ಪರ್ಣಪಾತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರತ್ಕಾಲದಲ್ಲಿ ಪರ್ಣಪಾತಿ ಕಾಡು
ಚಳಿಗಾಲದಲ್ಲಿ ಪರ್ಣಪಾತಿ ಕಾಡು
ವಸಂತಕಾಲದಲ್ಲಿ ಮಿಶ್ರ ಪರ್ಣಪಾತಿ ಕಾಡು

ಪರ್ಣಪಾತಿ ಎಂದರೆ ಪರಿಪಕ್ವತೆಯ ಘಟ್ಟದಲ್ಲಿ ಬೀಳುವುದು (ಉದುರುವುದು) ಅಥವಾ ಉದುರುವುದಕ್ಕೆ ಪ್ರವೃತ್ತವಾಗುವುದು ಎಂದು ಮತ್ತು ವಿಶಿಷ್ಟವಾಗಿ ಈ ಪದವನ್ನು ಕಾಲಕಾಲಕ್ಕೆ ತಮ್ಮ ಎಲೆಗಳನ್ನು ಕಳೆದುಕೊಳ್ಳುವ ಮರ ಹಾಗೂ ಪೊದೆಗಳ ಸಂಬಂಧದಲ್ಲಿ ಮತ್ತು ಹೂ ಬಿಟ್ಟ ನಂತರ ಪುಷ್ಪದಳಗಳ ಅಥವಾ ಪಕ್ವವಾದ ಹಣ್ಣುಗಳಂತಹ ಇತರ ಸಸ್ಯ ರಚನೆಗಳ ಉದುರುವಿಕೆಯ ಸಂಬಂಧದಲ್ಲಿ ಬಳಸಲಾಗುತ್ತದೆ. ಹೆಚ್ಚು ನಿಖರವಾದ ಅರ್ಥದಲ್ಲಿ, ಪರ್ಣಪಾತಿ ಎಂದರೆ ಮುಂದೆ ಅಗತ್ಯವಿರದ ಒಂದು ಭಾಗದ ಬೀಳುವಿಕೆ, ಅಥವಾ ಅದರ ಉದ್ದೇಶ ಮುಗಿದ ನಂತರ ಬೀಳುವಿಕೆ. ಸಸ್ಯಗಳ ಸಂಬಂಧದಲ್ಲಿ, ಇದು ನೈಸರ್ಗಿಕ ಪ್ರಕ್ರಿಯೆಗಳ ಪರಿಣಾಮ.