ಡೋಡೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೋಡೋ (ರಾಫಸ್‌ ಕುಕುಲ್ಲಾಟಸ್ ‌‌) ಎಂಬುದು ಹಾರಲಾರದ ಪಕ್ಷಿಯಾಗಿದ್ದು ಹಿಂದೂ ಮಹಾಸಾಗರದ ದ್ವೀಪವಾದ ಮಾರಿಷಸ್‌ಸ್ಥಳೀಯ ಪಕ್ಷಿಯಾಗಿದೆ. ಪಾರಿವಾಳಗಳು ಹಾಗೂ ಸಣ್ಣ ಪಾರಿವಾಳ(ಡವ್‌)ಗಳ ಜಾತಿಗೆ ಸೇರಿದ ಇದು ಸುಮಾರು ಒಂದು ಮೀಟರ್‌‌ (3 ಅಡಿಗಳು) ಎತ್ತರವಿದ್ದು ಸುಮಾರು 20 kilograms (44 lb)ರಷ್ಟು ತೂಕವನ್ನು ಹೊಂದಿದ್ದು, ಹಣ್ಣುಗಳನ್ನು ಆಹಾರವಾಗಿ ಸೇವಿಸುವ ಹಾಗೂ ನೆಲದ ಮೇಲೆ ಗೂಡು ಕಟ್ಟುವ ಪಕ್ಷಿಯಾಗಿದೆ.

ಡೋಡೋ ಪಕ್ಷಿಯು 17ನೇ ಶತಮಾನದ ಮಧ್ಯಭಾಗದಿಂದ-ಕೊನೆಯವರೆಗಿನ ಅವಧಿಯ ಹೊತ್ತಿಗೇ ನಿರ್ನಾಮವಾಗಿತ್ತು.[೧] ಇದರ ಅಳಿವು ದಾಖಲಿತ ಮಾನವ ಇತಿಹಾಸದ ಅವಧಿಯಲ್ಲೇ ನಡೆದುದರಿಂದ ಹಾಗೂ ಇದರ ನಾಶಕ್ಕೆ ನೇರವಾಗಿ ಮಾನವ ಚಟುವಟಿಕೆಯೇ ಕಾರಣವಾದುದರಿಂದ ಇದನ್ನು ಸಾಧಾರಣವಾಗಿ ನಿರ್ನಾಮವಾಗಿ ಹೋದ ತಳಿಗಳಿಗೆ ಪ್ರತೀಕವಾಗಿ ಬಳಸಲಾಗುತ್ತದೆ.

"ಡೋಡೋನಂತೆ ಅವಸಾನ ಹೊಂದಿದ" ಎಂಬ ಪದಪುಂಜದ ಅರ್ಥ ನಿಸ್ಸಂಶಯವಾಗಿ ಹಾಗೂ ನಿಸ್ಸಂದಿಗ್ಧವಾಗಿ ಸಾವನ್ನಪ್ಪಿದ ಎಂಬುದಾಗಿದ್ದರೆ, "ಡೋಡೋನ ದಾರಿ ಹಿಡಿದಂತೆ" ಎಂಬುದರ ಅರ್ಥ ನಿರ್ನಾಮವಾಗಿ ಹೋಗುವುದು ಅಥವಾ ಕ್ಷಯಿಸಿ ಹೋಗುವುದು, ಬಳಕೆ ಅಥವಾ ರೂಢಿ ತಪ್ಪಿ ಹೋಗುವುದು ಅಥವಾ ಅಪ್ರಚಲಿತವಾಗಿಬಿಡುವುದು ಎಂಬುದಾಗಿದೆ.

ಶೋಧನೆ ಹಾಗೂ ಶಬ್ದನಿಷ್ಪತ್ತಿ[ಬದಲಾಯಿಸಿ]

VOC ಹಡಗು ಗೆಲ್ಡರ್‌ಲೆಂಡ್‌ನ (1601–1603) ಪ್ರವಾಸೀ ಜರ್ನಲ್‌ನಿಂದ ಡೋಡೋನ ಚಿತ್ರಣಗಳು

ಮೊತ್ತ ಮೊದಲಿಗೆ ತಿಳಿದುಬಂದ ಈ ಪಕ್ಷಿಯ ಬಗೆಗಿನ ವಿವರಣೆಯು ಡಚ್ಚರಿಂದ ಬಂದಿದ್ದು. ಅವರು ಈ ಮಾರಿಷಸ್‌ನ ಪಕ್ಷಿಯನ್ನು ಅದರ ರುಚಿಯ ಆಧಾರದ ಮೇರೆಗೆ ವಾಲ್ಘ್‌‌ವಾಗೆಲ್‌ ("ಕೊಚ್ಚೆಯಲ್ಲಿ ಹೊರಳಾಡುವ ಪಕ್ಷಿ" ಅಥವಾ "ಅಸಹ್ಯಕರ ಪಕ್ಷಿ") ಎಂದು ಕರೆದರು. ಅನೇಕ ನಂತರದ ಲೇಖನ/ಗ್ರಂಥಗಳು ಮಾಂಸವು ಕೆಟ್ಟ ರುಚಿಯನ್ನು ಹೊಂದಿತ್ತು ಎಂದು ನಮೂದಿಸಿದ್ದರೂ, ಮುಂಚಿನ ದಾಖಲೆಗಳು ಅವು ಜಿಗುಟಾಗಿದ್ದರೂ ಚೆನ್ನಾಗಿಯೇ ಇದ್ದವು, ಆದರೆ ಪುಷ್ಕಳವಾಗಿ ಲಭ್ಯವಿದ್ದ ಪಾರಿವಾಳಗಳದ್ದರಷ್ಟು ಉತ್ತಮವಾಗಿರಲಿಲ್ಲವೆಂದಷ್ಟೇ ಸೂಚಿಸಿದ್ದವು.[೨] ವಾಲ್ಘ್‌‌ವಾಗೆಲ್‌ ಎಂಬ ಹೆಸರನ್ನು ಪ್ರಥಮ ಬಾರಿಗೆ 1598ರಲ್ಲಿ ದ್ವೀಪಕ್ಕೆ ಭೇಟಿ ನೀಡಿ ಅದಕ್ಕೆ ಮಾರಿಷಸ್‌ ಎಂದು ನಾಮಕರಣ ಮಾಡಿದ ಉಪ-ನೌಕಾಸೇನಾಧಿಪತಿ ವೈಬ್ರಾಂಡ್‌ ವಾನ್‌ ವಾನ್‌ವಿಜ್‌ಕ್‌ರ ಜರ್ನಲ್‌ನಲ್ಲಿ ಬಳಸಲಾಗಿತ್ತು.

ಡೋಡೋ ಪದದ ಶಬ್ದನಿಷ್ಪತ್ತಿಯು ಅಷ್ಟು ಸ್ಪಷ್ಟವಾಗಿಲ್ಲ. ಕೆಲವರು ಇದನ್ನು ಡಚ್‌‌ ಪದ ಡೋಡೋರ್‌‌‌‌ ಎಂಬ ಪದಕ್ಕೆ ಸಮಾನ ಎಂದು ಆರೋಪಿಸಿದರೂ ಅಥವಾ "ಸೋಮಾರಿ" ಎಂಬರ್ಥದಲ್ಲಿ ಬಳಸಿದರೂ, ಹಿಂಬದಿಯಲ್ಲಿರುವ ಪುಕ್ಕಗಳ ಗಂಟುಗಳನ್ನು ಬಿಂಬಿಸಲು ಇದು ಬಹುಮಟ್ಟಿಗೆ ಡೋಡಾರ್‌ಗಳಿಗೆ ("ಗುದ-ಗಂಟು") ಸಂಬಂಧಪಟ್ಟಿದ್ದಾಗಿದೆ. ಡೋಡಎರ್ಸ್‌ ಎಂಬ ಪದದ ಪ್ರಥಮ ದಾಖಲೆಯು ಕ್ಯಾಪ್ಟನ್‌ 1602ರ ವಿಲ್ಲೆಮ್‌ ವಾನ್‌ ವೆಸ್ಟ್‌ಸಾನೆನ್‌‌'ರ ಜರ್ನಲ್‌ನಲ್ಲಿ ಕಂಡುಬರುತ್ತದೆ.[೩] ಥಾಮಸ್‌‌ ಹರ್ಬರ್ಟ್‌‌ ಎಂಬುವವರು ಡೋಡೋ ಎಂಬ ಪದವನ್ನು 1627ರಲ್ಲಿ[೪], ಬಳಸಿದ್ದರಾದರೂ ಅವರೇ ಮೊದಲಿಗರೇ ಎಂಬುದು ಸ್ಪಷ್ಟವಾಗಿಲ್ಲ ; ಪೋರ್ಚುಗೀಸರು ದ್ವೀಪಕ್ಕೆ 1507ರಲ್ಲಿ ಭೇಟಿ ನೀಡಿದ್ದರೂ, ಲಭ್ಯವಿರುವ ಮಾಹಿತಿ ಪ್ರಕಾರ, ಪಕ್ಷಿಯ ಬಗ್ಗೆ ಅವರು ಪ್ರಸ್ತಾಪಿಸಿರಲಿಲ್ಲ. ಆದಾಗ್ಯೂ, ಎನ್‌ಕಾರ್ಟಾ ನಿಘಂಟು ಹಾಗೂ ಛೇಂಬರ್ಸ್‌ ಶಬ್ದನಿಷ್ಪತ್ತಿ ನಿಘಂಟು ಗಳ ಪ್ರಕಾರ, "ಡೋಡೋ" ಎಂದ ಪದ "ಮೂರ್ಖ" ಅಥವಾ "ಹುಚ್ಚ" ಎಂಬರ್ಥದ ಪೋರ್ಚುಗೀಸ್‌ ಪದ ಡೌಡೋ (ಪ್ರಸಕ್ತ ಡೊಯ್ಡೊ )ದಿಂದ ಉತ್ಪನ್ನವಾಗಿದೆ.[೫][೬] ಆದಾಗ್ಯೂ, ಪಕ್ಷಿಗೆ ಬಳಸುತ್ತಿರುವ ಪ್ರಸಕ್ತ ಪೋರ್ಚುಗೀಸ್‌‌ ಹೆಸರು, ಡೊಡೊ , ಎಂಬುದರ ಮೂಲ ಅಂತರರಾಷ್ಟ್ರೀಯವಾಗಿ ಬಳಕೆಯಲ್ಲಿರುವ ಪದ ಡೋಡೋ ಆಗಿದೆ.

