ಮುಅಮ್ಮರ್ ಗಡಾಫಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು



ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿ[೧][variations] (ಅರೇಬಿಕ್: معمر القذافي Muʿammar al-Qaḏḏāfī audio ; ಜನನ ೭ ಜೂನ್ ೧೯೪೨), ಕರ್ನಲ್ ಗಡಾಫಿಯೆಂದು ಪ್ರಸಿದ್ದರು. ಇವರು ೧ನೇ ಸೆಪ್ಟೆಂಬರ್ ೧೯೬೯ರ ಸೈನ್ಯ ಕ್ರಾಂತಿಯ ನಂತರ ಲಿಬಿಯಾದ ನಾಯಕರಾಗಿದ್ದಾರೆ.

ಪರಿವಿಡಿ

[ಬದಲಾಯಿಸಿ] ಜನನ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನ

ಲಿಬಿಯಾದೇಶದ 'ಬರ್ಬರ್ ಬುಡಕಟ್ಟಿನ', 'ಮುಅಮ್ಮರ್ ಗಡಾಫಿ'ಯವರು ಜನಿಸಿದ್ದು 'ಸಿರ್ಟೆ' ಸಮೀಪದ ಮರಳುಗಾಡಿನಲ್ಲಿ ಜೂನ್ ೧೯೪೨ ರಲ್ಲಿ. ಹತ್ತಿರದ ಪುಟ್ಟ ಪಟ್ಟಣವೊಂದರ ಶಾಲೆಯಲ್ಲಿ ಕಲಿಕೆ ಪ್ರಾರಂಭವಾಗಿದ್ದು ಅವರ ಚಿಕ್ಕಪ್ಪನವರ ನೆರವಿನಿಂದ. ಬಾಲ್ಯದಲ್ಲಿ ಚಿಕ್ಕ ಹಳ್ಳಿಯಿಂದ ಬಂದಿದ್ದ ಗಡಾಫೆಯವರನ್ನು ಪಟ್ಟಣದ ಸಹಪಾಠಿಗಳು ಗೇಲಿಮಾಡುವುದನ್ನು ಸಹಿಸಿಕೊಳ್ಳಬೇಕಾಯಿತು. ಹೀಗಾಗಿ ಯುವಾವಸ್ಥೆಯಲ್ಲಿ ಅವರು ಹಣವಂತರು, ಪಟ್ಟಣದ ಜನ ವ್ಯಾಪಾರಿಗಳು ಮೊದಲಾದವರನ್ನು ಕಂಡರೆ ರೊಚ್ಚಿಗೇಳುತ್ತಿದ್ದರು. ಮೊದಲು ಒಬ್ಬ ಚತುರ ರಾಜಕೀಯ ಚಿಂತಕನಾಗಿದ್ದ ಅವರ ವ್ಯಕ್ತಿತ್ವ ವಿಕ್ಷಿಪ್ತವಾಗಿತ್ತು. ಕಾಲಕ್ರಮೇಣ ಹಲವಾರು ಹುಚ್ಚು ವಿಕೃತಿಗಳು ಅವರ ಜೊತೆಯಲ್ಲೇ ಬೆಳೆದವು ಸನ್ ೧೯೬೯ ರಲ್ಲಿ ಲಿಬಿಯಾದ ರಾಜ,ಇದ್ರಿಸ್ ನನ್ನು 'ಸೈನಿಕ ಕ್ರಾಂತಿ'ಯಲ್ಲಿ ಪದಚ್ಯುತಿಗೊಳಿಸಿ ಸರ್ವಾಧಿಕಾರಿಯಾಗಿ ಪದಗ್ರಹಣಮಾಡಿದರು.

