ಪಾಠಶಾಲಾ ಬಸದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಳ[ಬದಲಾಯಿಸಿ]

ಪಾಠಶಾಲಾ ಬಸದಿಯ ಮಂಗಳೂರು ಮತ್ತು ಕಾರ್ಕಳ ನಡುವಿನ ಹೆದ್ದಾರಿಯ ಪಕ್ಕದಲ್ಲಿ ಮೂಡುಬಿದಿರೆ ಜೈನಮಠದ ಎದುರುಗಡೆ ಇದೆ. ಇದರ ಪಕ್ಕದಲ್ಲಿಯೇ ಸುಮಾರು ೫೦ ಮೀಟರ್ ಅಂತರದಲ್ಲಿ ಪಡು ಬಸದಿ ಇದೆ. ಈ ಬಸದಿಯ ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮಕ್ಕೆ ಸೇರಿರುವಂತಹದ್ದು. ಈ ಬಸದಿಯ ಪಕ್ಕದಲ್ಲಿ ಶಾಲೆ ಇದೆ. ಹಿಂದೆ ಇಲ್ಲಿ ಸಂಸ್ಕತ ಪಾಠಶಾಲೆ ಇತ್ತು. ಬಸದಿಯಲ್ಲಿ ಪೂಜಿಸಲ್ಪಡುವ ಮುಖ್ಯ ದೇವರು ಮುನಿಸುವ್ರತ.

ಪ್ರಾಂಗಣ[ಬದಲಾಯಿಸಿ]

ಬಸದಿಯನ್ನು ಪ್ರವೇಶಿಸುವಾಗ ಬಸದಿಯ ಎಡಭಾಗದಲ್ಲಿ ಕಾರ್ಯಾಲಯವಿದೆ. ಹಾಗೆಯೇ ಬಸದಿಯ ಎದುರುಗಡೆ ಸಭಾಂಗಣವಿದೆ. ಹಾಗೆಯೇ ಯಾವುದೇ ದ್ವಾರಪಾಲಕರ ಮೂರ್ತಿಗಳು ಸಹ ಇಲ್ಲ. ಒಟ್ಟಾಗಿ ಹೇಳುವುದಾದರೆ ಈ ಬಸದಿಯಲ್ಲಿ ಯಾವುದೇ ಶಿಲ್ಪ ಕಲಾಕೃತಿಗಳು ಇಲ್ಲದೆ ಸರಳ ಮತ್ತು ಸುಂದರವಾಗಿದೆ. ಈ ಬಸದಿಯಲ್ಲಿ ೪ ಕಂಬಗಳಿಂದ ಕೂಡಿರುವಂತಹ ಪ್ರಾರ್ಥನಾ ಮಂಟಪವಿದೆ. ಅಲ್ಲಿ ಸಾಮಾನ್ಯವಾಗಿ ಇರುವಂತೆ ಜಯಂಘಂಟೆ ಜಾಗಟೆಗಳನ್ನು ತೂಗುಹಾಕಲಾಗಿದೆ. ಆದರೆ ಈ ಪ್ರಾರ್ಥನಾ ಮಂಟಪದ ಕಂಬಗಳಲ್ಲಿ ಯಾವುದೇ ಶಿಲ್ಪಾಕೃತಿ ಇಲ್ಲ.

ಪ್ರಾರ್ಥನಾ ಮಂದಿರ[ಬದಲಾಯಿಸಿ]

ಪ್ರಾರ್ಥನಾ ಮಂಟಪವನ್ನು ಪ್ರವೇಶಿಸಿದ ನಂತರ ಸಿಗುವಂತ ಮಂಟಪವೇ ತೀರ್ಥ ಮಂಟಪ ಇಲ್ಲಿ ಗಂಧಕುಟಿಯು ತೀರ್ಥಂಕರ ಮಂಟಪದಲ್ಲಿ ಇದೆ. ಇಲ್ಲಿ ಕೇವಲ ಎರಡು ಮಂಟಪಗಳು ಮಾತ್ರ ಕಂಡುಬರುತ್ತವೆ. ಇಲ್ಲಿ ಮುಖ್ಯವಾಗಿ ಪದ್ಮಾವತಿ ಅಮ್ಮನವರ ಮೂರ್ತಿ ಇದ್ದ ಈ ಮೂರ್ತಿಗೆ ಸಾಮಾನ್ಯವಾಗಿ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಮೂರ್ತಿಯು ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಈ ಬಸದಿಯಲ್ಲಿ ಅಮ್ಮನವರ ಎದುರುಗಡೆ ಹೂ ಹಾಕಿ ನೋಡುವ ಯಾವುದೇ ಕ್ರಮ ಕೂಡ ಇಲ್ಲ. ಜಿನ ಬಿಂಬಗಳ ಪೀಠದ ಮೇಲೆ ಯಾವುದೇ ಬರವಣಿಗೆ ಇಲ್ಲ.

