಶೇಷ ವಿಷಯಗಳ ಸುಮಾರು 50ಕ್ಕಿಂತಲೂ ಹೆಚ್ಚಿನ ವಿಭಾಗಗಳು ಇಲ್ಲಿವೆ.
2004ರಲ್ಲಿ, ವಿಶ್ವವಿದ್ಯಾನಿಲಯದ ಎಲ್ಲಾ ಇಂಜಿನಿಯರಿಂಗ್ ಕೋರ್ಸುಗಳು ಅಣ್ಣಾ ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿಸಲ್ಪಟ್ಟವು. ವಿಶ್ವವಿದ್ಯಾನಿಲಯವು ಹಲವಾರು ಕಾಲೇಜುಗಳ ವಿವಿಧ ಕೋರ್ಸುಗಳಿಗೆ ಸಹಯೋಗ ನೀಡಿದೆ. ಅಲ್ಲದೆ ವಿಶ್ವವಿದ್ಯಾನಿಲಯವು ಇಂಜಿನಿಯರಿಂಗ್ ಕಂಪ್ಯೂಟರ್ ಸಂಬಂಧಿತ ಪಠ್ಯಕ್ರಮಗಳಿಗೆ ಸಮಾಂತರವಾಗಿ ಅದಕ್ಕೆ ಪೂರಕವಾಗುವಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತದೆ. ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳು ಬೋಧನೆಯ ಜೊತೆಗೆ ಸಂಶೋಧನೆಯನ್ನು ಸಹ ಆಯೋಜಿಸುತ್ತವೆ. ವಿಶ್ವವಿದ್ಯಾನಿಲಯದಲ್ಲಿ ಇರುವ ಉತ್ತಮ ಕೇಂದ್ರಗಳ ಜೊತೆಗೆ ಸುಮಾರು 43 ಬಾಹ್ಯ ಸಂಶೋಧನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ದಿ ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ ಕೌನ್ಸಿಲ್, ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ "ಫೈವ್ ಸ್ಟಾರ್ ಸ್ಟೇಟಸ್" ನೀಡಿ ಗೌರವಿಸಿದೆ. ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ "ಉತ್ಕೃಷ್ಟ ಸಾಮರ್ಥ್ಯವುಳ್ಳ ವಿಶ್ವವಿದ್ಯಾನಿಲಯ"ವೆಂಬ ಹೆಗ್ಗಳಿಕೆ ನೀಡಿದೆ.
ಇತಿಹಾಸ
[ಬದಲಾಯಿಸಿ]ಮದ್ರಾಸ್ ಅಧಿಪತ್ಯದಲ್ಲಿ ಮೊದಲ ಬಾರಿಗೆ ಉನ್ನತ ಶಿಕ್ಷಣಕ್ಕಾಗಿ ನಾಗರೀಕರು ಧ್ವನಿಎತ್ತಿ ಮದ್ರಾಸ್ ಗವರ್ನರ್ ಆಗಿದ್ದ ಗೌರವಾನ್ವಿತ ಲಾರ್ಡ್ ಜಾನ್ ಎಲ್ಫಿನ್‌ಸ್ಟೋನ್ ಜಿ.ಸಿ.ಎಚ್ ಅವರಿಗೆ ಸುಮಾರು 70,000 ಸ್ಥಳೀಯ ನಿವಾಸಿಗಳ ಸಹಿಯುಳ್ಳ ಮನವಿಯನ್ನು ಸಲ್ಲಿಸಲಾಯಿತು, ಸಮಿತಿಯ ಅಧ್ಯಕ್ಷರು "ದೇಶದ ಶಿಕ್ಷಣವನ್ನು ಸುಧಾರಿಸುವಂತಹ ವ್ಯವಸ್ಥೆಯನ್ನು ಜಾರಿಮಾಡಲು ಪರಿಣಾಮಕಾರಿ ಮತ್ತು ಪ್ರಗತಿಪರ ಮಾನಗಳನ್ನು ಅವಲೋಕಿಸಿದರು." ಮದ್ರಾಸ್‌ನಲ್ಲಿ ಒಂದು ಇಂಗ್ಲಿಷ್ ಕಾಲೇಜು ಬೇಕೆಂಬ ಮನವಿಯುಳ್ಳ ಈ ನಾಗರೀಕ ಬೇಡಿಕೆಯನ್ನು ಆಗಿನ ಅಡ್ವೊಕೇಟ್ ಜನರಲ್ ಮಿ.ಜಾರ್ಜ್ ನಾರ್ಟನ್ ಅವರು 11 ನವೆಂಬರ್ 1839ರಂದು ಮುಂದಿಟ್ಟರು. ಇದಕ್ಕೆ ಅನುಗುಣವಾಗಿ, ಲಾರ್ಡ್ ಎಲ್ಫಿನ್‌ಸ್ಟೋನ್ ಅವರು ಒಂದು ಸೆಂಟ್ರಲ್ ಕಾಲೇಜಿಯೇಟ್ ಇನ್‌ಸ್ಟಿಟ್ಯೂಶನ್ ಅಥವಾ”ವಿಶ್ವವಿದ್ಯಾನಿಲಯ’ವನ್ನು ಸ್ಥಾಪಿಸುವ ಯೋಜನೆ ರೂಪಿಸಿದರು. ಈ ವಿಶ್ವವಿದ್ಯಾನಿಲಯವು ಅವಳಿ ವಿಭಾಗಗಳನ್ನು ಹೊಂದಿತ್ತು (1) ಇಂಗ್ಲಿಷ್ ಸಾಹಿತ್ಯ, ಪ್ರಾದೇಶಿಕ ಭಾಷೆ, ತತ್ವಜ್ಞಾನ ಮತ್ತು ವಿಜ್ಞಾನಗಳ ಕೃಷಿಗಾಗಿ ಪ್ರೌಢಶಾಲೆ, (2) ಸಾಹಿತ್ಯ, ತತ್ವಜ್ಞಾನ ಮತ್ತು ವಿಜ್ಞಾನಗಳ ಹೆಚ್ಚಿನ ಅಧ್ಯಯನಕ್ಕಾಗಿ ಮಾಹಿತಿ ಒದಗಿಸುವ ಕಾಲೇಜು.