[ಬದಲಾಯಿಸಿ] ಈಜಿಪ್ಟ್ ನ ಅಧ್ಯಕ್ಷ ನಾಸಿರ್, ಅವರಿಗೆ ಒಬ್ಬ ಆದರ್ಶವ್ಯಕ್ತಿಯಾದರು

ಈಜಿಪ್ಟ್ ದೇಶದ ಆಗಿನ ಅಧ್ಯಕ್ಷ, ಗಮಾಲ್ ಅಬ್ದುಲ್ ನಾಸಿರ್ ರವರ ಭಾಷಣಗಳು 'ಕೈರೋ ಆಕಾಶವಾಣಿ'ಯಲ್ಲಿ ಕೇಳಿದಾಗ ಅವರಿಗೆ ಸ್ಫೂರ್ತಿ ನೀಡಿದವು. 'ನಾಸಿರ್' ರಂತೆ ತಾವೊಬ್ಬ ಮಾದರಿ ಜನರಲ್ ಆಗುವ ಕನಸು ಕಾಣುತ್ತಾ ಸೈನಿಕ ಶಾಲೆಗೆ ಭರ್ತಿಯಾದರು. ಗಡಾಫೆ, ಸುಮಾರಾಗಿ ಓದಿಕೊಂಡಿದ್ದರು. ಅವೆಲ್ಲಾ ಸಮಾಜವಾದಿ ಯುಟೋಪಿಯ, ಸಮಾಜವಾದ, ಅರಬ್ ಬುಡಕಟ್ಟಿನ ಸಾಂಪ್ರದಾಯಿಕ ಗೌರವ ಕಟ್ಟಳೆಗಳ ಅಧ್ಯಯನ, ಇಸ್ಲಾಮಿ ಪ್ರಜಾಪ್ರಭುತ್ವ, ಸರ್ವಾಧಿಕಾರದ ವಿರೋಧ, ಐರೋಪ್ಯ ವಸಾಹತು ಶಾಹೀ ವಿಚಾರಗಳ ಬಗ್ಗೆ ವಿರೋಧ, ಮೂರನೇ ವಿಶ್ವದ ಬಗ್ಗೆ ಸಿದ್ಧಾಂತಗಳು ; ಇವೆಲ್ಲಾ ಅವರ ಅಧ್ಯಯನದ ಮಗ್ಗಲುಗಳಾಗಿದ್ದವು. ಇಷ್ಟೆಲ್ಲಾ ಮನಸ್ಸಿನಲ್ಲಿ ತುಂಬಿಕೊಂಡಿದ್ದ ಯುವ ಗಡಾಫೆ ಮುಂದೆ ವರ್ತಿಸಿದ್ದೇ ಬೇರೆತರಹ. ಅವರ ತಲೆಯಲ್ಲಿ ಒಂದು ಹೊಸ ವಿಚಾರಧಾರೆ ಪ್ರವಹಿಸುತ್ತಿತ್ತು. ತಾವೇ ಅಧಿಕಾರವನ್ನು ಹೊಂದಿದಾಗ ಅವರ ಮನಸ್ಸಿನಲ್ಲಿ ಮೆಲುಕುಹಾಕುತ್ತಿದ್ದ ರಾಜಕೀಯ ಹಾಗೂ ಸಾಮಾಜಿಕ ಒಲವುಗಳು ಭ್ರಾಂತವಾಗಿದ್ದವು.

