ನೀಲಕಂಠ
ವಿಕಿಪೀಡಿಯ ಇಂದ
|
ನೀಲಕಂಠ LC
|
|||||||||||||||
|---|---|---|---|---|---|---|---|---|---|---|---|---|---|---|---|
ನೀಲಕಂಠ
|
|||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ಕೊರಾಸಿಯಸ್ ಬೆಂಗಾಲೆನ್ಸಿಸ್ (Linnaeus, 1758) |
|||||||||||||||
|
|
|||||||||||||||
| Synonyms | |||||||||||||||
| Corvus benghalensis Coracias indica |
ನೀಲಕಂಠ(Indian Roller)ದಕ್ಷಿಣ ಏಷಿಯಾ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿ. ಇದರ ನೀಲ ಬಣ್ಣದಿಂದ ಇದಕ್ಕೆ ನೀಲಕಂಠ ಎಂಬ ಹೆಸರು ಬಳಕೆಯಲ್ಲಿದೆ.ಇದು ಕರ್ನಾಟಕ,ಆಂಧ್ರಪ್ರದೇಶ,ಬಿಹಾರ ಹಾಗೂ ಒಡಿಶಾ ರಾಜ್ಯಗಳ ರಾಜ್ಯ ಪಕ್ಷಿಯಾಗಿ ಗುರುತಿಸಲ್ಪಟ್ಟಿದೆ.
ಪರಿವಿಡಿ |
ಲಕ್ಷಣಗಳು [ಬದಲಾಯಿಸಿ]
ಇದು ಪಾರಿವಾಳಕ್ಕಿಂತ ಚಿಕ್ಕದಾದ ಪಕ್ಷಿ.ನೆತ್ತಿ,ರೆಕ್ಕೆ ತಿಳಿ ನೀಲಿಯಾಗಿದ್ದು,ಕತ್ತು,ಎದೆ,ಬೆನ್ನು ಕಂದು ಬಣ್ಣವಿದೆ.ಕೊಕ್ಕು ಕಪ್ಪಗಿದೆ.ಸುಮಾರು ೨೬ ರಿಂದ ೨೮ ಸೆಂಟಿಮೀಟರ್ ಉದ್ದವಿರುತ್ತದೆ.
ಆವಾಸ [ಬದಲಾಯಿಸಿ]
ಇದು ಮುಖ್ಯವಾಗಿ ಪರ್ಣಪಾತಿ ಕಾಡಿನ ಅಂಚು,ಕೃಷಿಭೂಮಿ,ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ತಂತಿ,ಮರ,ಬಂಡೆ ಹಾಗೂ ಕಂಬಗಳಲ್ಲಿ ಕುಳಿತಿರುತ್ತದೆ.
ಸಂತಾನೋತ್ಪತ್ತಿ [ಬದಲಾಯಿಸಿ]
ಪೊಟರೆಯಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ ಗೂಡುಕಟ್ಟಿ,೪ ಅಥವಾ ೫ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ೧೭ ದಿನಗಳವರೇಗೆ ಕಾವು ಕೊಟ್ಟು ಮರಿಮಾಡುತ್ತದೆ. ಮಾರ್ಚಿಯಿಂದ ಜುಲೈ ಸಂತಾನೋತ್ಪತ್ತಿಯ ಕಾಲ.ಹೆಣ್ಣುಗಳನ್ನು ಆಕರ್ಷಿಸಲು ಗಂಡು ಹಕ್ಕಿ ಆಗಸದಲ್ಲಿ ಗಿರಕಿ ಹೊಡೆಯುತ್ತದೆ.