ವಿಶ್ವವಿದ್ಯಾನಿಲಯದ ಮಂಡಳಿಯು ಮಿ.ಜಾರ್ಜ್ ನಾರ್ಟನ್ ಅವರ ಅಧ್ಯಕ್ಷತೆಯಲ್ಲಿ ಜನವರಿ 1840ರಲ್ಲಿ ಸ್ಥಾಪಿತವಾಯಿತು. ಇದು ಈಗಿನ ಚೆನ್ನೈ ಪ್ರೆಸಿಡೆನ್ಸಿ ಕಾಲೇಜಿನ ಸ್ಥಾಪನೆಗೆ ಮುನ್ಸೂಚಕವಾಗಿತ್ತು. ಆದಾಗ್ಯೂ, 1854ರ ಐತಿಹಾಸಿಕ ಪತ್ರ(ಸರ್ ಚಾರ್ಲ್ಸ್ ವುಡ್ಸ್ ಶಿಕ್ಷಣ ರವಾನೆ ಪತ್ರ)ದ ಸುಮಾರು 14 ವರ್ಷಗಳ ನಂತರ ಭಾರತದಲ್ಲಿ ಒಂದು ವ್ಯವಸ್ಥಿತ ನಿಯಮವು ಸೂತ್ರರೂಪಕ್ಕೆ ಬಂದಿತು, ಇದು "ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾನಿಲಯದವರೆಗೆ ಸರಿಯಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಂತಹ ತಾರ್ಕಿಕ ವಿವರಣೆಯನ್ನು ತೋರಿಸಿತು." ಈ ಪತ್ರವು ವಿಶ್ವವಿದ್ಯಾನಿಲಯಗಳನ್ನು ಪ್ರಾರಂಭಿಸುವುದಕ್ಕಾಗಿ ಸಲಹೆಗಳನ್ನು ನೀಡಿತು "ದೇಶೀಯ ಹಾಗೂ ಶಾಸ್ತ್ರೀಯ ಭಾಷೆಗಳನ್ನು ಕಲಿಯುವುದು ಒಳಗೊಂಡಂತೆ ವಿವಿಧ ವಿಭಾಗಳಲ್ಲಿ ಉಪನ್ಯಾಸ ನೀಡುವುದು ಇದರ ಉದ್ದೇಶವಾಗಿತ್ತು." ನಂತರದಲ್ಲಿ, ಮದ್ರಾಸ್ ವಿಶ್ವವಿದ್ಯಾನಿಲಯವು ಲಂಡನ್ ವಿಶ್ವವಿದ್ಯಾನಿಲಯದ ಮಾದರಿಯಂತೆ 5 ಸೆಪ್ಟೆಂಬರ್ 1857ರಂದು ಶಾಸಕಾಂಗದ ಕೌನ್ಸಿಲ್ ಆಫ್ ಇಂಡಿಯಾದ ಆಕ್ಟ್ ಅಡಿಯಲ್ಲಿ ಸ್ಥಾಪಿಸಲಾಯಿತು.
ಮದ್ರಾಸ್ ವಿಶ್ವವಿದ್ಯಾನಿಲಯವು ದಕ್ಷಿಣ ಭಾರತದಲ್ಲಿ 19ನೆಯ ಶತಮಾನದುದ್ದಕ್ಕೂ ಅಭಿವೃದ್ಧಿ ಹೊಂದಿ ಇನ್ನು ಹಲವಾರು ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ನಾಂದಿಯಾಯಿತು, ಅವೆಂದರೆ ಮೈಸೂರು ವಿಶ್ವವಿದ್ಯಾನಿಲಯ (1916), ಆಸ್ಮಾನಿಯಾ ವಿಶ್ವವಿದ್ಯಾನಿಲಯ (1918), ಆಂದ್ರ ವಿಶ್ವವಿದ್ಯಾನಿಲಯ (1926), ಅಣ್ಣಾಮಲೈ ವಿಶ್ವವಿದ್ಯಾನಿಲಯ (1929), ತಿರುವಾಂಕೂರ್ ವಿಶ್ವವಿದ್ಯಾಲಯ (1937) ಪ್ರಸ್ತುತ ಯೂನಿವರ್ಸಿಟಿ ಆಫ್ ಕೇರಳ, ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ (1954), ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯ (1966), ಭಾರತೀದಾಸನ್ ವಿಶ್ವವಿದ್ಯಾನಿಲಯ (1982), ಭಾರತಿಯಾರ್ ವಿಶ್ವವಿದ್ಯಾನಿಲಯ (1982), ಮನನ್ಮೇನಿಯಂ ಸುಂದರನಾರ್ ವಿಶ್ವವಿದ್ಯಾನಿಲಯ (1990), ತಮಿಳು ನಾಡು ಅಗ್ರಿಕಲ್ಚರ್ ವಿಶ್ವವಿದ್ಯಾನಿಲಯ (1971), ಅಣ್ಣಾ ವಿಶ್ವವಿದ್ಯಾನಿಲಯ (1978), ತಮಿಳು ವಿಶ್ವವಿದ್ಯಾನಿಲಯ (1981), ಮದರ್ ತೆರೇಸಾ ವುಮೆನ್ಸ್ ವಿಶ್ವವಿದ್ಯಾನಿಲಯ (1984), ದಿ ತಮಿಳು ನಾಡು ಡಾ. ಎಮ್.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾನಿಲಯ (1989), ತಮಿಳು ನಾಡು ವೆಟೆರಿನರಿ ಅಂಡ್ ಅನಿಮಲ್ ಸೈನ್ಸಸ್ ವಿಶ್ವವಿದ್ಯಾನಿಲಯ (1989), ಪೆರಿಯಾರ್ ವಿಶ್ವವಿದ್ಯಾನಿಲಯ (1997) ಮತ್ತು ತಮಿಳು ನಾಡು ಡಾ.ಅಂಬೇಡ್ಕರ್ ಲಾ ವಿಶ್ವವಿದ್ಯಾನಿಲಯ (1996).