[ಬದಲಾಯಿಸಿ] ಸೂಯೆಝ್ ಕ್ರಾಂತಿಯಲ್ಲಿ ಭಾಗವಹಿಸಿದರು

೧೯೫೬ ರಲ್ಲಿ ನಡೆದ 'ಸೂಯೆಝ್ ಕ್ರಾಂತಿ'ಯಲ್ಲಿ 'ಗಡ್ಡಾಫಿ'ಯವರು, ಇಸ್ರೇಲ್ ವಿರುದ್ಧದ ದಂಗೆಯಲ್ಲಿ ಭಾಗಿಯಾಗಿದ್ದರು. 'ಬ್ರಿಟನ್ ನ ಮಿಲಿಟರಿ ಕಾಲೇಜ್' ನಲಿ ತರಬೇತಿ ಪಡೆದ, ರಾಜಾಡಳಿತವನ್ನು ಕೊನೆಗೊಳಿಸುವ ಸಂಚು ರೂಪಿಸಿದ್ದರು.ಸನ್, ೧೯೬೯ ರ ಸೆಪ್ಟೆಂಬರ್ ೧ ರಂದು, 'ಬೆಂಗಾಝಿ'ಗೆ ವಾಪಸ್ ಆದ 'ಗಡ್ಡಾಫಿಯವರು,ಕ್ರಾಂತಿಯನ್ನು ಆರಂಭಿಸಿದರು. ೧೯೭೦ ರಲ್ಲಿ ಪ್ರಕಟವಾದ ’ಗ್ರೀನ್ ಬುಕ್ ಪುಸ್ತಕ'ದಲ್ಲಿ ತಮ್ಮ ರಾಜಕೀಯ ಸಿದ್ಧಾಂತಗಳನ್ನು ವಿವರಿಸಿದ್ದಾರೆ. 'ಇಸ್ಲಾಂ ತತ್ವ'ಗಳನ್ನು ಅಳವಡಿಸಿಕೊಂಡಿರುವ ಹಾಗೂ 'ದೇಶೀಯವಾಗಿ ಪೋಶಿಸಲ್ಪಟ್ಟರಾಜಕೀಯ ಸಿದ್ಧಾಂತ','ಸಮಾಜವಾದ' ಮತ್ತು 'ಬಂಡವಾಳಶಾಹಿ'ಗೆ ಪರ್ಯಾಯವೆಂಬುದನ್ನು ಅವರು ಪ್ರತಿಪಾದಿಸುತ್ತಾ ಬಂದರು. ಸರ್ವಾಧಿಕಾರ ಹೊರಗೆ ತೋರಿದರೂ ಸಮಾನತೆಯಲ್ಲಿ ವಿಶ್ವಾಸವಿಡುವ ತಮ್ಮ ನಿಲುವನ್ನು ಪ್ರಜೆಗಳಿಗೆ ಸಾರಿಹೇಳುತ್ತಾ ಬಂದರು. 'ಉದಾರ ಹೃದಯಿಯಾದ ತಾವು, 'ಕೇವಲ ನಿಯಂತ್ರಕರಷ್ಟೆ'; ಎಲ್ಲಾ ಹಕ್ಕು, ಸೌಲತ್ತುಗಳನ್ನೂ ಪ್ರಜೆಗಳ ಕೈನಲ್ಲಿ ಕೊಟ್ಟಿರುವೆ',ಎಂದು ಸದಾ ಘೋಷಿಸುತ್ತಿದ್ದ ಅವರ ಮಾತಿನ ಸತ್ಯವನ್ನು ಪ್ರಜೆಗಳೆಲ್ಲಾ ಬಲ್ಲವರಾಗಿದ್ದರು.

[ಬದಲಾಯಿಸಿ] ಜಮ ಹಿರಿಯ

ಅಂದರೆ, ಸಾವಿರಾರು ಜನರಿರುವ ಅನೇಕ ಸಮಿತಿಗಳನ್ನು ರಚಿಸಿ, ಅಧಿಕಾರವೆಲ್ಲಾ ಸಮಿತಿಗಳ ಕೈಯಲ್ಲಿದೆ, ಅಥವಾ’ಜನಸಮೂಹದ ದೇಶ'ವೆಂಬ ಪರಿಕಲ್ಪನೆಯನ್ನು ಜನರ ಮನಸ್ಸಿನಮೇಲೆ ಮೂಡಿಸಿ ಅದನ್ನು ಅನುಷ್ಠಾನಕ್ಕೂ ತಂದರು.

[ಬದಲಾಯಿಸಿ] ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿರವರ, ಕಾರ್ಯ ವೈಖರಿ