ಡೇವಿಡ್‌ ಕ್ವಾಮ್ಮೆನ್‌ ಎಂಬಾತ‌ ಡೋಡೋ ಎಂಬುದು ಆ ಪಕ್ಷಿಯದೇ ಕೂಗಿನ, ಎರಡು-ಸ್ವರಲಕ್ಷಣಗಳ "ಡೂ-ಡೂ" ರೀತಿಯ ಪಾರಿವಾಳದ ಕೂಗಿನ ಅನುಕರಣಾತ್ಮಕ ಹೆಸರಾಗಿರಬಹುದು ಎಂಬ ಕಲ್ಪನೆಯನ್ನು ಪರಿಗಣಿಸಿದ್ದರು.[೭]

1606ರಲ್ಲಿ ಕಾರ್ನೆಲಿಸ್‌ ಮೆಟೇಲೀಫ್‌ ಡೆ ಜೊಂಗ್‌ ಎಂಬುವವರು ಡೋಡೋ, ದ್ವೀಪದಲ್ಲಿದ್ದ ಕೆಲ ಇತರೆ ಪಕ್ಷಿಗಳು, ಸಸ್ಯಗಳು ಹಾಗೂ ಪ್ರಾಣಿಗಳ ಪ್ರಮುಖ ವಿವರಣೆಯೊಂದನ್ನು ನೀಡಿದರು.[೮]

ವರ್ಗೀಕರಣ ವಿಧಾನ ಹಾಗೂ ವಿಕಸನ[ಬದಲಾಯಿಸಿ]

ನಿಕೋಬಾರ್‌‌ ಪಾರಿವಾಳ (ಕಾಲೊಯೆನಾಸ್‌‌ ನಿಕೋಬಾರಿಕಾ) ಡೋಡೋನ ಬದುಕಿರುವ ಅತ್ಯಂತ ಸಮೀಪವರ್ತಿ ಹಾಗೂ ರೀಯೂನಿಯನ್‌ ಸಾಲಿಟೇರ್‌ ಆಗಿದೆ.

ಡೋಡೋ ಆಧುನಿಕ ಪಾರಿವಾಳಗಳು ಹಾಗೂ ಸಣ್ಣ ಪಾರಿವಾಳ(ಡವ್‌)ಗಳ ಸಮೀಪ ಸಂಬಂಧಿಯಾಗಿತ್ತು. mtDNA ಸೈಟೋಕ್ರೋಮ್‌‌ b ಹಾಗೂ 12S rRNA ಸರಣಿಗಳ [೯] ವಿಶ್ಲೇಷಣೆಯು ತಿಳಿಸುವ ಪ್ರಕಾರ ಡೋಡೋ'ನ ಪೂರ್ವಿಕ ಪಕ್ಷಿಗಳು ತಮ್ಮ ಅತ್ಯಂತ ಸಮೀಪವರ್ತಿ ಸಂಬಂಧಿ ರಾಡ್ರಿಗೆಸ್‌ ಸಾಲಿಟೇರ್‌/ಹಾರಲಾರದ ಪಕ್ಷಿ (ಇದೂ ಸಹಾ ನಾಮಾವಶೇಷಗೊಂಡಿದೆ)ಗಳಿಂದ ಪಾಲಿಯೋಜೀನ್‌-ನಿಯೋಜೀನ್‌ ಪರಿಮಿತಿಯೊಳಗೆ ಅಪಸರಿಸಿವೆ.[೧೦] ಮಸ್ಕರೇನೆಸ್ಸ್‌‌ಗಳು ಅಗ್ನಿಪರ್ವತ ಮೂಲದ್ದವಾಗಿದ್ದು 10 ದಶಲಕ್ಷ ವರ್ಷಗಳಿಗಿಂತಲೂ ಮುಂಚಿನಿದ್ದಾಗಿದ್ದು, ಎರಡೂ ಪಕ್ಷಿಗಳ ಪೂರ್ವೀಕ ಪಕ್ಷಿಗಳು ತಮ್ಮ ಸಂತತಿಗಳು ಪ್ರತ್ಯೇಕಗೊಂಡ ಗಮನಾರ್ಹ ಕಾಲದಲ್ಲಿ ಹಾರುವ ಸಾಮರ್ಥ್ಯವನ್ನು ಉಳಿಸಿಕೊಂಡೇ ಇದ್ದವು. ಅದೇ ಅಧ್ಯಯನವನ್ನು ಮರುವ್ಯಾಖ್ಯಾನಿಸಿ ಆಗ್ನೇಯ ಏಷ್ಯಾದ ನಿಕೋಬಾರ್‌ ಪಾರಿವಾಳವು ಡೋಡೋ ಹಾಗೂ ರೀಯೂನಿಯನ್‌ ಸಾಲಿಟೇರ್‌ ಪಕ್ಷಿಸಮೂಹಗಳ ಅತಿ ಸಮೀಪಸಂಬಂಧಿ ಎಂದು ತೋರಿಸಲಾಗಿದೆ.[೧೧]

ಆದಾಗ್ಯೂ ಸೂಚಿಕ ಜೀವಿವಿಕಾಸ ಪಥವು ಇತರೆ ವರ್ಗಗಳ[೧೨] ಸಂಬಂಧಗಳ ಬಗ್ಗೆ ಪ್ರಶ್ನೆಗಳನ್ನೆತ್ತುವುದರಿಂದ ಮತ್ತಷ್ಟು ಸಂಶೋಧನೆಯು ಬಾಕಿಯಿರುವ ಕಲ್ಪನಾವಿಚಾರವೆಂದೇ ಪರಿಗಣಿಸಬೇಕಿರುತ್ತದೆ; ಜೀವಭೌಗೋಳಿಕ ದತ್ತಾಂಶವನ್ನು ಪರಿಗಣಿಸಿದರೆ, ಇದು ತಪ್ಪಾಗಿರುವ ಸಾಧ್ಯತೆಯು ಹೆಚ್ಚಾಗಿದೆ. ಪ್ರಸ್ತುತವಾಗಿ ಖಾತರಿಯಾಗಿ ಹೇಳಬಹುದಾದುದೇನೆಂದರೆ ಡಿಡೈನ್‌ ಪಕ್ಷಿಗಳ ಪೂರ್ವಿಕರೆಂದರೆ ಆಗ್ನೇಯ ಏಷ್ಯಾ ಅಥವಾ ವಾಲ್ಲೇಸ್ಯಾ ಮೂಲದ ಪಾರಿವಾಳಗಳು, ಈ ವಿಚಾರವು ಬಹುಪಾಲು ಮಸ್ಕರೇನೆಸ್‌‌' ಪಕ್ಷಿಗಳ ಮೂಲದೊಂದಿಗೆ ಹೊಂದಿಕೊಳ್ಳುತ್ತದೆ. ಡೋಡೋ ಹಾಗೂ ರಾಡ್ರಿಗೆಸ್‌ ಸಾಲಿಟೇರ್‌/ಹಾರಲಾರದ ಪಕ್ಷಿಗಳು ವಾಸ್ತವವಾಗಿ ಬದುಕಿರುವ ಪಕ್ಷಿಗಳಲ್ಲಿ ನಿಕೋಬಾರ್‌‌ ಪಾರಿವಾಳಕ್ಕೆ ಸಮೀಪವರ್ತಿಯಾಗಿರುವವೇ ಅಥವಾ ಡುಕುಲಾ , ಟ್ರೆರಾನ್‌ , ಅಥವಾ ಗೌರಾ ಪಾರಿವಾಳಗಳಂತಹಾ ಅದೇ ಮೂಲಗುಂಪಿನ ಇತರೆ ವರ್ಗಗಳಿಗೆ ಸಮೀಪವರ್ತಿಯಾಗಿದೆಯೇ ಎಂಬುದು ಪ್ರಸಕ್ತ ಸನ್ನಿವೇಶದಲ್ಲಿ ಇನ್ನೂ ಸ್ಪಷ್ಟವಾಗಿಲ್ಲ.