1912ರಲ್ಲಿ ವಿಶ್ವವಿದ್ಯಾನಿಲಯಕ್ಕೆ ಭಾರತೀಯ ಇತಿಹಾಸ, ಪ್ರಾಕ್ತನಶಾಸ್ತ್ರ , ಸಂಬಂಧಿತ ಭಾಷಾ ಶಾಸ್ತ್ರ ಮತ್ತು ಭಾರತೀಯ ಅರ್ಥ ಶಾಸ್ತ್ರ ವಿಭಾಗಗಳನ್ನು ಸ್ಥಾಪಿಸಲು ಅನುಮತಿ ದೊರೆಯಿತು. ಒಟ್ಟು 17 ವಿಶ್ವವಿದ್ಯಾನಿಲಯದ ವಿಭಾಗಗಳಿದ್ದವು, 30 ವಿಶ್ವವಿದ್ಯಾನಿಲಯದ ಅಧ್ಯಾಪಕರು, 69 ಸಂಶೋದನಾ ಅಭ್ಯರ್ಥಿಗಳು ಮತ್ತು 127 ವಿಶ್ವವಿದ್ಯಾನಿಲಯದ ಪ್ರಕಟಣೆಗಳು, ಆ ವರ್ಷದಲ್ಲಿ ವಾರ್ಷಿಕ ಆಯವ್ಯಯಗಳ ಅಂದಾಜು 11 ಲಕ್ಷ ರೂಪಾಯಿಗಳಾಗಿದ್ದಿತು. ನಂತರ, ವಿಶ್ವವಿದ್ಯಾನಿಲಯದ ಸಂಶೋಧನೆ ಮತ್ತು ಬೋಧಕ ಕಾರ್ಯಚಟುವಟಿಕೆಗಳು ಸಾಡ್ಲರ್ ಕಮಿಷನ್‌ನಿಂದ ಪ್ರೋತ್ಸಾಹಿಸಲ್ಪಟ್ಟಿತು ಹಾಗೂ ವಿಶ್ವವಿದ್ಯಾನಿಲಯದ ಲಾಭಗಳು 1923ರ ಮದ್ರಾಸ್ ವಿಶ್ವವಿದ್ಯಾನಿಲಯದ ಆಕ್ಟ್ ನಿಂದ ಹುರಿದುಂಬಿಸಲ್ಪಟ್ಟವು. ಈ ಸಮಯಕ್ಕೆ, ಮದ್ರಾಸ್ ವಿಶ್ವವಿದ್ಯಾನಿಲಯದ ಪ್ರಾದೇಶಿಕ ವಿಸ್ತಾರವು ಉತ್ತರದ ಒರಿಸ್ಸಾದ ಬೆರ್ಹಂಪುರ್‌ನಿಂದ, ನೈಋತ್ಯದಲ್ಲಿ ಕೇರಳದ ತ್ರಿವೇಂದ್ರಂ, ಪಶ್ಚಿಮದ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರು ಹಾಗೂ ಉತ್ತರದ ಆಂದ್ರದ ಹೈದರಾಬಾದ್‌ಗಳನ್ನು ಸುತ್ತುವರೆದಿತ್ತು.
ಆದಾಗ್ಯೂ, ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, 1956ರಲ್ಲಿ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ ನಿಯೋಜಿತಗೊಂಡಿತು ಮತ್ತು ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರವು ಬದಲಾದಂತೆ 1923ರ ಮದ್ರಾಸ್ ಯೂನಿವರ್ಸಿಟಿ ಆಕ್ಟ್ ಗುಣಾತ್ಮಕ ಹಾಗೂ ಪರಿಮಾಣ ಸಂಬಂಧಿ ಬದಲಾವಣೆಗಳನ್ನು ತನ್ನ ಕಾನೂನು ಹಾಗೂ ಕಾರ್ಯಚಟುವಟಿಕೆಗಳಲ್ಲಿ ಮಾಡಿತು.
