ನಿರಂಜನ ಜ್ಯೋತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನಿರಂಜನ ಜ್ಯೋತಿ
ನಿರಂಜನ ಜ್ಯೋತಿ

ನಿರಂಜನ ಜ್ಯೋತಿ ೨೦೨೨

ಪೂರ್ವಾಧಿಕಾರಿ ರಾಮ್ ಕೃಪಾಲ್ ಯಾದವ್
ಪ್ರಸಕ್ತ
ಅಧಿಕಾರ ಪ್ರಾರಂಭ
೮ ಜುಲೈ ೨೦೨೧
ಪೂರ್ವಾಧಿಕಾರಿ ರಾವ್ಸಾಹೇಬ್ ದಾದಾರಾವ್ ದಾನ್ವೆ
ಅಧಿಕಾರದ ಅವಧಿ
೮ ನವೆಂಬರ್ ೨೦೧೪ – ೩೦ ಮೇ ೨೦೧೯
ಉತ್ತರಾಧಿಕಾರಿ ರಾಮೇಶ್ವರ ತೇಲಿ
ಪ್ರಸಕ್ತ
ಅಧಿಕಾರ ವಹಿಕೆ
೧೬ ಮೇ ೨೦೧೪
ಪೂರ್ವಾಧಿಕಾರಿ ರಾಕೇಶ್ ಸಚನ್

ಜನನ (1967-03-01) ೧ ಮಾರ್ಚ್ ೧೯೬೭ (ವಯಸ್ಸು ೫೭)[೧]
ಪಟೆಶ್ವರ, ಉತ್ತರ ಪ್ರದೇಶ, ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ವೃತ್ತಿ ಕಥಾವಹಚಕ್ (ಧಾರ್ಮಿಕ ಕಥೆಗಾರ್ತಿ)

ನಿರಂಜನ್ ಜ್ಯೋತಿ (ಜನನ ೧ ಮಾರ್ಚ್ ೧೯೬೭), ಸಾಮಾನ್ಯವಾಗಿ ಸಾಧ್ವಿ ನಿರಂಜನ್ ಜ್ಯೋತಿ ಎಂದು ಇವರನ್ನು ಕರೆಯಲಾಗುತ್ತದೆ. ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ ಭಾರತೀಯ ಮಹಿಳಾ ರಾಜಕಾರಣಿ. ಅವರು ನವೆಂಬರ್ ೨೦೧೪ ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿ ನೇಮಕಗೊಂಡರು. [೨] ೩೦ ಮೇ ೨೦೧೯ ರಂದು, ಅವರು ನರೇಂದ್ರ ಮೋದಿ ೨೦೧೯ ಕ್ಯಾಬಿನೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ನೇಮಕಗೊಂಡರು.

ಅವರು ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ನಂತರ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಫತೇಪುರ್ ಕ್ಷೇತ್ರವನ್ನು ಪ್ರತಿನಿಧಿಸಿದರು. [೩] ಅವರು ೨೦೧೨ರ ಚುನಾವಣೆಯಲ್ಲಿ ಗೆದ್ದ ನಂತರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹಮೀರ್ಪುರ್ ಕ್ಷೇತ್ರವನ್ನು ಪ್ರತಿನಿಧಿಸಿದರು. [೪]

ಜೀವನ ಮತ್ತು ವೃತ್ತಿ[ಬದಲಾಯಿಸಿ]

ನಿರಂಜನ್ ಜ್ಯೋತಿ ಅವರು ಮಾರ್ಚ್ ೧, ೧೯೬೭ ರಂದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಪಟೇವ್ರಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಅಚ್ಯುತಾನಂದ ಮತ್ತು ತಾಯಿ ಶಿವ ಕಾಳಿ ದೇವಿ. [೫] ಅವರು ನಿಶಾದ್ -ಜಾತಿ ಕುಟುಂಬದಲ್ಲಿ ಜನಿಸಿದರು. [೬]

