ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಭಾರತದಲ್ಲಿರುವ ವಿಶ್ವವಿದ್ಯಾಲಯಗಳು ಪಟ್ಟಿ . ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಎರಡೂ ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಹಲವು ವಿಶ್ವವಿದ್ಯಾಲಯಗಳು ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳ ನೆರವನ್ನು ಪಡೆದಿವೆ. ಇವುಗಳನ್ನು ಹೊರತುಪಡಿಸಿ, ಹಲವು ಸಂಘ, ಸಂಸ್ಥೆಗಳಿಂದ ಬೆಂಬಲಿತ ಖಾಸಗಿ ವಿಶ್ವವಿದ್ಯಾಲಯಗಳಿವೆ. ಭಾರತದಲ್ಲಿರುವ ಹೆಚ್ಚಿನ ವಿಶ್ವವಿದ್ಯಾಲಯಗಳು ಮೇಲ್ಪಂಕ್ತಿಯ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡಿವೆ[೧]

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ[ಬದಲಾಯಿಸಿ]

  • ಶ್ರೆಷ್ಠ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್‌ ಬಿಡುಗಡೆ ಮಾಡಿದರು.

ರಾಷ್ಟ್ರೀಯತೆ ಚರ್ಚೆ ಹಾಗೂ ಪ್ರತಿಭಟನೆಗಳ ಮೂಲಕ ದೇಶದ ಗಮನ ಸೆಳೆದಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ಎರಡನೇ ಸ್ಥಾನದಲ್ಲಿದೆ.

  • ಶ್ರೇಷ್ಠ ವಿಶ್ವವಿದ್ಯಾಲಯಗಳು
  • 1) ಐಐಎಸ್‌ಸಿ, ಬೆಂಗಳೂರು
  • 2) ಜೆಎನ್‌ಯು, ನವದೆಹಲಿ
  • 3) ಬಿಎಚ್‌ಯು, ವಾರಣಾಸಿ
  • ಶ್ರೇಷ್ಠ ಕಾಲೇಜುಗಳು
  • 1) ಮಿರಂದಾ ಹೌಸ್‌, ನವದೆಹಲಿ
  • 2) ಲಾಯಲ್ ಕಾಲೇಜ್, ಚೆನ್ನೈ
  • 3) ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌, ನವದೆಹಲಿ[೩]

ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ[ಬದಲಾಯಿಸಿ]

  • 3 Apr, 2017;
  • ೨೦೧೬-೧೭ ರ ರ್ಯಾಂಕಿಂಗ್‌ ಪಟ್ಟಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸತತ ಎರಡನೇ ವರ್ಷವೂ ಪಾತ್ರವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್‌ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನಗಳಿಸಿದೆ.
  • ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಎರಡನೇ ಆವೃತ್ತಿಯ ರ್ಯಾಂಕಿಂಗ್‌ ಅನ್ನು ೨-೪-೨೦೧೭ ಸೋಮವಾರ ಪ್ರಕಟಿಸಿದ್ದಾರೆ.
  • ಕಳೆದ ತಿಂಗಳು ಮಾರ್ಚಿ ೨೦೧೭ ರಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್‌ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್‌ ಉನ್ನತ ಶಿಕ್ಷಣ ರ್‍ಯಾಂಕಿಂಗ್‌’ನಲ್ಲಿ ಐಐಎಸ್‌ಸಿ ಎಂಟನೇ ಸ್ಥಾನ ಗಳಿಸಿತ್ತು. ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು. ಹೆಚ್ಚು ಅನುದಾನ ಸ್ವಾಯತ್ತೆ: ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ.

ಆರು ವಿಭಾಗಗಳಲ್ಲಿ ರ್ಯಾಂಕ್‌[ಬದಲಾಯಿಸಿ]

  • ೨೦೧೭ರ ಈ ವರ್ಷ ಆರು ವಿಭಾಗಗಳಲ್ಲಿ ರ್ಯಾಂಕ್‌ ನೀಡಲಾಗಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌, ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ್ಯಾಂಕ್‌ ನೀಡಲಾಗಿದೆ. ಐಐಎಸ್‌ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್‌ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ್ಯಾಂಕ್‌ ಗಳಿಸಿದೆ.

ಆಯ್ಕೆ ಕ್ರಮ[ಬದಲಾಯಿಸಿ]

  • ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಚೌಕಟ್ಟಿನ (ಎನ್‌ಐಆರ್‌ಎಫ್‌) ಅಡಿಯಲ್ಲಿ ರ‍್ಯಾಕಿಂಗ್‌ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.

ಐಐಎಂಬಿಗೆ 2ನೇ ಸ್ಥಾನ[ಬದಲಾಯಿಸಿ]

  • ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಮೊದಲ ಸ್ಥಾನ ಗಳಿಸಿದೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್‌ (ಐಐಟಿ–ಮದ್ರಾಸ್‌) ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಮಾನದಂಡಗಳು[ಬದಲಾಯಿಸಿ]

  • ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ, ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ
  • ಅಧ್ಯಯನ ಮತ್ತು ವೃತ್ತಿಪರ ನಡಾವಳಿಗಳು
  • ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ
  • ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆ
  • ಗ್ರಹಿಕೆ

[೪]

==bharatada prachina

ವಿಶ್ವವಿದ್ಯಾಲಯಗಳು ==

ಆಂಧ್ರ ಪ್ರದೇಶ[ಬದಲಾಯಿಸಿ]

ಅರುಣಾಚಲ ಪ್ರದೇಶ[ಬದಲಾಯಿಸಿ]

ಅಸ್ಸಾಂ[ಬದಲಾಯಿಸಿ]

ಬಿಹಾರ[ಬದಲಾಯಿಸಿ]

ಚಂಡಿಘಢ್‌[ಬದಲಾಯಿಸಿ]

ಛತ್ತೀಸ್‌ಘಢ್‌[ಬದಲಾಯಿಸಿ]

ದೆಹಲಿ[ಬದಲಾಯಿಸಿ]

ಗುಜರಾತ್‌‌[ಬದಲಾಯಿಸಿ]

ಹಿಮಾಚಲ ಪ್ರದೇಶ[ಬದಲಾಯಿಸಿ]

ಹರಿಯಾಣ[ಬದಲಾಯಿಸಿ]

ಜಮ್ಮು ಮತ್ತು ಕಾಶ್ಮೀರ[ಬದಲಾಯಿಸಿ]

ಝಾರ್ಖಂಡ್[ಬದಲಾಯಿಸಿ]

ಕರ್ನಾಟಕ[ಬದಲಾಯಿಸಿ]

ಕೇರಳ[ಬದಲಾಯಿಸಿ]

ಮಧ್ಯ ಪ್ರದೇಶ[ಬದಲಾಯಿಸಿ]

ಮಹಾರಾಷ್ಟ್ರ[ಬದಲಾಯಿಸಿ]

ಮಣಿಪುರ[ಬದಲಾಯಿಸಿ]

ಮೇಘಾಲಯ[ಬದಲಾಯಿಸಿ]

ಮಿಜೋರಾಮ್‌[ಬದಲಾಯಿಸಿ]

ನಾಗಾಲ್ಯಾಂಡ್[ಬದಲಾಯಿಸಿ]

ಒಡಿಶಾ[ಬದಲಾಯಿಸಿ]

ಪಾಂಡಿಚೆರಿ[ಬದಲಾಯಿಸಿ]

ಪಂಜಾಬ್[ಬದಲಾಯಿಸಿ]

ರಾಜಸ್ಥಾನ[ಬದಲಾಯಿಸಿ]

ತಮಿಳುನಾಡು[ಬದಲಾಯಿಸಿ]

{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}

ತ್ರಿಪುರ[ಬದಲಾಯಿಸಿ]

ಉತ್ತರ ಪ್ರದೇಶ[ಬದಲಾಯಿಸಿ]

ಉತ್ತರಖಂಡ[ಬದಲಾಯಿಸಿ]

ಪಶ್ಚಿಮ ಬಂಗಾಳ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2010-03-01. Retrieved 2009-11-02.
  2. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಗೆ ನಂ.1 ಸ್ಥಾನ;3 Apr, 2017
  3. ದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳು
  4. ಐಐಎಸ್‌ಸಿ ದೇಶದ ನಂ.1 ಶಿಕ್ಷಣ ಸಂಸ್ಥೆ;ಪಿಟಿಐ;3 Apr, 2017
  5. http://www.mafsu.in
  6. http://www.asiaticsocietycal.com/ http://www.asiaticsocietycal.com/
  7. http://www.boseinst.ernet.in/ Archived 2012-03-26 ವೇಬ್ಯಾಕ್ ಮೆಷಿನ್ ನಲ್ಲಿ. http://www.boseinst.ernet.in/ Archived 2012-03-26 ವೇಬ್ಯಾಕ್ ಮೆಷಿನ್ ನಲ್ಲಿ.
  8. http://www.saha.ac.in/cs/www/ Archived 2009-09-17 ವೇಬ್ಯಾಕ್ ಮೆಷಿನ್ ನಲ್ಲಿ. http://www.saha.ac.in/cs/www/ Archived 2009-09-17 ವೇಬ್ಯಾಕ್ ಮೆಷಿನ್ ನಲ್ಲಿ.
  9. http://www.bose.res.in/ http://www.bose.res.in/
  10. http://www.veccal.ernet.in Archived 2008-09-17 ವೇಬ್ಯಾಕ್ ಮೆಷಿನ್ ನಲ್ಲಿ. http://www.veccal.ernet.in Archived 2008-09-17 ವೇಬ್ಯಾಕ್ ಮೆಷಿನ್ ನಲ್ಲಿ.

ಇದನ್ನು ನೋಡಿರಿ[ಬದಲಾಯಿಸಿ]