ಚಿಹ್ನೆಗಳು
[ಬದಲಾಯಿಸಿ]1857ರಲ್ಲಿ ವಿನ್ಯಾಸಗೊಳಿಸಲಾದ ಮದ್ರಾಸ್ ವಿಶ್ವವಿದ್ಯಾನಿಲಯದ ಅಧಿಕೃತ ಲಾಂಛನದ ವಿವರಣೆ ಹೀಗಿದೆ:
"ನಡೆಯುತ್ತಿರುವ ಹುಲಿ ಹೊರಬರುತ್ತಿರುವಂತೆ ತೋರಿಸಿರುವ ಉಬ್ಬಿದ ಆಕಾರದ ಮೇಲೆ ರಜತ (ಬೆಳ್ಳಿ ಅಥವಾ ಬಿಳಿ) (ನಡೆಯುತ್ತಿರುವ ಮತ್ತು ಸ್ವಾಭಾವಿಕ ಬಣ್ಣ ಹೊಂದಿರುವ) , ಮುಖ್ಯ ಕಂದು ತುಪ್ಪಳಿರುವ ಚಿಕ್ಕ ಸಸ್ತನಿ ಪ್ರಾಣಿಯ ಮೇಲೆ (ಮೇಲ್ಭಾಗದ ಸುತ್ತ ಕಪ್ಪು) , ಮಾಸಲು ಬಣ್ಣದ ಅಥವಾ ( 1/3ರಷ್ಟು ಮೇಲಿಂದ ಮಧ್ಯದವರೆಗೆ ಇರುವ ಒಂದು ಬಂಗಾರದ ಅಥವಾ ಹಳದಿಯ ಉದ್ದನೆಯ ಪಟ್ಟಿ) , ಎರಡು ಆನೆಗಳ ತಲೆಗಳ ಮಧೆ, ಎಲೆಗಳಿರುವ ಅರಳಿರುವ ಕಮಲದ ಹೂ, ಇವೆಲ್ಲದರ ಜೊತೆಗಿರುವ ಘೋಷಣೆ ಡಾಕ್ಟ್ರಿನಾ ವಿಮ್ ಪ್ರೊಮೊವೆಟ್ ಇನ್ಸಿಟಂ ".
ಅಧಿಕೃತ ಲಾಂಛನದಲ್ಲಿ ಕೆಳಕಂಡ ಬಣ್ಣಗಳನ್ನು ಬಿಂಬಿಸಲಾಗಿದೆ. 'ಮೂಲ ಹಸಿರು' - ತಿಳಿ ಹಸಿರು ಹುಲಿ - ಬಿಳಿ ನೆಲದ ಆನೆಯಮೇಲೆ ಹಳದಿ - ಕಪ್ಪು ಸಮುದ್ರ ಕಮಲದ ಮೇಲೆ ಬೂದು ಬಣ್ಣ - ಬಿಳಿ ಹೂ, ಆಲೀವ್ ಹಸಿರು ಎಲೆಗಳು, ಬಂಗಾರದ ಬಣ್ಣದ ಘೋಷಣೆ - ಕೆಂಪು, ಕಪ್ಪು ಅಕ್ಷರಗಳು.
ಮದ್ರಾಸ್ ವಿಶ್ವವಿದ್ಯಾನಿಲಯದ ಘೋಷಣೇಯ ಇಂಗ್ಲಿಷ್ ಅನುವಾದ ಹೀಗಿದೆ: "ಲರ್ನಿಂಗ್ ಪ್ರಮೋಟ್ಸ್ (ಒನ್ಸ್) ನ್ಯಾಚುರಲ್ (ಇನ್ನೇಟ್) ಟ್ಯಾಲೆಂಟ್."
ಕ್ಯಾಂಪಸ್
[ಬದಲಾಯಿಸಿ]ವಿಶ್ವವಿದ್ಯಾನಿಲಯವು ನಾಲ್ಕು ಮುಖ್ಯ ಕ್ಯಾಂಪಸ್‌ಗಳನ್ನು ಹೊಂದಿದೆ, ಚೆಪಾಕ್, ಮರೀನಾ, ಗಿಂಡಿ ಮತ್ತು ತಾರಾಮಣಿ. ಚೆಪಾಕ್ ಕ್ಯಾಂಪಸ್‌ನಲ್ಲಿರುವ ಕಟ್ಟಡಗಳೆಂದರೆ ಐತಿಹಾಸಿಕ ಅಧ್ಯಯನದ ಶಾಲೆ, ಸಮಾಜಿಕ ವಿಜ್ಞಾನಗಳ ಶಾಲೆ, ರಾಜಕೀಯ ಮತ್ತು ಅಂತರರಾಷ್ಟ್ರೀಯ ಅಧ್ಯಯನದ ಶಾಲೆ, ಅರ್ಥಶಾಸ್ತ್ರದ ಶಾಲೆ, ತತ್ವಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನಗಳ ಶಾಲೆ, ಸೂಕ್ಷ್ಮ ಮತ್ತು ಅಭಿನಯ ಕಲೆ ಶಾಲೆ, ಇಂಗ್ಲಿಷ್ ಹಾಗೂ ವಿದೇಶೀ ಭಾಷೆಗಳ ಶಾಲೆ, ಬಿಸಿನೆಸ್ ಅಂಡ್ ಮ್ಯಾನೇಜ್ಮೆಂಟ್ ಶಾಲೆ, ಗಣಿತಶಾಸ್ತ್ರದ ಶಾಲೆ, ಸ್ಟ್ಯಾಟಿಸ್ಟಿಕ್ಸ್ ಮತ್ತು ಕಂಪ್ಯೂಟರ್ ವಿಜ್ಞಾನಗಳ ಶಾಲೆ, ಮಾಹಿತಿ ಮತ್ತು ಸಂವಹನ ಅಧ್ಯಯನದ ಶಾಲೆ, ಮಣ್ಣು ಮತ್ತು ವಾತಾವರಣ ಅಧ್ಯಯನಗಳ ಶಾಲೆ. ತಮಿಳು ಮತ್ತು ಇತರೆ ದ್ರಾವಿಡ ಭಾಷೆಗಳ ಶಾಲೆ ಮತ್ತು ಸಂಸ್ಕೃತ ಹಾಗೂ ಇತರೆ ಭಾರತೀಯ ಭಾಷೆಗಳ ಶಾಲೆಗಳು ಮರೀನಾ ಕ್ಯಾಂಪಸ್‌ನಲ್ಲಿವೆ. ಮಣ್ಣು ಮತ್ತು ವಾತಾವರಣ ವಿಜ್ಞಾನ ಅಧ್ಯಯನ ಶಾಲೆ, ರಾಸಾಯನಶಾಸ್ತ್ರ ವಿಜ್ಞಾನಗಳ ಶಾಲೆ, ಮತ್ತು ದೈಹಿಕ ಅಧ್ಯಯನ ವಿಭಾಗ ಮತ್ತು ಜೀವ ವಿಜ್ಞಾನ ವಿಭಾಗಗಳು ಗಿಂಡಿ ಕ್ಯಾಂಪಸ್‌ನಲ್ಲಿವೆ. ತಾರಾಮಣಿ ಕ್ಯಾಂಪಸ್‌ನಲ್ಲಿ ಮೂಲ ಭೂತ ವೈದ್ಯಕೀಯ ವಿಜ್ಞಾನ ಅಧ್ಯಯನ ವಿಭಾಗ ಮತ್ತು ನ್ಯಾನೊ ವಿಜ್ಞಾನ ಮತ್ತು ಫೋಟೊನಿಕ್ಸ್ ವಿಭಾಗಗಳು ಇವೆ.
ಪರೀಕ್ಷೆಗಳು
[ಬದಲಾಯಿಸಿ]ವಿಶ್ವವಿದ್ಯಾನಿಲಯದ ಹೆಚ್ಚಿನ ಆದಾಯವು 'ಪರೀಕ್ಷೆಯ ಶುಲ್ಕ'ಗಳಿಂದ ಬರುತ್ತದೆ. ವಿಶ್ವವಿದ್ಯಾನಿಲಯವು ದೂರಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುತ್ತದೆ ಇದರ ಪರೀಕ್ಷೆಗಳ ಶುಲ್ಕದಿಂದ ಆದಾಯ ಹೆಚ್ಚಾಗಿದೆ. ವಿಶ್ವವಿದ್ಯಾನಿಲಯವು ಬೋಧಕ ವರ್ಗದವರಿಗೆ ಹೆಚ್ಚುವರಿ ತರಗತಿಗಳನ್ನು ನಡೆಸುವ ವ್ಯವಸ್ಥೆಯನ್ನು ಮಾಡಿ ಅವರಿಗೂ ಹೆಚ್ಚಿನ ಆದಾಯ ದೊರೆಯುವಂತೆ ಮಾಡಿದೆ, ಅದೂ ಕೂಡ ಆದಾಯ ತೆರಿಗೆಯಿಲ್ಲದೆ.
ಹಳೆಯ ವಿದ್ಯಾರ್ಥಿಗಳು
[ಬದಲಾಯಿಸಿ]ನೋಬೆಲ್ ಪ್ರಶಸ್ತಿ ವಿಜೇತರು
[ಬದಲಾಯಿಸಿ]- ಸಿ. ವಿ. ರಾಮನ್ (ಬಿ.ಎ., ಎಮ್.ಎ. 1902), ಭೌತಶಾಸ್ತ್ರದಲ್ಲಿ ನೋಬೆಲ್ ಬಹುಮಾನ (1930), ಭಾರತ ರತ್ನ (1954)
- ಸುಬ್ರಹ್ಮಣ್ಯನ್ ಚಂದ್ರಶೇಖರ್(ಬಿ.ಎಸ್‌ಸಿ 1925), ಭೌತಶಾಸ್ತ್ರದಲ್ಲಿ ನೋಬೆಲ್ ಬಹುಮಾನ (1983), ಕೊಪ್ಲೇ ಮೆಡಲ್(1984)
ಕಾನೂನು ಮತ್ತು ರಾಜಕೀಯ
[ಬದಲಾಯಿಸಿ]ಗವರ್ನರ್-ಜನರಲ್
[ಬದಲಾಯಿಸಿ]- ಚಕ್ರವರ್ತಿ ರಾಜಗೋಪಾಲಚಾರಿ, ಸ್ವತಂತ್ರ ಭಾರತದ ಗವರ್ನರ್ ಜನರಲ್ (1948–1950), ಭಾರತ ರತ್ನ (1954)
ಅಧ್ಯಕ್ಷರು
[ಬದಲಾಯಿಸಿ]- ಸರ್ವೇಪಲ್ಲಿ ರಾಧಾಕೃಷ್ಣನ್, ಭಾರತದ ಎರಡನೆಯ ಅಧ್ಯಕ್ಷರು (1962–1967), ಭಾರತ ರತ್ನ (1954)
- ವಿ. ವಿ. ಗಿರಿ, ಭಾರತದ ನಾಲ್ಕನೆಯ ಅಧ್ಯಕ್ಷರು (1969–1974), ಭಾರತ ರತ್ನ (1975)