ವಿದೇಶ ಪ್ರವಾಸಕ್ಕೆ ಹೋದಾಗ,ತಮ್ಮ ಜೊತೆಯಲ್ಲಿ, 'ಸರ್ವ ಸೌಲಭ್ಯವುಳ್ಳ ಐಶಾರಾಮಿ ಡೇರೆ'ಗಳನ್ನು ಒಯ್ಯುತ್ತಿದ್ದರು. ಅವರ ಅಂಗರಕ್ಷಕಿಯರು 'ಬಂದೂಕು ಧಾರಿಗಳಾದ ಯುವತಿಯರು'. ಆಧುನೀಕತೆಯನ್ನು ಪ್ರದರ್ಶಿಸುತ್ತಾ, ಮರುಭೂಮಿಯ ಸಂಸ್ಕೃತಿಯನ್ನು ಹೊರಗೆ ಪ್ರದರ್ಶಿಸುತ್ತಾ, ಅತಿ ಚತುರನಂತೆ ಮುಖವಾಡವನ್ನು ಪ್ರದರ್ಶಿಸಲು ಅವರು ಹಾತೊರೆಯುತ್ತಿದ್ದರು. ತಮ್ಮ ವರ್ಚಸ್ಸಿನಿಂದ ಅರಬ್ ರಾಜ್ಯಗಳನ್ನೆಲ್ಲಾ ಒಟ್ಟುಗೂಡಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು.'ಲಿಬಿಯಾದ ಧಾರ್ಮಿಕ ಮಾರ್ಗದರ್ಶಿ' ಎಂದು ತೋರ್ಪಡಿಸಿಕೊಳ್ಳಲು ಸದಾ ಪ್ರಯತ್ನ ಶೀಲರಾಗಿದ್ದರು. ವಾಸ್ತವವಾಗಿ ಅವರನ್ನು ಹತ್ತಿರದಲ್ಲಿ ಕಂಡವರು, ಅವರೊಬ್ಬ 'ಢೊಂಗಿವ್ಯಕ್ತಿ' ಯೆಂಬ ಸತ್ಯವನ್ನು ಅರಿತಿದ್ದರು. 'ನಿರಂಕುಶ ಪ್ರಭುತ್ವವನ್ನು ಸದಾ ಪೂಜಿಸಿ,' ಅದನ್ನು ವಿರೋಧಿಸಿದ ಸಾವಿರಾರು ಜನರನ್ನೆಲ್ಲಾ ಕೊಲ್ಲಿಸಿದ 'ಅಮಾನುಷವ್ಯಕ್ತಿ'ಯೆಂದು ಗುರುತಿಸಿದ್ದಾರೆ. ವಯಸ್ಸಾದ ಆತ ಈಗ, 'ದೇವದೂತ'ನಂತೆ ಜನರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಬಳಿಕ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಹುನ್ನಾರದಲ್ಲಿದ್ದಾರೆಂದು, ಅವರ ವಿರೋಧಿಗಳು ಮಾತಾಡಿಕೊಳ್ಳುತ್ತಿದ್ದಾರೆ.

[ಬದಲಾಯಿಸಿ] ಲಿಬಿಯಾದೇಶದ ಕ್ರಾಂತಿಗೆ ಕಾರಣಗಳು

ವಿಶ್ವದಲ್ಲಿ ಪೆಟ್ರೋಲಿಯಂ ಉತ್ಪಾದಿಸುವ ರಾಷ್ಟ್ರಗಳಲ್ಲಿ ಮಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾದ, ೧೪೦ ಬುಡಕಟ್ಟುಗಳಿರುವ ಲಿಬಿಯ ದೇಶದಲ್ಲಿ ಯಾವುದೇ ರೀತಿಯ ಸಂಘಟನೆಗಳಿಲ್ಲ. ಚಾಣಾಕ್ಷರಾದ,ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿ ಈ ಬುಡಕಟ್ಟುಗಳ ಬಲವನ್ನು ೧೯೬೯ ರಲ್ಲಿ ಪಾದಾರ್ಪಣೆಮಾಡಿದ ಸಮಯದಲ್ಲೇ ಕಂಡುಕೊಂಡಿದ್ದರು. ಮುಂದೆ ಈ ಬುಡಕಟ್ಟುಗಳ ಸಮೂಹವೇ ಅವರ ಸಾಮಾಜಿಕ ಧೋರಣೆಗಳನ್ನು ವಿರೋಧಿಸುವ ಗೋಡೆಗಳಾಗುತ್ತವೆ,ಎಂಬ ಕಟು-ಸತ್ಯವನ್ನೂ ಅವರು ಮನಗಂಡಿದ್ದರು. ಮೊದಲು ಅವರನ್ನು ಧ್ವಂಸಮಾಡುವ ಸಾಹಸಕ್ಕೆ ಕೈಹಾಕಿ ಸೋತಮೇಲೆ, ಅವರಜೊತೆಯೇ ಹೊಂದಾಣಿಕೆಗಾಗಿ ಪ್ರಯತ್ನ ನಡೆಸಿದರು. ಅವರ ಸಮ್ಮತಿಯಿಂದಲೇ ಇದುವರೆವಿಗೂ ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿ ರವರು, ನೆಮ್ಮದಿಯಾಗಿ ರಾಜ್ಯವಾಳುತ್ತಿದ್ದರು.