ದೀರ್ಘಕಾಲದವರೆಗೆ, ಡೋಡೋ ಹಾಗೂ ರಾಡ್ರಿಗೆಸ್‌ ಸಾಲಿಟೇರ್‌/ಹಾರಲಾರದ ಪಕ್ಷಿಗಳನ್ನು (ಸಂಗ್ರಹವಾಗಿ "ಡಿಡೈನ್‌ಗಳು" ಎಂದು ಕರೆಯಲಾಗುತ್ತವೆ) ರಾಫಿಡೇ ಎಂಬ ಅವುಗಳದೇ ಆದ ಕುಟುಂಬಕ್ಕೆ ಸೇರಿಸಲಾಗಿತ್ತು. ಇತರೆ ವರ್ಗಗಳ ಪಕ್ಷಿಗಳೊಂದಿಗೆ(ರೇಲ್‌ಗಳಂತಹವು) ಅವುಗಳಿಗಿರುವ ಸಂಬಂಧಗಳನ್ನು ನಿರ್ಣಯಿಸಲಾಗಿರಲಿಲ್ಲವಾದುದರಿಂದ ಹೀಗೆ ಮಾಡಲಾಗಿತ್ತು. ಕೊಲಂಬಿಡೇ ಕುಟುಂಬದಲ್ಲಿನ ರಾಫಿನೇಉಪಕುಟುಂಬ ವಾಗಿ ಡಿಡೈನ್‌ಗಳನ್ನು ಸೇರಿಸುವುದು ಉತ್ತಮವೆಂಬುದು ಇತ್ತೀಚಿನ ಭರವಸೆದಾಯಕ ವಿಚಾರವಾಗಿದೆ.

ಕಲ್ಪಿತ "ಶ್ವೇತ ಡೋಡೋ" ಎಂಬುದು ಈಗ ರೀಯೂನಿಯನ್‌ ಪವಿತ್ರ ಐಬಿಸ್‌ ಹಾಗೂ ಸಹಜವಾಗಿ ತೊನ್ನು ರೋಗಕ್ಕೆ;[೧೩] ತುತ್ತಾದ ಡೋಡೋಗಳನ್ನು ಪೇಂಟಿಂಗ್‌ಗಳ ತಪ್ಪಾಗಿ ಅರ್ಥೈಸಿದ ವರದಿಗಳ ಮೇಲೆ ಆಧಾರಿತವಾಗಿತ್ತು ಎಂದು ಭಾವಿಸಲಾಗಿದೆ; ದ್ವೀಪ ತಳಿಗಳಲ್ಲಿ ಆಗ್ಗಾಗ್ಗೆ ತೊನ್ನುರೋಗದ ಬಾಧೆಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದುದು ತಿಳಿದುಬಂದಿದೆ (ಇದನ್ನೂ ನೋಡಿ ಲಾರ್ಡ್‌ ಹೋವೆ ಸ್ವಾಂಫೆನ್‌).

ಸಸ್ಯಪ್ರಾಣಿ ಸ್ವರೂಪ ಶಾಸ್ತ್ರ ಹಾಗೂ ಹಾರಲಾಗದಿರುವಿಕೆ[ಬದಲಾಯಿಸಿ]

ಮಾರಿಷಸ್‌ನ ಜವುಗು ಕೊಳದಲ್ಲಿ ಪತ್ತೆಯಾದ ಎಲುಬುಗಳನ್ನು ಜೋಡಿಸಿದ ಡೋಡೋನ ಅಸ್ಥಿಪಂಜರ, ಹಾಗೂ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿರುವ 1600ನೇ ಇಸವಿಯ ಹೊತ್ತಿಗೆ ಯೂರೋಪ್‌ಗೆ ಜೀವಂತವಾಗಿ ಕರೆತಂದ ಮಾದರಿಯ ಒಣಗಿಹೋದ ಪಾದ

ಅಕ್ಟೋಬರ್‌ 2005ರಲ್ಲಿ, ಸಂಶೋಧಕರ ಅಂತರರಾಷ್ಟ್ರೀಯ ತಂಡವೊಂದು ಡೋಡೋ ಅವಶೇಷಗಳ ಪ್ರಮುಖ ತಾಣವಾದ ಮಾರೆ ಆಕ್ಸ್‌ ಸಾಂಗೆಸ್‌ನ ಭಾಗದ ಉತ್ಖನನ ನಡೆಸಿತು. ವಿಕಸನದ[೧೪] ವಿವಿಧ ಹಂತಗಳಲ್ಲಿದ್ದ ಪಕ್ಷಿಗಳ ಎಲುಬುಗಳು, ಹಾಗೂ ಪಕ್ಷಿಯೊಂದರ ಸಂಪೂರ್ಣ ಅಸ್ಥಿಪಂಜರದ್ದೆಂದು ಸುಸ್ಪಷ್ಟವಾಗಿರುವಂತಹಾ ಅನೇಕ ಎಲುಬುಗಳು ನೈಸರ್ಗಿಕ ಸ್ಥಿತಿಯಲ್ಲಿಯೇ ಉಳಿದಂತಹವೂ ಸೇರಿದಂತೆ ಅನೇಕ ಅವಶೇಷಗಳು ಕಂಡುಬಂದವು.[೫] ಡಿಸೆಂಬರ್‌ 2005ರಲ್ಲಿ ನ್ಯಾಚುರಲಿಸ್‌ ಇನ್‌ ಲೇಡೆನ್‌ನಲ್ಲಿ ಈ ಪತ್ತೆಯಾದ ಸಂಗತಿಗಳನ್ನು ಬಹಿರಂಗಗೊಳಿಸಲಾಯಿತು. ಇದಕ್ಕೆ ಮುನ್ನ, ಕೆಲ ಸಂಯೋಜಿತ ಡೋಡೋ ಮಾದರಿಗಳು ಕಂಡುಬಂದಿದ್ದು, ಅವುಗಳಲ್ಲಿ ಬಹ್ವಂಶವು ಪ್ರತ್ಯೇಕಗೊಂಡ ಹಾಗೂ ಹರಡಿದ ಎಲುಬುಗಳನ್ನು ಹೊಂದಿದ್ದವು. ಇತರೆ ಸ್ಥಳಗಳೊಂದಿಗೆ ಡಬ್ಲಿನ್‌'ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯ ಹಾಗೂ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯಗಳೂ ಕೂಡಾ ಹೀಗೆ ಬಿಡಿಬಿಡಿಯಾದ ಅವಶೇಷಗಳನ್ನು ಜೋಡಿಸಿ ಮಾದರಿಯನ್ನು ರಚಿಸಿದವುಗಳ ಸ್ಥಳಗಳಲ್ಲಿ ಸೇರಿವೆ. ಡೋಡೋನ ಮೊಟ್ಟೆಯೊಂದು ದಕ್ಷಿಣ ಆಫ್ರಿಕಾದಲ್ಲಿನ ಪೂರ್ವ ಲಂಡನ್‌ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಡೋಡೋನ ಒಣಗಿದ ತಲೆ ಹಾಗೂ ಕಾಲಿನ ಪ್ಲಾಸ್ಟರ್‌ ಪ್ರತಿಕೃತಿ
ಮ್ಯಾಂಚೆಸ್ಟರ್‌‌ ವಸ್ತುಸಂಗ್ರಹಾಲಯ'ದಲ್ಲಿರುವ ಎಲುಬುಗಳು

ತೀರ ಇತ್ತೀಚಿನವರೆಗೆ, ಬಹುತೇಕ ಸುಸ್ಥಿತಿಯಲ್ಲಿದ್ದ ಅವಶೇಷಗಳು, ಪ್ರಸ್ತುತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿರುವ, ಒಂದು ಪಕ್ಷಿಯ ಭಾಗಶಃ ಅಸ್ಥಿಪಂಜರವಾಗಿರುವ ಪಾದ ಹಾಗೂ ತಿಳಿದುಬಂದಿರುವುದರಲ್ಲಿ ಏಕೈಕ ತಳಿಗಳ ಮೃದು ಅಂಗಾಂಶಗಳನ್ನು ಹೊಂದಿರುವ ತಲೆ ಸೇರಿವೆ. ಮ್ಯಾಂಚೆಸ್ಟರ್‌‌ ವಸ್ತುಸಂಗ್ರಹಾಲಯವು ಡೋಡೋ ಎಲುಬುಗಳ ಸಣ್ಣ ಸಂಗ್ರಹವನ್ನು ಪ್ರದರ್ಶನಕ್ಕಿಟ್ಟಿದೆ.