- ನೀಲಂ ಸಂಜೀವ ರೆಡ್ಡಿ, ಭಾರತದ ಆರನೆಯ ಅಧ್ಯಕ್ಷರು (1977–1982)
- ಆರ್. ವೆಂಕಟರಾಮನ್, ಭಾರತದ ಎಂಟನೆಯ ಅಧ್ಯಕ್ಷರು (1987–1992)
- ಎ.ಪಿ.ಜೆ.ಅಬ್ದುಲ್ ಕಲಾಂ, ಭಾರತದ ಹನ್ನೊಂದನೆಯ ಅಧ್ಯಕ್ಷರು (2002–2007), ಭಾರತ ರತ್ನ (1997)
ಮುಖ್ಯ ನ್ಯಾಯಮೂರ್ತಿಗಳು
[ಬದಲಾಯಿಸಿ]- ಪತಂಜಲಿ ಶಾಸ್ತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ
- ಕೆ. ಸುಬ್ಬಾ ರಾಂ, ಭಾರತದ ಮುಖ್ಯ ನ್ಯಾಯಮೂರ್ತಿ
ಮಂತ್ರಿಗಳು
[ಬದಲಾಯಿಸಿ]- ಚಿದಂಬರಂ ಸುಬ್ರಮಣಿಯಂ, ಮಂತ್ರಿ, ಭಾರತ ರತ್ನ (1998)
- ಪಳನಿಯಪ್ಪನ್ ಚಿದಂಬರಂ, ಪ್ರಸ್ತುತ ಭಾರತದ ಗೃಹ ಮಂತ್ರಿ
ವಿಜ್ಞಾನ ಮತ್ತು ತಂತ್ರಜ್ಞಾನ
[ಬದಲಾಯಿಸಿ]- ಎ.ವಿ. ಬಾಲಕೃಷ್ಣನ್, ಆನ್ವಯಿಕ ಗಣಿತ ಶಾಸ್ತ್ರಜ್ಞ; ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕ
- ಜಿ.ಎನ್. ರಾಮಚಂದ್ರನ್ (ಎಮ್.ಎಸ್‌ಸಿ. 1942), ಕೊಲ್ಯಾಜಿನ್ ರಚನೆಯ ಬಗ್ಗೆ ವಿವರಣೆ ನೀಡಿದ ಜೀವಭೌತವಿಜ್ಞಾನಿ.
- ಶಾಂತಮಂಗಳಂ ಆರ್. ಶ್ರೀನಿವಾಸ ವರಾಧನ್, ಏಬೆಲ್ ಬಹುಮಾನ (2007)
- ಕೆ. ಎಸ್. ಕೃಷ್ಣನ್, ಭೌತವಿಜ್ಞಾನಿ, ರಾಮನ್ ಸ್ಕ್ಯಾಟರಿಂಗ್‌ನ ಸಹ-ಸಂಶೋಧಕ, ಪದ್ಮ ಭೂಷಣ (1954)
- ಜಗ ಮೋಹನ್, ಇಂಜಿನಿಯರಿಂಗ್ ಸಲಹೆಗಾರ & ಕೆನಡಾದ ಟೊರೊಂಟೋದ ಸೆಂಟೆನ್ನಿಯಲ್ ಕಾಲೇಜ್‌ನ ಇಂಜಿನಿಯರಿಂಗ್ ಮತ್ತು ಅನ್ವಯಿಕ ವಿಜ್ಞಾನ ವಿಭಾಗದ ಡೀನ್
- ಡಾ. ಎಸ್. ನಟರಾಜನ್, ಪ್ರಖ್ಯಾತ ನೇತ್ರ ಶಾಸ್ತ್ರಜ್ಞ, ಮದ್ರಾಸ್ ವಿಶ್ವವಿದ್ಯಾನಿಲಯದ ಪದವೀಧರ.
- ಕಾರ್ತಿಕ್ ಕುಮಾರ್ಪಿ, ಪ್ರಖ್ಯಾತ ಸಾಫ್ಟ್‌ವೇರ್ ಇಂಜಿನಿಯರ್, ಸಿಂಗಪುರ್, ಮದ್ರಾಸ್ ವಿಶ್ವವಿದ್ಯಾನಿಲಯದ ಪದವೀಧರ.
- ಎನ್. ಶ್ರೆತ್ ಚೊಂಗ್ತಂ, ವ್ಯವಸ್ಥಾಪಕ ನಿರ್ದೇಶಕ, ಬಯೋಫೋನ್.
- ಇಂದ್ರಾ ನೂಯಿ, ಅಧ್ಯಕ್ಷರು, ಪೆಪ್ಸಿ ಕಂಪನಿ.
ಸಾಹಿತ್ಯ
[ಬದಲಾಯಿಸಿ]- ಪ್ರೊಫೆಸರ್ ಡಾ.ನಜ್ಮುಲ್ ಹೊಡಾ, ಉರ್ದು, ಅರೇಬಿಕ್ ಹಾಗೂ ಪರ್ಷಿಯನ್ ವಿಭಾಗಗಳ ಮಾಜಿ ಮುಖ್ಯಸ್ತ್ರರು ಹಾಗೂ ಪ್ರಖ್ಯಾತ ಸಂಶೋಧಕ, ಲೇಖಕರು ಮತ್ತು ಭಾರತದ ಪ್ರಸಿದ್ಧ ಕವಿ.
