ಹಂದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಂದಿಯು ಸಮ ಕಾಲ್ಬೆರಳುಗಳಿರುವ ಗೊರಸುಳ್ಳ ಪ್ರಾಣಿಗಳ ಸೂಯಿಡಿ ಕುಟುಂಬದೊಳಗಿನ ಸೂಸ್ ಜಾತಿಯಲ್ಲಿನ ಯಾವುದೇ ಪ್ರಾಣಿ. ಹಂದಿಗಳು ದೇಶೀಯ ಹಂದಿ ಮತ್ತು ಅದರ ಪೂರ್ವಜ, ಸಾಮಾನ್ಯ ಯುರೇಶಿಯಾದ ಕಾಡು ಹಂದಿ (ಸೂಸ್ ಸ್ಕ್ರೋಫ಼ಾ) ಜೊತೆಗೆ ಇತರ ಪ್ರಜಾತಿಗಳನ್ನು ಒಳಗೊಳ್ಳುತ್ತವೆ; ಜಾತಿಯ ಹೊರಗಿನ ಸಂಬಂಧಿತ ಪ್ರಾಣಿಗಳು ಬಾಬರೂಸಾ ಮತ್ತು ವಾರ್ಟ್‍ಹಾಗ್ ಅನ್ನು ಒಳಗೊಳ್ಳುತ್ತವೆ. ಎಲ್ಲ ಸೂಯಿಡಿ ಕುಟುಂಬದ ಸದಸ್ಯರಂತೆ ಹಂದಿಗಳು ಯೂರೇಶಿಯಾ ಮತ್ತು ಆಫ್ರಿಕಾದ ಖಂಡಗಳಿಗೆ ಸ್ಥಳೀಯವಾಗಿವೆ.

ಯಾವುದೇ ಸಮಯದಲ್ಲಿ ಸುಮಾರು 1 ಬಿಲಿಯನ್ ಜೀವಂತವಾದ ಹಂದಿಗಳು ಇರುತ್ತಿವೆ . ಭೂಮಿಯಲ್ಲಿ ಹಲವಾರು ದೊಡ್ಡ ಸಸ್ತನಿಗಳಲ್ಲಿ ಹಂದಿ ಒಂದಾಗಿದೆ . ಹಂದಿಗಳು ಆಹಾರ ವ್ಯಾಪಕ ಮಾನವರಿಗೆ ಹೋಲುತ್ತದೆ, ಅದು ಮಾಂಸವನ್ನು ಕೂಡ ಸೇವಿಸುತ್ತಾದೆ . ಹಂದಿಗಳು ಮನುಷ್ಯನಿಗೆ ವರ್ಗಾವಣೆಯಾಗಬಹುದಾದಂತ ಪರಾವಲಂಬಿಗಳು ಮತ್ತು ರೋಗಗಳ ವ್ಯಾಪ್ತಿಗೆ ಆಶ್ರಯ ನೀಡುತ್ತದೆ . ಹಂದಿಗಳು ಮಾನವ ವೈದ್ಯಕೀಯ ಸಂಶೋಧನೆಗೆ ಬಳಸಲಾಗುತ್ತದೆ ಏಕೆಂದರೆ ಹಂದಿಗಳು ಮತ್ತು ಮಾನವರ ನಡುವೆ ತುಂಬಾ ಹೋಲಿಕೆಗಳು ಇವೆ .

"https://kn.wikipedia.org/w/index.php?title=ಹಂದಿ&oldid=718885" ಇಂದ ಪಡೆಯಲ್ಪಟ್ಟಿದೆ