ಕೃಷ್ಣ ಮಠ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕೃಷ್ಣ ಮಠ - ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ಕೃಷ್ಣನ ಪ್ರತಿಮೆಯನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.

ಈ ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಎರದು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಕೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ೧೮ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ,ಮತ್ತೊಮ್ಮೆ ಕೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು (೧೪) ವರ್ಷಗಳು ಹಿಡಿಯುತ್ತವೆ. ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.

ಕೃಷ್ಣ ಮಠದ ಪ್ರಾಂಗಣದಲ್ಲಿ ಮುಖ್ಯಪ್ರಾಣ, ಗರುಡ, ಸುಬ್ರಹ್ಮಣ್ಯ ಮತ್ತು ನವಗ್ರಹ ಗುಡಿಗಳಿವೆ.

ಶ್ರೀಕೃಷ್ಣಮಠದ ಮುಖ್ಯದ್ವಾರ

ಇತಿಹಾಸ''Big text

ಉಡುಪಿಯ ಕೃಷ್ಣ ನನ್ನು ಪದ್ವಾಪರ ಯುಗದಲ್ಲಿ ದ್ವಾರಕೆಯ ರುಕ್ಮಿಣಿ ಪೂಜಿಸಲ್ಪಡುತ್ತಿದ್ದು ದೇವಶಿಲ್ಪಿ ವಿಶ್ವಕರ್ಮ ನಿಂದ ರಚಿಸಲ್ಪಟ್ಟಿದೆ



"http://kn.wikipedia.org/w/index.php?title=ಕೃಷ್ಣ_ಮಠ&oldid=220256" ಇಂದ ಪಡೆಯಲ್ಪಟ್ಟಿದೆ