ಚಲನಚಿತ್ರ
[ಬದಲಾಯಿಸಿ]- ಎಂ.ಜಿ. ರಾಮಚಂದ್ರನ್, ಗೌರವ ಡಾಕ್ಟರೇಟ್, ತಮಿಳು ಚಲನಚಿತ್ರ ರಂಗದ ಪ್ರಮುಖ ನಟ ಹಾಗೂ ತಮಿಳು ನಾಡಿನ ಮುಖ್ಯ ಮಂತ್ರಿ
- ಮಣಿ ರತ್ನಂ, ತಮಿಳು ಭಾರತೀಯ ಚಲನಚಿತ್ರ ನಿರ್ದೆಶಕ, ಲೇಖಕ ಮತ್ತು ನಿರ್ಮಾಪಕ, ಪದ್ಮಶ್ರೀ (2002)
- ವನಮಾಲಿ, ಜನಪ್ರಿಯ ತೆಲುಗು ಚಲನಚಿತ್ರ ಸಾಹಿತ್ಯ ರಚನೆಕಾರ, ತೆಲುಗು ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.
ಸೆನೇಟ್ ಹೌಸ್
[ಬದಲಾಯಿಸಿ]ಮದ್ರಾಸ್ ವಿಶ್ವವಿದ್ಯಾನಿಲಯವು ಒಂದು ಐತಿಹಾಸಿಕ ಸ್ಮಾರಕವಾಗಿದೆ - ಸೆನೇಟ್ ಹೌಸ್ - ಇದು ಚೆನ್ನೈನ ಪ್ರಮುಖವಾದ ಹೆಗ್ಗುರುತು ಕಟ್ಟಡಗಳಲ್ಲಿ ಇದೂ ಒಂದು. ಸೆನೇಟ್ ಹೌಸ್, ವಿಶ್ವವಿದ್ಯಾನಿಲಯದ ಮೊದಲ ಕಟ್ಟಡವು 1869ರಲ್ಲಿ ಉದ್ಘಾಟನೆಯಾಯಿತು, 19ನೆಯ ಶತಮಾನದ ಮಹಾನ್ ವಾಸ್ತುವಿನ್ಯಾಸಗಾರ ರಾಬರ್ಟ್ ಫೆಲೋಸ್ ಶಿಶೊಲ್ಮ್ ಎಂಬುವವನು ವಿನ್ಯಾಸಗೊಳಿಸಿದ ಪ್ರಮುಖ ರಚನೆಯಾಗಿದೆ[ಸೂಕ್ತ ಉಲ್ಲೇಖನ ಬೇಕು], ಈತನು ಇಂಡೋ-ಅರಬ್ಬಿ ಶೈಲಿಯ ಜೊತೆಗೆ ಬೈಝಂಟೈನ್ ಮತ್ತು ಯೂರೋಪಿಯನ್ ವಾಸ್ತುಶಿಲ್ಪದ ಲಕ್ಷಣಗಳನ್ನು ಮೇಳೈಸಿ ಈ ವಿನ್ಯಾಸವನ್ನು ಮಾಡಿದನು. ಈ ವಿಶ್ವವಿದ್ಯಾನಿಲಯವು ಸೆನೇಟ್ ಹೌಸ್ ಅನ್ನು 2006ರಲ್ಲಿ ನವೀಕರಣ ಮಾಡಿತು.
ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಕಾಲೇಜುಗಳು
[ಬದಲಾಯಿಸಿ]ಸ್ವಆಡಳಿತದ - ಕಲಾ ಮತ್ತು ವಿಜ್ಞಾನ ಕಾಲೇಜುಗಳು
[ಬದಲಾಯಿಸಿ]- ಎಮ್‌ಒಪಿ ವೈಷ್ಣವ ಕಾಲೇಜ್, ಚೆನ್ನೈ ಮಹಿಳೆಯರಿಗಾಗಿ ಇರುವ ಅತ್ಯುತ್ತಮ ಸ್ವತಂತ್ರ ಕಾಲೇಜು.
- ದಿ ನ್ಯೂ ಕಾಲೇಜ್, ಚೆನ್ನೈ
- ಭಾರತಿ ವುಮೆನ್ಸ್ ಕಾಲೇಜ್
- ಲೊಯೋಲಾ ಕಾಲೇಜ್, ಚೆನ್ನೈ
- ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್, ತಾಂಬರಂ
- ಪ್ರೆಸಿಡೆನ್ಸಿ ಕಾಲೇಜ್
- ಕ್ವೀನ್ ಮೇರೀಸ್ ಕಾಲೇಜ್
- ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜ್, ಚೆನ್ನೈ
- ಸ್ಟೆಲ್ಲಾ ಮೇರಿಸ್ ಕಾಲೇಜ್
ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳು
[ಬದಲಾಯಿಸಿ]- ಜೆಎಚ್‌ಎ ಅಗರ್ಸೇನ್ ಕಾಲೇಜ್, ಮಾಧವರಾಂ, ಚೆನ್ನೈ, ಬಾಲಕರು & ಬಾಲಕಿಯರಿಬ್ಬರಿಗೂ ಕ್ರೀಡೆಯಲ್ಲಿ ಮುಂದುವರೆಯಲು ಪ್ರೋತ್ಸಾಹಿಸುವ ಕಾಲೇಜಾಗಿ ಹೆಸರು ಪಡೆದಿದೆ.
- ಡಾ.ಅಂಬೇಡ್ಕರ್ ಗವರ್ನಮೆಂಟ್ ಆರ್ಟ್ಸ್ ಕಾಲೇಜ್
- ಗವರ್ನಮೆಂಟ್ ಆರ್ಟ್ಸ್ ಕಾಲೇಜ್
- ಗವರ್ನಮೆಂಟ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್
- ಗವರ್ನಮೆಂಟ್ ಕಾಲೇಜ್ ಆಫ್ ಆರ್ಕಿಟೆಕ್ಚರ್ ಅಂಡ್ ಸ್ಕಲ್‌ಪ್ಚರ್
- ಲೋಗನಾಥ ನಾರಾಯಣಸ್ವಾಮಿ ಆರ್ಟ್ಸ್ ಕಾಲೇಜ್
- ಕ್ವೈದ್-ಇ-ಮಿಲ್ಲತ್ ಗವರ್ನಮೆಂಟ್ ಕಾಲೇಜ್ ಫಾರ್ ವುಮೆನ್
- ರಾಜೇಶ್ವರಿ ವೇದಾಚಲಂ ಗವರ್ನಮೆಂಟ್ ಆರ್ಟ್ಸ್ ಕಾಲೇಜು
- ಶ್ರೀ ಸುಬ್ರಮಣ್ಯಸ್ವಾಮಿ ಗವರ್ನಮೆಂಟ್ ಆರ್ಟ್ಸ್ ಕಾಲೇಜು
- ಶ್ರೀ ಶಂಕರ ಸೈನ್ಸ್ ಅಂಡ್ ಆರ್ಟ್ಸ್ ಕಾಲೇಜ್, ಎನಾತರ್, ಕಾಂಚೀಪುರಂ
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]- ಎನ್‌ಬಿಸಿಯ ಟಿವಿ ಪ್ರದರ್ಶನ ಹೀರೋಸ್ (ಟಿವಿ ಸರಣಿ)ಯ ಕಲ್ಪನೆಯ ವ್ಯಕ್ತಿ ಮೊಹಿಂದರ್ ಸುರೇಶ್ ಅವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಒಬ್ಬ ಜನೆಟಿಕ್ಸ್ ಅಧ್ಯಾಪಕರಾಗಿದ್ದು ಅವರ ತಂದೆಯ ಸಾವಿನ ಬಗ್ಗೆ ತನಿಖೆ ನಡೆಸಲು ಹಾಗೂ ಅವರ ಸಂಶೋಧನೆಯನ್ನು ಮುಂದುವರೆಸಲು ನ್ಯೂಯಾರ್ಕ್ ನಗರಕ್ಕೆ ತೆರಳಿದ್ದಾರೆ.
ಇವನ್ನೂ ನೋಡಿ
[ಬದಲಾಯಿಸಿ]- ತಮಿಳುನಾಡು ಇನ್‌ಸ್ಟಿಟ್ಯೂಟ್ ಆಫ್ ಲೇಬರ್ ಸ್ಟಡೀಸ್ - ಪಿಎಚ್‌ಡಿ ವಿದ್ಯಾರ್ಥಿಗಳಿಗಾಗಿ ರೀಸರ್ಚ್ ಇನ್‌ಸ್ಟಿಟ್ಯೂಶನ್
- ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್
- ಭಾರತದಲ್ಲಿನ ವಿಶ್ವವಿದ್ಯಾಲಯಗಳ ಪಟ್ಟಿ
- ಭಾರತದಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು
- ಭಾರತದಲ್ಲಿನ ಶಿಕ್ಷಣ
- ದೂರ ಶಿಕ್ಷಣ ಪರಿಷತ್ತು
- ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಭಾರತ)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಮದ್ರಾಸ್ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್
- ಮದ್ರಾಸ್ ವಿಶ್ವವಿದ್ಯಾನಿಲಯದ ಪರೀಕ್ಷೆ ಫಲಿತಾಂಶಗಳು Archived 2016-03-10 ವೇಬ್ಯಾಕ್ ಮೆಷಿನ್ ನಲ್ಲಿ.
- ದೂರಶಿಕ್ಷಣಕ್ಕಾಗಿ ಮದ್ರಾಸ್ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ Archived 2021-12-03 ವೇಬ್ಯಾಕ್ ಮೆಷಿನ್ ನಲ್ಲಿ.
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from February 2008
- Articles with invalid date parameter in template
- Commons link is locally defined
- Commons category with page title different than on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Tamil Nadu articles missing geocoordinate data
- All articles needing coordinates
- ಮದ್ರಾಸ್ ವಿಶ್ವವಿದ್ಯಾಲಯ
- ಚೆನ್ನೈಯಲ್ಲಿ ಶಿಕ್ಷಣ.
- ತಮಿಳುನಾಡಿನ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು
- 1959ರಲ್ಲಿ ಸ್ಥಾಪಿತವಾದ ಶೈಕ್ಷಣಿಕ ಸಂಸ್ಥೆಗಳು.
- ಕಾಮನ್ವೆಲ್ತ್ ವಿಶ್ವವಿದ್ಯಾನಿಲಯಗಳ ಅಸೋಸಿಯೇಶನ್
- ಶೈಕ್ಷಣಿಕ ಸಂಸ್ಥೆಗಳು
- ವಿಶ್ವವಿದ್ಯಾಲಯಗಳು