ದೇಹದೊಳಗೆ ವಸ್ತುಗಳನ್ನಿಟ್ಟು ಪುಷ್ಟಗೊಳಿಸಿದ ಅಂತಿಮವಾಗಿ ತಿಳಿದುಬಂದಿರುವ ಡೋಡೋದ ಅವಶೇಷಗಳು ಆಕ್ಸ್‌ಫರ್ಡ್‌ಅಷ್ಮೋಲಿಯನ್‌ ವಸ್ತುಸಂಗ್ರಹಾಲಯದಲ್ಲಿದೆಯಾದರೂ, 18ನೇ ಶತಮಾನದ ಮಧ್ಯದಲ್ಲಿ, ಆ ಮಾದರಿಯು – ಉಳಿದಿದ್ದನ್ನು ಕಾಪಿಡಲಾಗಿತ್ತಾದರೂ – ಸಂಪೂರ್ಣವಾಗಿ ನಶಿಸಿಹೋಯಿಸಿತಾದ್ದರಿಂದ ವಸ್ತುಸಂಗ್ರಹಾಲಯ'ದ ಪಾಲಕ ಅಥವಾ ನಿರ್ದೇಶಕ 1755ರಲ್ಲಿ ಅಥವಾ ಆ ಹೊತ್ತಿಗೆ ಅವುಗಳನ್ನು ತ್ಯಜಿಸಲು ಆದೇಶ ನೀಡಿದ್ದರು.

ಜೂನ್‌ 2007ರಲ್ಲಿ, ಸಾಹಸಿಗರು ಮಾರಿಷಸ್‌ನಲ್ಲಿನ ಗುಹೆಯೊಂದನ್ನು ಅನ್ವೇಷಿಸುತ್ತಾ ಅದರಲ್ಲಿ ಸಾರ್ವಕಾಲಿಕವಾಗಿ ಬಹುತೇಕ ಸಂಪೂರ್ಣ ಹಾಗೂ ಉತ್ತಮ ಸ್ಥಿತಿಯಲ್ಲಿರುವ ಡೋಡೋದ ಅಸ್ಥಿಪಂಜರವನ್ನು ಪತ್ತೆಹಚ್ಚಿದರು.[೧೫]

ಕಲಾವಿದರ ಚಿತ್ರಣದ ಪ್ರಕಾರ, ಡೋಡೋ ಬೂದುಬಣ್ಣದ ಗರಿಗಳ ಗುಚ್ಛವನ್ನು ಹೊಂದಿದ್ದು , 23-ಸೆಂಟಿಮೀಟರ್‌ಗಳುದ್ದದ (9-ಅಂಗುಲಗಳ) ಬಾಗಿದ ಕೊಕ್ಕುಳ್ಳ, ಪುಟ್ಟ ರೆಕ್ಕೆಗಳು, ಸ್ಥೂಲ ಹಳದಿ ಪಾದಗಳು ಹಾಗೂ ಹಿಂಬದಿಯಲ್ಲಿ ಹೆಚ್ಚಾಗಿರುವ ಸುರುಳಿಯಾಕಾರದ ಗರಿಗಳ ಕುಚ್ಚನ್ನು ಹೊಂದಿರುತ್ತದೆ. ಡೋಡೋಗಳು ಸುಮಾರು 23 kgಗಳಷ್ಟು (50 ಪೌಂಡ್‌ಗಳು) ತೂಕ ಹೊಂದಿದ್ದ ಭಾರೀ ಪಕ್ಷಿಗಳಾಗಿದ್ದವು. ಇದರ ಎದೆಮೂಳೆ/ಭಾಗವು ಹಾರುವುದನ್ನು ಬೆಂಬಲಿಸುವಷ್ಟು ಶಕ್ತವಾಗಿರಲಿಲ್ಲ ; ಈ ಭೂ-ಆಧಾರಿತ ಪಕ್ಷಿಗಳು ಪರಭಕ್ಷಕ ಪ್ರಾಣಿಗಳಿಲ್ಲದ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದ್ವೀಪದ ಪೂರ್ಣ ಪ್ರಯೋಜನ ಪಡೆದು ವಿಕಸನಗೊಂಡವು.

ಡೋಡೋನ ಸಾಂಪ್ರದಾಯಿಕ ಕಲ್ಪನೆಯ ಪ್ರಕಾರ ಇದು ಸ್ಥೂಲ ದೇಹದ, ಉರುಟುಟಾದ ಪಕ್ಷಿಯಾಗಿದೆ, ಆದ್ದರಿಂದಲೇ ಅದಕ್ಕೆ ಪರ್ಯಾಯ ನಾಮವಾಗಿ ಡೈಡಸ್‌ ಇನೆಪ್ಟಸ್‌ ಎಂದು ಕರೆಯಲಾಗುತ್ತಿದ್ದರೂ, ಇತ್ತೀಚಿನ ಸಮಯದಲ್ಲಿ ಈ ಅಭಿಪ್ರಾಯಕ್ಕೆ ಸವಾಲೊಡ್ಡಲಾಗುತ್ತಿದೆ. ಇಂದಿನ ವಿಜ್ಞಾನಿಗಳ ಸಾಧಾರಣ ಅಭಿಪ್ರಾಯದ ಪ್ರಕಾರ ಹಿಂದಿನ ಚಿತ್ರಣಗಳು ಹೆಚ್ಚು ಆಹಾರ ಸೇವಿಸಿದ್ದ ಸೆರೆಸಿಕ್ಕಿದ ಮಾದರಿಗಳನ್ನು ತೋರಿಸಿವೆ.[೧೬] ಮಾರಿಷಸ್‌ ಗಮನಾರ್ಹವಾಗಿ ಬೇಸಿಗೆ ಹಾಗೂ ಮಳೆ/ಚಳಿಗಾಲಗಳನ್ನು ಹೊಂದಿರುವುದರಿಂದ, ಡೋಡೋ ಆಹಾರದ ಲಭ್ಯತೆ ಕಡಿಮೆಯಾಗುವ ಬೇಸಿಗೆಯಲ್ಲಿಯೂ ಜೀವಿಸಿರಲು ಸಾಧ್ಯವಾಗುವಂತೆ ಚಳಿ/ಮಳೆಗಾಲದ ಕೊನೆಯ ಹೊತ್ತಿಗೆ ಪ್ರಾಯಶಃ ಕಳಿತ ಹಣ್ಣುಗಳನ್ನು ಸೇವಿಸಿ ತನ್ನನ್ನು ಪುಷ್ಟಿಗೊಳಿಸಿಕೊಳ್ಳುತ್ತಲಿರಬಹುದು; ಸಮಕಾಲೀನ ವರದಿಗಳ ಪ್ರಕಾರ ಈ ಪಕ್ಷಿಗಳು' "ಹೊಟ್ಟೆಬಾಕತನದ" ಹಸಿವನ್ನು ಹೊಂದಿರುತ್ತವೆ. ಬಂಧಿತವಾಗಿರುವಾಗ, ಆಹಾರವು ಸುಲಭವಾಗಿಯೇ ಲಭ್ಯವಾಗುವುದರಿಂದ ಸಹಜವಾಗಿಯೇ ಪಕ್ಷಿಗಳು ಹೆಚ್ಚಾಗಿ ತಿಂದಿರುವ ಸಾಧ್ಯತೆ ಸುಲಭವಾಗಿಯೇ ಹೆಚ್ಚಿರುತ್ತದೆ.

ಆಹಾರ ಕ್ರಮ[ಬದಲಾಯಿಸಿ]

"ಡೋಡೋ ಮರ" ಎಂದೂ ಹೆಸರಾಗಿರುವ ಟಂಬಾಲಾಕೋಕ್‌ಅನ್ನು, ಡೋಡೋಗಳು ಸೇವಿಸುತ್ತವೆಂದೂ, ಡೋಡೋನ ಜೀರ್ಣಾಂಗವ್ಯೂಹದೊಳಗೆ ಹಾದು ಬರುವ ಮೂಲಕ ಮಾತ್ರವೇ ಅವುಗಳ ಬೀಜವು ಕುಡಿಯೊಡೆಯುವುದು ಎಂಬ ಊಹೆಯನ್ನು ಸ್ಟ್ಯಾನ್ಲಿ ಟೆಂಪಲ್‌ ಹೊಂದಿದ್ದರಲ್ಲದೇ ಟಂಬಾಲಾಕೋಕ್‌ ಕೂಡಾ ಈಗ ಡೋಡೋ'ಗಳ ನಶಿಸುವಿಕೆಯ ಕಾರಣದಿಂದಾಗಿ ವಿನಾಶದಂಚಿನಲ್ಲಿದೆ ಎಂದು ಪ್ರತಿಪಾದಿಸಿದ್ದರು. ಆತ ಹದಿನೇಳು ಟಂಬಾಲಾಕೋಕ್‌ ಹಣ್ಣುಗಳನ್ನು ಕಾಡುಕೋಳಿಗಳಿಗೆ ಬಲವಂತವಾಗಿ ತಿನ್ನಿಸಿದಾಗ ಅದರಲ್ಲಿ ಮೂರು ಮೊಳೆತವು. ಟೆಂಪಲ್‌ ಟರ್ಕಿಕೋಳಿಗಳಿಗೆ ಸೇವಿಸಲು ನೀಡಿದ ನಿಯಂತ್ರಣಕ್ಕೊಳಪಟ್ಟ ಯಾವುದೇ ಹಣ್ಣುಗಳನ್ನು ಕುಡಿಯೊಡೆಸಲು ಪ್ರಯತ್ನಪಡಲೇ ಇಲ್ಲ ಹಾಗಾಗಿ ಟರ್ಕಿಗಳಿಗೆ ಹಣ್ಣುಗಳನ್ನು ತಿನ್ನಿಸುವುದರಿಂದ ಉಂಟಾಗುವ ಪ್ರಯೋಜನ ಸ್ಪಷ್ಟವಾಗಲಿಲ್ಲ. ಟೆಂಪಲ್‌ ಟಂಬಾಲಾಕೋಕ್‌ ಬೀಜಗಳ ಕುಡಿಯೊಡೆಯುವಿಕೆಯ ಬಗ್ಗೆ A. W. ಹಿಲ್‌ ರ 1941ರ ಹಾಗೂ H. C. ಕಿಂಗ್‌ರ 1946ರ ವರದಿಗಳನ್ನು ಕೂಡಾ ಉಪೇಕ್ಷಿಸಿದ್ದರು, ಅವರುಗಳು ಅಪರೂಪಕ್ಕಾದರೂ ಬೀಜಗಳನ್ನು ಸವೆಸದೆಯೇ ಕುಡಿಯೊಡೆದದ್ದನ್ನು ಪತ್ತೆಹಚ್ಚಿದ್ದರು.[೧೭][೧೮][೧೯][೨೦]

ನಿರ್ನಾಮಗೊಳ್ಳುವಿಕೆ[ಬದಲಾಯಿಸಿ]

ಡ್ರೊಂಟೆ (17ನೇ ಶತಮಾನ )

ಗಮನಾರ್ಹ ಪರಭಕ್ಷಕ ಪ್ರಾಣಿಗಳಿಲ್ಲದ ಪ್ರದೇಶಗಳಲ್ಲಿ ವಿಕಸನಗೊಂಡ ಇತರೆ ಅನೇಕ ಪ್ರಾಣಿಗಳ ಹಾಗೆಯೇ, ಡೋಡೋ ಕೂಡಾ ಜನರ ಬಗ್ಗೆ ನಿರ್ಭಯವಾಗಿರುತ್ತಿತ್ತು, ಈ ಪ್ರವೃತ್ತಿ ಹಾಗೂ ಅದರ ಹಾರಲಾಗದಿರುವಿಕೆಗಳೆರಡರ ಸಂಯೋಜನೆಯು ಅದನ್ನು ಮಾನವರಿಗೆ ಸುಲಭ ಬಲಿಯನ್ನಾಗಿಸಿತು.[೨೧] ಕೆಂಪು ರೇಲ್‌ಗಳಂತಹಾ ಇತರೆ ಸ್ಥಳೀಯ ತಳಿಗಳು ಅವುಗಳ ಉತ್ತಮ ರುಚಿಗಾಗಿ ಹೊಗಳಲ್ಪಟ್ಟಿವೆಯಾದರೂ ಡೋಡೋದ ಕೆಟ್ಟ ರುಚಿ ಹಾಗೂ ಅದರ ಮಾಂಸವು ಜಿಗುಟಾಗಿರುವಿಕೆಯ ಬಗೆಗಿನ ವರದಿಗಳಿಂದ ಜರ್ನಲ್‌ಗಳು ತುಂಬಿ ಹೋಗಿವೆ. ಮಾರಿಷಸ್‌ಗೆ ಮೊದಲು ಮಾನವರು ಕಾಲಿಟ್ಟಾಗ ತಮ್ಮೊಂದಿಗೆ ಆ ಸಮಯಕ್ಕೆ ಮುನ್ನಾ ಆ ದ್ವೀಪದಲ್ಲಿರದ ನಾಯಿಗಳು, ಹಂದಿಗಳು, ಬೆಕ್ಕುಗಳು, ಇಲಿಗಳು, ಹಾಗೂ ಏಡಿ-ತಿನ್ನುವ ಮಕ್ಯಾಕ್‌ ಕೋತಿಗಳೂ ಸೇರಿದಂತೆ ಇತರೆ ಪ್ರಾಣಿಗಳನ್ನು ಕರೆತಂದರು, ಇವುಗಳಿಂದಾಗಿ ಡೋಡೋಗಳ ಗೂಡುಗಳು ಸೂರೆಗೊಳ್ಳಲ್ಪಟ್ಟವು, ಇಷ್ಟೇ ಅಲ್ಲದೇ ಪಕ್ಷಿಗಳು ತಮ್ಮ ವಾಸಸ್ಥಾನ/ಗೂಡುಗಳನ್ನು ಕಟ್ಟಿಕೊಳ್ಳುತ್ತಿದ್ದ ಕಾಡುಗಳನ್ನು ನಾಶ ಮಾಡಿದರು ;[೨೨] ಪ್ರಸ್ತುತ, ಈ ಪ್ರಾಣಿಗಳ ವಿಶೇಷತಃ ಹಂದಿಗಳು ಹಾಗೂ ಮಕ್ಯಾಕ್‌ ಕೋತಿಗಳು ಡೋಡೋ ಸಂತತಿಯ ಮೇಲೆ ಉಂಟು ಮಾಡಿರುವ ಆಘಾತವು ಅವುಗಳ ಬೇಟೆಯಿಂದಾದುದಕ್ಕಿಂತ ತೀವ್ರವಾದದ್ದಾಗಿದೆ. 2005ರ ಶೋಧಯಾತ್ರೆಯಲ್ಲಿ ಸುವ್ಯಕ್ತವಾಗಿ ಕಂಡುಬಂದ ಪ್ರಕಾರ ಹಠಾತ್‌ ಪ್ರವಾಹಗಳಿಂದಾಗಿ ಪ್ರಾಣಿಗಳು ಕೊಲ್ಲಲ್ಪಟ್ಟವು; ಅಂತಹಾ ಸಾಮೂಹಿಕ ಮರಣ ಪ್ರಮಾಣಗಳು ಈಗಾಗಲೇ ಅವಸಾನದಂಚಿನಲ್ಲಿರುವ ತಳಿಗಳನ್ನು ಮತ್ತಷ್ಟು ಗಂಡಾಂತರಕ್ಕೀಡು ಮಾಡಬಲ್ಲದು.[೨೩]

ಡೋಡೋ ಅಸ್ಥಿಪಂಜರ, ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯ (ಇಂಗ್ಲೆಂಡ್‌)

