ಚಿಂದೋಡಿ ಲೀಲಾ
ಚೆಂದೋಡಿ ಲೀಲಾ - ಕನ್ನಡದ ರಂಗ ಕಲಾವಿದರಲ್ಲೊಬ್ಬರು ಮತ್ತು ಚಿತ್ರನಟಿಯರಲ್ಲೊಬ್ಬರು. ರಾಜ್ಯ ನಾಟಕ ಅಕೆಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಚಿಂದೋಡಿ ಲೇಲಾ ಅವರು ಹವ್ಯಾಸಿ ಮತ್ತು ವೃತ್ತಿಪರ ನಾಟಕರಂಗದಲ್ಲಿ ಸುಮಾರು ೪೦ ವರ್ಷಗಳಿಂದ ಸಕ್ರಿಯರಾಗಿದ್ದರು. ಹಿರಿಯ ರಂಗಭೂಮಿ ಕಲಾವಿದರಲ್ಲಿ ಇವರೊಬ್ಬ ಪ್ರಮುಖರು. ತಮ್ಮ ಕಂಚಿನ ಕಂಠಕ್ಕೆ ಹೆಸರುವಾಸಿಯಾಗಿದ್ಡರು.
ಪರಿವಿಡಿ |
[ಬದಲಾಯಿಸಿ] ಜನನ ಮತ್ತು ಬಾಲ್ಯ
'ಚಿಂದೋಡಿ ವೀರಪ್ಪ ಹಾಗೂ ಶಾಂತಮ್ಮ ಪರಿವಾರದ ೯ ಮಕ್ಕಳಲ್ಲಿ ಕೊನೆಯವರು. ನಾಟಕ ಅವರ ಪ್ರಮುಖ ವ್ರುತ್ತಿ ಹಾಗೂ ಜೀವನೋಪಾಯವಾಗಿತ್ತು. ೬೦ ವರ್ಷಗಳ ಕಾಲ ನಟನೆಮಾಡಿದ್ದರು. ಸಿನಿಮಾ ವಲಯದಲ್ಲೂ ೩೩ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕದ ಜನತೆಗೆ ಹಳ್ಳಿಹುಡಿಗಿಯೆಂದೇ ಪರಿಚಿತರು. ಇವರ 'ಪೋಲಿಸನ ಮಗಳು" ನಾಟಕ', ಬೆಂಗಳೂರಿನ 'ಗುಬ್ಬಿ ವೀರಣ್ಣ ರಂಗಮಂದಿರ' ದಲ್ಲಿ ಸತತವಾಗಿ ೧,೦೦೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿ, ದಾಖಲೆ ನಿರ್ಮಿಸಿದೆ.
[ಬದಲಾಯಿಸಿ] 'ಹಳ್ಳಿಹುಡುಗಿ' ಚಿಂದೋಡಿ ಲೀಲಾರವರ ಪ್ರಥಮ ಜನಪ್ರಿಯ ನಾಟಕ
ಇನ್ನೂ ಇಪ್ಪತ್ತರ ಹರೆಯದ ಮೊದಲೇ ಇವರ ಮತ್ತೊಂದು ಜನಪ್ರಿಯ ನಾಟಕ,'ಹಳ್ಳಿಹುಡುಗಿ' ಚಿತ್ರದಿಂದ ಆರಂಭವಾದ ಅವರ ನಟನಾ ಪ್ರಪಂಚ ೧೦,೦೦೦ ಪ್ರದರ್ಶ ಕಂಡಿತ್ತು. ೧೯೬೦-೧೯೮೩ ರ ಸಮಯದಲ್ಲಿ ಅವರು ಅತ್ಯಂತ ಜನಪ್ರಿಯ ನಟಿಯಾಗಿದ್ದರು.