[ಬದಲಾಯಿಸಿ] ಬುಡಕಟ್ಟು ನಾಯಕರನ್ನು ಒಡೆಯುವ ಪ್ರಯತ್ನ ಸೋತಿತು

ಅವರ ಅಧಿಕಾರಕ್ಕೆ ಬಂದಾಗ ಆ ಬುಡಕಟ್ಟುಗಳ ನಾಯಕರನ್ನು ಒಡೆದು ಬೇರೆಮಾಡುವ ರಣ ನೀತಿ ಮುಳುವಾಯಿತು. ಅವೇ ಒಟ್ಟುಗೂಡಿ ಗಡಾಫೆಯವರ ವಿರುದ್ಧ ಯುದ್ಧವನ್ನು ಘೋಷಿಸಿವೆ. ಲಿಬಿಯಾದೇಶದ ಹೆಚ್ಚುಭಾಗವನ್ನು ಆಕ್ರಮಿಸಿಕೊಂಡು,'ಕರ್ನಲ್ ಗಡಾಫೆ'ಯವರ ಪದಚ್ಯುತಿಗೆ ಮಂಗಳ ಹಾಡಿವೆ. ದೇಶದ 'ಅತಿಬಲಾಢ್ಯ ವಾರ್ಫಾಲ್ಲಾಹ್' ತನ್ನ ವಿರೋಧವನ್ನು ಬಹಿರಂಗವಾಗಿ ಪ್ರಕಟಿಸಿ 'ಅವನೀಗ ನಮಗೆ ಸೋದರನಲ್ಲ 'ಎಂದು ಘೋಷಿಸಿದೆ.'ಝುವೈಯ್ಯ ಬುಡಕಟ್ಟಿನ ಪಂಗಡ' ಪೂರ್ವ ಲಿಬಿಯದೇಶದ ಪೆಟ್ರೋಲಿಯಂ ಭಂಡಾರದ ಸಂಗ್ರದ ಪೆಟ್ರೋಲ್ ರವಾನಿಸುವ ಕೊಳವೆಗಳನ್ನು ನುಚ್ಚುನೂರುಮಾಡುವುದಾಗಿ ಬೆದರಿಸಿದೆ. 'ಬಾನಿವಾಲಿದ್ ಸಮುದಾಯ' ದೇಶದ ಭದ್ರತಾ ಪಡೆಯಲ್ಲಿರುವ ತನ್ನ ಯೋಧರನ್ನು ಮರಳಿ ಬರಲು ಹೇಳಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿರವರ, ಬಲಗೈಯಂತಿದ್ದ 'ಬಲಿಷ್ಠ ಝಿಂಟಾನ್ ಬುಡಕಟ್ಟು' ಬಂಡುಕೋರರಿಗೆ ಬೆಂಬಲವನ್ನು ಘೋಷಿಸಿದೆ.

[ಬದಲಾಯಿಸಿ] ಅಮೆರಿಕದ ಸ್ವಾರ್ಥನೀತಿ

ಇವುಗಳ ಜೊತೆಗೆ 'ಪ್ರಜಾಪ್ರಭುತ್ವದ ರಕ್ಷಣೆ'ಯ ಸೋಗು ಹಾಕಿ, ತಮಗೆ ಬೇಕಾದ ಸರಕಾರವನ್ನು ಸ್ಥಾಪಿಸಲು ಪಣತೊಟ್ಟ ಅಮೆರಿಕ ಹಾಗೂ ಮಿತ್ರರಾಜ್ಯಗಳು ಹೆಣಗಾಡುತ್ತಿರುವುದು ಸರ್ವಾಧಿಕಾರಿಯ ನೈತಿಕ ಹಕ್ಕನ್ನು ಮುರಿದು ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿರವರನ್ನು 'ಲಿಬಿಯಾ ದೇಶ'ದಿಂದ ತೊಲಗಿಸುವ ಹುನ್ನಾರದಲ್ಲಿ ತೊಡಗಿವೆ. ಪೆಟ್ರೋಲಿಯಂ ಭಂಡಾರದ ಮೇಲೆ ತಮ್ಮ ಪಾಲನ್ನು ಸುನಿಶ್ಚಿತಗೊಳಿಸುವ ಯೋಜನೆಯಲ್ಲಿವೆ.

[ಬದಲಾಯಿಸಿ] ಉಲ್ಲೇಖಗಳು

  1. "Al-Qadhafi, Muammar Muhammad". Oxford Dictionary of Political Biography
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು