ಚೇ ಗುವಾರ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರ್ನೆಸ್ಟೊ "ಚೇ" ಗುವಾರ
GuerrilleroHeroico.jpg
ಚೇ ಗುವಾರ
ಜನನ ಜೂನ್ ೧೪, ೧೯೨೮
ರೊಸಾರಿಯೊ, ಅರ್ಜೆಂಟೀನ
ಮರಣ ಅಕ್ಟೋಬರ್ ೯, ೧೯೬೭ (ತೀರಿದಾಗ ವಯಸ್ಸು ೩೯)
ಲಾ ಹಿಗುವಾರ, ಬೊಲಿವಿಯ
ಪ್ರಸಿದ್ಧಿಗೆ ಕಾರಣ ಸಮಾಜವಾದಿ, ಮಾರ್ಕ್ಸ್‌ವಾದಿ, ಕ್ರಾಂತಿವಾದಿ
ಧಾರ್ಮಿಕ ನಂಬಿಕೆಗಳು ಇಲ್ಲ

ಅರ್ನೆಸ್ಟೊ ಗುವಾರ ಡಿ ಲ ಸೆರ್ನ (ಜೂನ್ ೧೪, ೧೯೨೮ - ಅಕ್ಟೋಬರ್ ೯, ೧೯೬೭), ಜನಪ್ರಿಯವಾಗಿ ಚೇ ಗುವಾರ, ಎಲ್ ಚೇ ಅಥವ ಬರಿ ಚೇ ಎಂದು ಕರೆಯಲ್ಪಡುತ್ತಾರೆ. ಅರ್ಜೆಂಟೀನಾದಲ್ಲಿ ಹುಟ್ಟಿದ ಮಾರ್ಕ್ಸ್ ವಾದಿ ಕ್ರಾಂತಿವಾದಿ, ರಾಜಕೀಯ ವ್ಯಕ್ತಿ, ಮತ್ತು ಕ್ಯೂಬ ಮತ್ತು ಅಂತರರಾಷ್ಟ್ರೀಯ ಗೆರಿಲ್ಲಾಗಳ ನಾಯಕ.

ಚೇ ತಾನು ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವಾಗ ದಕ್ಷಿಣ ಅಮೆರಿಕವನ್ನು ಸುತ್ತಿದರು. ಈ ಪಯಣದಲ್ಲಿ ಅವರು ಅಲ್ಲಿಯ ಜನರ ಸ್ಥಿತಿ ಗತಿಗಳ ಬಗ್ಗೆ ನೇರವಾಗಿ ತಿಳಿದುಕೊಂಡರು. ಆ ಜನರಲ್ಲಿದ ಬಡತನ, ಹಸಿವು ಮತ್ತು ಹಲವಾರು ಸಂಕಷ್ಟಗಳಿಗೆ ಸಮಾಜವಾದದ ಮೂಲಕವಷ್ಟೆ ಪರಿಹಾರ ಕಂಡುಕೊಳ್ಳಬಹುದು ಎಂದು ನಿರ್ಧರಿಸಿದರು. ಕಾರ್ಲ್ ಮಾರ್ಕ್ಸ್ ನ ಮತ್ತಷ್ಟು ಕೃತಿಗಳನ್ನು ಓದಿದರು. ಗುವಾಟೆಮಾಲ ಎಂಬ ರಾಷ್ಟ್ರದಲ್ಲಿ ಅಲ್ಲಿಯ ಅಧ್ಯಕ್ಷ ಜ್ಯಾಕೋಬ್ ಅರ್ಬೆನ್ಜ್ ಗುಝ್ಮಾನ್ ಮಾಡಿದ್ದ ಸುಧಾರಣೆಗಳ ಬಗ್ಗೆ ಕಲಿಯಲು ಆ ರಾಷ್ಟ್ರಕ್ಕೆ ತೆರಳಿದರು.

ವೈಯಕ್ತಿಕ ಉಪಕರಣಗಳು