[ಬದಲಾಯಿಸಿ] ಚಿಂದೋಡಿ ಲೀಲಾ ರಂಗಮಂದಿರಗಳ ಸಂಸ್ಥಾಪನೆಗೆ ಬಹಳ ಸಕ್ರಿಯರಾಗಿ ದುಡಿದಿದ್ದಾರೆ
ಬೆಳಗಾವಿಯಲ್ಲಿ ಕನ್ನಡ ನಾಟಕಗಳ ಪ್ರದರ್ಶನಕ್ಕಾಗಿ ಮೀಸಲಾದ ರಂಗಮಂದಿರವನ್ನು ಸ್ಥಾಪಿಸಿದ್ದಾರೆ. ದಾವಣಗೆರೆಯಲ್ಲಿ ಚಿಂದೋಡಿ ಲೀಲಾ ಕಲಾಕ್ಷೇತ್ರಎಂಬ ರಂಗಮಂದಿರವನ್ನು ಸ್ಥಾಪಿಸಿದ್ದಾರೆ. ಅವರ ಅಂತಿಮ ದರ್ಶವನ್ನು ಪಡೆಯಲು ಈ ಕಲಾಕ್ಷೇತ್ರದಲ್ಲಿಯೇ ಅವಕಾಶ ಕಲ್ಪಿಸಲಾಗಿತ್ತು.
[ಬದಲಾಯಿಸಿ] ಅವರು ನಟಿಸಿದ ಪ್ರಮುಖ ಚಲನ ಚಿತ್ರಗಳು
[ಬದಲಾಯಿಸಿ] ಪ್ರಶಸ್ತಿಗಳು
- ಭಾರತ ಸರ್ಕಾರದ ಪದ್ಮಶ್ರೀ
- ಕರ್ನಾಟಕ ಸರ್ಕಾರದ ಗುಬ್ಬಿ ವೀರಣ್ಣ ಪ್ರಶಸ್ತಿ
- ಕೇಂದ್ರ ನಾಟಕ ಮತ್ತು ಸಂಗೀತ ಅಕೆಡೆಮಿ ಪ್ರಶಸ್ತಿ
- ತೆಲುಗು ವಿಜ್ಞಾನ ಸಮಿತಿ, ಬೆಂಗಳೂರು ಅವರ ಶ್ರೀ ಕೃಷ್ಣದೇವರಾಯ ಪ್ರಶಸ್ತಿ
- ನಾಡೋಜ ಪ್ರತಿಷ್ಠಾನವು ಕನ್ನಡ ಸಂಘಟನೆಗಾಗಿ ನೀಡುವ ೨೦೦೬ನೆಯ ಸಾಲಿನ ಕಾತ್ಯಾಯಿನಿ ಪ್ರಶಸ್ತಿ
[ಬದಲಾಯಿಸಿ] ಮರಣ
ಪದ್ಮಶ್ರೀ 'ಚೆಂದೋಡಿ ಲೀಲ' (೭೨), ರವರವರು ಸ್ವಲ್ಪದಿನಗಳಿಂದ ಅಸ್ವಸ್ಥರಾಗಿದ್ದರು. ೨೧, ಗುರುವಾರ, ಜನವರಿ, ೨೦೧೦, ಗುರುವಾರ, 'ಹೃದಯಾಘಾತ'ದಿಂದ ಮರಣಿಸಿದರು. ಮೃತರ ಶರೀರವನ್ನು ಸಕಲ ಮರ್ಯಾದೆಗಳೊಂದಿಗೆ, ೨೩, ಜನವರಿ, ೨೦೧೦ ರಂದು 'ದಾವಣಗೆರೆ'ಯ ಬಳಿ ಸಮಾಧಿಮಾಡಲಾಯಿತು. ಲೀಲಾರವರು ಖ್ಯಾತ ನಟರಾದ, 'ಡಾ. ರಾಜಕುಮಾರ್', 'ಕಲ್ಯಾಣ ಕುಮಾರ್', 'ಬಿ.ಆರ್.ಪಂಥುಲು', 'ಶಂಕರ ಸಿಂಗ್', 'ಪಂಢರಿ ಬಾಯಿ', 'ಪುಟ್ಟಣ್ಣ ಕಣೆಗಾಲ್' ರವರ ಚಿತ್ರದಲ್ಲಿ ಹೆಸರುಮಾಡಿದ್ದರು.