ಹಡಗಿನವರಿಗೆ ಆಹಾರ ಸರಬರಾಜು ಮಾರುವ ಉದ್ದೇಶದಿಂದ ಡೋಡೋಗಳ ಸಾಮೂಹಿಕ ಹತ್ಯೆಗಳು ನಡೆದಿದ್ದವೆಂಬ ಚೆದುರು ವರದಿಗಳಿದ್ದರೂ ಪುರಾತತ್ವಶಾಸ್ತ್ರಜ್ಞರ ತನಿಖೆಗಳು ಇದುವರೆಗೂ ಈ ಪಕ್ಷಿಗಳ ಮಾನವ ಭಕ್ಷಣೆ ನಡೆದಿದೆ ಎಂಬುದಕ್ಕೆ ಸಾಕೂಸಾಲದಂತಹಾ ಪುರಾವೆಗಳಷ್ಟೇ ದೊರೆತಿವೆ. ಕನಿಷ್ಠ ಎರಡು ಡೋಡೋಗಳ ಕೆಲ ಎಲುಬುಗಳು ಬೈಯೆ ಡು ಕ್ಯಾಪ್‌ನಲ್ಲಿನ 17ನೇ ಶತಮಾನದಲ್ಲಿ ದೇಶಭ್ರಷ್ಟ ಗುಲಾಮರು ಹಾಗೂ ಅಪರಾಧಿಗಳು ನೆಲೆಯಾಗಿ ಬಳಸುತ್ತಿದ್ದ ಗುಹೆಗಳಲ್ಲಿ ಕಂಡುಬಂದಿವೆ ಎತ್ತರದ, ಕೊರಕಲಿನ ಪ್ರದೇಶವಾದ ಕಾರಣದಿಂದ ಡೋಡೋಗಳಿಗೆ ನೈಸರ್ಗಿಕವಾಗಿ ಸುಲಭ ಪ್ರವೇಶ ಸಾಧ್ಯವಾಗಿರಲಿಲ್ಲ.[೨೪]

ಡೋಡೋಗಳ ನಿರ್ನಾಮಗೊಳ್ಳುವಿಕೆಗಳ ಸಮಯದ/ಅವಧಿಯ/ದಿನಾಂಕದ ಬಗ್ಗೆ ಕೆಲ ವಿವಾದಗಳಿವೆ. ರಾಬರ್ಟ್ಸ್‌‌ & ಸಾಲೋ ಎಂಬುವವರುಗಳ ಹೇಳಿಕೆಯ ಪ್ರಕಾರ "ಡೋಡೋನ ನಿರ್ನಾಮಗೊಳ್ಳುವಿಕೆಯು ಸಾಧಾರಣವಾಗಿ ಅಪಘಾತಕ್ಕೀಡಾದ ನೌಕೆಯ ನಾವಿಕನಾದ ವಾಲ್ಕರ್ಟ್‌ ಎವಟ್ಸ್ಜ್‌‌‌ (ಎವರ್ಟ್‌ಝೂನ್‌)ಎಂಬಾತ ವರದಿ ಮಾಡಿದ 1662ರಲ್ಲಿ ಅದರ ಕಟ್ಟಕಡೆಯ ಪುಷ್ಟೀಕರಿಸಿದ ಕಾಣಿಸಿಕೊಳ್ಳುವಿಕೆಯನ್ನು" ಉಲ್ಲೇಖಿಸಿ ಹೇಳಲಾಗುವುದಾದರೂ, ಇನ್ನೂ ಅನೇಕ ಮೂಲಗಳ ಪ್ರಕಾರ ಮತ್ತಷ್ಟು ಊಹಾತ್ಮಕ ಕಾಲವಾದ 1681ನ್ನು ಸೂಚಿಸುತ್ತವೆ. ರಾಬರ್ಟ್ಸ್‌‌ & ಸಾಲೋ 1662ಕ್ಕೆ ಹಿಂದಿನ ಕಾಣಿಸಿಕೊಳ್ಳುವಿಕೆಯು 1638ರಲ್ಲಿ ಆದುದರಿಂದ, ಡೋಡೋ 1660ರ ದಶಕದ ಹೊತ್ತಿಗಾಗಲೇ ಬಹಳ ಅಪರೂಪದ್ದಾಗಿರುವ ಸಾಧ್ಯತೆಯಿದ್ದು, 1674ರ ವಿವಾದಾತ್ಮಕ ಸಾಧ್ಯತೆಯು ತೀರಾ ತೆಗೆದು ಹಾಕಲಾಗದು ಎಂದು ಎತ್ತಿ ತೋರಿಸುತ್ತಾರೆ.[೨೫] ಐಸಾಕ್‌ ಜೋಹಾನ್ನೆಸ್‌ ಲಾಮೋಷಿಯಸ್‌ಅಂಕಿಅಂಶಾತ್ಮಕ ವಿಶ್ಲೇಷಣೆಯು 1688ರಿಂದ 1715ರವರೆಗಿನ 95% ಭರವಸೆಯೊಂದಿಗಿನ/ನಂಬಲರ್ಹ ವಿರಾಮದೊಂದಿಗೆ ಹೊಸ ಅಂದಾಜು ಕಾಲವಾದ 1693ಅನ್ನು ಸೂಚಿಸಿದೆ. ಪ್ರವಾಸಿಗರ ವರದಿಗಳಂತಹಾ ಸಾಂದರ್ಭಿಕ ಪುರಾವೆಗಳನ್ನು ಹಾಗೂ 1689ರ,[೨೪] ನಂತರದ ನಂಬಲರ್ಹ ಸಾಕ್ಷ್ಯಗಳ ಅಲಭ್ಯತೆಯನ್ನು ಪರಿಗಣಿಸಿದರೆ ಡೋಡೋ 1700ಕ್ಕೆ ಮುನ್ನವೇ ನಿರ್ನಾಮಗೊಂಡಿರುವ ಸಾಧ್ಯತೆಯಿದೆ; ಕೊನೆಯ ಡೋಡೋ 1581ರಲ್ಲಿ ಆ ತಳಿಯ ಪತ್ತೆಯಾದ ಶತಮಾನಕ್ಕೆ ಸ್ವಲ್ಪ ಹೆಚ್ಚಿನ ಅವಧಿಯಲ್ಲಿಯೇ ಮರಣಿಸಿತ್ತು.[೨೬]

ಕೆಲವರು ಮಾತ್ರವೇ ಈ ಪಕ್ಷಿಯು ನಿರ್ನಾಮಗೊಂಡುದರ ಬಗ್ಗೆ ನಿರ್ದಿಷ್ಟವಾಗಿ ಗಮನ ನೀಡಿದರು. 19ನೇ ಶತಮಾನದ ಆದಿಭಾಗದ ಹೊತ್ತಿಗೆ ಅದೊಂದು ತೀರ ಅಪರಿಚಿತ ಜೀವಿಯೆನಿಸಿತಲ್ಲದೇ ಕೆಲವರು ಇದೊಂದು ಭ್ರಮೆಯೆಂದು ಕೂಡಾ ಭಾವಿಸಿದ್ದರು. ಮಾರೆ ಆಕ್ಸ್‌ ಸಾಂಗೆಸ್‌ ಎಂಬಲ್ಲಿ ಮಾರಿಷಸ್‌ನ ಜೌಗುನೆಲದಲ್ಲಿ ಡೋಡೋ ಎಲುಬುಗಳ ಪ್ರಥಮ ಗುಂಪು ಪತ್ತೆಯಾದ ನಂತರ, ಮಾಹೆಬೋರ್ಗ್‌ನ ಸರ್ಕಾರಿ ಶಾಲೆಯ ಶಿಕ್ಷಕ ಜಾರ್ಜ್‌ ಕ್ಲಾರ್ಕ್‌ ಎಂಬಾತ 1865ರಿಂದ ಮುಂದಕ್ಕೆ,[೨೭] ಅವುಗಳ ಬಗ್ಗೆ ಬರೆದ ವರದಿಗಳು ಪಕ್ಷಿಯ ಬಗೆಗಿನ ಆಸಕ್ತಿಯನ್ನು ಮರು ಉದ್ದೀಪಿಸಿದವು. ಕ್ಲಾರ್ಕ್‌ ತನ್ನ ವರದಿಗಳ ಪ್ರಕಟಣೆಯನ್ನು ಆರಂಭಿಸಿದ ವರ್ಷವೇ ಹೊಸದಾಗಿ ಸಮರ್ಥಿತವಾದ ಪಕ್ಷಿಯನ್ನು ಲೂಯಿಸ್‌ ಕೆರಾಲ್ಲ್‌‌‌ರ ಅಲೈಸ್‌'ಸ್‌‌ ಅಡ್ವೆಂಚರ್ಸ್‌ ಇನ್‌ ದ ವಂಡರ್‌ಲ್ಯಾಂಡ್‌‌ ಎಂಬ ಕಥೆಯಲ್ಲಿ ಒಂದು ಪಾತ್ರವನ್ನಾಗಿ ಬಳಸಲಾಯಿತು. ಈ ಪುಸ್ತಕದ ಜನಪ್ರಿಯತೆಯೊಂದಿಗೆ, ಡೋಡೋ ನಿರ್ನಾಮವಾದ ಜೀವಿಗಳ ಸುಲಭಗ್ರಾಹ್ಯ ಪ್ರಾತಿನಿಧಿಕವಾಗಿ ಜನಪ್ರಿಯಗೊಂಡಿತು.[೨೮]

ಮಾರಿಷಸ್‌ನ ಲಾಂಛನ

ಸಾಂಸ್ಕೃತಿಕ ಮನ್ನಣೆ[ಬದಲಾಯಿಸಿ]

