ಬಿಲ್ವಪತ್ರೆ ಮರ
| ಬಿಲ್ವಪತ್ರೆ ಮರ | |||||||||||||||||
|---|---|---|---|---|---|---|---|---|---|---|---|---|---|---|---|---|---|
| ಚಿತ್ರ:EK Eagl marm Fr.jpg |
|||||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||||
|
|||||||||||||||||
|
|
|||||||||||||||||
| Aegle marmelos (L.) Corr. Serr. |
|||||||||||||||||
|
|
ಬಿಲ್ವಪತ್ರೆ ಮರ ಮಧ್ಯಮ ಪ್ರಮಾಣದ ಮರ.ಇದು ಹಿಂದೂ ಧರ್ಮದಲ್ಲಿ ಪವಿತ್ರ ಮರ ಎಂದು ಪರಿಗಣಿತವಾಗಿದೆ.ಶಿವನಿಗೆ ಪ್ರೀತಿಪಾತ್ರ ಮರ ಎಂದು ಪುರಾಣಗಳು ಹೇಳುತ್ತವೆ.ದಕ್ಷಿಣ ಎಷಿಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.ದೇವಸ್ಥಾನಗಳ ಪಕ್ಕ, ಉದ್ಯಾನವನಗಳಲ್ಲಿ ನೆಟ್ಟು ಬೆಳೆಸುತ್ತಾರೆ.
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ರುಟಾಸಿಯೆ ಕುಟುಂಬಕ್ಕೆ ಸೇರಿದ್ದು ಅಜೆಲ್ ಮರ್ಮೆಲಸ್ (Aegle Marmelos)ಎಂದು ಸಸ್ಯಶಾಸ್ರ್ರೀಯ ಹೆಸರು. ಬಿಲ್ವ ಎಂದೂ ಗುರುತಿಸಲ್ಪಡುತ್ತದೆ.
ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]
ಇದು ಪರ್ಣಪಾತಿ ಮರ.ಕೊಂಬೆಗಳಲ್ಲಿ ಮುಳ್ಳುಗಳಿವೆ.ತೊಗಟೆ ಬೂದು ಬಣ್ಣದ್ದಾಗಿದ್ದು,ಬೆಂಡು ಬೆಂಡಾಗಿರುವುದು.ಎಲೆಗಳು ತ್ರಿಪರ್ಣಿ(Trifoliate)ಹಾಗೂ ಸುವಾಸಿತವಾಗಿರುವುವು.ಸೇಬಿನ ಆಕಾರ ಹಾಗೂ ಗಾತ್ರದ ಕಾಯಿ ಬಿಡುವುದು.ದಾರುವು ಗಡುಸಾಗಿದ್ದು,ಬಾಳಿಕೆಯುತವಾಗಿದೆ.
ಉಪಯೋಗಗಳು [ಬದಲಾಯಿಸಿ]
ಇದರ ಎಲೆಗಳು ಶಿವಪೂಜೆಯಲ್ಲಿ ಶ್ರೇಷ್ಟವೆಂದು ಪರಿಗಣಿತವಾಗಿದೆ.ಇದರ ಬೇರು,ಎಲೆಗಳು,ತೊಗಟೆ,ಹಣ್ಣಿನ ತಿರುಳು ಆಯುರ್ವೇದದಲ್ಲಿ ಔಷಧವಾಗಿ ಉಪಯೋಗಿಸಲ್ಪಡುತ್ತದೆ.ಕಾಯಿಯ ತಿರುಳು ಗಾರೆಗೆ ಬಲ ಕೊಡಲು ಉಪಯೋಗವಾಗುತ್ತದೆ.
ಆಧಾರ ಗ್ರಂಥಗಳು [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