೧೪ ಜೂನ್ ೨೦೧೪ ರಂದು, ಲಕ್ನೋದ ಆವಾಸ್ ವಿಕಾಸ್ ಕಾಲೋನಿಯಲ್ಲಿ ನಡೆದ ಸಮಾರಂಭದಲ್ಲಿ ಜ್ಯೋತಿ ವಾಪಸಾಗುತ್ತಿದ್ದಾಗ ಭಾನು ಪಟೇಲ್ ಮತ್ತು ಅವರ ಮೂವರು ಸಹಚರರು ಜ್ಯೋತಿ ಮೇಲೆ ಗುಂಡು ಹಾರಿಸಿದರು. ಅವರು ಪ್ರಾಣಾಪಾಯದಿಂದ ಪಾರಾದರು. ಆದರೆ ಆಕೆಯ ಅಂಗರಕ್ಷಕ ಗಾಯಗೊಂಡಿದ್ದರು.. [೭]

ಮೇ ೨೦೧೯ರಲ್ಲಿ, ಜ್ಯೋತಿ ಅವರು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದರು. [೮]

ವೈಯಕ್ತಿಕ ಅಭಿಪ್ರಾಯಗಳು ಮತ್ತು ವಿವಾದಗಳು[ಬದಲಾಯಿಸಿ]

೧ ಡಿಸೆಂಬರ್ ೨೦೧೪ ರಂದು, [೯] ಅವರು ಸಾರ್ವಜನಿಕ ರ‍್ಯಾಲಿಯಲ್ಲಿ, "ದೆಹಲಿಯಲ್ಲಿ ಸರ್ಕಾರವನ್ನು ರಾಮ (ರಾಮಜಾದೆ) ಅಥವಾ ಕಿಡಿಗೇಡಿಗಳು (ಹರಾಮಜಾದೆ) ನಡೆಸುತ್ತಾರೆಯೇ ಎಂದು ನೀವು ನಿರ್ಧರಿಸಬೇಕು" ಎಂದು ಪ್ರತಿಪಕ್ಷದ ನಾಯಕನನ್ನು ಉಲ್ಲೇಖಿಸಿ ಹೇಳಿದರು. [೧೦] ಈ ಹೇಳಿಕೆ ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. [೧೧] ನಂತರ ಅವರು ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಲು ಮುಂದಾದರು. [೯]

ಉಲ್ಲೇಖಗಳು[ಬದಲಾಯಿಸಿ]

 

  1. "Niranjan Jyoti, Sadhvi" (PDF). Uttar Pradesh Legislative Assembly (in ಹಿಂದಿ). Archived from the original (PDF) on 24 November 2015. Retrieved 24 November 2015.
  2. "From storyteller to minister; Sadhvi Niranjan Jyoti". The Indian Express. 12 November 2015. Archived from the original on 24 November 2015. Retrieved 24 November 2015.
  3. "Jyoti,Sadhvi Niranjan". Lok Sabha. Archived from the original on 25 November 2015. Retrieved 24 November 2015.
  4. "Sadhvi Niranjan Jyoti". 2021. Archived from the original on 10 April 2022. Retrieved 10 April 2022.
  5. "Jyoti,Sadhvi Niranjan". Lok Sabha. Archived from the original on 25 November 2015. Retrieved 24 November 2015."Jyoti,Sadhvi Niranjan".
  6. "From storyteller to minister; Sadhvi Niranjan Jyoti". The Indian Express. 12 November 2015. Archived from the original on 24 November 2015. Retrieved 24 November 2015."From storyteller to minister; Sadhvi Niranjan Jyoti".
  7. "BJP MP Sadhvi Niranjan Jyoti attacked, escapes unhurt". The Economic Times. 15 June 2015. Archived from the original on 25 November 2015. Retrieved 24 November 2015.
  8. "PM Modi allocates portfolios. Full list of new ministers", Live Mint, 31 May 2019, archived from the original on 2 June 2019, retrieved 3 June 2019
  9. ೯.೦ ೯.೧ "After abusive rant, Union minister Sadhvi Niranjan Jyoti expresses regret in Parliament". India Today. 2 December 2014. Archived from the original on 24 November 2015. Retrieved 24 November 2015.
  10. "Ramzada vs haramzada: Outrage over Union Minister Sadhvi's remark". 2 December 2014. {{cite news}}: |archive-date= requires |archive-url= (help)CS1 maint: url-status (link)
  11. "After uproar in House, Sadhvi Niranjan Jyoti says she is ready to apologise for 'haramzadon' remark". The Indian Express. 2 December 2015. Archived from the original on 24 November 2015. Retrieved 24 November 2015.

ಬಾಹ್ಯ ಕೊಂಡಿಗಳು[ಬದಲಾಯಿಸಿ]