ಗೆರಾಲ್ಡ್‌ ಡರ್ರೆಲ್‌ ಸ್ಥಾಪಿಸಿದ ಡರ್ರೆಲ್‌ ವೈಲ್ಡ್‌‌ಲೈಫ್‌‌ ಕನ್ಸರ್ವೇಶನ್‌ ಟ್ರಸ್ಟ್‌‌ ಹಾಗೂ ಜೆರ್ಸಿ ಮೃಗೋದ್ಯಾನಗಳಂತಹಾ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳ ರಕ್ಷಣೆಗೆ ಟೊಂಕಕಟ್ಟಿರುವ ಅನೇಕ ಪರಿಸರಸ್ನೇಹಿ ಸಂಸ್ಥೆಗಳು ಡೋಡೋವನ್ನು ಸಂಕೇತವನ್ನಾಗಿ ಬಳಸಿ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತಿವೆ.[೨೯]

ನಿರ್ನಾಮಗೊಂಡ ಪ್ರಾಣಿಗಳ ಅತ್ಯುತ್ತಮ ಮಾದರಿಯಾಗಿ ಡೋಡೋ'ನ ಪ್ರಾಮುಖ್ಯತೆಯು ಹಾಗೂ ಅದರ ದುರ್ಲಭ ಕಾಣಿಸಿಕೊಳ್ಳುವಿಕೆಯು ಸಾಹಿತ್ಯ ಹಾಗೂ ಜನಪ್ರಿಯ ಸಂಸ್ಕೃತಿಯಲ್ಲಿ ಅಪ್ರಚಲಿತಗೊಳ್ಳಬಹುದಾದ ಅಥವಾ ಅಪ್ರಚಲಿತಗೊಂಡಿರುವ ವಸ್ತು ಅಥವಾ ಕಲ್ಪನೆಯನ್ನು ಪ್ರತಿನಿಧಿಸಲು "ಡೋಡೋನಂತೆ ಅವಸಾನ ಹೊಂದಿದ" ಅಥವಾ "ಡೋಡೋನ ದಾರಿ ಹಿಡಿದ" ಎಂಬ ಪದಪುಂಜಗಳು ಸೂಚಿಸುವಂತೆ ಅದರ ಬಳಕೆಗೆ ಕಾರಣವಾಗಿದೆ.[೩೦][೩೧]

