ಚಂದ್ರಶೇಖರ್ ಆಝಾದ್
ಚಂದ್ರ ಶೇಖರ್ ಆಝಾದ್(ಜುಲೈ ೨೩, ೧೯೦೬–ಫೆಬ್ರುವರಿ ೨೭, ೧೯೩೧) ಭಾರತ ಸ್ವಾತಂತ್ರ ಚಳುವಳಿಯ ಪ್ರಮುಖ ಕ್ರಾಂತಿಕಾರಿ ನಾಯಕರಲ್ಲೊಬ್ಬರಾಗಿದ್ದರು.
ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಭಾವರಾ ಎಂಬ ಸ್ಥಳದಲ್ಲಿ, ಪಂಡಿತ ಸೀತಾರಾಮ್ ತಿವಾರಿ ಮತ್ತು ಜಗರಾಣಿ ದೇವಿಯವರ ಎರಡನೆಯ ಮಗನಾಗಿ ಜನಿಸಿದ ಚಂದ್ರಶೇಖರ, ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ ಮಹಾತ್ಮಾ ಗಾಂಧಿಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಕಾರಣದಿಂದಾಗಿ ಕೇವಲ ೧೪ರ ವಯಸ್ಸಿನಲ್ಲೇ ಛಡಿ ಏಟಿನ ಕ್ರೂರ ಶಿಕ್ಷೆಗೆ ಒಳಗಾದ ಚಂದ್ರಶೇಖರ, ನಂತರದ ಬೆಳವಣಿಗೆಗಳಲ್ಲಿ ಗಾಂಧೀಜಿಯವರ ನಿರ್ಣಯಗಳಿಂದ ಬೇಸತ್ತು ಕ್ರಾಂತಿಮಾರ್ಗವನ್ನು ಹಿಡಿದರು. ರಾಮಪ್ರಸಾದ ಬಿಸ್ಮಿಲ್ಲರನ್ನು ತಮ್ಮ ಗುರುಗಳೆಂದು ಸ್ವೀಕರಿಸಿ, ತಮಗೆ ಆಝಾದ್ (ಸ್ವತಂತ್ರ) ಎನ್ನುವ ಹೆಸರನ್ನು ಸೇರಿಸಿಕೊಂಡರು. ೧೯೨೫ರ ಕಾಕೋರಿ ರೈಲು ಡಕಾಯತಿಯಲ್ಲಿ ಭಾಗವಹಿಸಿದ ಆಝಾದ್, ಆ ಮೊಕದ್ದಮೆಯಲ್ಲಿ ೯ ಆರೋಪಿಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿ. ಬಿಸ್ಮಿಲ್ಲರ ಬಂಧನದ ನಂತರ ಕ್ರಾಂತಿ ಸಂಘಟನೆಯ ಚುಕ್ಕಾಣಿಯನ್ನು ಹಿಡಿದು ಭಾರತಮಾತೆಯ ಸೇವೆಯನ್ನು ಮುಂದುವರಿಸಿದ ಆಝಾದ್, ಮುಂದಿನ ಕೆಲವರ್ಷಗಳಲ್ಲಿ ಭಾರತೀಯ ಸ್ವಾತಂತ್ರಸಂಗ್ರಾಮದಲ್ಲಿ ಸಂಪೂರ್ಣವಾಗಿ ಮುಳುಗಿದರು.
೧೯೨೮ ರಲ್ಲಿ ಭಾರತಕ್ಕೆ ಆಗಮಿಸಿದ ಸೈಮನ್ ಕಮಿಷನ್ ವಿರುದ್ಧ ಪ್ರತಿಭಟಿಸುವ ವೇಳೆ ಶ್ರೀಯುತ ಲಾಲಾ ಲಜಪತರಾಯರ ಮೇಲಾದ ಕ್ರೂರ ದಬ್ಬಾಳಿಕೆಗೆ ಉತ್ತರವಾಗಿ ಆಝಾದರ ನೇತೃತ್ವದಲ್ಲಿ ಭಗತ್ ಸಿಂಗ್ ಹಾಗೂ ರಾಜಗುರು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸೌಂಡರ್ಸ್ ರನ್ನು ಹತ್ಯೆಗೈದರು.