ಮೂರ್ತಿಗಳು[ಬದಲಾಯಿಸಿ]

ಬಸದಿಯಲ್ಲಿ ಮೂಲನಾಯಕ ಶ್ರೀ ಮುನಿಸುವ್ರತ ಸ್ವಾಮಿ ಆರಾಧಿಸಲ್ಪಡುತ್ತಿದ್ದಾರೆ. ಈ ಮೂರ್ತಿಯು ಬಿಳಿ ಶಿಲೆಯಿಂದ ಮಾಡಲ್ಪಟ್ಟಿದೆ. ಮೂರು ಅಡಿ ಎತ್ತರ ಇದ್ದು ಖಡ್ಗಾಸನ ಭಂಗಿಯಲ್ಲಿದೆ. ಇದಕ್ಕೆ ಸುಂದರವಾದ ಮಕರ ತೋರಣದ ಲೋಹದ ಪ್ರಭಾವಳಿ ಇದೆ. ದಿನವೂ ಬಿಂಬಕ್ಕೆ ಕ್ಷೀರಾಭಿಷೇಕ ಪಂಚಾಮೃತ ಅಭಿಷೇಕ, ಜಲಾಭಿಷೇಕ ಇತ್ಯಾದಿಗಳನ್ನು ಮಾಡಲಾಗುತ್ತದೆ. ಸ್ವಾಮಿಗೆ ವಜ್ರಲೇಪನ ಮಾಡಲಾಗಿಲ್ಲ. ಈ ಬಿಂಬವನ್ನು ಹಿಂದಿನ ಮೂಡುಬಿದಿರೆಯ ಮಠಾಧೀಶರೊಬ್ಬರು ಸಾವಿರ ಕಂಬದ ಬಸದಿಯ ಸಿದ್ಧಕೂಟದಿಂದ ನೀಡಿ ಪ್ರತಿಷ್ಟಾಪಿಸಲಾಗಿದೆ ಹೇಳುತ್ತಾರೆ. ಇಲ್ಲಿ ಸ್ವಾಮಿಗೆ ಅಥವಾ ಪದ್ಮಾವತಿ ಅಮ್ಮನವರಿಗೆ ವಿಶೇಷ ಹರಕೆಗಳನ್ನು ಹೇಳಿ ಕಾರ್ಯ ಸಾಧನೆ ಆದಂತು ಘಟನೆಗಳು ಇವೆ. ಶನಿ ಪೀಡೆಗಳು ಪರಿಹರಿಸಿಕೊಳ್ಳುವ ಈ ಸ್ವಾಮಿಯನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ.[೧]

ಪೂಜೆ[ಬದಲಾಯಿಸಿ]

ಬಸದಿಯಲ್ಲಿ ದಿನದಲ್ಲಿ ಅಮ್ಮನವರಿಗೆ ಕೇವಲ ಬೆಳಿಗ್ಗೆ ಮಾತ್ರ ಪೂಜೆ ಮಾಡಲಾಗುತ್ತದೆ. ಈ ಬಸದಿಯಲ್ಲಿ ಪ್ರತಿ ಶನಿವಾರದಂದು ವಿಶೇಷ ಪೂಜೆ ನಡೆಯುತ್ತದೆ. ಬಸದಿಯಲ್ಲಿ ದಶಲಕ್ಷಣ ಪರ್ವ ಜೀವದಯಾಷ್ಟಮಿ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡುವುದಿಲ್ಲ. ಬಸದಿಯಲ್ಲಿ ಯಾವುದೇ ಕ್ಷೇತ್ರಪಾಲನ ಸನ್ನಿಧಿ ಇಲ್ಲ. ಬಸದಿಯ ಸುತ್ತಲೂ ಯಾವುದೇ ಪ್ರಕಾರ ಗೋಡೆ ಇಲ್ಲ. ಈ ಬಸದಿಯು ಕೆಂಪು ಕಲ್ಲಿನಿಂದ ನಿರ್ಮತವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ. p. ೧೨೫. {{cite book}}: More than one of |pages= and |page= specified (help)