ಹಿಂಗಾಲುಗಳ ಮೇಲೇರಿ ನಿಂತಿರುವ ಡೋಡೋ ಮಾರಿಷಸ್‌ರಾಷ್ಟ್ರ ಲಾಂಛನದಲ್ಲಿ ಕಾಣಿಸಿಕೊಂಡಿದೆ.[೨೨]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. BirdLife International (2004). Raphus cucullatus. 2006. IUCN Red List of Threatened Species. IUCN 2006. www.iucnredlist.org. Retrieved on 2006-12-07. ಈ ಪ್ರಭೇದಗಳು ನಿರ್ನಾಮಗೊಂಡವೆಂದು ಏಕೆ ನಮೂದಿಸಿದೆ ಎಂದು ವಿವರಣೆಯನ್ನೊಳಗೊಂಡ ದತ್ತಸಂಚಯ ನಮೂದು.
  2. A trve report of the gainefull, prosperous, and speedy voiage to Iava in the East Indies, performed by a fleete of eight ships of Amsterdam: which set forth from Texell in Holland, the first of Maie 1598. [ಶಾಶ್ವತವಾಗಿ ಮಡಿದ ಕೊಂಡಿ]Stilo Novo. [ಶಾಶ್ವತವಾಗಿ ಮಡಿದ ಕೊಂಡಿ]Whereof foure returned againe the 19. of Iuly Anno 1599. in lesse thaen 15 moneths: the other foure went forward from Iava for the Moluccas[ಶಾಶ್ವತವಾಗಿ ಮಡಿದ ಕೊಂಡಿ]
  3. ಸ್ಟಾವ್ಬ್‌ , ಫ್ರಾನ್ಸ್‌ (1996): ಡೋಡೋ ಅಂಡ್‌‌ ಸಾಲಿಟೇರ್ಸ್‌‌, ಮಿಥ್ಸ್‌‌ ಅಂಡ್‌ ರಿಯಾಲಿಟಿ. ಪ್ರೊಸೀಡಿಂಗ್ಸ್‌‌ ಆಫ್‌ ದ ರಾಯಲ್‌ ಸೊಸೈಟಿ ಆಫ್‌ ಆರ್ಟ್ಸ್‌ ಅಂಡ್‌ ಸೈನ್ಸ್‌ ಆಫ್‌ ಮಾರಿಷಸ್‌ 6 : 89-122 HTML ಪೂರ್ಣಪಠ್ಯ
  4. ಸ್ಟ್ರಿಕ್‌ಲ್ಯಾಂಡ್‌, H.E. Archived 2020-02-06 ವೇಬ್ಯಾಕ್ ಮೆಷಿನ್ ನಲ್ಲಿ. (1848) ದ ಡೋಡೋ ಅಂಡ್‌‌ ಇಟ್ಸ್‌‌ ಕಿಂಡ್‌ರೆಡ್‌ ಲಂಡನ್‌: ರೀವ್‌ , ಬೆನ್‌ಹ್ಯಾಮ್‌‌ ಅಂಡ್‌ ರೀವ್‌. p.128
  5. ೫.೦ ೫.೧ "Dodo skeleton find in Mauritius". BBC News. London. 2006-06-24. Retrieved 2006-08-28.
  6. ಪೋರ್ಚುಗೀಸ್‌‌ ಪದ ಡೌಡೋ ಅಥವಾ ಡೊಯ್ಡೋ ಗಳೇ ಪ್ರಾಚೀನ ಆಂಗ್ಲದ ಎರವಲು ಪದಗಳಾಗಿರಬಹುದು (cf. ಆಂಗ್ಲ "ಡಾಲ್ಟ್‌‌").
  7. ಕ್ವಾಮ್ಮೆನ್‌‌, ಡೇವಿಡ್‌ (1996): ದ ಸಾಂಗ್‌ ಆಫ್‌ ದ ಡೋಡೋ : ಐಲೆಂಡ್‌ ಬಯೋ-ಜಿಯೋಗ್ರಾಫಿ ಇನ್‌ ಆನ್‌ ಏಜ್‌ ಆಫ್‌‌ ಎಕ್ಸ್‌ಟಿಂಕ್ಷನ್ . ಟಚ್‌ಸ್ಟೋನ್‌, ನ್ಯೂಯಾರ್ಕ್‌‌. ISBN 1-58648-683-7
  8. Staub, France. "Le musée du Dodo". Potomitan. Retrieved 2009-01-18.
  9. ಷಪೀರೋ, ಬೆತ್‌‌; ಸಿಬ್‌ಥೋರ್ಪ್‌, ಡೀನ್‌‌; ರಾಂಬೌಟ್‌‌, ಆಂಡ್ರ್ಯೂ; ಆಸ್ಟಿನ್‌, ಜೆರೆಮಿ; ರಾಗ್‌‌, ಗ್ರಹಾಂ M.; ಬಿನಿಂಡಾ-ಎಮಂಡ್ಸ್‌‌, ಓಲಾಫ್‌ R. P.; ಲೀ, ಪೆಟ್ರೀಷಿಯಾ L. M. & ಕೂಪರ್‌, ಅಲನ್‌‌ (2002): ಫ್ಲೈಟ್‌‌ ಆಫ್‌ ದ ಡೋಡೋ. ಸೈನ್ಸ್‌ 295 : 1683. doi:10.1126/science.295.5560.1683 (HTML ಸಾರಾಂಶ) ಪೂರಕ ಮಾಹಿತಿ
  10. "25 ಮ್ಯಾ" ಸಮಯವು ಏಕೆ ಪ್ರಶ್ನಾರ್ಹ ಎಂಬುದಕ್ಕೆ ನೋಡಿ ರಾಫಿಡೇ
  11. "DNA yields dodo family secrets". BBC News. London. 2002-02-28. Retrieved 2006-09-07.
  12. ಜಾನ್ಸನ್‌ , ಕೆವಿನ್‌‌ P. ಹಾಗೂ ಡೇಲ್‌ H. ಕ್ಲೇಟನ್‌‌ (2000): ನ್ಯೂಕ್ಲಿಯರ್‌ ಅಂಡ್‌ ಮೈಟೋಕಾಂಡ್ರಿಯಲ್‌ ಜೀನ್ಸ್‌‌ ಕಂಟೇನ್‌ ಸಿಮಿಲರ್‌‌ ಫೈಲೋಜೆನೆಟಿಕ್. ಸಿಗ್ನಲ್‌ ಫಾರ್‌‌ ಪಿಜನ್ಸ್‌ ಅಂಡ್‌ ಡವ್ಸ್‌‌ (ಏವ್ಸ್‌‌: ಕೊಲಂಬಿಫೋರ್ಮೆಸ್‌‌). ಮಾಲಿಕ್ಯುಲರ್‌ ಫೈಲೋಜೆನೆಟಿಕ್ಸ್‌ ಅಂಡ್‌ ಎವೊಲ್ಯೂಷನ್‌ 14 (1): 141–151. PDF ಸಂಪೂರ್ಣ ಪಠ್ಯ Archived 2011-05-18 ವೇಬ್ಯಾಕ್ ಮೆಷಿನ್ ನಲ್ಲಿ.
  13. Cheke, Anthony S. and Julian Pender Hume. "The white dodo of Réunion Island". Retrieved 2009-01-18.
  14. "Scientists find 'mass dodo grave'". BBC News. London. 2005-12-24. Retrieved 2006-09-07.
  15. "Dodo Skeleton Found on Island, May Yield Extinct Bird's DNA". National Geographic. 2007-07-03. Retrieved 2007-07-09.
  16. ಕಿಚನರ್‌‌, A. ಆನ್‌ ದ ಎಕ್ಸ್‌‌ಟರ್ನಲ್‌ ಅಪೀಯರೆನ್ಸ್‌ ಆಫ್‌ ದ ಡೋಡೋ, ರಾಫಸ್‌‌ ಕುಕುಲ್ಲೇಟಸ್ ‌. ನೈಸರ್ಗಿಕ ಇತಿಹಾಸದ ಸಂಗ್ರಹಗಳು, 20, 1993.
  17. ಟೆಂಪಲ್‌ , ಸ್ಟ್ಯಾನ್ಲೆ A. (1977): ಪ್ಲಾಂಟ್‌-ಅನಿಮಲ್‌ ಮ್ಯೂಚ್ಯುಅಲಿಸಮ್‌: ಕೋಎವೊಲ್ಯೂಷನ್‌ ವಿತ್‌ ಡೋಡೋ ಲೀಡ್ಸ್‌ ಟು ನಿಯರ್‌ ಎಕ್ಸ್‌ಟಿಂಕ್ಷನ್‌ ಆಫ್‌ ಪ್ಲಾಂಟ್. ಸೈನ್ಸ್‌‌‌ 197 (4306): 885-886. HTML ಸಾರಾಂಶ
  18. ಹಿಲ್, A. W. (1941): ದ ಜೀನಸ್‌‌ ಕಾಲ್ವರಿಯಾ , ವಿತ್‌ ಆನ್‌ ಅಕೌಂಟ್‌‌ ಆಫ್‌ ದ ಸ್ಟೋನಿ ಎಂಡೋಕಾರ್ಪ್‌‌ ಅಂಡ್‌ ಜರ್ಮಿನೇಷನ್‌ ಆಫ್‌ ದ ಸೀಡ್‌ ಅಂಡ್‌ ಡಿಸ್ಕ್ರಿಪ್ಷನ್‌ ಆಫ್‌ ದ ನ್ಯೂ ಸ್ಪೀಷೀಸ್‌. ಆನ್ನಲ್ಸ್‌ ಆಫ್‌ ಬಾಟನಿ 5 (4): 587-606. PDF ಪೂರ್ಣಪಠ್ಯ (ಬಳಕೆದಾರ ಖಾತೆ ಅಗತ್ಯ)
  19. ಕಿಂಗ್, H. C. (1946). ಮಾರಿಷಸ್‌ನ ಸ್ಥಳೀಯ ಪ್ರಭೇದಗಳ ಬಗ್ಗೆ ಮಧ್ಯಂತರ ವರದಿ . ಸರ್ಕಾರಿ ಮುದ್ರಣಾಲಯ, ಪೋರ್ಟ್‌ ಲೂಯಿಸ್‌, ಮಾರಿಷಸ್‌ .
  20. ವಿಟ್ಮರ್‌, M. C. & ಛೆಕೆ, A. S. (1991): ದ ಡೋಡೋ ಅಂಡ್‌‌ ದ ಟಂಬಾಲಾಕೋಕ್‌ ಟ್ರೀ: ಆನ್‌ ಆಬ್ಲಿಗೇಟ್‌‌ ಮ್ಯೂಚ್ಯುಲಿಸಮ್‌ ರೀಕನ್ಸಿಡರ್ಡ್. ಆಯ್ಕಾಸ್‌ 61 (1): 133-137. HTML ಸಾರಾಂಶ
  21. "Scientists pinpoint dodo's demise". BBC News. London. 2003-11-20. Retrieved 2006-09-07.
  22. ೨೨.೦ ೨೨.೧ Jonathan Fryer (2002-09-14). "Bringing the dodo back to life". BBC News. London. Retrieved 2006-09-07.
  23. Tim Cocks (2006-06-04). "Natural disaster may have killed dodos". Reuters. Retrieved 2006-08-30.
  24. ೨೪.೦ ೨೪.೧ ಜಾನೂ, ಅನ್ವರ್‌‌ (2005): ಡಿಸ್ಕವರಿ ಆಫ್‌‌ ಐಸೋಲೇಟೆಡ್‌‌ ಡೋಡೋ ಬೋನ್ಸ್‌‌ [ರಾಫಸ್‌‌ ಕುಕುಲ್ಲೇಟಸ್‌ (L.), ಆವ್ಸ್‌‌, ಕೊಲಂಬಿಫೋರ್ಮೆಸ್] ಫ್ರಂ ಮಾರಿಷಸ್‌ ಕೇವ್‌ ಷೆಲ್ಟರ್ಸ್‌‌ ಹೈಲೈಟ್ಸ್‌‌ ಹ್ಯೂಮನ್‌ ಪ್ರಿಡೇಷನ್‌, ವಿತ್‌ ಅ ಕಮೆಂಟ್‌ ಆನ್‌ ದ ಸ್ಟೇಟಸ್‌‌ ಆಫ್‌ ದ ಫ್ಯಾಮಿಲಿ ರಾಫಿಡೇ ವೆಟ್‌ಮೋರ್‌‌, 1930. Annales de Paléontologie 91: 167–180. [ಫ್ರೆಂಚ್‌ ಸಾರಾಂಶದೊಂದಿಗೆ ಆಂಗ್ಲದಲ್ಲಿ ] DOI:10.1016/j.annpal.2004.12.002 (HTML ಸಾರಾಂಶ) ಹ್ಯೂಮೆ et al. ref ಬಹುಶಃ ಕೂಡಾ.
  25. ರಾಬರ್ಟ್ಸ್‌, ಡೇವಿಡ್‌‌ L. & ಸೋಲೌ, ಆಂಡ್ರ್ಯೂ R. (2003): ಫ್ಲೈಟ್‌ಲೆಸ್‌ ಬರ್ಡ್ಸ್‌: ವೆನ್‌ ಡಿಡ್‌ ದ ಡೋಡೋ ಬಿಕಮ್‌ ಎಕ್ಸ್‌ಟಿಂಕ್ಟ್? ನೇಚರ್‌‌ 425 (6964): 245. [112] (HTML ಸಂಗ್ರಹ)
  26. "ಡೋಡೋ ಬರ್ಡ್‌‌ FAQಸ್‌‌ - WikiFAQ - ಆನ್ಸರ್ಸ್‌ ಟು ಫ್ರೀಕ್ವೆಂಟ್ಲಿ ಆಸ್ಕ್‌ಡ್‌‌ ಕ್ವಶ್ಚನ್ಸ್‌‌ (FAQ)". Archived from the original on 2009-10-02. Retrieved 2010-05-31.
  27. ಲೂಯಿಸ್‌ ಕೆರೋಲ್‌'ರ ಅಲೈಸ್‌'ಸ್‌ ಅಡ್ವೆಂಚರ್ಸ್‌‌ ಇನ್‌ ವಂಡರ್‌ಲ್ಯಾಂಡ್‌ 1865ರಲ್ಲಿ ಪ್ರಕಟವಾಯಿತು.
  28. Mayell, Hillary (2002-02-28). "Extinct Dodo Related to Pigeons, DNA Shows". National Geographic News. Retrieved 2009-01-19.
  29. Dee pa Unhook (2006-09-26). "Mauritius: Footprints From the Past". expresser's. Retrieved 2006-09-26. (ಚಂದಾ ಅಗತ್ಯ)
  30. Steve Miller (2006-09-25). "First The Dodo, Now Full-Size SUV". Brand Week. Archived from the original on 2007-12-24. Retrieved 2006-09-26.
  31. "Water ford Wildlife". Water ford Today. 2006-01-01. Archived from the original on 2007-02-23. Retrieved 2006-09-26.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಡೋಡೋ&oldid=1216095" ಇಂದ ಪಡೆಯಲ್ಪಟ್ಟಿದೆ