ಮಾಹಿತಿದಾರನಿಂದ ಮೋಸಕ್ಕೊಳಗಾದ ಆಝಾದ್, ೧೯೩೧ರ ಫೆಬ್ರುವರಿ ೨೭ರಂದು ಅಲಹಾಬಾದ್ ನಗರದ ಅಲ್ ಫ್ರೆಡ್ ಪಾರ್ಕ್ ನಲ್ಲಿ ಬ್ರಿಟಿಷ್ ಸೈನ್ಯದಿಂದ ಸುತ್ತುವರಿಯಲ್ಪಟ್ಟರು. ಏಕಾಂಗಿಯಾಗಿ ತಮ್ಮ ಪಿಸ್ತೂಲಿನ ಕೊನೆಯ ಗುಂಡಿನವರೆಗೂ ಹೋರಾಡಿದರು. ಯಾವ ಪರಕೀಯ ಸೈನಿಕನಿಗೂ ಶರಣಾಗದೆ ತಮ್ಮ ತಲೆಗೆ ಗುಂಡು ಹೊಡೆದುಕೊಂಡು ಆಸುನೀಗಿದರು. ಅವರನ್ನು ಭಾರತದ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಸ್ವಾತಂತ್ರ್ಯ ಹೋರಾಟಗಾರರು
ವಿನಾಯಕ ದಾಮೋದರ ಸಾವರ್ಕರ್ | ಜವಾಹರಲಾಲ್ ನೆಹರು | ಮಹಾತ್ಮ ಗಾಂಧಿ | ಸರ್ದಾರ್ ವಲ್ಲಭಭಾಯ್ ಪಟೇಲ್ | ಲೋಕಮಾನ್ಯ ಬಾಲ ಗಂಗಾಧರ ತಿಲಕ | ಸುಭಾಷ್ ಚಂದ್ರ ಬೋಸ್ | ಟಿಪ್ಪು ಸುಲ್ತಾನ್ | ಲಾಲ್ ಬಹಾದ್ದೂರ್ ಶಾಸ್ತ್ರಿ | ಮದನ ಮೋಹನ ಮಾಳವೀಯ | ಸರ್ದಾರ್ ಭಗತ್ ಸಿಂಗ್ | ಸಿ. ರಾಜಗೋಪಾಲಚಾರಿ | ಭಿಕಾಜಿ ಕಾಮಾ (ಮೇಡಂ ಕಾಮಾ) | ಚಂದ್ರ ಶೇಖರ್ ಆಝಾದ್ | ರಾಮ್ ಪ್ರಸಾದ್ ಬಿಸ್ಮಿಲ್ | ಸುಬ್ರಹ್ಮಣ್ಯ ಭಾರತಿ | ಖುದೀರಾಂ ಬೋಸ್ | ತಾತ್ಯ ಟೊಪೆ | ಅಶ್ಫಾಕುಲ್ಲಾ ಖಾನ್ | ಝಾನ್ಸೀ ರಾಣಿ ಲಕ್ಷ್ಮೀ ಬಾಯೀ | ಸರೋಜಿನಿ ನಾಯ್ಡು | ಜಯಪ್ರಕಾಶ ನಾರಾಯಣ | ಸುಖದೇವ | ದೇಶಬಂಧು ಚಿತ್ತರಂಜನ ದಾಸ್ | ಲಾಲಾ ಲಜಪತ ರಾಯ್ | ಮಹದೇವ ಭಾಯಿ ದೇಸಾಯಿ | ಸುಖದೇವ | ಮಂಗಳ ಪಾಂಡೆ | ಮೌಲನಾ ಹಸರತ್ ಮೊಹಾನಿ | ಪಂಡಿತ ಮೋತಿಲಾಲ ನೆಹರೂ | ರವೀಂದ್ರ ನಾಥ ಟ್ಯಾಗೋರ್ | ಸುಂದರ ಲಾಲ್ ಅವಸ್ಥಿ | ದಾದಾ ಭಾಯಿ ನವರೋಜಿ | ಬಿಪಿನ್ ಚಂದ್ರ ಪಾಲ್ | ಈಶ್ವರ ಚಂದ್ರ ವಿದ್ಯಾಸಾಗರ | ವಿನೋಬಾ ಭಾವೆ | ಅಲ್ಲೂರಿ ಸೀತಾರಾಮ ರಾಜು | ಬಿ.ಆರ್.ಅಂಬೇಡ್ಕರ್ | ಸೇನಾಪತಿ ಬಾಪಟ್ | ನಾನಾ ಸಾಹಿಬ್ | ಕಸ್ತೂರ್ ಬಾ ಗಾಂಧಿ | ಗೋಪಾಲ ಕೃಷ್ಣ ಗೋಖಲೆ | ಕೆ.ಬಿ. ಹೆಡಗೆವಾರ್ | ಇಂಡಿಯನ್ ನ್ಯಾಷನಲ್ ಆರ್ಮಿ | ಬಾಬು ಜಗಜೀವನ ರಾಮ್ | ಲಕ್ಷ್ಮಿ ಸೆಹಗಲ್ | ಹೆಚ್. ನರಸಿಂಹಯ್ಯ | ಗೋವಿಂದ ವಲ್ಲಭ ಪಂತ್ | ಪೆರಿಯಾರ್ ರಾಮಸ್ವಾಮಿ | ಹಜರತ್ ಮಹಲ್ | ಹಿಂದೂಸ್ತಾನಿ ಲಾಲ್ ಸೇನಾ | ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ | ನೀಲಕಂಠ ಗೌಡ | ಪ್ರಭುರಾಜ ಪಾಟೀಲ | ಸ್ವಾಮಿ ರಾಮಾನಂದ ತೀರ್ಥ| ಕಿತ್ತೂರು ಚೆನ್ನಮ್ಮ | ಸಂಗೊಳ್ಳಿ ರಾಯಣ್ಣ
